Author: Prajatv Kannada

ಅಜಾತಶತ್ರು, ಕೈಗೋರಿಕೋದ್ಯಮಿ, ವಾಣಿಜ್ಯ ಸಾಮ್ರಾಜ್ಯವನ್ನು ಆಳಿದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ರತನ್ ಟಾಟಾ ಮದುವೆಯಾಗದೆ ಹಾಗೆಯೇ ಉಳಿದಿದ್ದರು. ರತನ್ ಜೀವನದಲ್ಲಿ ನಾಲ್ವರೊಂದಿಗೆ ಪ್ರೀತಿಯಲ್ಲಿದ್ದರು ಅದ್ಯಾವುದು ಮದುವೆ ವರೆಗೂ ಬಂದಿರಲಿಲ್ಲ. ಹೀಗಾಗಿ ರತನ್ ನಿಧನದ ಬಳಿಕ ಅವರು ಸಂಗ್ರಹಿಸಿದ 3800 ಕೋಟಿ ರೂ. ಸ್ವತ್ತನ್ನು ಯಾರು ಆಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ರತನ್ ಟಾಟಾ ಅವರ 3800 ಕೋಟಿ ರೂ. ಸ್ವತ್ತಿನ ಉತ್ತರಾಧಿಕಾರಿಯಾಗಲು ನೋಯಲ್ ಟಾಟಾ, ನೆವಿಲ್ ಟಾಟಾ, ಲಿಯಾ ಟಾಟಾ ಮತ್ತು ಮಾಯಾ ಟಾಟಾ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದ್ರೆ ಇವರಲ್ಲಿ ರತನ್ ಆಸ್ತಿ ಯಾರಾ ಪಾಲಾಗಲಿದೆ ಎಂಬ ಕುತೂಹಲ ಇದೆ. 1937 ರಲ್ಲಿ ಮುಂಬೈನಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಅವರು ತಮ್ಮ 10 ನೇ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡರು. ಬಳಿಕ ಅವರನ್ನು ಅಜ್ಜಿ ಬೆಳೆಸಿದರು. ಈ ಒಂಟಿತನವು ಅವರಿಗೆ ಜೀವನದ ಅರ್ಥವನ್ನು ಕಲಿಸಿತು ಮತ್ತು…

Read More

ಹುಬ್ಬಳ್ಳಿ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಿಂಗಾರು ಆರ್ಭಟ ಜೋರಾಗಿದೆ. ಬುಧವಾರ ಸಂಜೆಯಿಂದ ಆರಂಭವಾದ ಜಡಿ ಮಳೆ ಇಡೀ ರಾತ್ರಿ ಸುರಿದಿದೆ. ದಾಖಲೆ ಎಂಬಂತೆ ಹುಬ್ಬಳ್ಳಿ ಹಾಗೂ ಛಬ್ಬಿ ಹೋಬಳಿಯಲ್ಲಿ ಈ ವರ್ಷದ ಅತ್ಯಂತ ಹೆಚ್ಚು ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ೭೨.೫ ಎಂ.ಎಂ. ಹಾಗೂ ಛಬ್ಬಿ ಹೋಬಳಿಯಲ್ಲಿ ೭೬.೮ ಎಂ.ಎಂ. ಮಳೆ ದಾಖಲಾಗಿದೆ. ಇದು ಈ ವರೆಗಿನ ಅತಿ ಹೆಚ್ಚು ಮಳೆ ಎಂದು ಹೇಳಲಾಗಿದೆ. ಶಿರಗುಪ್ಪಿ ೨೩.೬ ಹಾಗೂ ಬ್ಯಾಹಟ್ಟಿಯಲ್ಲಿ ೩೦ ಎಂಎಂ ಮಳೆಯಾಗಿದೆ. ಬು. ಅರಳಿಕಟ್ಟಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಳಗಲಿ ನೂಲ್ವಿ ರಸ್ತೆ ಸೇತುವೆ ಹಾಗೂ ಕುಸುಗಲ್ಲ ಇಂಗಳಹಳ್ಳಿ ರಸ್ತೆಯಲ್ಲಿ ಬೆಣ್ಣೆಹಳ್ಳ ಉಕ್ಕಿ ಹರಿದು ಸಂಚಾರ ಬಂದ್ ಆಗಿದೆ.

Read More

ಹುಬ್ಬಳ್ಳಿ: ಬುಧವಾರ ಸಂಜೆಯಿಂದ ಆರಂಭಗೊಂಡ ಮಳೆ ಗುರುವಾರ ಬೆಳಗಿನ ಜಾವಕ್ಕೆ ರಭಸದೊಂದಿಗೆ ಬಿದ್ದ ಪರಿಣಾಮ ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅನೇಕ ಮುಖ್ಯ ರಸ್ತೆಗಳು‌ ಕೆರೆಯಂತಾಗಿವೆ. ಒಂದೆರಡು‌ ಕಡೆ ಮರಗಳು‌ ಧರೆಗುರಳಿವೆ ಬುಧವಾರ ಸಾಯಂಕಾಲ‌ ಜೋರಾಗಿ ಬಿದ್ದ ಮಳೆ ರಾತ್ತಿ ವೇಳೆಗೆ ಜಿಟಿ, ಜಿಟಿಯಾಗಿ ಬೀಳಲಾರಂಭಿಸಿತು. ಗುರುವಾರ ಬೆಳಗಿನ ಜಾವದಿಂದಲೇ ರಭಸದ ಮಳೆ ಬಿದ್ದಿದೆ. ರಭಸದ ಮಳೆಯಿಂದಾಗಿ ನವನಗರದ ಪಂಚಾಕ್ಷರಿ ನಗರದ ಒಂದೆರಡು‌ ಮನೆಗಳಿಗೆ ನೀರು ನುಗ್ಗಿದೆ. ಹಳೇ ಹುಬ್ಬಳಿಯ ಗಣೇಶ ಕಾಲೋನಿ, ಆನಂದನಗರ, ಶಿಮ್ಲಾನಗರ ಹಾಗೂ ಪಿ.ಬಿ.ರಸ್ತೆ, ದಾಜಿಬಾನಪೇಟೆ, ವಿದ್ಯಾನಗರ ಇನ್ನಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಶ್ರೀನಗರ ಕ್ರಾಸ್ ಇನ್ನಿತರ ಕಡೆಗಳಲ್ಲಿ‌ ಬಿಆರ್ ಟಿಎಸ್ ಬಸ್ ಮಾರ್ಗದಲ್ಲಿ ಅಪಾರ ಪ್ರಮಾಣದ ನೀರು ನಿಂತದ್ದು ಕಂಡು ಬಂದಿತು. ರಾಮನಗರ, ಅಶೋಕ ನಗರದಲ್ಲಿ ಎರಡು‌ ಮರಗಳು‌ ನೆಲಕ್ಕುರಳಿವೆ. ಇದುವರೆಗೂ‌ ಯಾವುದೇ ಹಾನಿ‌ ಬಗ್ಗೆ ಇನ್ನು ವರದಿಯಾಗಿಲ್ಲ

Read More

ಬೆಂಗಳೂರು: ಅನಾರೋಗ್ಯದಿಂದ ಮುಂಬೈನ  ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ (86) ಅವರು ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ರಾಜ್ಯದ ಪ್ರಮುಖ ನಾಯಕರೂ ಕಂಬನಿ ಮಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ  ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. https://youtu.be/5OB-0TUHHBY?si=GWleaanDT0cvY6eU ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು, ರತನ್‌ ಟಾಟಾ  ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಣ್ಯರು ತಮ್ಮ ಎಕ್ಸ್‌ ಖಾತೆಗಳಲ್ಲಿ ಸಂತಾಪ ನುಡಿಗಳನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ: ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್…

Read More

ಬೆಂಗಳೂರು: ರತನ್‌ ಟಾಟಾ ಅವರು ಬೆಂಗಳೂರಿನಲ್ಲಿ ಅಮೆರಿಕದ ಎಫ್‌ 16 ಫಾಲ್ಕನ್‌ ಯುದ್ಧ ವಿಮಾನವನ್ನು ಹಾರಿಸಿದ್ದರು. ಅದು 69ರ ವಯಸ್ಸಿನಲ್ಲಿ ಎನ್ನುವುದು ವಿಶೇಷ. https://youtu.be/-etP_kNRtVk?si=zXfjzG85eHp8cdwf 2007ರಲ್ಲಿ ನಡೆದ ಏರೋ ಇಂಡಿಯಾ   ವೈಮಾನಿಕ ಪ್ರದರ್ಶನಲ್ಲಿ ಅಮೆರಿಕದ ಲಾಕ್‌ಹಿಡ್‌ ಮಾರ್ಟಿನ್‌ ಕಂಪನಿ ನಿರ್ಮಿಸಿದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಫ್‌-16 ಯುದ್ಧ ವಿಮಾನ ಭಾಗಿಯಾಗಿತ್ತು. ಈ ಯುದ್ಧ ವಿಮಾನವನ್ನು ರತನ್‌ ಟಾಟಾ ಹಾರಿಸಿದ್ದರು. ಈ ಮೂಲಕ ಎಫ್‌-16 ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ರತನ್‌ ಟಾಟಾ ಅವರು ಜೆಟ್‌, ಹೆಲಿಕಾಪ್ಟರ್‌ ಹಾರಿಸಲು ಪರವಾನಗಿ ಹೊಂದಿದ್ದರು. ಸಹ ಪೈಲೆಟ್‌ ಮಾರ್ಗದರ್ಶನದಲ್ಲಿ ಟಾಟಾ ಅವರು ಸುಮಾರು 40 ನಿಮಿಷ ವಿಮಾನ ಹಾರಿಸಿದರು. ಹಾರಾಟದ ಅವಧಿಯಲ್ಲಿ ಎಫ್‌16 ವಿಮಾನ ಪ್ರತಿ ಗಂಟೆಗೆ 2000 ಕಿ.ಮೀ ವೇಗದಲ್ಲಿ ಸಂಚರಿಸಿತ್ತು. ಲ್ಯಾಂಡಿಂಗ್‌ ನಂತರ ಟಾಟಾ ಅವರನ್ನು ಲಾಕ್‌ಹೀಡ್ ಮಾರ್ಟಿನ್ ಅಧಿಕಾರಿಗಳು ರತನ್‌ ಟಾಟಾ ಅವರನ್ನು ಸ್ವಾಗತಿಸಿ F-16 ನ ಚಿಕ್ಕ ಪ್ರತಿಕೃತಿಯನ್ನು ನೀಡಿದರು. ಈ ಸಮಯದಲ್ಲಿ ಅಮೆರಿಕದ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬ ಅಟ್ಟಹಾಸ ಮೆರೆದಿದ್ದು, ಸಿಕ್ಕ ಸಿಕ್ಕವರ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ಮನಬಂದಂತೆ ಹಲ್ಲೆ ಮಾಡಿದ ಘಟನೆ ಜರುಗಿದೆ. https://youtu.be/Iuy-OI0Bmek?si=3JJLm2Q3ONY_DkUf ಈ ಘಟನೆ ಬ್ರೂಕ್ ಪಿಲ್ಡ್ ನ ಕುಂದಲಹಳ್ಳಿ ಬಳಿಯ ಬ್ರಿಗೇಡ್ ಟೆಕ್ ಗಾರ್ಡನ್ ಬಳಿ ಜರುಗಿದೆ. ರೌಡಿಯಂತೆ ಅಟ್ಟಹಾಸ ಮಾಡ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಯುವಕ ನಿನ್ನೆ ರಾತ್ರಿ 8.20 ರ ಸುಮಾರಿಗೆ ಸಿಕ್ಕ ಸಿಕ್ಕವರ ಮೇಲೆ ಬ್ಯಾಟ್ ಬೀಸಿ ಹಲ್ಲೆ ನಡೆದಿದೆ. ವ್ಯಕ್ತಿಯೋರ್ವರು ಎಕ್ಸ್ ನಲ್ಲಿ ಈ ವಿಡಿಯೋ ಶೇರ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇನ್ನೂ ಘಟನೆ ಸಂಪೂರ್ಣ ವಿವರ ನೀಡುವಂತೆ ವ್ಯಕ್ತಿ ಬಳಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

Read More

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಎಲೆಕ್ಟ್ರಿಕ್ ರೈಸ್ ಕುಕ್ಕರ್‌ನಲ್ಲಿ ಅಕ್ಕಿ ಬೇಯಿಸುತ್ತಿದ್ದಾರೆ. ಈ ಪದ್ಧತಿ ನಗರಗಳಲ್ಲಷ್ಟೇ ಅಲ್ಲ ಹಳ್ಳಿಗಳಲ್ಲೂ ಹಬ್ಬಿದೆ. ಇದು ಸುಲಭವಾದ ವಿಧಾನವಾದ್ದರಿಂದ ಹೆಚ್ಚಿನವರು ಈ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಆದರೆ, ಎಲೆಕ್ಟ್ರಿಕ್ ರೈಸ್ ಕುಕ್ಕರ್‌ನಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಲೆಕ್ಟ್ರಿಕ್ ರೈಸ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನದಲ್ಲಿ ಪೋಷಕಾಂಶಗಳು ಕಳೆದುಹೋಗುತ್ತವೆ ಮತ್ತು ಅಡುಗೆ ಮಾಡುವಾಗ ಅಪಾಯಕಾರಿ ರಾಸಾಯನಿಕಗಳು ಅದರಿಂದ ಬಿಡುಗಡೆಯಾಗುತ್ತವೆ ಎಂದು ಹೇಳಲಾಗುತ್ತದೆ ಎಲೆಕ್ಟ್ರಿಕ್ ರೈಸ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನವನ್ನು ತಿನ್ನುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಎಲೆಕ್ಟ್ರಿಕ್ ರೈಸ್ ಕುಕ್ಕರ್‌ಗಿಂತ ಪ್ರೆಶರ್ ಕುಕ್ಕರ್ ಉತ್ತಮ ಎಂದು ಹೇಳಲಾಗುತ್ತದೆ. ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿಯನ್ನು ವೇಗವಾಗಿ ಬೇಯಿಸಲಾಗುತ್ತದೆ. ಅದರಿಂದ ಪ್ರೆಷರ್​ ಹೆಚ್ಚಿ ಅದರಲ್ಲಿನ ಪೋಷಕಾಂಶಗಳು ನಾಶವಾಗುತ್ತವೆ. ಕರೆಂಟ್ ಆಧರಿಸಿ ಬೇಯಿಸಿದ ಅನ್ನವನ್ನು ತಿನ್ನದಿರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಮಣ್ಣಿನ ಪಾತ್ರೆ, ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿನ್ನುವುದು ಉತ್ತಮ ಎನ್ನುತ್ತಾರೆ.ಇದರಲ್ಲಿ ತಯಾರಿಸಿದ ಆಹಾರ…

Read More

ಮೀನಿನ ನಿಯಮಿತ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲವು ಮೀನುಗಳಲ್ಲಿ ಪಾದರಸವು ಅಧಿಕವಾಗಿರುತ್ತದೆ. ಇದರೊಂದಿಗೆ ಕೆಲವು ಪ್ರಮುಖ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಿ ವಾರಕ್ಕೆ ಎರಡು ಬಾರಿಯಾದರೂ ಮೀನು ತಿನ್ನಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಮೀನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಮೆದುಳಿಗೆ ಒಳ್ಳೆಯದು: ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿದ್ದು ಅದು ಮೆದುಳಿಗೆ ಒಳ್ಳೆಯದು. ಅಲ್ಲದೆ, ಮಾನವನ ಮೆದುಳಿನಲ್ಲಿ ಕಂಡುಬರುವ ಪೊರೆಯ n-3 FA ಗಳಿಗೆ ಮೀನು ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಮೀನುಗಳು ವಯಸ್ಸಾದವರಂತೆ ಮರೆವು ತಡೆಯುತ್ತದೆ. ಗರ್ಭಾವಸ್ಥೆಯಲ್ಲಿ ಮೀನು ತಿನ್ನುವುದು ಒಳ್ಳೆಯದು ಏಕೆಂದರೆ ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಅಸ್ತಮಾ: ಮೀನಿನಲ್ಲಿ ಎನ್-3 ಎಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಇದು ಅಸ್ತಮಾ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ  ಅತಿಸಾರ, ಚರ್ಮದ ಅಲರ್ಜಿಗಳು, ಆಸ್ತಮಾದಂತಹ ಉರಿಯೂತದ ಕರುಳಿನ ಕಾಯಿಲೆಗಳ…

Read More