ಬೆಂಗಳೂರು:- ಕರ್ನಾಟಕದಲ್ಲಿ ಮುಂದಿನ ವಾರದಿಂದ ಮತ್ತೆ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದೆ ಎಚ್ಎಎಲ್ನಲ್ಲಿ 29.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 30.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
Author: Prajatv Kannada
ಆನೇಕಲ್:- ಜಗಳ ಬಿಡಿಸಲು ಹೋದವರ ಮೇಲೆ ಬಂದೂಕಿನಿಂದ ಫೈರಿಂಗ್ ನಡೆದಿರುವ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಜರುಗಿದೆ. https://youtu.be/xV25JrgjO2c?si=Yy8qKEvux1pcBBIP ಡಬಲ್ ಬ್ಯಾರಲ್ ಬಂದೂಕಿನಿಂದ ಫೈರಿಂಗ್ ನಡೆದಿದೆ. ಜಗಳ ಬಿಡಿಸಲು ಹೋಗಿದ್ದ ಸಂಪಗಿಗೆ ಗುಂಡೇಟು ಬಿದ್ದಿದ್ದು, ಚಂದ್ರಶೇಖರ್ ಬಂದೂಕಿನಿಂದ ಗುಂಡು ಹಾರಿಸಿದ ಆರೋಪಿ ಎಂದು ಹೇಳಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಡಿ ಹೊಸಕೋಟೆ ಗ್ರಾಮದಲ್ಲಿ ಘಟನೆ ಜರುಗಿದೆ. ಚಂದ್ರಶೇಖರ್ ಹಾಗೂ ಶ್ರೀನಿವಾಸ್ ಸಿಡಿ ಹೊಸಕೋಟೆ ಗ್ರಾಮದ ಮುನಿರಾಜು ವೆಂಬು ಅವರ ಮಗನಾಗಿದ್ದು ತಂದೆ ಮಕ್ಕಳು ಇಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಹಲ್ಲೆ ಮಾಡುತ್ತಿದ್ದಾಗ ಬಿಡಿಸಲು ಮುನಿರಾಜು ಅವರ ಅಣ್ಣನಾದ ಸಂಪಂಗಿ ಹಾಗೂ ಪತ್ನಿ ಬಂದಿದ್ದಾರೆ. ಬಂದು ಸಮಾಧಾನ ಮಾಡಲು ಬಂದಿದ್ದ ಚಂದ್ರಶೇಖರ್ ಸಂಪಂಗಿಯ ಮೇಲೆ ಫೈರಿಂಗ್ ಮಾಡಿದ್ದಾನೆ. ಸಂಪಂಗಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ದಾವಣಗೆರೆ: ಹರಿಹರದ ಕೋಮರನಹಳ್ಳ ಗುಡ್ಡದಲ್ಲಿ ಮುಸಲ್ಮಾನರು ಝಂಡಾ ಕಟ್ಟೆ ಮಾಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಿದರು. ಗುಡ್ಡದ ಅರಣ್ಯ ಪ್ರದೇಶದಲ್ಲಿ ಇವರು ಹೀಗೆ ಒತ್ತುವರಿ ಮಾಡಿಕೊಂಡರೆ ಇಲಾಖೆಯವರು ಸುಮ್ನೆ ಇರ್ತಾರೆ. ಆದರೆ ರೈತರ ಮೇಲೆ ಮಾತ್ರ ದಬ್ಬಾಳಿಕೆ ಮಾಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ಫ್ ಬೋರ್ಡ್ ದೇಶಕ್ಕೆ ಮಾರಕವಾದ ಮಂಡಳಿಯಾಗಿದೆ. ಕಾಂಗ್ರೆಸ್‍ನ ಕೆಲ ನಾಯಕರು ಸದ್ದಿಲ್ಲದೆ ಭೂಮಿಯನ್ನು ವಕ್ಫ್‌ಗೆ ನೀಡಿದ್ದಾರೆ. ಯಾವಾಗ ಜನಾಕ್ರೋಶ ಆರಂಭವಾಯ್ತೋ ಆಗ ರಾಜ್ಯ ಸರ್ಕಾರ ಯು-ಟರ್ನ್ ಹೊಡೆದಿದೆ. ಮೂರು ಕ್ಷೇತ್ರಗಳ ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಎಂದು ನೋಟಿಸ್ ವಾಪಸ್ಸು ಪಡೆದಿದ್ದೇವೆ ಎಂದು ಹೇಳಿದ್ದಾರೆ. ಅದರ ಜೊತೆ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ಕೂಡ ತೆಗೆಸಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀಲಂಕಾದಲ್ಲಿ ನವೆಂಬರ್ 14ರಂದು ನಡೆಯಲಿರುವ ಸಂಸದೀಯ ಚುನಾವಣೆಗೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ 6 ಅಭ್ಯರ್ಥಿಗಳ ಸಹಿತ 191 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಸದೀಯ ಚುನಾವಣೆಗೆ ಸಂಬಂಧಿಸಿದಂತೆ 168 ದೂರುಗಳನ್ನು ಸ್ವೀಕರಿಸಲಾಗಿದೆ. ಚುನಾವಣೆ ಕಾನೂನಿನ ಉಲ್ಲಂಘನೆಯ ಬಗ್ಗೆ 138 ದೂರುಗಳು, ಅಪರಾಧಕ್ಕೆ ಸಂಬಂಧಿಸಿದ 30 ದೂರುಗಳು ಇದರಲ್ಲಿ ಸೇರಿವೆ. ದೂರಿನ ಅನ್ವಯ 45 ವಾಹನಗಳನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸ್ ಮಾಧ್ಯಮ ವಕ್ತಾರ ಡಿಐಜಿ ನಿಹಾಲ್ ಥಾಲ್ದುವಾರನ್ ಹೇಳಿದ್ದಾರೆ. ಈ ಮಧ್ಯೆ, ಸಂಸದೀಯ ಚುನಾವಣೆಗೆ ಸಂಬಂಧಿಸಿ 1,259 ದೂರುಗಳನ್ನು ಸ್ವೀಕರಿಸಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಇಸ್ಲಾಮಿಕ್ ವಸ್ತ್ರ ಸಂಹಿತೆಯ ಕಠಿನ ಪ್ರತಿಪಾದಕ ರಾಷ್ಟ್ರವಾದ ಇರಾನ್‌ನಲ್ಲಿ ಯುವತಿಯೊಬ್ಬಳು ಅರೆಬೆತ್ತಲಾಗಿ ಓಡಾಡಿರುವ ಘಟನೆ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ. ವಸ್ತ್ರ ಸಂಹಿತೆ ವಿರೋಧಿಸಿ ಯುವತಿ ಪ್ರತಿಭಟನೆ ನಡೆಸಿದ್ದಾಳೆ ಎನ್ನಲಾಗಿದೆ. ಇಸ್ಲಾಮಿಕ್ ಆಜಾದ್ ವಿವಿ ಮುಂದೆ ಯುವತಿ ಅರೆಬೆತ್ತಲೆಯಾಗಿ ಓಡಾಡಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ಬಂಧಿಸಿ ದ್ದಾರೆ. ಈ ಬಗ್ಗೆ ವಿವಿ ವಕ್ತಾರ ಅಮೀರ್ ಮಹ್ಜೊಬ್ ಪ್ರತಿಕ್ರಿಯಿಸಿದ್ದು ಯುವತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ’ ಎಂದಿದ್ದಾರೆ. ಆದರೆ ಕೆಲವರು ಆಕೆ ಉದ್ದೇಶಪೂರ್ವಕವಾಗಿ ಸರಕಾರದ ವಿರುದ್ಧ ಅರೆಬೆತ್ತಲೆಯಾಗಿ ಪ್ರತಿಭಟಿಸಿದ್ದಾರೆ ಎಂದಿದ್ದಾರೆ.
ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದು ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ವಾರ ಹಿಂದೂ ಸಮುದಾಯದೊಂದಿಗೆ ಹಬ್ಬ ಆಚರಿಸಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ತಾವು ಕಳೆದ ಕೆಲವು ತಿಂಗಳಲ್ಲಿ ಕೆನಡಾದ 3 ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಅಲ್ಲಿ ತಮ್ಮ ಕೈಗೆ ಕಟ್ಟಲಾದ ಕೆಂಪು ದಾರವನ್ನೂ ಅವರು ಪ್ರದರ್ಶಿಸಿದ್ದಾರೆ. ಈ ದಾರಗಳು ನನಗೆ ಶ್ರೀರಕ್ಷೆ. ಅವುಗಳಾಗಿಯೇ ಕಳಚಿ ಬೀಳುವವರೆಗೂ ನಾನು ಅವುಗಳನ್ನು ಕಳಚುವುದಿಲ್ಲ ಎಂದೂ ಟ್ರಾಡೋ ಬರೆದುಕೊಂಡಿದ್ದಾರೆ.
ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಭಾನುವಾರ ಕನಿಷ್ಠ 31 ಮಂದಿ ಮೃತಪಟ್ಟಿದ್ದಾರೆ. ಹಮಾಸ್ ಮರುಸಂಘಟನೆಯಾಗುವುದನ್ನು ತಡೆಯುವ ಉದ್ದೇಶದಿಂದ ಸೇನೆಯು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿರುವ ಉತ್ತರ ಪ್ರದೇಶಗಳಲ್ಲಿ ಸುಮಾರು ಅರ್ಧದಷ್ಟು ಸಾವುಗಳು ಸಂಭವಿಸಿವೆ ಎಂದು ಫೆಲೆಸ್ತೀನ್ ವೈದ್ಯರು ತಿಳಿಸಿದ್ದಾರೆ. ಹೊಸ ವೈಮಾನಿಕ ಮತ್ತು ನೆಲದ ದಾಳಿಗಳು ಮತ್ತು ಬಲವಂತದ ಸ್ಥಳಾಂತರಿಸುವಿಕೆಯು ಬಫರ್ ವಲಯಗಳನ್ನು ರಚಿಸುವ ಸಲುವಾಗಿ ಉತ್ತರ ಗಾಝಾದ ಎರಡು ಪಟ್ಟಣಗಳು ಮತ್ತು ಅವರ ಜನಸಂಖ್ಯೆಯ ನಿರಾಶ್ರಿತರ ಶಿಬಿರವನ್ನು ಖಾಲಿ ಮಾಡುವ ಗುರಿಯನ್ನು ಹೊಂದಿರುವ “ಜನಾಂಗೀಯ ಶುದ್ಧೀಕರಣ” ಎಂದು ಫೆಲೆಸ್ತೀನಿಯರು ಹೇಳಿದರು. ಇಸ್ರೇಲ್ ಇದನ್ನು ನಿರಾಕರಿಸಿದ್ದು, ಅಲ್ಲಿಂದ ದಾಳಿ ನಡೆಸುವ ಹಮಾಸ್ ಉಗ್ರರ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ: ವೋಟರ್ ಐಡಿ ಕಡ್ಡಾಯಕ್ಕೆ ಟ್ರಂಪ್ ಆಗ್ರಹ ನಾಳೆ (ಅ.5) ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ವೋಟರ್ ಐಡಿ ಕಡ್ಡಾಯಕ್ಕೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ. ಸದ್ಯದ ಮತದಾನ ಪದ್ಧತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ಈ ಕೊನೆಯ ಹೋರಾಟದಲ್ಲಿ ತಮಗೆ ಮತ ಹಾಕುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ. ಮತದಾನದಲ್ಲಿ ವೋಟರ್ ಐಡಿ ಕಡ್ಡಾಯ ಮಾಡಬೇಕು. ವೋಟರ್ ಐಡಿ ಕಡ್ಡಾಯವನ್ನು ವಿರೋಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷವು ಚುನಾವಣಾ ಅಕ್ರಮ ನಡೆಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ. ‘ನಾವು ಮತದಾರರ ಗುರುತಿನ ಚೀಟಿಯನ್ನು ಏಕೆ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಾಗುತ್ತಿಲ್ಲ. ವೋಟರ್ ಐಡಿ ಕಡ್ಡಾಯ ಮಾಡದಿರುವ ಏಕೈಕ ಉದ್ದೇಶ ಮೋಸ ಮಾಡುವುದೇ ಆಗಿದೆ. ಅದು ಬಿಟ್ಟರೆ ಬೇರೆ ಯಾವುದೇ ಕಾರಣ ನನಗೆ ಕಾಣುತ್ತಿಲ್ಲ. ನಿಜವಾದ ಡೆಮಾಕ್ರಟಿಕ್ ವೋಟರ್ ಐಡಿ ಬೇಕೆಂದು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಯಾರೂ ಮಾತನಾಡದಿರುವುದು…
ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾದನಾಯಕಹಳ್ಳಿ ಯಲ್ಲಿಇರೋ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಗುರುಪ್ರಸಾದ್ ನಿಧನ ಪ್ರತಿಯೊಬ್ಬರಿಗೂ ಶಾಕ್ ನೀಡಿದೆ. ನಾನು ರಂಗನಾಯಕ ಸಿನಿಮಾಗೆ ಗುರುಪ್ರಸಾದ್‌ಗೆ ಬರೋಬ್ಬರಿ 90 ಲಕ್ಷ ಕೊಡಿಸಿದ್ದೆ. ಸಿನಿಮಾದಿಂದ ಬಂದ ಹಣದಿಂದ ಉತ್ತಮ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ, ಕುಡಿತದ ಚಟದಿಂದ ಜೀವನವನ್ನೇ ಹಾಳು ಮಾಡಿಕೊಂಡ. ಆತನ 2ನೇ ಹೆಂಡತಿ ಗರ್ಭಿಣಿ, ಒಂದು ಹೆಣ್ಣುಮಗು ಕೂಡ ಇದೆ. ನಾನು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಸಹಾಯ ಮಾಡುತ್ತೇನೆ ಎಂದರು. ಗುರುಪ್ರಸಾದ್ ನನಗೆ ಮಠ ಹಾಗೂ ಎದ್ದೇಳು ಮಂಜುನಾಥ ಅನ್ನೋ ಸೂಪರ್ ಹಿಟ್ ಸಿನಿಮಾಗಳು ನೀಡಿದ್ರು. ರಂಗನಾಯಕ ಸಿನಿಮಾದ ಬಳಿಕ ನನ್ನ ಮತ್ತು ಗುರುಪ್ರಸಾದ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಮ್ಮಿಬ್ಬರ ಮಧ್ಯೆ ಮಾತು ಅಷ್ಟಕ್ಕಷ್ಟೇ ಇತ್ತು ಎಂದರು. ಸಿನಿಮಾದಲ್ಲಿ ನಟಿಸಲು ಬಂದ ಹುಡುಗಿಯನ್ನೇ ಮದುವೆ ಆದ. ಈಗ ಆತನ ಗರ್ಭಿಣಿ ಹೆಂಡತಿ ಹಾಗೂ ಹೆಣ್ಣು ಮಗುವನ್ನು ನೋಡಿದರೆ…
ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾವು ವಾಸವಿದ್ದ ಅಪಾರ್ಟ್ಮೆಂಟ್ನ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ಗುರುಪ್ರಸಾದ್ ಜರ್ಜರಿತರಾಗಿ ಜೀವನ ಕೊನೆಯಾಗಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ನಿರ್ದೇಶಕ, ನಟ, ಸಂಭಾಷಣೆಕಾರ ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡ ಬಜೆಟ್ನಿಂದ ಮಾತ್ರ ಒಂದು ಉತ್ತಮ ಚಿತ್ರ ನಿರ್ಮಾಣವಾಗುತ್ತೆ ಅಂತಿದ್ದ ಸಮಯದಲ್ಲಿ ಗಟ್ಟಿ ಕಥೆಯಿಂದಲೇ ಸಿನಿಮಾ ಮಾಡಿ ಗೆದ್ದು ತೋರಿಸಿದ್ದ ನಿರ್ದೇಶಕ ಗುರುಪ್ರಸಾದ್ ತಮ್ಮ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಮ್ಮ ಸಿನಿಮಾಗಳಲ್ಲಿ ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದ ಗುರು ಪ್ರಸಾದ್ ಖುದ್ದು ಜೀವನದ ಆಗುಹೋಗುಗಳನ್ನ ಎದುರಿಸಲಾಗದೇ ಬದುಕಿಗೆ ವಿದಾಯ ಹೇಳಿದ್ದಾರೆ. ಬೆಂಗಳೂರಿನ ಮಾದನಾಯಕನ ಹಳ್ಳಿಯಲ್ಲಿರುವ ನ್ಯೂ ಹೆವೆನ್ ಅಪಾರ್ಟ್ಮೆಂಟ್ ಫ್ಲಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. 8 ತಿಂಗಳಿನಿಂದ ನ್ಯೂ ಹೆವೆನ್ ಅಪಾರ್ಟ್‌ಮೆಂಟ್‌ನಲ್ಲಿ ಅವರು ಬಾಡಿಗೆಗೆ ವಾಸವಾಗಿದ್ದರು. 5-6 ದಿನಗಳ ಹಿಂದೆಯೇ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತದೇಹ ಕೊಳೆತ ಹಾಗೂ ರಕ್ತವಾಂತಿಯಾದ ರೀತಿಯಲ್ಲಿ…