ಭಾರತದ ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾದ ರೋಹಿತ್ ಬಾಲ್ ಅವರು ಹೃದಯಾಘಾತದಿಂದ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಭಾರತೀಯ ಫ್ಯಾಷನ್ ವಿನ್ಯಾಸ ಮಂಡಳಿ (ಎಫ್‌ಡಿಸಿಐ) ಅಧ್ಯಕ್ಷ ಸುನಿಲ್ ಸೇಥಿ ತಿಳಿಸಿದ್ದಾರೆ. 63 ವರ್ಷದ ರೋಹಿತ್ ಬಾಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಈ ವರ್ಷ ಅಕ್ಟೋಬರ್‌ನಲ್ಲಿ ರೋಹಿತ್ ಲ್ಯಾಕ್ಮೆ ಫ್ಯಾಷನ್ ವೀಕ್ X FDCI 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ವಿನ್ಯಾಸಗಳನ್ನು ಪ್ರಸ್ತುತಪಡಿಸಿದ್ದರು. ಇದೀಗ ಹೃದಯಾಘಾತದಿಂದ ನಿಧನರಾಗಿದ್ದು ಅವರ ನಿಧನಕ್ಕೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ. “ಅವರು ನಿಧನರಾಗಿರುವುದು ನಿಜ. ಅವರಿಗೆ ಹೃದಯ ಸ್ತಂಭನವಾಗಿದೆ.. ಹೃದಯ ವೈಫಲ್ಯಗೊಂಡಿದೆ. ರೋಹಿತ್ ಒಬ್ಬ ದಂತಕಥೆ. ನಾವು ಅಸಹಾಯಕರಾಗಿದ್ದೇವೆ, ಆತ್ಮವಿಶ್ವಾಸ ಕಳೆದುಕೊಂಡಿದ್ದೇವೆ. ನಾಳೆ ನಡೆಸುವ ಅಂತ್ಯಕ್ರಿಯೆಯ ಪೂರ್ವಸಿದ್ಧತೆಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಸುನಿಲ್ ಸೇಥಿ ಮಾಧ್ಯಮಕ್ಕೆ ಹೇಳಿದ್ದಾರೆ. ವಿನ್ಯಾಸಕಾರ ರೋಹಿತ್ ಬಾಲ್ರನ್ನು ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿರುವ ಆಶ್ಲೋಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಅಲೋಕ್…
Author: Prajatv Kannada
ಗಾಜಾದಲ್ಲಿನ ಹೋರಾಟವನ್ನು ಬೆಂಬಲಿಸುವ ಮೂಲಕ ತನ್ನ ಪೂರ್ವಾಧಿಕಾರಿ ಸಯ್ಯದ್ ಹಸನ್ ನಸ್ರಲ್ಲಾ ಅಳವಡಿಸಿಕೊಂಡ ಯುದ್ಧ ಕಾರ್ಯತಂತ್ರವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹಿಜ್ಬುಲ್ಲಾದ ಹೊಸ ನಾಯಕ ಶೇಖ್ ನಯೀಮ್ ಖಾಸಿಮ್ ಹೇಳಿಕೆ ನೀಡಿದ್ದಾರೆ. “ರಾಜಕೀಯ, ಜಿಹಾದಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಯ್ಯದ್ ಹಸನ್ ನಸ್ರಲ್ಲಾ ಅವರ ಕಾರ್ಯಸೂಚಿಯನ್ನು ಮುಂದುವರಿಸಿಕೊಂಡು ಹೋಗುವೆ” ಎಂದು ಖಾಸಿಮ್ ಹಿಜ್ಬುಲ್ಲಾದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ದೂರದರ್ಶನ ಭಾಷಣದಲ್ಲಿ ಅವರು ಹೇಳಿದರು. ಈ ಪ್ರದೇಶದಲ್ಲಿ ಇಸ್ರೇಲ್ ಒಡ್ಡಿರುವ ಬೆದರಿಕೆ ಎದುರಿಸಲು ಗಾಜಾವನ್ನು ಬೆಂಬಲಿಸುವುದು ಅತ್ಯಗತ್ಯ ಎಂದು ಖಾಸಿಮ್ ಒತ್ತಿ ಹೇಳಿದರು. “ಇದು ನಮ್ಮ ಭೂಮಿಯಾಗಿರುವುದರಿಂದ ನೀವು ಖಂಡಿತವಾಗಿಯೂ ಸೋಲುವಿರಿ. ನಮ್ಮ ದೇಶಗಳಿಂದ ಹೊರಟು ಹೋಗಿ; ನೀವು ಅಲ್ಲಿಯೇ ಇದ್ದರೆ, ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಇಸ್ರೇಲಿಗಳನ್ನು ಉದ್ದೇಶಿಸಿ ಹೇಳಿದರು. ಇರಾನ್ ಯಾವುದೇ ಗುಪ್ತ ಅಜೆಂಡಾಗಳಿಲ್ಲದೇ ಹಿಜ್ಬುಲ್ಲಾವನ್ನು ಬೆಂಬಲಿಸುತ್ತಿದೆ ಎಂದು ಖಾಸಿಮ್ ಹೇಳಿದರು. “ನಮ್ಮ ಗಡಿಗಳಲ್ಲಿ ಲೆಬನಾನ್ ಯೋಧರೊಂದಿಗೆ ಕೈಜೋಡಿಸಿ ಇಸ್ರೇಲ್…
ದಾವಣಗೆರೆ:- ಮತಾಂಧ ಜಮೀರ್ ನನ್ನು ಶೀಘ್ರವೇ ಪಾಕಿಸ್ತಾನಕ್ಕೆ ಕಳಿಸ್ತೀವಿ ಎಂದು MP ರೇಣುಕಾಚಾರ್ಯ ಹೇಳಿದ್ದಾರೆ. ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ರೇಣುಕಾಚಾರ್ಯ, ಸಚಿವ ಜಮೀರ್ ಓರ್ವ ಮತಾಂಧ. ರೈತರ ಭೂಮಿ, ಹಿಂದೂಗಳ ಸ್ಮಶಾನ ಮತ್ತು ಮಠಮಾನ್ಯಗಳ ಜಾಗಗಳನ್ನು ಕಬಳಿಸಲು ಹುನ್ನಾರ ಮಾಡಿದ್ದಾನೆ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ. ಜಮೀರ್ ಅಹ್ಮದ್ ಅಲ್ಪಸಂಖ್ಯಾತರ ಸಚಿವರಾ..? ರಾಜ್ಯಕ್ಕೆ ಸಂಬಂಧಿಸಿದ ಸಚಿವರಾ..? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು. ಇನ್ನೂ ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಕನ್ಫರ್ಮ್. ನಂತರ ಈ ಸರ್ಕಾರ ಬಹಳ ದಿನಗಳ ಕಾಲ ಉಳಿಯಲ್ಲ ಸರ್ಕಾರ ಪತನ ಆಗುತ್ತೆ. ಆಗ ಜಮೀರ್ ಅಹಮದ್ ಅವರನ್ನ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಮಿಸ್ಟರ್ ಜಮೀರ್ ಅಹ್ಮದ್ ನಿಮ್ಮನ್ನ ವಜಾ ಮಾಡದಿದ್ದರೆ ಈ ಸರ್ಕಾರ ವಜಾ ಮಾಡುವ ಶಕ್ತಿ ಜನರಿಗೆ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹಿಂದೂ ಸ್ಮಶಾನಗಳು ಮಠಗಳ ಆಸ್ತಿಯನ್ನ ಕಬಳಿಸಲು ನೋಟಿಸ್ ಕೊಟ್ಟಿದ್ದಾರೆ. ಆದರೆ ಬಿಜೆಪಿ ಪಕ್ಷದ…
ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಮತ್ತು ಸೋನಲ್ ಮಂಥೆರೋಗೆ ಇದು ಮೊದಲ ದೀಪಾವಳಿ ಆಗಿದೆ. ಮದುವೆಯಾದ ಬಳಿಕ ಬರ್ತಿರೋ ಮೊದಲ ಹಬ್ಬವನ್ನು ಸೋನಲ್ ಹಾಗೂ ತರುಣ್ ಸುಧೀರ್ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ. ಹಬ್ಬದ ಸಂಭ್ರಮದರೋ ಮುದ್ದು ಜೋಡಿ ಇದೀಗ ಅಷ್ಟೇ ಮುದ್ದಾಗಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ನವ ಜೋಡಿಯ ಫೋಟೋ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಸೋನಲ್ ಮತ್ತು ತರುಣ್ ಮದುವೆ ಮುಂಚೆ ಒಂದು ಫೋಟೋ ಶೂಟ್ ಮಾಡಿಸಿದ್ದರು. ವಿಶೇಷವಾಗಿ ಇದನ್ನ ಥಿಯೇಟರ್‌ನಲ್ಲಿಯೇ ಶೂಟ್ ಮಾಡಿಸಿದ್ದರು. ಇಬ್ಬರು ಕ್ರಿಯೇಟಿವಿಟಿಗೆ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದರು. ಇದೀಗ ದೀಪಾವಳಿ ಹಬ್ಬಕ್ಕೆ ಮಾಡಿಸಿರೋ ಈ ಒಂದು ಫೋಟೋ ಶೂಟ್ ತುಂಬಾನೆ ಸ್ಪೆಷಲ್ ಆಗಿದೆ. ಸೋನಲ್ ಹಾಗೂ ತರುಣ್ ಸುಧೀರ್ ಇಲ್ಲಿ ವಿಶೇಷ ಕಾಸ್ಟೂಮ್ ಹಾಕಿದ್ದಾರೆ. ಲೈಟ್ ಕಲರ್ ಡ್ರೆಸ್ ನಲ್ಲಿ ಇಬ್ಬರು ಸಖತ್ತಾಗೇ ಮಿಂಚಿದ್ದಾರೆ. ಇಬ್ಬರೂ ಒಂದೇ ಬಣ್ಣದ ಡ್ರೆಸ್ ತೊಟ್ಟಿರೋದರಿಂದಲೇ ನವ ಜೋಡಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಸೋನಲ್ ಮತ್ತು ತರುಣ್…
ಚಿಕ್ಕಮಗಳೂರು:- ಜಿಲ್ಲೆಯ ಸ್ಪಂದನಾ ಆಸ್ಪತ್ರೆಯಲ್ಲಿ ದೀಪಾವಳಿ ಹಬ್ಬದ ದಿನವೇ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಘಟನೆ ಹಿನ್ನೆಲೆ ರೋಗಿಗಳನ್ನು ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಗರದ ಸೇಂಟ್ ಜೋಸೆಫ್ ಶಾಲಾ ಮುಂಭಾಗವಿರುವ ಸ್ಪಂದನಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿರುವಂತಹ ಘಟನೆ ನಡೆದಿದೆ. ಕಟ್ಟಡದ ಕೆಳಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಶಂಕೆ ವ್ಯಕ್ತವಾಗಿದೆ. ಸದ್ಯ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರೋಗಿಗಳು, ಸಿಬ್ಬಂದಿಗಳು ಹೊರಬಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 10ಕ್ಕೂ ಹೆಚ್ಚು ರೋಗಿಗಳನ್ನು ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಪಂದನ ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆಯನ್ನು ಸಂಪೂರ್ಣ ಬಂದ್ ಮಾಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು:- ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ನವಿಲುನಗರದ ಇಟ್ಟಿಗೆ ಗೂಡಿನಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಪೆಪ್ಪರ್ ಸ್ಪ್ರೇ ದಾಳಿ ಮಾಡಿರುವ ಘಟನೆ ಜರುಗಿದೆ. ರೌಡಿಶೀಟರ್ ಕ್ಯಾಟ್ ರಾಜನ ಸಹಚರರು ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪ ಕೇಳಿಬಂದಿತ್ತು. ಮಾಹಿತಿ ಮೇರೆಗೆ ಇಂದು ಸಂಜೆ ಎಸಿಪಿ ಚಂದನ್ & ಟೀಂ ದಾಳಿ ನಡೆಸಿತು. ಸುಮಾರು 30 ಜನ ಲಕ್ಷ ಲಕ್ಷ ಹಣ ಬಾಜಿ ಕಟ್ಟಿ ಇಸ್ಪೀಟ್ ಆಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಸ್ಪೀಟ್ ಅಡ್ಡೆ ಮೇಲಿನ ದಾಳಿ ವೇಳೆ ಪೊಲೀಸರ ಮೇಲೆ ಆರೋಪಿಗಳು ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಆ ಬಳಿಕ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ಸ್ಥಳದಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಇಸ್ಪೀಟ್ ಆಡುತ್ತಿದ್ದ 13 ಆರೋಪಿಗಳನ್ನು ಬಂಧಿಸಲಾಗಿದೆ. 3.80 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಾಂಗ್ಲಾ ದೇಶವು ಬಾಕಿ ಬಿಲ್ ಪಾವತಿಸದ ಕಾರಣ ಭಾರತದ ಅದಾನಿ ಪವರ್ ನ ಅಂಗಸಂಸ್ಥೆ ‘ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್’ (ಎಪಿಜೆಎಲ್) ನೆರೆ ರಾಷ್ಟ್ರಕ್ಕೆ ವಿದ್ಯುತ್ ಪೂರೈಕೆಯಲ್ಲಿ ಅರ್ಧದಷ್ಟು ಕಡಿತಗೊಳಿಸಿದೆ. ಬಾಂಗ್ಲಾದೇಶವು 84.6 ಕೋಟಿ ಡಾಲರ್ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಪವರ್ ಗ್ರಿಡ್ ಬಾಂಗ್ಲಾದೇಶ ಪಿಎಲ್‌ಸಿಯ ಅಂಕಿಅಂಶದ ಪ್ರಕಾರ ಗುರುವಾರ ರಾತ್ರಿ ವಿದ್ಯುತ್ ಪೂರೈಕೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಗುರುವಾರ ಮತ್ತು ಶುಕ್ರವಾರ ನಡುವಿನ ಮಧ್ಯ ರಾತ್ರಿಯಲ್ಲಿ 1,600 ಮೆಗಾವ್ಯಾಟ್ ಕೊರತೆಯಾಗಿದೆ. ಈ ಮುನ್ನ ಅದಾನಿ ಕಂಪನಿಯು ಅಕ್ಟೋಬರ್ 30ರೊಳಗೆ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯು (ಪಿಡಿಬಿ) ಬಾಕಿ ಹಣ ಪಾವತಿಸಬೇಕು ಎಂದು ವಿದ್ಯುತ್ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಅಕ್ಟೋಬರ್ 27ರ ಪತ್ರದಲ್ಲಿ ಬಾಕಿ ಮೊತ್ತ ಪಾವತಿಸದಿದ್ದರೆ ಕಂಪನಿಯು ವಿದ್ಯುತ್ ಖರೀದಿ ಒಪ್ಪಂದದ (ಪಿಪಿಎ) ಅಡಿ ಪರಿಹಾರಾತ್ಮಕ ಕ್ರಮ ಕೈಗೊಳ್ಳಲಿದೆ. ಅದರಂತೆ ಅಕ್ಟೋಬರ್ 31ರಂದು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಿದೆ ಎಂದು ತಿಳಿಸಿದೆ. ಬಾಂಗ್ಲಾದೇಶ ಕೃಷಿ ಬ್ಯಾಂಕ್‌ನಿಂದ 17 ಕೋಟಿ ಡಾಲರ್…
ಗೋವರ್ಧನ ಪೂಜಾ ಸೂರ್ಯೋದಯ: 06:19, ಸೂರ್ಯಾಸ್ತ : 05:40 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ಪಾಡ್ಯಾಮಿ ನಕ್ಷತ್ರ: ವಿಶಾಖಾ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ರಾ .8:16 ನಿಂದ ರಾ .10:02 ತನಕ ಅಭಿಜಿತ್ ಮುಹುರ್ತ: ಬೆ.11:36 ನಿಂದ ಮ.12:22 ತನಕ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ ನಿಮ್ಮ ವ್ಯಾಪಾರ ಉತ್ತಮವಾಗಿರುವುದು, ಆರ್ಥಿಕ ಚೇತರಿಕೆ ಇಂದ ಉತ್ಸಾಹ ಮೂಡುವುದು, ಸಾಲದ ಋಣ ಬಾಧೆ ತೀರಿಸುವ ಹಂತದಲ್ಲಿ ಇದ್ದೀರಿ, ಹುಟ್ಟೂರಿನಲ್ಲಿ ಮನೆ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ…
ಹಾಸನ:- ವರ್ಷಕ್ಕೆ ಒಂದು ಬಾರಿ ಮಾತ್ರ ಬಾಗಿಲು ತೆರೆಯುವ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದೆ. ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದ್ದು ಸಂಪ್ರಾಯದಂತೆ ನವೆಂಬರ್ 03 ರಂದು ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಅಕ್ಟೋಬರ್ 24 ರಂದು ಮಧ್ಯಾಹ್ನ 12:15 ಗಂಟೆಗೆ ದೇವಾಲಯದ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗಿತ್ತು. ಅಂದಿನಿಂದ ಇವತ್ತಿನವರೆಗೆ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಹಾಸನಾಂಬೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರದಿಂದ ವಿವಿಐಪಿ ಹಾಗೂ ವಿಐಪಿ ಪಾಸ್ಗಳು ರದ್ದು ಮಾಡಲಾಗಿದೆ. ರವಿವಾರ ನಸುಕಿನ ಜಾವ 4 ಗಂಟೆವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಭಕ್ತಾದಿಗಳ ದಂಡೇ ಹರಿದು ಬರುತ್ತಿದೆ.
ರಾಯಚೂರು:- ದೀಪಾವಳಿ ಹಿನ್ನೆಲೆ ಪಟಾಕಿ ಸಿಡಿಸುತ್ತಿದ್ದ ವೇಳೆ ಬೆಂಕಿ ಕಿಡಿ ಅಂಗಡಿಗೆ ತಗುಲಿ ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಭಸ್ಮವಾದ ಘಟನೆ ಜರುಗಿದೆ. ನಗರದ ಸದರಬಜಾರ್ ಪೊಲೀಸ್ ಠಾಣೆ ಎದುರು ಘಟನೆ ಜರುಗಿದೆ. ಬಟ್ಟೆ ತಯಾರಿಸುವ ಉಲ್ಲನ್ ದಾರದ ಅಂಗಡಿಗೆ ಪಟಾಕಿ ಕಿಡಿ ತಗುಲಿ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ವೇಳೆ ಅದೇ ಮಾರ್ಗವಾಗಿ ತಾಯಿ ಭುವನೇಶ್ವರಿ ಮೆರವಣಿಗೆ ಸಾಗುತ್ತಿತ್ತು. ಬೆಂಕಿ ಅವಘಡ ಹಿನ್ನೆಲೆ ಕನ್ನಡಾಂಬೆ ಮೆರವಣಿಗೆಗೆ ಅಡ್ಡಿಯುಂಟಾಗಿದೆ. ಬೆಂಕಿ ಹೊತ್ತಿ ಉರಿದಿದ್ದರಿಂದ ಕೆಲ ಕಾಲ ಕನ್ನಡಾಂಬೆ ಮೆರವಣಿಗೆ ಸ್ಥಗಿತಗೊಂಡಿದೆ.