Author: Prajatv Kannada

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ಸದ್ಯ 58 ವರ್ಷ ವಯಸ್ಸು. ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಸಲ್ಮಾನ್ ಜೀವನದಲ್ಲಿ ಹಲವು ಹುಡುಗಿಯರು ಬಂದು ಹೋಗಿದ್ದರು ಯಾರು ಕೂಡ ಮದುವೆಯಾಗೋ ಮನಸ್ಸು ಮಾಡಲಿಲ್ಲ. ಸಲ್ಮಾನ್ ಖಾನ್ ಯಾಕೆ ಮದುವೆಯಾಗುತ್ತಿಲ್ಲ ಎಂದು ಪ್ರಶ್ನೆಗೆ ಇದೀಗ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್ ಉತ್ತರಿಸಿದ್ದಾರೆ. ನಟ ಸಲ್ಮಾನ್‌ ಖಾನ್‌ ಅವರು ತಮ್ಮ ಡೇಟಿಂಗ್‌ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್‌ ಖಾನ್‌ 58 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಸಲೀಂ ಖಾನ್‌ ಇದೀಗ ಬಿಚ್ಚಿಟ್ಟಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಸಲ್ಮಾನ್‌ ಖಾನ್‌ ಅವರ ತಂದೆ ತಮ್ಮ ಮಗ ಇನ್ನೂ ಮದುವೆಯಾಗದೆ ಉಳಿದಿರಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಸಲ್ಮಾನ್‌ ಖಾನ್‌ ಮಗ್ದ ಮನಸ್ಸಿನವನು. ಅವನು…

Read More

ಪುನೀತ್ ರಾಜ್ ಕುಮಾರ್ ನಟನೆಯ ಪವರ್ ಸಿನಿಮಾದ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾದ ನಟಿ ತ್ರಿಷಾ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಹೀಗೆ ಸಾಕಷ್ಟು ಭಾಷೆಗಳಲ್ಲಿ ನಟಿಸಿರುವ ತ್ರಿಷಾ ಸದ್ಯ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡ್ತಿದ್ದಾರೆ. ಈ ಮಧ್ಯೆ ತ್ರಿಷಾ ಹೆಸರು ಸಿನಿಮಾದ ಹೊರತಾಗಿ ಕೇಳಿ ಬಂದಿದೆ. ಇತ್ತೀಚೆಗೆ ನಟಿ ತ್ರಿಷಾ ಚಿರಂಜೀವಿ ನಟನೆಯ ವಿಶ್ವಂಭರ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಈ ಸಿನಿಮಾ ಮೇ 9 ರಂದು ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಎರಡು ಮತ್ತು ಮಲಯಾಳಂನಲ್ಲಿ ಒಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ಸ್ಟಾರ್ ಹೀರೋ ಆಗಿರುವ ವಿಜಯ್ ದಳಪತಿ ಮೇಲಿನ ಅಭಿಮಾನದಿಂದ ಸಿನಿಮಾವೊಂದರಲ್ಲಿ ಐಟಂ ಸಾಂಗ್ ಮಾಡಿದ್ದಾರೆ. ಏಕೆಂದರೇ ವಾಸ್ತವವಾಗಿ ತ್ರಿಶಾ ಸ್ಪೇಷಲ್‌ ಸಾಂಗ್‌ಗಳಲ್ಲಿ ನಟಿಸಲು ಆಸಕ್ತಿ ಹೊಂದಿಲ್ಲ. ಸಿನಿಮಾ ಸರಿಯಾಗಿ ಓಡದಿದ್ದರೂ ಈ ಹಾಡು ಸಿನಿಮಾದ ಹೈಲೈಟ್ ಆಯಿತು. ನಲವತ್ತೊಂದನೇ ವಯಸ್ಸಿನಲ್ಲಿ ಹೊಸ ನಾಯಕಿಯರೊಂದಿಗೆ ಪೈಪೋಟಿ ನಡೆಸುತ್ತಿರುವ ತ್ರಿಷಾ ಈ ಹಿಂದೆ ಉದ್ಯಮಿಯನ್ನು…

Read More

ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ರಿಯೇಟಿವ್ ಡೈರೆಕ್ಟರ್ ತಮ್ಮ ಜೀವನವನ್ನು ಈ ರೀತಿ ಕೊನೆಯಾಗಿಸಿಕೊಂಡಿದ್ದು ಕಂಡ ಪ್ರತಿಯೊಬ್ಬರು ಬೆಚ್ಚಿ ಬಿದ್ದಿದ್ದಾರೆ. ತಮ್ಮದೇ ಶೈಲಿಯ ಬರವಣಿಗೆ, ವಿಭಿನ್ನ ಆಲೋಚನೆಗಳಿಂದ ಸಿನಿಪ್ರಿಯರಿಗೆ ಇಷ್ಟವಾಗುತ್ತಿದ್ದ ಗುರುಪ್ರಸಾದ್ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಅವರು ಕ್ರಿಯಾಶೀಲತೆಗೆ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾಗಳೇ ಸಾಕ್ಷಿ. ತನ್ನ ಕ್ರಿಯಾಶೀಲತೆಯನ್ನು ಗುರುಪ್ರಸಾದ್ ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು ಅನ್ನೋದು ಇಂದು ಪ್ರತಿಯೊಬ್ಬರು ಹೇಳುತ್ತಿರುವ ಮಾತು. ತನ್ನ ಪ್ರತಿಭೆಯನ್ನು ಬಳಸಿಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನು ನೀಡಬಹುದಾಗಿದ್ದ ಗುರುಪ್ರಸಾದ್ ಅವರಿಗೆ ಅವರ ಜೀವನ ಶೈಲಿಯೇ ಮುಳುವಾಗಿತ್ತು. ಸಾಲ, ಖಿನ್ನತೆ, ಸಾಂಸಾರಿಕ ಜೀವನ ಇವೆಲ್ಲವೂ ಅವರನ್ನು ಬಲಿ ಪಡೆದು ಬಿಟ್ಟಿದೆ. ಗುರುಪ್ರಸಾದ್ ಸಾವಿನ ಬಳಿಕ ಅವರ ಕೊನೆಯ ಕ್ಷಣಗಳು ಕೂಡ ಅಷ್ಟೇ ಕಠೋರವಾಗಿತ್ತು. ನಟ ದುನಿಯಾ ವಿಜಯ್ ಇರದೇ ಹೋಗಿದ್ದರೆ ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾಗಿತ್ತು. ಗುರುಪ್ರಸಾದ್‌ ಹಾಗೂ ದುನಿಯಾ ವಿಜಯ್‌ ಒಟ್ಟಿಗೆ ಒಂದೇ ಒಂದು ಸಿನಿಮಾ ಮಾಡಿಲ್ಲ. ಇಬ್ಬರ ನಡುವೆ ಹೆಚ್ಚಿನ ಬಾಂದವ್ಯವೂ…

Read More

ಬೆಂಗಳೂರು:- ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಮಾತ್ರ ಬಿಜೆಪಿ ಪ್ರತಿಭಟನೆ ಮಾಡುತ್ತದೆ ಎಂದು ಸಚಿವ HC ಮಹದೇವಪ್ಪ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವಕ್ಫ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ. ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ ಪ್ರತಿಭಟನೆ. ಸಿಎಂ ಅವರೇ ನೋಟಿಸ್ ವಾಪಸ್ ಪಡೆಯೋಕೆ ಹೇಳಿದ್ದಾರೆ. ಅಲ್ಲಿಗೆ ವಿಷಯ ಮುಗಿದಿದೆ. ಬಿಜೆಪಿಯವರು ಇದ್ದಾಗಲೇ ನೋಟಿಸ್ ಕೊಟ್ಟಿದ್ದರು.‌ ಬಿಜೆಪಿಯವರಿಗೆ ಇಷ್ಟು ಕಾಳಜಿ ‌ಇದ್ದರೆ ಅವತ್ತೇ ಈ ವಿಷಯ ಸರಿ ಮಾಡಬಹುದಿತ್ತು. ಅವರು ಮಾಡದೇ ಈಗ ಸರಿ ಮಾಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ರೈತರಿಗೆ ಯಾವುದೇ ತೊಂದರೆ ಆಗಬಾರದು. ನಮ್ಮ ಸರ್ಕಾರ ಯಾರಿಗೂ ತೊಂದರೆ ಕೊಡೋದಿಲ್ಲ. ಪಹಣಿಗೆ ಎಲ್ಲಾ ಇತಿಹಾಸ ಇರುತ್ತದೆ. ಅದನ್ನು ನೋಡಿದ್ರೆ ಗೊತ್ತಾಗುತ್ತದೆ. ರೆಕಾರ್ಡ್ ಇರೋ ಪ್ರಕಾರ ಆಗುತ್ತದೆ. ರೈತರನ್ನ ಒಕ್ಕಲು ಎಬ್ಬಿಸಬಾರದು ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರು ಯಾವತ್ತು ಇಶ್ಯು ಮೇಲೆ ದೇಶದಲ್ಲಿ ಹೋರಾಟ ಮಾಡಿಯೇ ಇಲ್ಲ. ಸೂಕ್ಷ್ಮ ವಿಷಯ, ಭಾವನಾತ್ಮಕ ವಿಷಯಗಳ ಮೇಲೆ ಪ್ರತಿಭಟನೆ ಮಾಡುತ್ತಾರೆ ಎಂದು…

Read More

ಇತ್ತೀಚಿನ ದಿನಗಳಲ್ಲಿ ಮೊಬೈಲ್​ಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ. ಅದೇ ರೀತಿ ಇಂಟರ್ನೆಟ್​ ಅನ್ನು ಬಳಕೆ ಮಾಡುವವರು ಸಹ ಹೆಚ್ಚಾಗಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಇಂಟರ್ನೆಟ್​ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸ್ಮಾರ್ಟ್​​ಫೋನ್ ಬಳಕೆದಾರರಲ್ಲಿ ಮುಖ್ಯವಾಗಿ ಕಾಣುವ ಸಮಸ್ಯೆಯೆಂದರೆ ನೆಟ್​ವರ್ಕ್​ ಸಮಸ್ಯೆ. ಎಷ್ಟೇ ಡೇಟಾ ಪ್ಯಾಕ್ ಇದ್ದರೂ ಕೆಲವೊಮ್ಮೆ ಇಂಟರ್ನೆಟ್​ ಸ್ಪೀಡ್ ಇರೋದೆ ಇಲ್ಲ 4G ಫೋನ್​ನಲ್ಲಿ ಕೆಲವೊಂದು ಬಾರಿ ಸರಿಯಾಗಿ ರೀತಿಯಲ್ಲಿ ಅಥವಾ ವೇಗದ ಇಂಟರ್ನೆಟ್ ಸಿಗುವುದಿಲ್ಲ. ಇದಕ್ಕೆ ಕಾರಣವೇನು?. ಇದಕ್ಕೆಲ್ಲ ನಿಜವಾದ ಸಮಸ್ಯೆ ನಿಮ್ಮ ಫೋನ್‌ನಲ್ಲಿ ಅಡಗಿರುತ್ತದೆ. ಈ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ 4G ಫೋನ್ ಕೂಡ ಸೂಪರ್‌ಫಾಸ್ಟ್ 5G ಸ್ಪೀಡ್​ನಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತದೆ. ಫೋನ್‌ನಲ್ಲಿ ಇಂಟರ್ನೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ನೆಟ್​ವರ್ಕ್ ಪರಿಶೀಲಿಸುವುದು ಬಹಳ ಮುಖ್ಯ. ವಿಶೇಷವಾಗಿ ನೀವು 4G ಹೊಂದಿದ್ದರೆ, ಆದರೆ ಸರಿಯಾಗಿ ನೆಟ್​ವರ್ಕ್ ಇರದ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ನೆಟ್‌ವರ್ಕ್ ಬೂಸ್ಟರ್ ಅನ್ನು ಬಳಸುವುದು ಉತ್ತಮ ಆಯ್ಕೆ. ಹಲವಾರು ಅನಗತ್ಯ ಅಪ್ಲಿಕೇಶನ್‌ಗಳು ಫೋನ್ ಮತ್ತು ಇಂಟರ್ನೆಟ್ ಎರಡರ…

Read More

ಬೆಂಗಳೂರು:- ವಕ್ಫ್ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಕ್ಫ್ ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ವಿಪಕ್ಷ ನಾಯಕ ಆರ್​ ಅಶೋಕ್​ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್‌ ಮಂಡಳಿಯು ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್​​ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್‌ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ಎಲ್ಲಾ ಜಿಲ್ಲೆಗಳಲ್ಲಿ ತಲಾ 10,000 ಎಕರೆ ಜಮೀನನ್ನು ವಕ್ಫ್​ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ವಕ್ಫ್​ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ ಜಮೀನುಗಳನ್ನು ಕೂಡ…

Read More

ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಕದನ ರಂಗೇರಿದೆ. ಚನ್ನಪಟ್ಟಣ ಗೆದ್ದು ಮೊದಲ ಬಾರಿಗೆ ಶಾಸಕನಾಗಲು ಹಂಬಲಿಸುತ್ತಿರುವ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಮತಯಾಚನೆ ಮಾಡಿದ್ದಾರೆ. ಹೌದು ಉಪ ಕದನದ ಅಖಾಡ ರಂಗೇರಿದೆ. ಅಭ್ಯರ್ಥಿಗಳು ಕಣಕ್ಕಿಳಿದಾಗಿದೆ.. ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಮೂರು ದಿಕ್ಕು, ಮೂರು ಕ್ಷೇತ್ರದ ಉಪ ಕದನ.. ಕಾಂಗ್ರೆಸ್ಗೆ ಅಗ್ನಿಪರೀಕ್ಷೆ, ಬಿಜೆಪಿಗೆ ಪ್ರತಿಷ್ಠೆ, ದಳಕ್ಕೆ ಅಸ್ತಿತ್ವದ ಹೋರಾಟ. ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಕ್ರಿಶ್ಚಿಯನ್ ಸಮುದಾಯ ಮುಖಂಡರ ಜೊತೆ ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಟಿ.ಎ ಶರವಣ ಅವರು, ಬಿಜೆಪಿ, ಜೆಡಿಎಸ್ ನಾಯಕರು ಒಂದಾಗಿ ನಿಖಿಲ್ ರವರಿಗೆ  ಟಿಕೆಟ್ ನೀಡಿದ್ದೇವೆ. ನಿಖಿಲ್ ರವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿರವರ ಕೈ ಬಲಪಡಿಸಬೇಕಾಗಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಕ್ರಿಶ್ಚಿಯನ್…

Read More

ಹುಬ್ಬಳ್ಳಿ: ವಕ್ಫ್ ವಿಷಯ ಮುಗಿದು ಹೋಗಿದೆ. ಉಪ ಚುನಾವಣೆ ಇರುವ ಕಾರಣಕ್ಕೆ ಬಿಜೆಪಿಯವರು ಗೊಂದಲ‌‌ ಸೃಷ್ಟಿ ಮಾಡುತ್ತಿದ್ದಾರೆ ಎಂದು ಶಾಸಕ‌ ಲಕ್ಷ್ಮಣ ಸವದಿ ಕುಟುಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರನ್ನು ನಾನು ಬಹಳ ಹತ್ತರದಿಂದ ನೋಡಿದ್ದೇನೆ.‌ ಏನೋ ಒಂದು ಸತ್ತು ಹೋಗಿದೆ ಅಂದರೂ ಅವರು ಹಲ್ಲು ಕಿಸಿಯುತ್ತಾರೆ.‌ ಚುನಾವಣೆ ಇಲ್ಲದಿದ್ದರೆ ಮಾತನಾಡುತ್ತಿರಲಿಲ್ಲ. https://youtu.be/6lynYL_ANKU?si=YBo__NEXZGKrdG_7 ಇದೀಗ ಉಪ ಚುನಾವಣೆ ಇರುವ ಕಾರಣಕ್ಕೆ ವಕ್ಫ್ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಶಿಗ್ಗಾವಿ ಕ್ಷೇತ್ರದಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ.‌ ಕಾರಣ ಅಲ್ಲಿ ನಾವೇ ಗೆಲ್ಲುತ್ತೇವೆ. ಈ ಕ್ಷೇತ್ರದ ಉಪ ಚುನಾವಣೆ ವಿಚಾರವಾಗಿ ಮೂರು ಪುರಸಭೆ, ಆರು ಜಿಲ್ಲಾ ಪಂಚಾಯತ್ , 23 ತಾಲೂಕ ಪಂಚಾಯತ್ ವಾರು ಹಾಗೂ ಅನೇಕ ಹಿರಿಯರ ಜತೆ ಸಭೆ ಮಾಡಿದ್ದೇವೆ. ಪಕ್ಷದ ಪದಾಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇವೆ. ನಮ್ಮ ಪ್ರಕಾರ ಶಿಗ್ಗಾವಿಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ಯಾರಂಟಿ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,‌ ಸಿಎಂ ಮತ್ತು ಡಿಸಿಎಂ…

Read More

ಬೆಂಗಳೂರು: ವಧು ಹುಡುಕಿಕೊಡದ ಮ್ಯಾಟ್ರಿಮೋನಿ ಪೋರ್ಟಲ್​​ಗೆ 60 ಸಾವಿರ ದಂಡವನ್ನು ಕೋರ್ಟ್ ವಿಧಿಸಿದೆ. ಗ್ರಾಹಕರ ನ್ಯಾಯಾಲಯ ಈ ದಂಡವನ್ನು ವಿಧಿಸಿದೆ. ಬೆಂಗಳೂರಿನ ಎಂಎಸ್​ ನಗರ ನಿವಾಸಿ ಕೆಎಸ್​ ವಿಜಯಕುಮಾರ್​ ಅವರು ತಮ್ಮ ಮಗ ಬಾಲಾಜಿಗೆ ಕನ್ಯೆ ಹುಡುಕುತ್ತಿದ್ದರು. ಅದರಂತೆ, ವಿಜಯಕುಮಾರ್ ಅವರು ಕಲ್ಯಾಣ ನಗರದಲ್ಲಿರುವ ದಿಲ್ ಮಿಲ್ ಮ್ಯಾಟ್ರಿಮೋನಿಗೆ ಭೇಟಿ ನೀಡಿದ್ದರು. ಈ ವೇಳೆ ಸಂಸ್ಥೆ ಬಾಲಾಜಿಗೆ 45 ದಿನಗಳಲ್ಲಿ ವಧು ಹುಡುಕುವುದಾಗಿ ಭರವಸೆ ನೀಡಿತ್ತು. ಬಳಿಕ, ಕೆಸ್​​ ವಿಜಯಕುಮಾರ್ ಅವರು ಮಾರ್ಚ್ 17 ರಂದು ಸಂಸ್ಥಗೆ ತಮ್ಮ ಮಗನ ಮಗನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರು. ಜೊತೆಗೆ 30 ಸಾವಿರ ರೂ. ಶುಲ್ಕ ಪಾವತಿಸಿದ್ದರು. 45 ದಿನಗಳು ಕಳೆದರೂ ಸಂಸ್ಥೆ ವಧು ಹುಡುಕಿಕೊಡುವಲ್ಲಿ ವಿಫಲವಾಯಿತು. ಆಗ, ವಿಜಯಕುಮಾರ್​ ಅವರು ಹಣ ಮರಳಿಸುವಂತೆ ಹೇಳಿದರು. ಆದರೆ, ಸಂಸ್ಥೆ ಮಾತ್ರ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ, ವಿಜಯಕುಮಾರ್ ಅವರು ಮಾರ್ಚ್ 30 ರಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಆಗ, ಸಂಸ್ಥೆ ಏಪ್ರಿಲ್ 30ರವರೆಗೆ…

Read More

ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಬೈಕ್ ಹಾಗೂ ಕ್ರೂಸರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ನಡೆದಿದೆ. ಬೈಕ್ ಸವಾರ ಅಂದಪ್ಪ ಜಕ್ಕಲಿ (45 ) ಮೃತ ವ್ಯಕ್ತಿ, ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದ ವ್ಯಕ್ತಿಯಾಗಿದ್ದಾರೆ. ಡಿಸೇಲ್ ತರಲು ಬೈಕ್‌ ನಲ್ಲಿ ಹೊರಟ್ಟಿದ ವೇಳೆ ಕೊಪ್ಪಳದಿಂದ ಗದಗ ಕಡೆ ಬರ್ತಿದ್ದ ಕ್ರೂಸರ್ ನಡುವೆ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ. ಇನ್ನೂ ಮುಂಡರಗಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More