ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನ, ಬೆಳ್ಳಿ ಬೆಲೆ ಎರಡೂ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 73,550 ರುಪಾಯಿ ಇದೆ. https://youtu.be/qkEqvi2fBDQ?si=ekJLuetmXGHofgrt 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 80,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 73,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,600 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 5ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,550 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,240 ರೂ 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,180 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 96 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ:…
Author: Prajatv Kannada
ಬೆಂಗಳೂರು:- ಕರ್ನಾಟಕದ ಹಲವೆಡೆ ನವೆಂಬರ್ 9 ರಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://youtu.be/EyWj1HY7uGE?si=0kLHYrjQ5yDwtW58 ಮೈಸೂರು, ಕೋಲಾರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಒಣಹವೆ ಮುಂದುವರೆಯಲಿದೆ.
ಸೂರ್ಯೋದಯ: 06:20, ಸೂರ್ಯಾಸ್ತ : 05:39 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ:ಚೌತಿ ನಕ್ಷತ್ರ: ಜೇಷ್ಠ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.4:21 ನಿಂದ ಬೆ.6:02 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ವಿದೇಶ ಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ, ಎಣ್ಣೆ,, ನೀರು, ಮಾರಾಟಗಾರರಿಗೆ ಧನ ಲಾಭ, ಸ್ಯಾರಿ ಸೆಂಟರ್ ಪ್ರಾರಂಭಿಸುವ ಚಿಂತನೆ, ಸಂಗಾತಿಗೆ ನೆನೆದು ಮನದಲ್ಲಿ ಒಯ್ದಾಟ, ಕಮಿಷನ್ ಏಜೆಂಟರಿಗೆ ಧನ ಲಾಭ, ಆರ್ಥಿಕ ಸಲಹೆಗಾರರಿಗೆ ಸಿಹಿ ಸುದ್ದಿ, ಉದ್ಯೋಗದ ಪ್ರಮೋಷನ್ ಪ್ರಯತ್ನದಲ್ಲಿ ಹಿನ್ನಡೆ, ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ, ವಕೀಲರಿಗೆ ಉನ್ನತ ಹುದ್ದೆ ದೊರೆಯಲಿದೆ, ಗ್ಲಾಸ್ ಪ್ರೇಮ…
ಮಾಜಿ ನೀಲಿ ಸುಂದರಿ ಸನ್ನಿ ಲಿಯೋನ್ 2011ರಲ್ಲಿ ಡೇನಿಯಲ್ ವೆಬ್ಬರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾದ 13 ವರ್ಷಗಳ ಬಳಿಕ ದಂಪತಿ ಮತ್ತೆ ಮದುವೆಯಾಗಿದ್ದಾರೆ. ಹೌದು. ಮೂವರು ಮಕ್ಕಳ ಮುಂದೆ ಸನ್ನಿ ಲಿಯೋನ್ ಮತ್ತು ಡೇನಿಯಲ್ ತಮ್ಮ ಮದುವೆಯ ಪ್ರತಿಜ್ಞೆಯನ್ನು ನವೀಕರಿಸಿದ್ದಾರೆ. ಅಕ್ಟೋಬರ್ 31 ರಂದು ಮಾಲ್ಡೀವ್ಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಂಪತಿ ಮತ್ತೊಮ್ಮೆ ವಿವಾಹವಾಗಿದ್ದಾರೆ. ಸನ್ನಿ, ಡೇನಿಯಲ್ ವಿವಾಹ ಸಮಾರಂಭದಲ್ಲಿ ಮೂವರು ಮಕ್ಕಳಾದ ನಿಶಾ, ನೋಹ್ ಮತ್ತು ಅಶಾರ್ ಭಾಗಿಯಾಗಿದ್ದರು. ಆದರೆ, ಸನ್ನಿ ಮತ್ತು ಡೇನಿಯಲ್ ಮದುವೆಯ ಫೋಟೋಗಳನ್ನು ಇನ್ನೂ ಹಂಚಿಕೊಂಡಿಲ್ಲ. ಆದರೆ ಅವರ ಮದುವೆ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ. ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ತಮ್ಮ ವಿವಾಹದ ಪ್ರತಿಜ್ಞೆಯನ್ನು ದೀರ್ಘಕಾಲದವರೆಗೆ ನವೀಕರಿಸಲು ಬಯಸಿದ್ದರು ಎಂದು ಮೂಲವೊಂದು ETimes ಗೆ ತಿಳಿಸಿದೆ. ಅವರ ಮಕ್ಕಳಾದ ನಿಶಾ, ನೋವಾ ಮತ್ತು ಅಶರ್ ಅವರ ಮಹತ್ವವನ್ನು ಅರ್ಥಮಾಡಿಕೊಳ್ಳುವವರೆಗೆ ಅವರು ಕಾಯುತ್ತಿದ್ದರು. ಸನ್ನಿ ಮತ್ತು ಡೇನಿಯಲ್…
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಯ ಸುತ್ತ ಹಲವು ಅನುಮಾನ ಹುಟ್ಟಿಕೊಂಡಿದೆ. ಸಾಲ ಮಾಡಿಕೊಂಡು ಸತ್ತಿರಬಹುದು ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರಬಂದಿದೆ. ಆದ್ರೆ ಗುರುಪ್ರಸಾದ್ ಸಾಲ ಮಾಡಿದ್ರೂ ಹೆದರುವವರಲ್ಲ ಅಂತ ಪತ್ನಿ ಹೇಳಿದ್ದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. ತನಿಖೆ ಚುರುಕಾಗಿದ್ದು ಗುರುಪ್ರಸಾದ್ ಬಳಸ್ತಿದ್ದ ಮೊಬೈಲ್, ಟ್ಯಾಬ್ ವಶಕ್ಕೆ ಪಡೆದು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಗಾಂಧಿನಗರದ ಖ್ಯಾತ ನಿರ್ದೇಶಕ, ಸಾಕಷ್ಟು ನಟರ ಭವಿಷ್ಯ ಬೆಳಗಿಸಿದ ಪ್ರತಿಭಾವಂತನ ಸಾವು ದುರಂತವಾಗಿದೆ. ಕೊಳೆತು ನಾರುತ್ತಿದ್ದ ಸ್ಥಿತಿಯಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ. ಇವರ ಸಾವಿನ ಸುತ್ತ ಅನುಮಾನಗಳು ಹುತ್ತ ಹುಟ್ಟಿಕೊಂಡಿದ್ದು ಪೊಲೀಸರಿಗೆ ಕೆಲವೊಂದು ಇಂಟ್ರೆಸ್ಟಿಂಗ್ ಅಂಶಗಳು ಲಭ್ಯವಾಗಿದೆ. ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾದನಾಯಕಹಳ್ಳಿ ಠಾಣೆ ಪೊಲೀಸರು ಗುರುಪ್ರಸಾದ್ ಸಾವಿನ ನಿಗೂಢತೆಯನ್ನು ಭೇದಿಸುವ ಪ್ರಯತ್ನದಲ್ಲಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಕೂಡ ಪೊಲೀಸರ ಕೈಸೇರಿದೆ, ಗುರುಪ್ರಸಾದ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ, ಆದ್ರೆ ಉಸಿರುಗಟ್ಟಿ ಸಾವಾಗಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ…
ರಾಯಚೂರು: ಬಿಜೆಪಿಯವರು ತಮ್ಮ ಆಂತರಿಕ ಸಮಸ್ಯೆಗಳನ್ನು ಮುಚ್ಚಿಕೊಳ್ಳಲು ವಕ್ಫ್ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಆರೋಪ ಮಾಡಲು ಬಿಜೆಪಿಯವರಿಗೆ ಬೇರೆ ಯಾವುದೇ ವಿಷಯಗಳಿಲ್ಲ ಎಂದು ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಆಂತರಿಕ ಸಮಸ್ಯೆಗಳನ್ನು ಎಲ್ಲರಿಗೂ ಗೊತ್ತಿದೆ. ವಿಜಯೇಂದ್ರ ಗ್ರೂಪ್, ಅವರನ್ನು ಸ್ಥಾನದಿಂದ ತೆಗೆಯಬೇಕು ಎನ್ನುವ ಇನ್ನೊಂದು ಗುಂಪು ಇದೆ. ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರ, ಮುಖಂಡರ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಆಂತರಿಕ ಸಮಸ್ಯೆಗಳನ್ನು ಇಟ್ಟುಕೊಂಡು ಒಬ್ಬರಿಗೊಬ್ಬರು ಸವಾಲ್ ಹಾಕಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ಗ್ರೂಪ್, ಬಸನಗೌಡ ಯತ್ನಾಳ, ರಮೇಶ್ ಜಾರಕಿಹೊಳಿ ಗ್ರೂಪ್ ಇದೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು. ರಾಜ್ಯದಲ್ಲಿ ನಮ್ಮ ಗ್ಯಾರಂಟಿಗಳು, ಅಭಿವೃದ್ಧಿ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಆದರೆ ವಕ್ಫ್ ನೋಟಿಸ್ ವಿಚಾರಕ್ಕೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಸವರಾಜ್ ಬೊಮ್ಮಾಯಿ ಸಿಎಂ ಇದ್ದಾಗಲೇ ನೋಟಿಸ್ ಕೊಟ್ಟಿದ್ದಾರೆ. ಆ ಕುರಿತು ನಮ್ಮ ಬಳಿ…
ಅಮೆರಿಕದ ಚುನಾವಣೆ ಎಂದರೆ ಪ್ರತಿಯೊಬ್ಬರ ಚಿತ್ತವು ಅತ್ತ ಕಡೆಯೇ ಇರುತ್ತದೆ. ಈ ಬಾರಿ ಗೆಲುವು ಯಾರ ಪಾಲಾಗಲಿದೆ, ಯಾರು ಗದ್ದುಗೆ ಹಿಡಿಯಲಿದ್ದಾರೆ ಎಂಬ ಕುತೂಹಲ ಶುರುವಾಗುತ್ತದೆ. ಅಲ್ಲಿನ ಮತದಾರರು ಕೂಡ ಯಾವುದೇ ಆಮಿಷಯಕ್ಕೆ ಒಳಗಾಗದೆ ತಮಗೆ ಸೂಕ್ತ ಎನಿಸುವ ಅಭ್ಯರ್ಥಿಯನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ಅಂದ ಹಾಗೆ ಅಮೆರಿಕಾದ ಪ್ರಜೆಗಳು ಪ್ರತಿ ಚುನಾವಣೆಗೂ ಮಂಗಳವಾರದಂದೇ ವೋಟ್ ಹಾಕುತ್ತಾರೆ. ಅಷ್ಟಕ್ಕೂ ಮಂಗಳವಾರವೇ ಮತದಾನ ನಡೆಯೋದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ. ಅಮೆರಿಕಾದಲ್ಲಿ ಈಗಾಗಲೇ ಮತದಾನ ಆರಂಭವಾಗಿದೆ.ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ನಡುವೆ ಬಿಗ್ ಫೈಟ್ ಶುರುವಾಗಿದೆ. ಈಗಾಗಲೇ ಅನೇಕರು ಅಂಚೆ ಮತದಾನ ವ್ಯವಸ್ಥೆ ಮೂಲಕ ಮುಂಚಿತವಾಗಿ ಮತ ಚಲಾಯಿಸಿದ್ದಾರೆ. ಅಮೆರಿಕಾದಲ್ಲಿ ಪ್ರತಿ 4 ವರ್ಷಗಳಿಗೆ ಒಮ್ಮೆ ಅಧ್ಯಕ್ಷ ಸ್ಥಾನಕ್ಕಾಗಿ ಎಲೆಕ್ಷನ್ ನಡೆಯುತ್ತದೆ. ಆದರೆ ಈ ಚುನಾವಣೆ ದಿನಾಂಕದ ಹಿಂದೆ ಹಾಗೂ ಮಂಗಳವಾರ ಮತದಾನ ಮಾಡುವುದರ ಹಿಂದೆ ಕುತೂಹಲಕಾರಿ ಸಂಗತಿ ಇದೆ. ಇದಕ್ಕೆ ಕಾರಣ ಅಮೆರಿಕದ ಸಂವಿಧಾನದಲ್ಲಿ ಈ ರೀತಿ ಉಲ್ಲೇಖ ಮಾಡಲಾಗಿದೆ. ನವೆಂಬರ್…
ಶೀತ, ಕೆಮ್ಮು, ಜ್ವರ, ತಲೆನೋವು, ಆಯಸಿಡಿಟಿ, ಮಲಬದ್ಧತೆ, ಮೈ-ಕೈ ನೋವು ಹೀಗೆ ಏನೇ ಸಮಸ್ಯೆಗಳು ಎದುರಾದರೂ ಜನರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾದ ಕೂಡಲೆ ಮಾತ್ರೆಗಳನ್ನು ಸೇವಿಸುತ್ತಾರೆ. ಅದರಲ್ಲೂ ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಬ್ರಾಂಡ್ ಡೋಲೋ 650 ದೇಶದ ಅತ್ಯಂತ ಜನಪ್ರಿಯ ಔಷಧಿಯಾಗಿ ಹೊರಹೊಮ್ಮಿದೆ. ಇದು ದೇಶದಲ್ಲೇ ಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650 ಮಾತ್ರ ಒಂದರಿಂದ 5.7 ಶತಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಡೋಲೋ 650 ಮಾತ್ರೆ ಹೆಚ್ಚಾಗಿ ಸೇವಿಸುವ ಮುನ್ನ ಎಚ್ಚರ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊರೊನಾ ಡೋಲೋ 650 ಮಾತ್ರೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ.. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಕೂಡ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆಯನ್ನು ಸೇವಿಸಲು ಸೂಚಿಸಿದರು.. ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟು ಕೊಂಡಿದ್ದಾರೆ..…
ಬೆಂಗಳೂರು:- ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ಜರುಗಿದೆ. ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಹಸುಗೂಸು ಎಸೆದು ದುರುಳರು ಕೊಲೆಗೈದ ಘಟನೆ ನಗರದ ಆನೇಕಲ್ ತಾಲ್ಲೂಕಿನ ಇಗ್ಗಲೂರುನಲ್ಲಿ ಜರುಗಿದೆ. ಆರೂವರೆ ತಿಂಗಳಿಗೆ ಸಿಜೇರಿಯನ್ ಮೂಲಕ ಮನು ಮತ್ತು ಹರ್ಷಿತಾ ದಂಪತಿಗೆ ಮಗು ಜನಿಸಿತ್ತು. ಮಗುವಿಗೆ ಉಸಿರಾಟದ ತೊಂದರೆಯಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಗು ಸಂಪೂರ್ಣ ಚೇತರಿಕೆ ಕಂಡ ಹಿನ್ನೆಲೆ ವಾರದ ಹಿಂದೆ ಮನೆಗೆ ಕರೆತರಲಾಗಿತ್ತು. ಆದರೆ ತಾಯಿ ಶೌಚಾಲಯಕ್ಕೆ ಹೋದಾಗ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಈ ಬಗ್ಗೆ ಸೂರ್ಯನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರ ಪರಿಶೀಲನೆ ವೇಳೆ ಮನೆಯ ಸಿಂಟೆಕ್ಸ್ ನೀರಿನ ಟ್ಯಾಂಕ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.
ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಬಿಗ್ ಹಿಟ್ ಪಡೆದ ನಟ ವಿಜಯ್ ದೇವರಕೊಂಡಾಗೆ ಇತ್ತೀಚೆಗೆ ತಕ್ಕ ಮಟ್ಟಿನ ಗೆಲುವು ಸಿಕ್ಕಿಲ್ಲ. ವಿಜಯ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಹೀಗಾಗಿ ದೊಡ್ಡದೊಂದು ಹಿಟ್ ಸಿನಿಮಾದ ನೀಡಲು ವಿಜಯ್ ದೇವರಕೊಂಡ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಹೊಸ ಸಿನಿಮಾದ ಕೆಲಸಗಳನ್ನು ಅವರು ಭರದಿಂದ ನಡೆಸುತ್ತಾ ಇದ್ದಾರೆ. ಸದ್ಯ ವಿಜಯ್ 12ನೇ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು ಚಿತ್ರಕ್ಕೆ ತಾತ್ಕಾಲಿಕವಾಗಿ ‘VD12’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಶೂಟ್ ವೇಳೆ ವಿಜಯ್ ಗಾಯಗೊಂಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಶೂಟಿಂಗ್ ನಿಲ್ಲಿಸಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ. ವಿಜಯ್ ದೇವರಕೊಂಡ ನಟನೆಯ ‘VD12’ ಚಿತ್ರವನ್ನು ಗೌತಮ್ ತಿನ್ನನುರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಆ್ಯಕ್ಷನ್ ದೃಶ್ಯಗಳ ಶೂಟ್ ವೇಳೆ ವಿಜಯ್ಗೆ ಗಾಯವಾಗಿದೆ. ಅವರು ವೈದ್ಯರ ಸೂಚನೆ ಪ್ರಕಾರ ವಿಶ್ರಾಂತಿ ಪಡೆಯಬೇಕಿತ್ತು. ಅವರ ರಿಕವರಿಗೆ ಸಾಕಷ್ಟು ಸಮಯ ಬೇಕಿದೆ. ಆದರೆ, ವಿಜಯ್…