ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ವಂಚನೆಯ ಆರೋಪ ಕೇಳಿಬಂದಿದೆ. ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ ಹೆಚ್ಚು ಲಂಚದ ಭರವಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ದೇಶದ ಪ್ರಮುಖ ವಿಮಾನ ನಿಲ್ದಾಣದ ನಿಯಂತ್ರಣವನ್ನು ಅದಾನಿ ಗ್ರೂಪ್ ಗೆ ಹಸ್ತಾಂತರಿಸುವ ಆದೇಶವನ್ನು ರದ್ದುಗೊಳಿಸಿಸುವ ಮೂಲಕ ಅದಾನಿ ಗ್ರೂಪ್ ಗೆ ಮತ್ತೊಂದು ಶಾಕ್ ನೀಡಿದೆ.. ಇದಲ್ಲದೆ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಕೀನ್ಯಾ ಇಂಧನ ಸಚಿವಾಲಯ ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿದ್ದ 30 ವರ್ಷಗಳ 736 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ರದ್ದುಗೊಳಿಸುವಂತೆ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಆದೇಶ ಹೊರಡಿಸಿದ್ದಾರೆ. ಕೀನ್ಯಾದ ನೈರೋಬಿಯ ಜೋಮೊ ಕೆನ್ಯಾಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಗುತ್ತಿಗೆ ನೀಡುವ ಕೀನ್ಯಾ ಸರ್ಕಾರದ ನಿರ್ಧಾರದ…
Author: Prajatv Kannada
ಹಾವೇರಿ : ತೀವ್ರ ಕುತೂಹಲ ಕೆರಳಿಸಿರುವ ಉಪಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲೂ ನಾಳೆ ಮತ ಎಣಿಕೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ. https://youtu.be/cHMqPi7YYJ8?si=OGbxTRVG6qFgfImn ದೇವಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಹಾವೇರಿ ಜಿಲ್ಲಾಡಳಿತ ಪೂರ್ವ ತಯಾರಿ ನಡೆಸಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಯಾಸೀರ್ ಖಾನ್ ಪಠಾಣ್ ಸ್ಪರ್ಧಿಸಿದ್ದಾರೆ. ಭರತ ಬೊಮ್ಮಾಯಿ ಎದುರಾಳಿಯಾಗಿದ್ದ ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಿನ ಮೂಲಕ ಬೊಮ್ಮಾಯಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸಬೇಕೆಂದು ಸಚಿವ ಸತೀಶ್ ಜಾರಕಹೊಳಿ ನೇತೃತ್ದ ಇಡೀ ತಂಡವೇ ಶಿಗ್ಗಾಂವಿಯಲ್ಲಿ ಬೀಡುಬಿಟ್ಟಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಯಾಸೀರ್ ಖಾನ್ ಪಠಾಣ್ ಪರ ಪ್ರಚಾರ ಮಾಡಿದ್ದರು. ಶಿಗ್ಗಾಂವಿ ಮತಕ್ಷೇತ್ರದಲ್ಲಿ ಶೇ.88.48ರಷ್ಟು ಮತದಾನ ನಡೆದಿತ್ತು. ಈಗಾಗಲೇ ಎವಿಎಂ ಮಷಿನ್‌ಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಬೆಂಗಳೂರು:- ಬದಲಾದ ಕಾಲಘಟ್ಟ ಹಾಗೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪುಡಿ ರೌಡಿಗಳಂತೆ ವರ್ತನೆ ಮಾಡುತ್ತಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ತೆಗೆಯೋದು, ಚಾಕು ಇರಿಯೋದು ಇದು ಕಾಮನ್ ಆಗಿಬಿಟ್ಟಿದೆ. ಇದು ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗಿದೆ ಅನ್ನೋದನ್ನು ನಾವು ನೋಡಬೇಕು. https://youtu.be/LRSV-ErqP48?si=CeFLEfMf2EV0RGjs ಎಸ್, ನಗರದ ರಾಜಾನುಕುಂಟೆ ಬಳಿಯ ಖಾಸಗಿ ಕಾಲೇಜಿನಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ವಿದ್ಯಾರ್ಥಿಗಳ ನಡುವಿನ ಗಲಾಟೆಯಲ್ಲಿ ಮೂವರಿಗೆ ಚಾಕುವಿನಿಂದ ಘಟನೆ ಜರುಗಿದೆ. ಇಬ್ಬರಿಗೆ ಘಟನೆಯಲ್ಲಿ ಗಂಭೀರ ಗಾಯಗಳಾಗಿದೆ. ಮತ್ತೋರ್ವನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಯೊಬ್ಬ ಆತನ ಸ್ನೇಹಿತರೊಂದಿಗೆ ಸೇರಿಕೊಂಡು, ಮತ್ತೊಂದು ವಿದ್ಯಾರ್ಥಿಗಳ ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೆಲ್ಮೆಟ್‍ಗಳಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ
ತೆಲುಗು ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟ ಕಾರಣಕ್ಕೆ ನಟಿ ಹಾಗೂ ಬಿಜೆಪಿ ವಾಕ್ತಾರೆ ಕಸ್ತೂರಿ ಶಂಕರ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಚೆನ್ನೈ ಕೋರ್ಟ್ ನಿರ್ದೇಶನದಂತೆ ಪೊಲೀಸರು ನಟಿಯನ್ನು ಹೈದರಾಬಾದ್ನಲ್ಲಿ ಅರೆಸ್ಟ್ ಮಾಡಿ ಚೆನ್ನೈಗೆ ಕರೆತಂದಿದ್ದರು. ಕಸ್ತೂರಿ ಶಂಕರ್ ಅವರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಜಾಮೀನು ಪಡೆದು ಹೊರಗೆ ಬರುತ್ತಿದ್ದಂತೆ ಅವರ ಬೆಂಬಲಿಗರು ಶಾಲು ಹೊದಿಸಿ ಶುಭಾಶಯ ಕೋರಿದ್ದಾರೆ. ಕೋರ್ಟ್ ಆವರಣದಲ್ಲಿಯೇ ಒಂದಷ್ಟು ಜನ ಆಕೆಯನ್ನು ಶಾಲು ಹೊದಿಸಿ ಅಭಿನಂದಿಸಿದ್ದಾರೆ. ಇದೇ ವೇಳೆ ಮಾತನಾಡಿದ ಕಸ್ತೂರಿ ಶಂಕರ್, ಬಿರುಗಾಳಿಯಂತೆ ನನ್ನನ್ನು ಬದಲಾಯಿಸಿದವರಿಗೆ ಧನ್ಯವಾದ. ಕೆಲವರು ನನ್ನನ್ನ ಜೈಲು ಸೇರುವಂತೆ ಮಾಡಿದರು. ನನ್ನದು ಸಣ್ಣ ಧ್ವನಿ ಆದ್ರೆ ಈಗ ಚಂಡಮಾರುತವಾಗಿ ಬದಲಾಗಿದೆ ಅಂತ ಕಸ್ತೂರಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ಗೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಮಧ್ಯಂತರ ಜಾಮೀನಲ್ಲಿರುವ ದರ್ಶನ್ ಖಾಯಂ ಬೇಲ್ ನಿರೀಕ್ಷೆಯಲ್ಲಿದ್ದಾರೆ.. ಆದ್ರೆ ಪೊಲೀಸರು ಕೊಲೆ ಕೇಸ್ಗೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಿಸೋಕ್ಕೆ ರೆಡಿಯಾಗಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ಮತ್ತೆರಡು ಫೋಟೋ ಸಾಕ್ಷಿಗಳನ್ನು ಸೇರಿಸಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಸಲಿದ್ದಾರೆ ಎನ್ನಲಾಗ್ತಿದೆ. ಈ ಕುರಿತ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ . https://youtu.be/O_RRkbPXbkM?si=7-CiT1L4knihh8CV ಈಗಾಗಲೇ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ ದರ್ಶನ್ ನ ಅರ್ಧದಷ್ಟು ಜಾಮೀನಿನ ಅವಧಿ ಕೂಡ ಮುಗಿಯುತ್ತಾ ಬಂದಿದೆ. ಈ ಮಧ್ಯೆ ರೆಗ್ಯುಲರ್ ಬೇಲ್ ಗೂ ಕೂಡ ಅರ್ಜಿ ಹಾಕಿಕೊಂಡಿದ್ದಾರೆ. ಆದ್ರೆ ದರ್ಶನ್ ಗೆ ಮತ್ತೊಂದು ಟೆನ್ಷನ್ ಶುರುವಾಗಿದೆ… ಅದಕ್ಕೆ ಕಾರಣ ಪೊಲೀಸರು ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸೋಕೆ ರೆಡಿಯಾಗಿರೋದು… ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಪೊಲೀಸರು ನಾಳೆ ನ್ಯಾಯಾಲಯಕ್ಕೆ ಸಲ್ಲಿಕೆ ಸಾಧ್ಯತೆ ಇದೆ. 20ಕ್ಕೂ ಹೆಚ್ಚು ಸಾಕ್ಷಿಗಳು, ಹಲವು ಎಫ್…
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್ ಗೆ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆರು ವಾರಗಳ ಕಾಲ ಜಾಮೀನು ನೀಡಲಾಗಿದ್ದು ಅದರಲ್ಲಿ ಮೂರು ವಾರ ಮುಗಿದು ಹೋಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುದ ದರ್ಶನ್ ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಮಧ್ಯಂತರ ಜಾಮೀನು ಸಿಕ್ಕ ಖುಷಿಯಲ್ಲಿರುವ ದರ್ಶನ್ ಮತ್ತೆ ಟೆನ್ಷನ್ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಮತ್ತೊಂದು ಪ್ರಬಲ ಸಾಕ್ಷಿ ಬೆಳಕಿಗೆ ಬಂದಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ನಿಂತಿರುವ ಚಿತ್ರ ಇದೀಗ ಪೊಲೀಸರಿಗೆ ಲಭ್ಯವಾಗಿದ್ದುಅದನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್ ಆ ಸ್ಥಳದಲ್ಲಿ ಇರಲಿಲ್ಲ ಎಂಬ ವಾದ ಈ ಹಿಂದೆ ಕೇಳಿ ಬಂದಿತ್ತು. ದರ್ಶನ್, ರೇಣುಕಾ ಸ್ವಾಮಿಗೆ ಕೋಪದಲ್ಲಿ ಹೊಡೆದು ಅಲ್ಲಿಂದ ಹೊರಟು ಹೋದರು ಎನ್ನಲಾಗಿತ್ತು. ಆದರೆ ಈಗ ಪೊಲೀಸರಿಗೆ ಲಭ್ಯವಾಗಿರುವ ಫೋಟೋದಲ್ಲಿ ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ…
ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಮನಸ್ತಾಪ ಮೂಡಿದೆ. ಇದೇ ಕಾರಣಕ್ಕೆ ಇಬ್ಬರು ದೂರ ದೂರ ವಾಸವಾಗಿದ್ದು ಸದ್ಯದಲ್ಲೇ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರು ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ ಶುರುವಾಗಿ ಕೆಲ ತಿಂಗಳೆ ಕಳೆದಿದೆ. ಆದರೆ ಇದುವರೆಗೂ ಐಶ್ ಅಥವಾ ಬಚ್ಚನ್ ಕುಟುಂಬವಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.ಇದೀಗ ಅಮಿತಾಭ್ ಬಚ್ಚನ್ ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅಮಿತಾಭ್ ಬಚ್ಚನ್ ಇದೀಗ ಹೊಸ ಬ್ಲಾಗ್ ಬರೆದುಕೊಂಡಿದ್ದಾರೆ. ಇದರಲ್ಲಿ ಅವರು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಕುಟುಂಬದ ಬಗ್ಗೆ ಮಾತನಾಡುವುದು ಕಡಿಮೆ. ಏಕೆಂದರೆ ಅದು ಖಾಸಗಿ ವಿಚಾರ. ಊಹಾಪೋಹಗಳು ಯಾವಾಗಲೂ ಊಹಾಪೋಹಗಳೇ. ಪರಿಶೀಲನೆ ಮಾಡದೇ ಇರುವ ವಿಚಾರ ಅಸತ್ಯವೇ’ ಎಂದಿದ್ದಾರೆ. ‘ಈ ರೀತಿಯ ಸುದ್ದಿಗಳಿಂದ ಕೆಲವರಿಗೆ ಲಾಭ ಆಗಬಹುದು. ಆದರೆ, ನನ್ನ ಗಮನ ಕುಟುಂಬದ ಮೇಲೆ ಇರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ ಸಂಸಾರದಲ್ಲಿ ಸಮಸ್ಯೆ…
ತುಮಕೂರು : ನೂತನವಾಗಿ ಬೆಳಗುಂಬ ಗ್ರಾಮ ಪಂಚಾಯ್ತಿ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಂಗಳಮ್ಮ ಚೌಡಪ್ಪ (ಕುಂದೂರು) ರವರು ಸನ್ಮಾನ್ಯ ಜನಪ್ರಿಯ ನಿಕಟಪೂರ್ವ ಶಾಸಕರಾದ ಶ್ರೀ ಡಿ ಸಿ ಗೌರಿಶಂಕರ್ ಅಣ್ಣ ನವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸನ್ಮಾನ್ಯ ಗೌರಿಶಂಕರಣ್ಣನವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಂಗಳಮ್ಮ ಚೌಡಪ್ಪ ನವರಿಗೆ ಸನ್ಮಾನ ಮಾಡಿ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು ಎಂದು ಹಾರೈಸಿದರು ಇದೇ ಸಂದರ್ಭದಲ್ಲಿ ಹಲವಾರು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು
ಸಂಗೀತಾ ಮಾಂತ್ರಿಕ ಎ.ಆರ್.ರೆಹಮಾನ್ ಪತ್ನಿಸೈರಾ ಭಾನು ಅವರಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇಬ್ಬರು ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ರೆಹಮಾನ್ ಮಲಯಾಳಂನ ‘ಆಡು ಜೀವಿತಂ’ ಸಿನಿಮಾದ ಹಿನ್ನೆಲೆ ಸಂಗೀತಕ್ಕಾಗಿ ಪ್ರತಿಷ್ಠಿತ ಹಾಲಿವುಡ್ ಮ್ಯೂಸಿಕ್ ಇನ್ ಮೀಡಿಯಾ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಎಆರ್ ರೆಹಮಾನ್ ವಿದೇಶಿ ಭಾಷಾ ಚಲನಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಿರ್ದೇಶಕ ಬ್ಲೆಸ್ಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಆಡು ಜೀವಿತಂ’ ಸಿನಿಮಾ ಅತ್ಯುತ್ತಮ ಹಾಡು ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಎರಡು ವಿಭಾಗಗಳು ನಾಮೀನೇಟ್ ಆಗಿತ್ತು. ಲಾಸ್ ಏಂಜಲೀಸ್ ನಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಅತ್ಯುತ್ತಮ ಸಂಗೀತ ಸಂಯೋಜನೆ ಪ್ರಶಸ್ತಿಯನ್ನು ಎ.ಆರ್. ರೆಹಮಾನ್ ಅವರಿಗೆ ನೀಡಲಾಗಿದೆ. ಎ.ಆರ್. ರೆಹಮಾನ್ ಪರವಾಗಿ ಆಡು ಜೀವಿತಂ ಚಿತ್ರದ ನಿರ್ದೇಶಕರು ಈ ಪ್ರಶಸ್ತಿ ಸ್ವೀಕರಿಸಿದರು. ಚಿತ್ರದ ನಾಯಕ ನಟ ಪೃಥ್ವಿರಾಜ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಆಡುಜೀವಿತಂ – ದಿ…
ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ವಿರುದ್ಧ ನಟಿ ನಯನತಾರಾ ಪಬ್ಲಿಕ್ ನಲ್ಲೇ ಹರಿಹಾಯ್ದಿದ್ದಾರೆ. ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ವಿವಾದದ ಕುರಿತು ನಯನತಾರಾ ಸೋಷಿಯಲ್ ಮೀಡಿಯಾದಲ್ಲಿ ಸುಧೀರ್ಘ ಪತ್ರ ಬರೆದು ಕಿಡಿಕಾರಿದ್ರ. 3 ಸೆಕೆಂಡ್ ವಿಡಿಯೋಗಾಗಿ ಧನುಷ್ 10 ಕೋಟಿ ಕೇಳಿದ್ರು ಎಂದು ನಟಿ ಆರೋಪಿಸಿದ್ದಾರೆ. ಈ ವಿವಾದ ಭಾರೀ ಸದ್ದು ಮಾಡಿತ್ತು. ಸಾಕ್ಷ್ಯ ಚಿತ್ರದ ವಿವಾದದ ಬಳಿಕ ಒಂದೇ ಕಾರ್ಯಕ್ರಮದಲ್ಲಿ ನಯನತಾರಾ ಹಾಗೂ ನಟ ಧನುಷ್ ಮುಖಾಮುಖಿ ಆಗಿದ್ದಾರೆ. ನಟಿ ನಯನತಾರಾ, ನಟ ಧನುಷ್ ಮೇಲೆ ಸಾಕಷ್ಟು ಆರೋಪಗಳನ್ನ ಮಾಡಿದ್ರು. ಪುಟ್ಟಗಟ್ಟಲೆ ಬರೆದು ಧನುಷ್ ಮೇಲಿನ ಕೋಪವನ್ನು ಹೊರ ಹಾಕಿದ್ದರು. ಆದ್ರೆ ನಯನತಾರಾ ಆರೋಪಕ್ಕೆ ನಟ ಧನುಷ್ ಯಾವುದೇ ಉತ್ತರ ನೀಡಿಲ್ಲ. ಧನುಷ್ ಪರ ವಕೀಲರು ಕೂಡ ನಟ ಧನುಷ್ ಅವರೇ ಎಲ್ಲದ್ದಕ್ಕೂ ಉತ್ತರ ಕೊಡ್ತಾರೆ ಎಂದ್ರು. ಇದೀಗ ಒಂದೇ ಕಾರ್ಯಕ್ರಮದಲ್ಲಿ ಧನುಷ್, ನಯನತಾರಾ ಕಾಣಿಸಿಕೊಂಡಿದ್ದಾರೆ. ವಿವಾದದ ಬಳಿಕ ಮೊದಲ ಬಾರಿಗೆ ನಯನತಾರಾ, ಧನುಷ್ ಒಂದೇ ಕಾರ್ಯಕ್ರಮದಲ್ಲಿ…