ಬೆಂಗಳೂರು:- ದೇಶದ ಪ್ರಧಾನಿಯಾಗಿ “ಪುಡಾರಿ” ರೀತಿ ರೀತಿ ಸುಳ್ಳು ಹೇಳುವುದು ವಿಷಾದನೀಯ ಎಂದು ಹೇಳುವ ಮೂಲಕ PM ಮೋದಿಗೆ CM ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ ಪ್ರಧಾನಿ ಮೋದಿಗೆ X ನಲ್ಲೇ ಟಾಂಗ್ ಕೊಟ್ಟಿರುವ ಸಿದ್ದು, ಈ ಮೇಲಿನ ಹೇಳಿಕೆಯನ್ನು ಉಲ್ಲೇಖ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೊತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದಿದ್ದಾರೆ. ಪ್ರಧಾನಿ ಮೋದಿ ಅವರೇ, ಇಂದು ಕನ್ನಡ ರಾಜ್ಯೋತ್ಸವದ ದಿನ. “ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ” ಎಂದು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಕಾವ್ಯವನ್ನು ನಾಡಗೀತೆಯಾಗಿ ಸ್ವೀಕರಿಸಿರುವ ಕರ್ನಾಟಕ, ಭಾರತಕ್ಕೆ ತಾಯಿಯ ಸ್ಥಾನವನ್ನು ನೀಡಿದೆ. ಇದೇ ಪ್ರೀತಿ ಮತ್ತು ಬದ್ಧತೆಯಿಂದ…
Author: Prajatv Kannada
ಸರ್ಬಿಯಾದಲ್ಲಿ ನೋವಿ ಸ್ಯಾಡ್ ನ ರೈಲ್ವೇ ನಿಲ್ದಾಣದ ಪ್ರವೇಶದ್ವಾರದಲ್ಲಿ ಮೇಲ್ಛಾವಣಿ ಕುಸಿದು 14 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ದುರಂತ ಸಂಭವಿಸಿದೆ. ರೈಲ್ವೆ ನಿಲ್ದಾಣದ ಮೇಚ್ಚಾವಣಿ ಕುಸಿದ ಪರಿಣಾಮ ಕೆಳಗಡೆ ನಿಂತಿದ್ದ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರೇನ್‌ಗಳು ಮತ್ತು ಬುಲ್ಡೋಜರ್‌ಗಳು ಡಜನ್‌ಗಟ್ಟಲೆ ರಕ್ಷಕರು ಮತ್ತು ನಿರ್ಮಾಣ ಕಾರ್ಮಿಕರೊಂದಿಗೆ ಅವಶೇಷಗಳ ಮೂಲಕ ಶೋಧ ಕಾರ್ಯ ನಡೆಸಿವೆ. ರಾಜಧಾನಿ ಬೆಲ್‌ಗ್ರೇಡ್‌ನ ವಾಯುವ್ಯಕ್ಕೆ ಸುಮಾರು 70 ಕಿಮೀ(40 ಮೈಲುಗಳು) ನಗರದಲ್ಲಿ 35-ಮೀಟರ್ (115-ಅಡಿ) ಉದ್ದದ ಛಾವಣಿಯ ಕುಸಿದು ದುರಂತ ಸಂಭವಿಸಿದೆ. ಸದ್ಯ ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ರಕ್ಷಣಾ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ.
ಬೆಂಗಳೂರು:- ನಗರದಲ್ಲಿ ದೀಪಾವಳಿ ಸಂಭ್ರಮದ ಜೊತೆ ಪಟಾಕಿ, ಸದ್ದು ಜೋರಾಗಿದೆ. ಪಟಾಕಿಯಿಂದ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ವಾಯುಮಾಲಿನ್ಯ ಬಹಳಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಕಳೆದ ವಾರ 50ರ ಆಸುಪಾಸಿನಲ್ಲಿದ್ದಂತಹ ವಾಯು ಪ್ರಮಾಣ ಎರಡು-ಮೂರು ದಿನದಲ್ಲಿ 100ರ ಗಡಿ ದಾಟಿದ್ದು, ಕಳಪೆ ಗುಣಮಟ್ಟದ ಗಾಳಿಯನ್ನ ಹೊಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ 50 ಎಕ್ಯೂ ಇದ್ದರೆ ಉತ್ತಮ ಗಾಳಿ ಎಂದರ್ಥ. 60 ರಿಂದ 80 ರ ಗಡಿಯಲ್ಲಿದ್ದರೆ ಸಾಧಾರಣ ಗುಣಮಟ್ಟದಲ್ಲಿದೆ. 100 ರಿಂದ 150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲದ ಗಾಳಿ ಎಂದು ಹೇಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 130ರ ಗಡಿ ದಾಟಿದೆ. ಇಂದಿನ ಗಾಳಿಯ ಗುಣಮಟ್ಟವಿದೆ ಜಯನಗರದಲ್ಲಿ – 124 ಎಕ್ಯೂ ಬಿಟಿಎಂ ಲೇಔಟ್ – 130 ಎಕ್ಯೂ ಬಾಪುಜಿನಗರ – 110 ಎಕ್ಯೂ ಸಿಲ್ಕ್ ಬೋರ್ಡ್- 97 ಎಕ್ಯೂ ಮಹದೇವಪುರ – 74 ಎಕ್ಯೂ ಹೆಬ್ಬಾಳ -…
ಅಮೇರಿಕಾದ ರಕ್ಷಣಾ ಇಲಾಖೆಯೂ ಉಕ್ರೇನ್ ಗೆ ಸುಮಾರು 425 ಮಿಲಿಯನ್ ಡಾಲರ್ ಮೌಲ್ಯದ ಹೆಚ್ಚುವರಿ ಭದ್ರತಾ ನೆರವನ್ನು ಘೋಷಿಸಿದೆ. ಅಧ್ಯಕ್ಷೀಯ ಡ್ರಾಡೌನ್ ಅಥಾರಿಟಿ (ಪಿಡಿಎ) ಪ್ಯಾಕೇಜ್ ಅಡಿಯಲ್ಲಿ ನೆರವು ಉಕ್ರೇನ್ನ ನಿರ್ಣಾಯಕ ಭದ್ರತೆ ಮತ್ತು ರಕ್ಷಣಾ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ ಎಂದು ಪೆಂಟಗನ್ ಹೇಳಿಕೆಯಲ್ಲಿ ತಿಳಿಸಿದೆ. ನೆರವಿನ ಅಡಿಯಲ್ಲಿ ಒದಗಿಸಬೇಕಾದ ಸಲಕರಣೆಗಳಲ್ಲಿ ರಾಷ್ಟ್ರೀಯ ಸುಧಾರಿತ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಗಳ (ನಾಸಾಮ್ಸ್) ಯುದ್ಧಸಾಮಗ್ರಿಗಳು ಸೇರಿವೆ; ಸ್ಟಿಂಗರ್ ಕ್ಷಿಪಣಿಗಳು; ಮಾನವರಹಿತ ವೈಮಾನಿಕ ವ್ಯವಸ್ಥೆಗಳು (ಸಿ-ಯುಎಎಸ್) ಉಪಕರಣಗಳು ಮತ್ತು ಯುದ್ಧಸಾಮಗ್ರಿಗಳು; ಗಾಳಿಯಿಂದ ನೆಲಕ್ಕೆ ಯುದ್ಧಸಾಮಗ್ರಿಗಳು; ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್ (ಹಿಮಾರ್ಸ್) ಗಾಗಿ ಮದ್ದುಗುಂಡುಗಳು; 155 ಎಂಎಂ ಮತ್ತು 105 ಎಂಎಂ ಫಿರಂಗಿ ಮದ್ದುಗುಂಡುಗಳು; ಟ್ಯೂಬ್-ಉಡಾವಣೆ, ಆಪ್ಟಿಕಲ್ ಟ್ರ್ಯಾಕ್, ವೈರ್-ಗೈಡೆಡ್ (ಟಿಒಡಬ್ಲ್ಯೂ) ಕ್ಷಿಪಣಿಗಳು; ಜಾವೆಲಿನ್ ಮತ್ತು ಎಟಿ -4 ಆಂಟಿ-ಆರ್ಮರ್ ವ್ಯವಸ್ಥೆಗಳು; ಸ್ಟ್ರೈಕರ್ ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು; ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು; ವೈದ್ಯಕೀಯ ಉಪಕರಣಗಳು; ಮತ್ತು ನೆಲಸಮಗೊಳಿಸುವ ಉಪಕರಣಗಳು ಮತ್ತು…
ಖಾನ್ ಯೂನಿಸ್ ನಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್‌ನ ಹಿರಿಯ ಅಧಿಕಾರಿ ಇಝ್-ಅಲ್ ದೀನ್ ಕಸಬ್‌ರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಮೃತ ಅಲ್ ದೀನ್ ಕಸಬ್ ಗಾಜಾ ಪಟ್ಟಿಯಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಜೊತೆಗೆ ಹಮಾಸ್ ನ ಉನ್ನತ ಶ್ರೇಣಿಯ ನಾಯಕರಾಗಿದ್ದರು ಎಂದು ಇಸ್ರೇಲ್ ಹೇಳಿದೆ. ಕಸಬ್ ಸಾವನ್ನು ಹಮಾಸ್ ಬಂಡುಕೋರ ಸಂಘಟನೆಯೂ ಖಚಿತ ಪಡಿಸಿದ್ದು, ‘ಅವರ ಸಾವಿಗೆ ದುಃಖ ವ್ಯಕ್ತ ಪಡಿಸುತ್ತೇವೆ’ ಎಂದು ಹೇಳಿದೆ. ಅಲ್ಲದೆ ಮತ್ತೊಬ್ಬ ಅಧಿಕಾರಿ ಐಮನ್ ಆಯೆಷ್ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ. ಕಸಬ್, ಗಾಜಾದಲ್ಲಿ ಸ್ಥಳೀಯ ಗುಂಪಿನ ಅಧಿಕಾರಿಯಾಗಿದ್ದರೂ, ಅದರ ನಿರ್ಧಾರ ತೆಗೆದುಕೊಳ್ಳುವ ರಾಜಕೀಯ ಕಚೇರಿಯ ಸದಸ್ಯರಲ್ಲ ಎಂದು ಹಮಾಸ್ ಮೂಲಗಳು ತಿಳಿಸಿವೆ.
ಯುವ ಸಿನಿಮಾದ ಮೂಲಕ ಭರ್ಜರಿಯಾಗಿ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ದೊಡ್ಮನೆ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಇದೀಗ 2ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 2ನೇ ಸಿನಿಮಾದ ಟೈಟಲ್ ಇದೀಗ ಅನೌನ್ಸ್ ಮಾಡಿದ್ದಾರೆ. ಕ್ಯಾಚಿ ಟೈಟಲ್‌ನೊಂದಿಗೆ ಯುವ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಯುವ ನಟನೆಯ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಆಯುಧವೊಂದನ್ನು ಹಿಡಿದು ರಕ್ತಸಿಕ್ತವಾಗಿ ಯುವ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಆಗಿ ಲುಕ್ ಕೊಟ್ಟಿದ್ದಾರೆ. ಈ ಸಿನಿಮಾಗೆ ‘ಎಕ್ಕ’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಪೋಸ್ಟರ್ ಶೇರ್ ಮಾಡಿ, ಪ್ರಪಂಚದ ಪಾಪದಲ್ಲಿ, ಎಲ್ಲರೂ ಪಾಲುದಾರರೂ ಎಂದು ಯುವ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಎಕ್ಕ’ ಚಿತ್ರವನ್ನು ಕೆಆರ್‌ಜಿ ಸಂಸ್ಥೆ ಮತ್ತು ಪಿಆರ್‌ಕೆ ಸಂಸ್ಥೆಯ ಅಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ & ಭೋಗೇಂದ್ರ ನಿರ್ಮಾಣ ಮಾಡಲಿದ್ದಾರೆ.
ಕನ್ನಡ ಸ್ಟಾರ್ ಜೋಡಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ದೀಪಾವಳಿಯಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಪೋಷಕರಾಗುತ್ತಿರುವ ಸಿಹಿಸುದ್ದಿಯನ್ನು ಜೋಡಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಈ ಶುಭ ದಿನದಂದು ನಿಮ್ಮೆಲ್ಲರೊಡನೆ ಶುಭ ಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ‘ಕುಡಿ’ಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಆರ್ಶಿವಾದಗಳ ನಿರೀಕ್ಷೆಯಲ್ಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಸಿಷ್ಠ ಸಿಂಹ ದಂಪತಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಜೋಡಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಗುಡ್ ನ್ಯೂಸ್ ನೀಡಿದ್ದಾರೆ. ಇನ್ನೂ ಡಾಲಿ ಮತ್ತು ವಸಿಷ್ಠ ಸಿಂಹ ಹಲವು ವರ್ಷಗಳಿಂದ ಸ್ನೇಹಿತರು. ಇಂದು (ನ.1) ಡಾಲಿ ಅವರು ಭಾವಿ ಪತ್ನಿಯನ್ನು ಪರಿಚಯಿಸಿ ಮದುವೆ ಡೇಟ್ ಅನೌನ್ಸ್ ಮಾಡಿದ್ದಾರೆ. ಈ ಬೆನ್ನಲ್ಲೇ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗುಡ್ ನ್ಯೂಸ್ ನೀಡಿದ್ದಾರೆ ವಸಿಷ್ಠ ಸಿಂಹ ದಂಪತಿ. ಅಂದಹಾಗೆ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವರ್ಷ ಜನವರಿ 26ರಂದು ಮೈಸೂರಿನಲ್ಲಿ ಹಸೆಮಣೆ ಏರಿದ್ದರು. ಹಲವು…
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅದಿತಿ ಪ್ರಭುದೇವ ಮನೆಯಲ್ಲಿ ಈ ವರ್ಷದ ದೀಪಾವಳಿ ವಿಶೇಷವಾಗಿದೆ. ಇದೇ ಮೊದಲ ಬಾರಿಗೆ ಮಗಳ ಜೊತೆ ಅದಿತಿ ದಂಪತಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಇದೀಗ ಕುಟುಂಬದ ಜೊತೆ ದೀಪಾವಳಿ ಹಬ್ಬ ಆಚರಿಸಿರುವ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಿನ ಮಗಳು ನೇಸರ, ಪತಿ ಯಶಸ್ ಜೊತೆ ಕುಳಿತು ಕ್ಯಾಮರಾಗೆ ನಟಿ ಪೋಸ್ ಕೊಟ್ಟಿದ್ದಾರೆ. ಅದಿತಿ ಪುತ್ರಿ ನೇಸರ ಪಿಂಕ್ ಬಣ್ಣ ಡ್ರೆಸ್ ತೊಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳನ್ನು ಅಭಿಮಾನಿಗಳಿಗೆ ನಟಿ ತಿಳಿಸಿದ್ದಾರೆ. ಇನ್ನೂ ಉದ್ಯಮಿ ಯಶಸ್ ಜೊತೆ 2022ರಲ್ಲಿ ನಟಿ ಮದುವೆಯಾದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ನವೆಂಬರ್ 22ರಂದು ಹಸೆಮಣೆ ಏರಿದರು. ಅಂದಹಾಗೆ, ಬಜಾರ್, ಟ್ರಿಪಲ್ ರೈಡಿಂಗ್, ಬ್ರಹ್ಮಚಾರಿ, ಧೈರ್ಯಂ, ತೋತಾಪುರಿ, ತೋತಾಪುರಿ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದಿತಿ ನಟಿಸಿದ್ದಾರೆ. ಸದ್ಯ ರಿಯಾಲಿಟಿ ಶೋ ಬಡ್ಜ್ ಆಗಿಯೂ ಬ್ಯುಸಿಯಾಗಿದ್ದಾರೆ.
ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಹಿರಿಯ ನಟಿ ಹೇಮಾ ಚೌಧರಿಹಾಗೂ ಎಂ.ಎಸ್ ನರಸಿಂಹಮೂರ್ತಿ ಅವರಿಗೆ ನ.1ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ನಟಿ ಹೇಮಾ ಚೌಧರಿ, ಎಂ.ಎಸ್ ನರಸಿಂಹಮೂರ್ತಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಪುರಸ್ಕೃತರಿಗೆ ಶಾಲಿನ ಜೊತೆ ಹೂವಿನ ಹಾರ ಹಾಕಿ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಖ್ಯಾತ ಹಿರಿಯ ನಟಿ ಹೇಮಾ ಚೌಧರಿ ಬಿಗ್ ಸ್ಕ್ರೀನ್ ಜೊತೆಗೆ ಸ್ಮಾಲ್ ಸ್ಕ್ರೀನ್ ನಲ್ಲೂ ತಮ್ಮನ್ನು ತಾವು ತೊಡಗಿಕೊಂಡಿದ್ದರು. ಅವರು ತೆಲುಗಿನ ಸ್ಟಾರ್ ನಟ ಎನ್‌ಟಿ ರಾಮರಾವ್, ವರನಟ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್ ಸೇರಿದಂತೆ ಅನೇಕರ ಜೊತೆ ತೆರೆಹಂಚಿಕೊಂಡಿದ್ದಾರೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ಬಣ್ಣ ಹಚ್ಚಿದ್ದಾರೆ. ಇನ್ನೂ ನಟ,…
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮೊದಲ ಬಾರಿಗೆ ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಗಳ ಕಾಲಗಳ ಫೋಟೋ ಶೇರ್ ಮಾಡಿರುವ ದಂಪತಿ ಹೆಸರನ್ನು ರಿವೀಲ್ ಮಾಡಿದ್ದಾರೆ. ಸೆ.8ರಂದು ದೀಪಿಕಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ, ಪೋಟೋವನ್ನು ದೀಪಿಕಾ ದಂಪತಿ ಎಲ್ಲೂ ಹಂಚಿಕೊಂಡಿರಲಿಲ್ಲ. ಈಗ ಮಗಳ ಕಾಲಿನ ಫೋಟೋ ಶೇರ್ ಮಾಡಿದ್ದು ಮಗುವಿಗೆ ‘ದುವಾ’ ಎಂದು ಹೆಸರಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಮಗಳಿಗೆ ಇಟ್ಟಿರುವ ದುವಾ ಹೆಸರಿನ ಅರ್ಥವನ್ನು ದಂಪತಿ ತಿಳಿಸಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಎಂದರ್ಥವಾಗಿದೆ. ಯಾಕೆಂದರೆ ನಮ್ಮ ಪ್ರಾರ್ಥನೆಗೆ ಅವಳು ಉತ್ತರ ಎಂದು ನಟಿ ಬರೆದುಕೊಂಡಿದ್ದಾರೆ. 2015 ರಲ್ಲಿ ರಣವೀರ್ ಸಿಂಗ್ ಜೊತೆ ದೀಪಿಕಾ ಇಟಲಿಯಲ್ಲಿ ಹಸೆಮಣೆ ಏರಿದರು. ಹಲವು ವರ್ಷಗಳ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮದುವೆಯಾದ 9 ವರ್ಷಗಳ ಬಳಿಕ ಮಗಳನ್ನು ಬರ ಮಾಡಿಕೊಂಡಿದ್ದಾರೆ.