ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಹೊರ ಬಂದಿರುವ ದರ್ಶನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊನ್ನೆ ದಾಸನಿಗೆ ಟೆಸ್ಟ್ಗಳ ಮೇಲೆ ಟೆಸ್ಟ್ಗಳನ್ನ ಮಾಡಿದ್ದ ವೈದ್ಯರು, ಸದ್ಯ ರಿಪೋರ್ಟ್ಗಾಗಿ ಕಾಯ್ತಿದ್ದಾರೆ. ಮತ್ತೊಂದ್ಕಡೆ, ಸಖತ್ ಅಲರ್ಟ್ ಆಗಿರೋ ಪೊಲೀಸರು ಕೊಲೆ ಪ್ರಕರಣದ ಸಾಕ್ಷ್ಯಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ನ ಹಿರಿಯ ನರ ರೋಗ ತಜ್ಞ ಡಾ.ನವೀನ್ ಹಾಗೂ ತಂಡ ಎಕ್ಸಾಮಿನೇಷನ್ ಮಾಡ್ತಿದೆ. ಬೆನ್ನು ನೋವು ಹಿನ್ನಲೆ ದರ್ಶನ್ಗೆ ಎಕ್ಸ್ರೇ, MRI ಸ್ಕ್ಯಾನ್ ಸೇರಿದಂತೆ ಏಳು ರೀತಿಯ ಟೆಸ್ಟ್ಗಳನ್ನ ಮಾಡಲಾಗಿದೆ. ಇಂದು ದರ್ಶನ್ ಹೆಲ್ತ್ ರಿಪೋರ್ಟ್ ವೈದ್ಯರ ಕೈ ಸೇರಲಿದ್ದು, ದರ್ಶನ್ಗೆ ಸರ್ಜರಿ ಮಾಡ್ಬೇಕಾ ಅಥವಾ ಫಿಸಿಯೋಥೆರಪಿ ಸಾಕಾ ಅನ್ನೋ ನಿರ್ಧಾರ ಮಾಡಲಿದ್ದಾರೆ. ದರ್ಶನ್ ಕುಟುಂಬ ಸಹ ಸರ್ಜರಿಯನ್ನ ಲಾಸ್ಟ್ ಆಕ್ಷನ್ ಆಗಿ ಇಟ್ಕೊಂಡಿದ್ದು, ವೈದ್ಯರ ಸಲಹೆ ಕೇಳಿ ಚಿಕಿತ್ಸೆ ಮುಂದಾಗಲಿದ್ದಾರೆ ಅನ್ನೊ ಮಾಹಿತಿ ಇದೆ. ಅತ್ತ, ಬಿಜಿಎಸ್ ಆಸ್ಪತ್ರೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಆಸ್ಪತ್ರೆಗೆ ಬರುವವರ, ಹೋಗುವವರ ಮಾನಿಟರ್…
Author: Prajatv Kannada
ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಕಳೆದ ನಾಲ್ಕು ದಿನಗಳ ಹಿಂದೆ ತಾವು ವಾಸವಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪ್ರತಿಯೊಬ್ಬರಿಗೂ ಶಾಕ್ ಆಗಿದೆ. ಮೊದಲ ಪತ್ನಿಯಿಂದ ದೂರವಾಗಿದ್ದ ಗುರುಪ್ರಸಾದ್ ಎರಡನೇ ಮದುವೆಯಾಗಿದ್ದರು. ಜಗ್ಗೇಶ್, ಧನಂಜಯ್ ಮುಂತಾದ ಕಲಾವಿದರ ಜೊತೆ ಕೆಲಸ ಮಾಡಿದ್ದ ಗುರುಪ್ರಸಾದ್ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದರು. ಮೇಲ್ನೋಟಕ್ಕೆ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಂತಿದ್ದರು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಗುರುಪ್ರಾಸ್ ಸಾವಿನ ಬಗ್ಗೆ 4 ಪ್ರಮುಖ ಅನುಮಾನಗಳು ಕಂಡು ಬಂದಿದೆ. ನಿರ್ದೇಶಕ ಗುರುಪ್ರಸಾದ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಸಾಲ ಕೊಟ್ಟವರಿಂದ ಅವರಿಗೆ ಕಾಟ ಹೆಚ್ಚಿತ್ತು ಎಂಬ ಮಾಹಿತಿ ಇದೆ. ಅಂದಾಜು ಮೂರು ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಗುರುಪ್ರಸಾದ್ ಸಿಲುಕಿದ್ದರು. ಈ ಕಾರಣದಿಂದ ಅವರು ಪದೇಪದೇ ಮನೆ ಬದಲಾವಣೆ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಗುರು ಪ್ರಸಾದ್ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿರಲಿಲ್ಲ. ಹಾಗಾಗಿ ಅವರು ಆರ್ಥಿಕವಾಗಿ ಸಂಕಷ್ಟಕ್ಕೆ…
ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುಪ್ರಸಾದ್ ನಿಧನ ಕುಟುಂಬದವರಿಗೆ ಹಾಗೂ ಆಪ್ತರಿಗೆ ಆಘಾತ ಉಂಟಾಗಿದೆ. ಗುರುಪ್ರಸಾದ್ ಮೊದಲ ಪತ್ನಿ ಆರತಿಗೆ ವಿಚ್ಛೇದನ ನೀಡಿ, 2ನೇ ಮದುವೆ ಆಗಿದ್ದರು. ಎರಡನೇ ಪತ್ನಿ ಸುಮಿತ್ರಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒಂದಷ್ಟು ವಿಷಯಗಳನ್ನು ತಿಳಿಸಿದ್ದಾರೆ. ಗಂಡನ ಸಾವಿನಲ್ಲಿ ತಮಗೆ ಯಾವುದೇ ಅನುಮಾನ ಇಲ್ಲ ಎಂದು ಸುಮಿತ್ರಾ ಹೇಳಿದ್ದಾರೆ. ಸಾಲಭಾದೆಯಿಂದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಮಿತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‘ನಾನು ಸುಮಾರು 4 ವರ್ಷದ ಹಿಂದೆ ಅಂದರೆ 2020ನೇ ವರ್ಷದಲ್ಲಿ ಗುರುಪ್ರಸಾದ್ ಅವರನ್ನು ವಿವಾಹವಾಗಿರುತ್ತೇನೆ. ನಮಗೆ ನಗು ಶರ್ಮಾ ಎಂಬ 4 ವರ್ಷದ ಹೆಣ್ಣು ಮಗು ಇದೆ. ಈ ಹಿಂದೆ ಗುರುಪ್ರಸಾದ್ ಅವರಿಗೆ ಆರತಿ ಎಂಬುವರರ ಜೊತೆ ಮದುವೆಯಾಗಿದ್ದು, ಸದರಿ ಮದುವೆಯು ವಿಚ್ಚೇಧನವಾಗಿರುತ್ತದೆ. ಅವರು ಸಿನಿಮಾ ನಿರ್ದೇಶಕ ಆದ್ದರಿಂದ ಮದುವೆ ಆದಾಗಿನಿಂದಲೂ 4 ವರ್ಷ ಜೊತೆಗಿದ್ದು ಕನಕಪುರ ರಸ್ತೆಯಲ್ಲಿ, ಎನ್.ಎ.ಪಿ.ಎ ವ್ಯಾಲೆ, ರಾಜರಾಜೇಶ್ವರಿ ನಗರದ ಈಸಿ ಡಿವೈನ್ ಬ್ಲಾಕ್ ಹಾಗೂ ಬಸವೇಶ್ವರನಗರದ…
ಕಿಚ್ಚ ಸುದೀಪ್ ತಾಯಿ ಸರೋಜ ಕಳೆದ ಕೆಲ ದಿನಗಳ ಹಿಂದಷ್ಟೇ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಘಟನೆಯ ಬಳಿಕ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಸುದೀಪ್ ಬ್ರೇಕ್ ತೆಗೆದುಕೊಂಡಿದ್ದರು. ಹಾಗಾಗಿ ಅ.26 ಮತ್ತು ಅ.27ರ ಸಂಚಿಕೆಯನ್ನು ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ವಾರ (ನವೆಂಬರ್ 2 ಮತ್ತು 3) ವೀಕೆಂಡ್ ಸಂಚಿಕೆಗೆ ಅವರು ನಿರೂಪಣೆ ಮಾಡಿದ್ದು, ನಗುನಗುತ್ತಲೇ ಭಾನುವಾರದ ಎಪಿಸೋಡ್ ನಡೆಸಿಕೊಟ್ಟಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂಚಿಕೆ ಸ್ವಲ್ಪ ಎಮೋಷನಲ್ ಆಗಿತ್ತು. ಹಾಡಿನ ಮೂಲಕ ವಾಸುಕಿ ವೈಭವ್ ಅವರು ಸರೋಜಾ ಸಂಜೀವ್ ಅವರಿಗೆ ನಮನ ಸಲ್ಲಿಸಿದರು. ಆ ಕ್ಷಣದಲ್ಲಿ ಸುದೀಪ್ ಭಾವುಕರಾದರು. ದೊಡ್ಮನೆಯೊಳಗೆ ಇರುವ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದರು. ಆದರೆ ಭಾನುವಾರ ವಾತಾವರಣ ಬದಲಾಯಿತು. ತಾಯಿಯನ್ನು ಕಳೆದುಕೊಂಡ ನೋವು ಸುದೀಪ್ ಅವರ ಮನದಲ್ಲಿ ಇದೆ. ಆ ನೋವನ್ನು ಮರೆಯುಲು ಸಾಧ್ಯವಿಲ್ಲ. ಹಾಗಂತ ತಮ್ಮ ಕೆಲಸದ ಮೇಲೆ ಆ ನೋವಿನಿಂದ…
ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ ದಿನದಿಂದ ದಿನಕ್ಕೆ ಗರಿಗೆದರುತ್ತಿದೆ. ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಾಗೂ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿಯಾಗಿಯೇ ಮತಭೇಟೆಗೆ ಇಳಿದಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಇಬ್ಬರ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿದ್ದು, NDA ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿ ಪರವಾಗಿ ಆರ್ಯವೈಶ್ಯ ಸಮಾಜದ ಮುಖಂಡರ ಮನೆ ಮನೆಗೆ ತೆರಳಿ ವಿಧಾನ ಪರಿಷತ್ ಶಾಸಕರಾದ ಟಿ.ಎ ಶರವಣ ಅವರು ಮತಯಾಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಸುರೇಶ್ , ಸುಬ್ಬಯ ಶೆಟ್ಟಿ ಸೇರಿದಂತೆ ಹಲವಾರು ಸಮಾಜದ ನಾಯಕರು ಹಾಜರಿದ್ದರು. ಇನ್ನೂ ಈ ವೇಳೆ ಮಾತನಾಡಿದ ಟಿ.ಎ ಶರವಣ ಅವರು, ನಿಖಿಲ್ ಕುಮಾರಸ್ವಾಮಿರವರು NDA ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗಾಗಿ ಎಲ್ಲರೂ ಸೇರಿ ಶ್ರಮಿಸಬೇಕಾಗಿದೆ. ಕೇಂದ್ರ ಸಚಿವರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ಕ್ಷೇತ್ರದ ಒಳಿತಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಕೇಂದ್ರ ಸಚಿವರಾಗಿರುವುದರಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ, ಜೆಡಿಎಸ್…
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ನಟ ಗುರುಪ್ರಸಾದ್ (52) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಿರ್ದೇಶಕ ಗುರುಪ್ರಸಾದ್ 3 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಅವರ ಮೃತದೇಹ ಅಪಾರ್ಟ್‌ಮೆಂಟ್ ಪ್ಲಾಟ್ ಪತ್ತೆಯಾಗಿದೆ. ಇನ್ನೂ ನವೆಂಬರ್ 2ರಂದು ಗುರುಪ್ರಸಾದ್ ಹುಟ್ಟುಹಬ್ಬ. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್ ಕೊಟ್ಟಿದೆ. ಮೂರು ದಿನಗಳ ಹಿಂದೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬರತೊಡಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಾಗಿಲನ್ನು ತೆರೆಯಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ. ಗುರುಪ್ರಸಾದ್ ಅವರು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಅವರು ನಿರ್ದೇಶನ ಮಾಡಿದ್ದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲಗಳಿಗೆ ಸಿಲುಕಿದ್ದರು. ಮಾತ್ರವಲ್ಲದೆ ಕೆಲ…
ಬೆಂಗಳೂರು:- ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರ ಗೆಲ್ಲಲೇಬೇಕೆಂದು ಅಂದುಕೊಂಡಿದ್ದ ಕಾಂಗ್ರೆಸ್ಸಿಗರಿಗೆ ಅದೊಂದು ಹೇಳಿಕೆ ಇದೀಗ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಶಕ್ತಿ ಯೋಜನೆ ಪರಿಷ್ಕರಣೆ ಮಾಡಲಾಗುತ್ತದೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ ಮಹಿಳೆಯರು ಕೆರಳಿದ್ದಾರೆ. ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ ಶಕ್ತಿ ಯೋಜನೆ ಮುಂದುವರೆಯುವ ಬಗ್ಗೆ ಮಹಿಳೆಯರಲ್ಲಿ ಅನುಮಾನ ಹುಟ್ಟಿದೆ. ಇದು ಕಾಂಗ್ರೆಸ್ಗೆ ಬರುವ ಮತಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ. ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಗೆ ಚುನಾವಣೆ ಯಲ್ಲಿ ಗ್ಯಾರಂಟಿ ಬಿಟ್ಟು ಬೇರೆ ಅಸ್ತ್ರವೇ ಇಲ್ಲದಂತಾಗಿತ್ತು. ಇದೀಗ ಕಾಂಗ್ರೆಸ್ ಅದೇ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದೆ. ನೆರೆ ರಾಜ್ಯದ ಚುನಾವಣೆ ಮೇಲೂ ಗ್ಯಾರಂಟಿ ಮರುಪರಿಶೀಲನೆ ಹೇಳಿಕೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಚುನಾವಣೆ ಹೊತ್ತಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆ ಪಕ್ಷಕ್ಕೆ ಸಾಕಷ್ಟು ಹಾನಿಯಂತು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ…
ಬೆಂಗಳೂರು:-ಕರ್ನಾಟಕದ ಕಾಂಗ್ರೆಸ್ ನವ್ರು ಹುಚ್ಚರು ಎಂದು ಖರ್ಗೆ ಒಪ್ಪಿಕೊಂಡಂತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಅವೈಜ್ಞಾನಿಕವಾಗಿದ್ದು, ಸಧ್ಯದ ಪರಿಸ್ಥಿತಿ ನೋಡಿದ್ರೆ ಹೆಣ ಹೂಳಲು ಕಾಂಗ್ರೆಸ್ ಬಳಿ ದುಡ್ಡಿಲ್ಲ ಎಂದರು. ಗ್ಯಾರಂಟಿ ಯೋಜನೆಗಳು ಅವೈಜ್ಞಾನಿಕವಾಗಿವೆ. ಖರ್ಗೆಯವರೇ ಬಜೆಟ್ ನೋಡಿಕೊಂಡು ಗ್ಯಾರಂಟಿ ಘೋಷಿಸಬೇಕಿತ್ತು ಅಂದಿದ್ದಾರೆ. ಮಹಾರಾಷ್ಟ್ರದವರಿಗೂ ಹುಚ್ಚರ ಥರ ಐದಾರು ಗ್ಯಾರಂಟಿ ಘೋಷಿಸಬೇಡಿ ಅಂದಿದ್ದೇನೆ ಅಂತ ಖರ್ಗೆಯವರು ಹೇಳಿದ್ದಾರೆ. ಅಂದ್ರೆ ಕರ್ನಾಟಕದ ಕಾಂಗ್ರೆಸ್ ನವ್ರು ಹುಚ್ಚರು ಅಂತ ಆಯ್ತಲ್ಲ ಎಂದು ಲೇವಡಿ ಮಾಡಿದ್ದಾರೆ
ಸ್ಮಾರ್ಟ್ ಫೋನ್ ಈಗ ಎಲ್ಲರ ಕೈಯಲ್ಲೂ ಇದ್ದೇ ಇದೆ. ಅದರಲ್ಲೂ ಸೋಶಿಯಲ್ ಉಪಯೋಗಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲಿ ವಾಟ್ಸಾಪ್ ಕೂಡ ಒಂದು. ಆದರೆ ವಾಟ್ಸಾಪ್ ಬಳಕೆದಾರರಿಗೆ ಕೆಲವೊಂದು ಅಪ್ಡೇಟ್ ಇನ್ನೂ ಕೂಡ ತಿಳಿದಿಲ್ಲ. ವಾಟ್ಸ್ಆಯಪ್ ಅನೇಕ ಫೀಚರ್ಗಳನ್ನು ತರುವಲ್ಲಿ ಕೆಲಸ ಮಾಡುತ್ತಿದೆ. ವಾಟ್ಸ್ಆಯಪ್ ಪರಸ್ಪರ ಸಂಪರ್ಕದಲ್ಲಿರಲು ಒಂದು ಉತ್ತಮ ಮಾಧ್ಯಮವಾಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಕೇವಲ ಚಾಟ್ ಮಾತ್ರವಲ್ಲ ಫೋಟೋಗಳು, ವಿಡಿಯೋಗಳು ಮತ್ತು ಇತರ ಪ್ರಮುಖ ಫೈಲ್‌ಗಳನ್ನು ಹಂಚಿಕೊಳ್ಳಬಹುದು. ವಾಟ್ಸ್ಆಯಪ್ ಈಗಂತು ಪ್ರತಿ ತಿಂಗಳು ಒಂದಲ್ಲ ಒಂದು ಅಪ್ಡೇಟ್ ನೀಡುತ್ತಲೇ ಇದೆ. ಇದರಿಂದ ಬಳಕೆದಾರರಿಗೆ ಯಾವ ಯಾವ ಫೀಚರ್ ಬಂದಿದೆ ಎಂಬ ಮಾಹಿತಿ ಇರುವುದಿಲ್ಲ. ಅದರಂತೆ ವಾಟ್ಸ್ಆಯಪ್ ಚಾಟ್ನಲ್ಲಿ ಒಂದು ಅದ್ಭುತಾದ ಫೀಚರ್ ಇದ್ದು, ಇದನ್ನು ಹೆಚ್ಚಿನವರು ಬಳಸುತ್ತಿಲ್ಲ. ಶೇ. 90 ರಷ್ಟು ಮಂದಿಗೆ ಈ ಫೀಚರ್ ಬಗ್ಗೆಯೂ ತಿಳಿದಿಲ್ಲ. ಇದನ್ನು ನೀವು ಉಪಯೋಗಿಸಿದರೆ ನಿಮ್ಮ ಅರ್ಧ ಕೆಲಸ ಕಡಿಮೆ ಆಗುತ್ತಿದೆ ಇಂದು ನಿಮ್ಮ ವಾಟ್ಸ್ಆಯಪ್ನಲ್ಲಿ ಲೆಕ್ಕವಿಲ್ಲದಷ್ಟು ಗ್ರೂಪ್ಗಳು…
ಬೆಂಗಳೂರು: ರೈತರ ಭೂಮಿಯನ್ನ ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಹರಿಹಾಯ್ತಿದ್ರೆ. ಅತ್ತ ಕಾಂಗ್ರೆಸ್ ಕೂಡಾ ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ದಾಖಲೆಯನ್ನ ಬಿಟ್ಟು ತಿರುಗೇಟು ಕೊಟ್ಟಿದೆ. ಈ ಮಧ್ಯೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಅವರು ವಕ್ಫ್ ಗೆ ಸೇರಿದ ಪ್ರತಿ ಇಂಚು ಜಮೀನು ವಾಪಸ್ಸು ಪಡೆಯುವ ಬಗ್ಗೆ ಮಾತಾಡಿದ ವಿಡಿಯೋವನ್ನು ಜಮೀರ್ ತೋರಿಸಿದರು. 022ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, ವಕ್ಫ್ ಬೋರ್ಡ್ ವಿಚಾರದಲ್ಲಿ ಆಡಿದ್ದ ಮಾತುಗಳು. ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬೊಮ್ಮಾಯಿ, ವಕ್ಫ್ ಬೋರ್ಡ್ ಆಸ್ತಿಯನ್ನು ಉಳಿಸಿಕೊಳ್ಳಿ. ಎಲ್ಲವನ್ನೂ ಊಪರ್ ವಾಲ (ದೇವರು) ನೋಡುತ್ತಿರುತ್ತಾನೆ ಎನ್ನುವ ಭಾಷಣವನ್ನು ಬೊಮ್ಮಾಯಿ ಮಾಡಿದ್ದರು. ಬೊಮ್ಮಾಯಿ ಯಾಕಾಗಿ ತಮ್ಮ ಅವಧಿಯಲ್ಲಿ ಆ ಮಾತನ್ನು ಹೇಳಿದ್ದರು ಎಂದು ಜಮೀರ್, ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. “ವಕ್ಫ್ ಆಸ್ತಿ ಅಲ್ಲಾನದ್ದು, ಅದನ್ನು ಕಾಪಾಡಿಕೊಳ್ಳುವುದು…