Author: Prajatv Kannada

ಹಾಲಿನ ದರ ಏರಿಕೆ ಭೀತಿಯಲ್ಲಿದ್ದ ಜನತೆಗೆ ಸದ್ಯಕ್ಕೆ ಆ ಚಿಂತೆ ದೂರವಾಗುವ ಸಾಧ್ಯತೆ ಇದೆ. ಸರ್ಕಾರ ತಾತ್ಕಾಲಿಕ ರಿಲೀಫ್ ನೀಡುವ ಸಾಧ್ಯತೆ ಇದ್ದು, ದರ ಏರಿಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಂತಿದೆ. https://youtu.be/kk6ahwpXss4?si=N_mAt99x0paa1vxp ಕಳೆದ ಕೆಲ ದಿನಗಳ ಹಿಂದಷ್ಟೇ ಸಿಎಂ ಸಮಾವೇಶವೊಂದರಲ್ಲಿ ಬಹಿರಂಗವಾಗಿ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದು ಕೂಡ ಏರಿಕೆ ಕಂಡ ಹಣವನ್ನ ನೇರವಾಗಿ ರೈತರಿಗೆ ತಲುಪಿಸುವ ಬಗ್ಗೆ ಕೂಡ ಸುಳಿವು ಕೊಟ್ಟಿದ್ದರು. ಆ ಬೆನ್ನಲ್ಲೆ ಕೆಎಂಎಫ್ (KMF) ಕೂಡ ಏರಿಕೆ ಸಂಬಂಧ ಕೆಲ ಸಭೆಗಳನ್ನು ಮಾಡಿ ಏರಿಕೆಗೆ ಬೇಕಾದಂತ 2023ರ ಪ್ರಸ್ತಾವನೆ ಸಲ್ಲಿಕೆಗೂ ತಯಾರಿ ಮಾಡಿತ್ತು. ಈ ಬೆನ್ನಲ್ಲೆ ಸದ್ಯ ದರ ಏರಿಕೆ ಬೇಡ ಅನ್ನೋ ನಿರ್ಧಾರಕ್ಕೆ ಸರ್ಕಾರ ಬಂದಂತಿದ್ದು, ಈ ವರ್ಷ ಬಹುತೇಕ ಈ ಬಗ್ಗೆ ಯೋಚನೆ ಬೇಡ ಅನ್ನೋ ತೀರ್ಮಾನ ಮಾಡಿದೆಯಂತೆ. ಇದೇ ವರ್ಷ ಈಗಾಗಲೇ ಎರಡು ಬಾರಿ ಏರಿಕೆ ಕಂಡಿದ್ದ ಹಾಲಿನ ದರ, ಮತ್ತೆ ಏರಿಕೆಯಾದ್ರೆ ಹೇಗೆ ಅನ್ನೋ ಆತಂಕ…

Read More

ಬೆಂಗಳೂರು: ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ. https://youtu.be/74mnTjIT4tI?si=6ejmh7CmjVgXVAqv ಮಲ್ಲಿಗೆ ಕೆಜಿಗೆ 1000 ರೂ. ಗುಲಾಬಿ ಕೆಜಿಗೆ 500 ರೂ. ಕನಕಾಂಬರ ಕೆಜಿಗೆ 2000ರೂ, ಸೇವಂತಿಗೆ ಕೆಜಿಗೆ 450 ರೂ. ಸುಗಂಧರಾಜ ಕೆಜಿಗೆ 300 ರೂ. ಅಣಗಲು ಹೂ ಕೆಜಿ 700. ಚೆಂಡೂ ಹೂ 150. ಕಾಕಾಡ 800. ದುಂಡು ಮಲ್ಲಿಗೆ 800ರಿಂದ200. ಕಮಲ ಜೋಡಿಗೆ 70ರೂ ಇದೆ. ಇನ್ನೂ ಹಣ್ಣಿನ ಬೆಲೆ ಕೂಡ ಜಾಸ್ತಿಯಾಗಿದ್ದು ಸೇಬು ಕೆಜಿಗೆ 120 ರಿಂದ 150ರೂ. ದಾಳಿಂಬೆ ಕೆಜಿಗೆ 250 ರೂ. ಏಲಕ್ಕಿ ಬಾಳೆ ಹಣ್ಣು ಕೆಜಿಗೆ 120 ರೂ. ಸೀತಾಫಲ 180 ರಿಂದ 140 ರೂ. ಸಪೋಟ 200 ರೂ. ದ್ರಾಕ್ಷಿ 180ರಿಂದ200 ರೂ. ಅನಾನಸ್ ಎರಡಕ್ಕೆ 50-100 ರೂ. ಕಿತ್ತಳೆ 50 ರಿಂದ…

Read More

ನಟ ದರ್ಶನ್‌  ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ಭವಿಷ್ಯ ಅ.14 ರಂದು ಪ್ರಕಟವಾಗಲಿದೆ. ಸುದೀರ್ಘ ವಿಚಾರಣೆ ನಡೆಸಿದ್ದ ಸೆಷನ್ಸ್‌ ಕೋರ್ಟ್‌ ನ್ಯಾ. ಜೈಶಂಕರ್‌ ಇಂದು ವಿಚಾರಣೆಯನ್ನು ಮುಕ್ತಾಯಗೊಳಿಸಿ ಅ.14 ರಂದು ಜಾಮೀನು ಅದೇಶ ಪ್ರಕಟಿಸುವುದಾಗಿ ತಿಳಿಸಿದರು. https://youtu.be/xjmsyyXRIIk?si=h_AAwCqD1sTqY8du ಇಂದು ದರ್ಶನ್‌ ಪರ ಹಿರಿಯ ಕ್ರಿಮಿನಲ್‌ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರೆ ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಿದರು. ಬುಧವಾರ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಕೋರ್ಟ್‌ ಅ.14 ರಂದು ಆದೇಶ ಪ್ರಕಟಿಸುವುದಾಗಿ ಹೇಳಿತ್ತು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ದರ್ಶನ್‌ ಅವರು ಬಳ್ಳಾರಿ ಜೈಲಿನಲ್ಲಿದ್ದರೆ ಪವಿತ್ರಾ ಗೌಡ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ.

Read More

ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಜೂನ್ 11 ರಂದು ದರ್ಶನ್, ಪವಿತ್ರಾ ಮತ್ತು ಇತರೆ ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮರ್ಡರ್ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಒಬ್ಬೊಬ್ಬರೇ ಬಳ್ಳಾರಿ ಜೈಲಿಗೆ ಬರುತ್ತಿದ್ದಾರೆ. https://youtu.be/5OB-0TUHHBY?si=9Eg4T6xRei9ilBDP ಮೊದಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬರಲಿದ್ದಾರೆ ಎನ್ನಲಾಗಿತ್ತು..ಕೋರ್ಟ್ ವಿಚಾರಣೆ ಹಿನ್ನಲೆ ವಿಜಯಲಕ್ಷ್ಮಿ ಬರುತ್ತಿಲ್ಲ.. ಆದ್ರೆ ಸಂಗೀತ ನಿರ್ದೇಶಕ ಹರಿಕೃಷ್ಣ, ಕುಟುಂಬದ ಸೇಹಿತರಾದ ಶೈಲಜಾ ಮತ್ತು ವಿಜಯಲಕ್ಷ್ಮಿ ಸಹೋದರಿಯರಿಬ್ಬರು ಮತ್ತೋರ್ವ ಸಂಬಂಧಿ ಸೇರಿ ಐವರು ಬರುತ್ತಿದ್ದಾರೆ.. ಜೈಲಿಗೆ ಬರುತ್ತಿರೋ ಹಿನ್ನೆಲೆ ಜೈಲು ಅಧಿಕಾರಿಗಳಿಗೆ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ಮೂರು ಗಂಟೆ ನಂತರ ದರ್ಶನ್‌ ಬೇಟಿಗೆ ಬರಲಿದ್ದಾರೆ

Read More

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪಲಾಯನಗೊಂಡ ಬಳಿಕ ಸರ್ಕಾರದ ಉಸ್ತುವಾರಿ ನಾಯಕರಾಗಿ ಮೊಹಮ್ಮದ್ ಯೂನಸ್ ಅಧಿಕಾರಿ ಸ್ವೀಕರಿಸಿದ್ದಾರೆ. ಇದೀಗ ಚುನಾವಣೆಗೂ ಮುನ್ನ ಕೆಲವು ಸುಧಾರಣಾ ಕಾರ್ಯಗಳು ನಡೆಯಬೇಕಿರುವ ಕಾರಣಕ್ಕೆ ಸಾರ್ವತ್ರಿಕ ಚುನಾವಣೆಯ ಕಾಲಮಿತಿ ನಿಗದಿಪಡಿಸಲು ಯೂನಸ್ ನಿರಾಕರಿಸಿದ್ದಾರೆ. ವಿದ್ಯಾರ್ಥಿ ಸಮುದಾಯ ನೇತೃತ್ವದ ಪ್ರತಿಭಟನೆಯಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪದಚ್ಯುತಗೊಂಡಿತ್ತು. ಆ ನಂತರ ರಚನೆಯಾಗಿದ್ದ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನಸ್‌ ನೇಮಕಗೊಂಡಿದ್ದರು. 84 ವರ್ಷ ವಯಸ್ಸಿನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರೂ ಆದ ಯೂನಸ್‌ ಅವರು, ಸದ್ಯ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ‘ಈ ಕಾರ್ಯ ತುಂಬಾ ಕಠಿಣವಾದುದಾಗಿದೆ’ ಎಂದೂ ಹೇಳಿಕೊಂಡಿದ್ದಾರೆ. ‘ಉಸ್ತುವಾರಿ ಸರ್ಕಾರದಲ್ಲಿರುವ ಯಾರಿಗೂ ಸುದೀರ್ಘ ಕಾಲ ಈ ಕಾರ್ಯದಲ್ಲಿ ಉಳಿಯುವ ಗುರಿ ಇಲ್ಲ’ ಎಂದು ಯೂನಸ್‌ ತಮ್ಮ ನೇತೃತ್ವದ ಉಸ್ತುವಾರಿ ಸರ್ಕಾರ ಕುರಿತು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ನನ್ನ ಪ್ರಥಮ ಆದ್ಯತೆ ಸುಧಾರಣಾ ಕಾರ್ಯಕ್ರಮಗಳಿಗೆ. ನೀವು ಚುನಾವಣೆ ನಡೆಸಿ ಎಂದು…

Read More

ಅತ್ಯಂತ ಪ್ರಬಲ ಚಂಡಮಾರುತ ಎಂದೇ ಬಣ್ಣಿಸಲಾಗಿರುವ ಮಿಲ್ಟನ್ ಚಂಡಮಾರುತ ಅಮೆರಿಕದ ಫ್ಲೋರಿಡಾ ರಾಜ್ಯದ ಕಡಲ ತೀರಕ್ಕೆ ಅಪ್ಪಳಿಸಿದೆ. ಅಮೆರಿಕದ ಸ್ಥಳೀಯ ಕಾಲ ಮಾನ ಬುಧವಾರ ತಡ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಈ ಚಂಡಮಾರುತ ಫ್ಲೋರಿಡಾ ಕಡಲ ತೀರಕ್ಕೆ ಅಪ್ಪಳಿಸಿದ್ದು ಇದರಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ. ಹೆಲೆನ್ ಚಂಡಮಾರುತದಿಂದ ಇನ್ನಷ್ಟು ಭೀಕರವಾದ ಚಂಡಮಾರುತ ಕರಾವಳಿ ಭಾಗಕ್ಕೆ ಭಾರೀ ಸಮಸ್ಯೆ ತಂದೊಡ್ಡಿದೆ. ಭೀಕರ ಗಾಳಿ ಗಂಟೆಗೆ 100 ಕಿಲೋ ಮೀಟರ್ ಹೆಚ್ಚಿನ ಗಾಳಿಯೊಂದಿಗೆ ನಗರಗಳನ್ನು ಅಲ್ಲೋಲ್ಲ ಕಲ್ಲೋಲ ಮಾಡುತ್ತಿದೆ. ಚಂಡಮಾರುತವು ಅಂತಿಮ ಗಂಟೆಗಳಲ್ಲಿ ದಕ್ಷಿಣಕ್ಕೆ ವಾಲಿದೆ. ಟ್ಯಾಂಪಾದಿಂದ ದಕ್ಷಿಣಕ್ಕೆ 70 ಮೈಲಿಗಳು (112 ಕಿಲೋಮೀಟರ್) ಸರಸೋಟಾ ಬಳಿಯ ಸಿಯೆಸ್ಟಾ ಕೀಯಲ್ಲಿ ಭೂಕುಸಿತವನ್ನು ಮಾಡಿತು. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 16 ಇಂಚುಗಳಷ್ಟು (41 ಸೆಂಟಿಮೀಟರ್‌ಗಳು) ಮಳೆ ದಾಖಲಾಗಿದ್ದರಿಂದ ಟ್ಯಾಂಪಾ ಪ್ರದೇಶದಲ್ಲಿನ ಪರಿಸ್ಥಿತಿಯು ಇನ್ನೂ ಪ್ರಮುಖ ತುರ್ತುಸ್ಥಿತಿಯಾಗಿತ್ತು, ರಾಷ್ಟ್ರೀಯ ಹವಾಮಾನ ಸೇವೆಯು ಹಠಾತ್ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದೆ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಟ್ಯಾಂಪಾ ಬೇ ರೇಸ್‌ನ ಟ್ರೋಪಿಕಾನಾದಲ್ಲಿ…

Read More

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝಲೆನ್ಸ್ಕಿ ಬರ್ಲಿನ್‌ಗೆ ಪ್ರಯಾಣ ಬೆಳೆಸಲಿದ್ದು, ಜರ್ಮನಿ ಚಾನ್ಸಲರ್ ಒಲಾಫ್ ಸ್ಕಾಲ್ಝ್ ಹಾಗೂ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಝಲೆನ್ಸ್ಕಿ ಶುಕ್ರವಾರ ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ. ಮೊದಲು ಸ್ಕಾಲ್ಝ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿರುವ ಝಲೆನ್ಸ್ಕಿ , ಬಳಿಕ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರನ್ನು ಭೇಟಿಯಾಗಲಿದ್ದಾರೆ. ಇದು ಯೂರೋಪ್‌ ಪ್ರವಾಸದ ಭಾಗವಾಗಿದೆ’ ಎಂದು ತಿಳಿಸಿದೆ. ಝಲೆನ್ಸ್ಕಿ ಯೂರೋಪ್‌ನಲ್ಲಿ ತನ್ನ ಮಿತ್ರ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡುವ ಯೋಜನೆಯಲ್ಲಿದ್ದರು. ಆದರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಭೇಟಿ ರದ್ದಾದ ಕಾರಣ, ಜರ್ಮನಿಯ ರಾಮ್‌ಸ್ಟೇಯ್ನ್‌ನಲ್ಲಿ ನಡೆಯಬೇಕಿದ್ದ ಸಮಾವೇಶ ಮುಂದೂಡಿಕೆಯಾಗಿದೆ. ಇದರಿಂದ ಝೆಲೆನ್‌ಸ್ಕಿ ಉದ್ದೇಶಕ್ಕೆ ಹಿನ್ನಡೆಯಾಗಿದೆ.

Read More

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಅಮೆರಿಕದ ಅಧ್ಯಕ್ಷ ಜೋ  ಬೈಡನ್ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಬೈಡನ್ ಇಸ್ರೇಲ್ ಭದ್ರತೆಗೆ ಅಮೆರಿಕದ ನೀಡುವ ಅಚಲ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ. ಶ್ವೇತಭವನದ ಹೇಳಿಕೆಯ ಪ್ರಕಾರ, ಸಾವಿರಾರು ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಹಾರಿಸಿದ ಹಿಜ್ಬುಲ್ಲಾದಿಂದ ನಾಗರಿಕರನ್ನು ರಕ್ಷಿಸುವ ಇಸ್ರೇಲ್‌ನ ಹಕ್ಕನ್ನು ಬೈಡನ್ ಪ್ರತಿಪಾದಿಸಿದರು. ಜೊತೆಗೆ ಹೆಚ್ಚಿನ ಜನಸಂಖ್ಯೆ ಇರುವ ಬೈರೂತ್‌ನಂತಹ ಪ್ರದೇಶಗಳಲ್ಲಿ ನಾಗರಿಕರಿಗೆ ಆಗುತ್ತಿರುವ ಹಾನಿಗಳನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಇದೇ ವೇಳೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಇಸ್ರೇಲಿ ಪ್ರಧಾನಿಯೊಂದಿಗಿನ ಮಾತನಾಡಿದ್ದಾರೆ. ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್‌ನ ಖಂಡಾಂತರ ಕ್ಷಿಪಣಿ ದಾಳಿಯನ್ನು ಬೈಡನ್ ಖಂಡಿಸಿದ್ದಾರೆ. ಅಂತಹ ಆಕ್ರಮಣದ ವಿರುದ್ಧ ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಎರಡೂ ದೇಶಗಳಲ್ಲಿ ನಾಗರಿಕರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಹಿಂದಿರುಗಲು ‘ಬ್ಲೂ ಲೈನ್’ಸೃಷ್ಟಿಯ ಕುರಿತಂತೆ ರಾಜತಾಂತ್ರಿಕ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದಾರೆ. ಗಾಜಾ ಜೊತೆಗಿನ ರಾಜತಾಂತ್ರಿಕತೆ ನವೀಕರಿಸುವ ಮತ್ತು ಹಮಾಸ್ ಒತ್ತೆಯಾಳಾಗಿರಿಸಿಕೊಂಡಿರುವವರ ಶೀಘ್ರ ಬಿಡುಗಡೆ ಬಗ್ಗೆ ನಾಯಕರು…

Read More