ಇಂದಿನ ಜೀವನ ಪದ್ಧತಿಯಲ್ಲಿ ಬೊಜ್ಜು ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಹೀಗಾಗಿ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ ಮತ್ತು ಕೆಲ ಆಹಾರದಿಂದ ಬೊಜ್ಜನ್ನು ನಿಯಂತ್ರಿಸಬಹುದಾಗಿದೆ. ಅದರಲ್ಲೂ ಈ ಬೊಜ್ಜಿನಿಂದ ಅಪಾಯಕಾರಿ ಕ್ಯಾನ್ಸರ್ ಬರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ ಬೊಜ್ಜಿನಿಂದಾಗಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 20 ರಷ್ಟು ಹೆಚ್ಚಾಗುತ್ತಿದೆ ಎಂಬುದನ್ನು ಬಹಿರಂಗ ಪಡಿಸಿದೆ. ಓಹಿಯೋ ಸ್ಟೇಟ್ ಯೂನಿವರ್ಸಿಟಿ ವೆಕ್ಸ್ಲರ್ ಮೆಡಿಕಲ್ ಸೆಂಟರ್ ನ ಸಂಶೋಧಕರ ಪ್ರಕಾರ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಅದರಲ್ಲಿಯೂ ಈ ರೋಗವು ವಯಸ್ಸಾದವರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಅನೇಕ ಜನರು ನಂಬಿಕೊಂಡಿದ್ದಾರೆ. ಆದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಪ್ರಮಾಣವು ಪ್ರತಿವರ್ಷ ಶೇಕಡಾ 1 ರಷ್ಟು ಹೆಚ್ಚುತ್ತಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪ್ರಕರಣಗಳು ಸಾಮಾನ್ಯವಾಗುತ್ತಿವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಸಂಶೋಧಕರು ಈ ವರ್ಷ ಅಕ್ಟೋಬರ್ 4 ರಿಂದ 7 ರವರೆಗೆ ಯುಎಸ್ನಲ್ಲಿ…
Author: Prajatv Kannada
ವಯಸ್ಸಾದಂತೆ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತವೆ. ನಮ್ಮ ವಯಸ್ಸು ಹೆಚ್ಚುತ್ತಿದ್ದಂತೆ ನಮ್ಮ ಚರ್ಮವು ಅದನ್ನು ಬಹಿರಂಗಪಡಿಸುತ್ತದೆ. ವಯಸ್ಸಾದಂತೆ ಚರ್ಮವು ಸುಕ್ಕುಗಟ್ಟಲು ಪ್ರಾರಂಭಿಸುತ್ತದೆ. ಮುಖದ ಮೇಲೆ ಕಲೆಗಳು, ಗೆರೆಗಳು ಮತ್ತು ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಆದರೆ ನೀವು ಕೆಲವು ಸಲಹೆಗಳನ್ನು ಅನುಸರಿಸಿದರೆ, ನೀವು ಎಷ್ಟೇ ವಯಸ್ಸಾದರೂ ಚಿಕ್ಕವರಾಗಿ ಕಾಣಿಸಬಹುದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಾನು ತುಂಬಾ ಸುಂದರವಾದ ಕಾಣಬೇಕು ಎಂಬ ಆಸೆಯಲ್ಲಿ ಇರ್ತಾರೆ. ಚರ್ಮವು ಕಾಂತಿಯುತವಾಗಿದ್ದರೆ, ಆಗ ಸೌಂದರ್ಯವು ಎದ್ದು ಕಾಣುವುದು. ಆದರೆ ಕೆಲವರಿಗೆ ಅಕಾಲಿಕವಾಗಿ ನೆರಿಗೆ, ಚರ್ಮ ಜೋತು ಬೀಳುವುದು, ಚರ್ಮದಲ್ಲಿ ಗೆರೆಗಳು ಕಾಣಿಸಿಕೊಳ್ಳುವುದು ಇತ್ಯಾದಿ ಸಮಸ್ಯೆಗಳು ಬರಬಹುದು. ಇದರಿಂದ ಮುಖದ ಸೌಂದರ್ಯವು ಕೆಡುವುದು ಮಾತ್ರವಲ್ಲದೆ, ಸಂಪೂರ್ಣ ದೇಹದ ಸೌಂದರ್ಯಕ್ಕೆ ಇದು ಹಾನಿ ಉಂಟು ಮಾಡುವುದು. ಒತ್ತಡದ ಜೀವನಶೈಲಿ, ಒತ್ತಡ, ನಿದ್ರೆಯಿಲ್ಲದೆ ಇರುವುದು ಮತ್ತು ಆಹಾರ ಕ್ರಮವು ಸರಿಯಾಗಿ ಇಲ್ಲದೆ ಇರುವ ಕಾರಣ ಚರ್ಮಕ್ಕೆ ಹಾನಿ ಆಗುವುದು ಮತ್ತು ನೆರಿಗೆಗಳು ಕಾಣಿಸಿಕೊಳ್ಳುವುದು. ಚರ್ಮವು ಯೌವನಯುತವಾಗಿ ಕಾಣಿಸಿಕೊಳ್ಳಲು ಕೆಲವು ಮನೆಯಲ್ಲೇ ತಯಾರಿಸಿದ ಫೇಶಿಯಲ್ ಗಳನ್ನು…
ಗೋಕಾಕ: ದೀಪಾವಳಿ ಹಬ್ಬದ ಪ್ರಯುಕ್ತ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ನಾಡಿನ ಒಳಿತಿಗಾಗಿ ಅಮ್ಮ ಮಹಾಲಕ್ಷ್ಮಿ ದೇವಿಯು ಸಕಲರಿಗೆ ಸುಖ, ನೆಮ್ಮದಿ, ಶಕ್ತಿ, ಸಮೃದ್ಧಿ ನೀಡಿ ಕರುಣಿಸಲಿ. ಬೆಳಕಿನ ಹಬ್ಬ ದೀಪಾವಳಿಯು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಅವರು ಪ್ರಾರ್ಥಿಸಿದರು. ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸತ್ಕರಿಸಿ ಗೌರವಿಸಿದರು. ಪ್ರತಿ ವರ್ಷವೂ ದೀಪಾವಳಿ ಹಬ್ಬದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಮಿತ್ರರೊಂದಿಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಗಣ್ಯ ಉದ್ಯಮಿಗಳಾದ ಜಯಶೀಲ ಶೆಟ್ಟಿ, ವಿಕ್ರಮ ಅಂಗಡಿ, ಸೈದಪ್ಪ ಗದಾಡಿ, ಬಸವರಾಜ ಕಲ್ಯಾಣಶೆಟ್ಟಿ, ರಾಜು ಅಂಡಗಿ, ಕಂದಾಯ ಅಧಿಕಾರಿ ನಿರಂಜನ ಬನ್ನಿಶೆಟ್ಟಿ, ಮಹಾಲಕ್ಷ್ಮಿ ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಾಳೆ ದೀಪಾವಳಿ ಪಾಡ್ಯ ಪ್ರಯುಕ್ತ ಶಾಸಕ…
ತುಮಕೂರು:- ಹುಡುಗಿ ವಿಚಾರಕ್ಕೆ ಅಂಗಡಿಗೆ ನುಗ್ಗಿ ಹಲ್ಲೆ ನಡೆದಿದ್ದು, ಗೃಹ ಸಚಿವರ ತವರಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹುಡುಗಿ ವಿಚಾರವಾಗಿಯೇ ಸದಾಶಿವನಗರದಲ್ಲಿನ ಸಮೋಸ ಸೆಂಟರ್‌ಗೆ ನುಗ್ಗಿ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿದೆ. 22 ವರ್ಷದ ಹಸೇನ್ ಎನ್ನುವವನು, ಇಸ್ಮಾಯಿಲ್ ನಗರದ ಆಯುಬ್ ಎಂಬುವನ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೋಳಗಾದ ಆಯುಬ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತಿಚೆಗೆ ಹುಡುಗಿ ವಿಚಾರಕ್ಕೆನೇ ಅದೇ ರಸ್ತೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮೇಲಿಂದ ಮೇಲೆ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದರಿಂದ ನಗರದ ಜನರಲ್ಲಿ ಭೀತಿ ಹೆಚ್ಚಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ನಗರದಲ್ಲಿ ಪೊಲೀಸರು ಎಚ್ಚೆತ್ತುಕೊಂಡಿಲ್ಲ, ಸಮರ್ಪಕವಾಗಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ತುಮಕೂರು ನಗರದಲ್ಲಿ ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆ.ಆರ್.ಪುರ: ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬೆಂ.ಪೂ.ತಾಲ್ಲೂಕು ತಹಶಿಲ್ದಾರ್ ರಾಜೀವ್ ತಿಳಿಸಿದರು. ಕೆ.ಆರ್.ಪುರ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವವನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಂತರ ಮಾತನಾಡಿದ ಅವರು ಬೇರೆ ಭಾಷೆಗಳಿಗಿಂತ ಕನ್ನಡ ಭಾಷೆ ತುಂಬಾನೇ ಶ್ರೀಮಂತ ಪ್ರಾಚೀನ. ಕನ್ನಡ ನುಡಿ ಆಡುವುದೇ ಒಂದು ರೀತಿಯ ಖುಷಿ. ಈ ಭಾಷೆಯಲ್ಲಿರುವಷ್ಟು ಪ್ರೌಢಿಮೆ, ಸಂಸ್ಕೃತಿ, ಮಹತ್ವ ಬೇರೆ ಯಾವ ಭಾಷೆಯಲ್ಲೂ ಸಿಗದು. ಹಾಗಾಗಿ, ಎಲ್ಲಾ ಭಾಷೆಗಳಿಗೆ ಹೋಲಿಸಿದರೆ ಕನ್ನಡಕ್ಕೆ ತನ್ನದೇ ಆದ ವೈಶಿಷ್ಟ್ಯ ಮತ್ತು ಇತಿಹಾಸ ಇದೆ. ಕನ್ನಡ ನಾಡು ಮತ್ತಷ್ಟು ಬಲಿಷ್ಠವಾಗಿಸೋಣ. ನಾಡು, ನುಡಿಗೆ ಧಕ್ಕೆ ಬಂದರೆ ಕನ್ನಡಿಗರೆಲ್ಲಾರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದುರು. ಎಲ್ಲಾ ಕಡೆ ಬಳಸುವುದರ ಮೂಲಕ ಕನ್ನಡ…
ಬೆಂಗಳೂರು :- ಒಂದು ವೇಳೆ ಕಾಂಗ್ರೆಸ್ ಆಮಿಷಕ್ಕೆ ಒಳಗಾದ್ರೆ ಮುಂದೆ ಹಿಂದೂಗಳ ದೇವಸ್ಥಾನ, ಮಠಗಳು ಉಳಿಯಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಅಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ ದೇವಸ್ಥಾನ, ಶೃಂಗೇರಿ ಮಠಗಳೂ ಉಳಿಯುವುದಿಲ್ಲ ಎಂದರು. ಈಗ ಉಚಿತ ಬಸ್ಸು ಇದೆ ಎಂದು ಶೃಂಗೇರಿ, ಧರ್ಮಸ್ಥಳ ಅಂತ ಓಡಾಡುತ್ತಿದ್ದೀರಿ. ಹೀಗೆ ಉಚಿತ ಕೊಡುತ್ತಾರೆ ಎಂದು ಕಾಂಗ್ರೆಸ್‌ಗೆ ಮತ ಹಾಕಿದರೆ ಮುಂದಿನ ದಿನಗಳಲ್ಲಿ ಉಚಿತ ಬಸ್ಸೂ ಇರುವುದಿಲ್ಲ. ನೋಡಲು ಧರ್ಮಸ್ಥಳ ಶೃಂಗೇರಿಯೂ ಇರುವುದಿಲ್ಲ. ಅದು ವಕ್ಫ್ ಅಂತ ಹೇಳುತ್ತಾರೆ ಎಂದು ಕಿಡಿಕಾರಿದರು. ವಕ್ಫ್ ಸಭೆಯ ನಡಾವಳಿಯಲ್ಲಿ ಸಿಎಂ ಸೂಚನೆ ಎಂದೇ ಉಲ್ಲೇಖಿಸಲಾಗಿದೆ. ವಕ್ಫ್ ಅದಾಲತ್ ಕಲ್ಪನೆ ಸಂವಿಧಾನದಲ್ಲಿ ಹೇಳಿದ್ಯಾ? ಯಾವ ಕಾನೂನಿನಲ್ಲಿ ಬಂದಿದೆ? ವಕ್ಫ್ ಕಾಯ್ದೆ, ಕಂದಾಯ ಕಾಯ್ದೆಯಡಿ ವಕ್ಫ್ ಅದಾಲತ್ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಈ ವಕ್ಫ್ ಅದಾಲತ್ ಎನ್ನುವುದು ಸಿದ್ದರಾಮಯ್ಯ ಸರ್ಕಾರದ ಸಂಶೋಧನೆ. ಕೇಂದ್ರ ಸರ್ಕಾರ ವಕ್ಫ್ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಅದಕ್ಕೂ ಮುನ್ನ…
ಬೆಂಗಳೂರು:- ಕುಮಾರಸ್ವಾಮಿಗೆ ಅಳು ಬರೋದು ಎಲೆಕ್ಷನ್ ಟೈಮ್‌ನಲ್ಲಿ ಮಾತ್ರ ಎಂದು ಹೇಳುವ ಮೂಲಕ DK ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಏಕವಚನದಲ್ಲೇ ಮಾತು ಶುರು ಮಾಡಿದ ಡಿಕೆಶಿ, ಕೇಂದ್ರ ಸಚಿವನಾಗಿರುವ ಆ ಕುಮಾರಸ್ವಾಮಿ ಒಂದು ದಿನಕ್ಕೂ ರಾಷ್ಟ್ರ ಹಾಗೂ ಕನ್ನಡ ಧ್ವಜಕ್ಕೆ ಗೌರವ ಕೊಟ್ಟಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ, ನಿಮ್ಮ ಅವಧಿಯಲ್ಲಿ ರಾಷ್ಟ್ರಧ್ವಜ ಹಾರಿಸೋಕೆ ಒಂದು ದಿನವೂ ರಾಮನಗರಕ್ಕೆ ಹೋಗಿಲ್ಲ. ಚನ್ನಪಟ್ಟಣಕ್ಕೂ ಹೋಗಿಲ್ಲ. ಕನ್ನಡ ಬಾವುಟ ಹಾರಿಸಲು ಸಂವಿಧಾನದ ವ್ಯವಸ್ಥೆಯಲ್ಲಿ ನಿನ್ನನ್ನು ರಾಮನಗರ, ಚನ್ನಪಟ್ಟಣದ ಜನ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದರು. ಒಂದು ದಿನವೂ ಹೋಗಿ ನೀನು ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿಲ್ಲ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ ಎಂದರು. ಇವರ ಅಳು ಎಲ್ಲಾ ಬರೋದೇ ಎಲೆಕ್ಷನ್ ಟೈಮ್‌ನಲ್ಲಿ. ಯಾವುದಾದರೂ ಒಂದು ಗುರುತಿಸುವ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನ ತೋರಿಸು. ಕೆರೆ ಮಾಡಿದ್ದು ಯೋಗೇಶ್ವರ್, ದುಡ್ಡು ಕೊಟ್ಟಿದ್ದು ನಾನು. ನೀನು ಮುಖ್ಯಮಂತ್ರಿ ಆಗಿದ್ದಾಗಲೇ ಮಾಡಿಲ್ಲ. ಎಂಎಲ್‌ಎ ಆಗಿದ್ದಾಗ ಬಿಜೆಪಿ ಜೊತೆಗೆ…
ಬೆಂಗಳೂರು:- ಶಕ್ತಿ ಯೋಜನೆ ನಡೆಸೋದು ಸ್ವಲ್ಪ ಕಷ್ಟವಾಗ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ನಡೆಸುವುದು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ನಾವು ಯೋಜನೆಯನ್ನು ನಿಲ್ಲಿಸುವುದಿಲ್ಲ. ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ ನೇರನಗದು ವರ್ಗಾವಣೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಶಕ್ತಿ ಯೋಜನೆ ಹಾಗಲ್ಲ. ಎಲ್ಲ ಮಹಿಳೆಯರಿಗೂ ಇದರ ಪ್ರಯೋಜನ ದೊರೆಯುತ್ತಿದೆ. ಈ ಯೋಜನೆ ಅಡಿ ಯಾವ ಮಹಿಳೆಯರು ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಹೀಗಾಗಿ ಇದನ್ನು ನಡೆಸುವುದು ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೂ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ
ಬೆಂಗಳೂರು:-ಇದು ಎಂಥಾ ಸಾವು ಮರ್ರೆ, ಬೆಂಗಳೂರಿನಲ್ಲಿ ನಿಜಕ್ಕೂ ಕಾನೂನು ಸುವ್ಯವಸ್ಥೆ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ನಗರದಲ್ಲಿ ಪುಡಾರಿ ಪುಂಡರುಗಳ ಹಾವಳಿ ಜೋರಾಗಿದೆ. ಇವರಿಗೆ ಯಾವ ಪೊಲೀಸರ ಭಯವೂ ಇಲ್ಲ. ಪೊಲೀಸರೂ ಅಷ್ಟೇ ಇವರಿಗೆ ವಾರ್ನ್ ಮಾಡುವ ಗೋಜಿಗೂ ಹೋಗಲ್ಲ. ಎಸ್, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಇವರಿಗೆ ಯಾವ ಪೊಲೀಸರ ಭಯವೂ ಇಲ್ಲವೇ ನಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಎಸ್, ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ವಾಹನ ಸವಾರರ ಮೇಲೆ ಇಬ್ಬರು ಪಟಾಕಿ ಸಿಡಿಸಿದ್ದಾರೆ. ಬೆಂಗಳೂರಿನ ಹೆಚ್‌ಬಿಆರ್ ಲೇ ಔಟ್‌ನಲ್ಲಿ ಘಟನೆ ಇಬ್ಬರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯಲ್ಲಿ ಪಟಾಕಿ ಹಚ್ಚಿದ್ದಾರೆ. ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ಪಟಾಕಿಯನ್ನು ರಸ್ತೆಗೆ ಎಸೆಯುತ್ತಿರುವುದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರನ್ನು ಹೆಣ್ಣೂರು ಠಾಣೆಯ ಪೊಲೀಸರು ಬಂದಿಸಿದ್ದಾರೆ.
ದೆಹಲಿ:- ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ಮಾಡಿದ್ದಾರೆ. ಗ್ಯಾರಂಟಿ ಟೀಕಿಸಿದ ಮೋದಿ ವಿರುದ್ಧ ಟೀಕಿಸಿದ ಖರ್ಗೆ, ಸುಳ್ಳು, ವಂಚನೆ, ನಕಲಿ, ಲೂಟಿ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರಗಳು ಎಂದರು. ನಿಮ್ಮ ಸರ್ಕಾರದ 100 ದಿನಗಳ ಯೋಜನೆ ಅನ್ನೋದು ಬಿಟ್ಟಿ ಪ್ರಚಾರ. ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ವಾಗ್ದಾಳಿ ಮಾಡಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ನಿಮ್ಮ ಭರವಸೆ ಏನಾಯ್ತು? ಭಾರತದ ನಿರುದ್ಯೋಗ ದರವು 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಯಾಕೆ? ಜನರ ಉಳಿತಾಯದ ಮಟ್ಟ ಕನಿಷ್ಟ ಮಟ್ಟಕ್ಕೆ ಏಕೆ ಕುಸಿದಿದೆ. ನಿಮ್ಮ ಅಚ್ಛೇ ದಿನದ ಭರವಸೆ ಏನಾಯ್ತು ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ ಮಹಾರಾಷ್ಟ್ರದಲ್ಲಿ ನೀವು ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ದೆಹಲಿ ಏರ್ಪೋರ್ಟ್ನ ಮೇಲ್ಚಾವಣಿ ಹಾರಿಹೋಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಸೋರುತ್ತಿದೆ.…