ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಬೆನ್ನು ನೋವಿನ ಹಿನ್ನೆಲೆಯಲ್ಲಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. ಬುಧವಾರ ಜಾಮೀನು ಪಡೆದು ಹೊರ ಬಂದಿರುವ ದರ್ಶನ್ ಶುಕ್ರವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ದರ್ಶನ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ನವೀನ್ ಅಪ್ಪಾಜಿ ಗೌಡ ಮಾತನಾಡಿ, ಇಂದು ಮಧ್ಯಾಹ್ನ 3:30 ಕ್ಕೆ ದರ್ಶನ್ ಅಡ್ಮಿಟ್ ಆದರು. ದರ್ಶನ್ ಕಾಲಲ್ಲಿ ವೀಕ್ನೆಸ್ ಇದೆ. ಎಡಗಡೆಯ ಕಾಲು ನೋವಿದೆ. ಎಂಆರ್‌ಐ, ಸ್ಕ್ಯಾನಿಂಗ್, ಎಕ್ಸ್ ರೇ ಮಾಡಬೇಕಾಗುತ್ತೆ. ಎಡಗಡೆಯ ಕಾಲು ತುಂಬಾ ನೋವಿದೆ. ಬೆನ್ನುನೋವಿಗೆ ಸಂಬಂಧಿಸದಂತೆ ಪರೀಕ್ಷೆ ಮಾಡಬೇಕಾಗುತ್ತೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ತಿಳಿಸಿದರು. ಎಡಗಾಲು ಸ್ಪರ್ಶತೆ ಸ್ವಲ್ಪ ಕಡಿಮೆ ಆಗಿದೆ. ಎಕ್ಸಾಮಿನೇಷನ್ ಮುಗಿದ ಬಳಿಕ ಅಪರೇಷನ್ ಅಥವಾ ಫಿಸಿಯೋನಾ? ಅಥವಾ ಬೇರೆ ರೀತಿಯ ಚಿಕಿತ್ಸೆನಾ ಅಂತ…
Author: Prajatv Kannada
ಬಿಗ್ ಬಾಸ್ ಸೀಸನ್ 11ಗೆ ಎಂಟ್ರಿಕೊಟ್ಟಿದ್ದ ಲಾಯರ್ ಜಗದೀಶ್ ದೊಡ್ಮನೆಗೆ ಕಾಲಿಟ್ಟ ಎರಡೇ ವಾರಕ್ಕೆ ಹೊರ ಬಂದಿದ್ದರು. ಶೋ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣದಿಂದ ಅವರನ್ನು ಮಧ್ಯದಲ್ಲೇ ಎಲಿಮಿನೇಟ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವು ಜಗದೀಶ್ ಹವಾ ಕಡಿಮೆ ಆಗಿಲ್ಲ. ಎಂದಿನಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ರಿಯಾಲಿಟಿ ಶೋನಿಂದಲೂ ಅವರಿಗೆ ಅಹ್ವಾನ ಬರುತ್ತಿದೆ. ಈಗ ಅವರು ‘ಜೀ ಕನ್ನಡ’ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದಾರೆ. ಜಗಮಗಿಸುವ ವೇದಿಕೆಯಲ್ಲಿ ಕಲರ್ಫುಲ್ ಬಟ್ಟೆ ಧರಿಸಿ ಜಗದೀಶ್ ಅವರು ಎಂಟ್ರಿ ನೀಡಿದ್ದಾರೆ. ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರ ಎಂಟ್ರಿ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಜಡ್ಜ್ಗಳಾದ ರಕ್ಷಿತಾ ಪ್ರೇಮ್, ಶಿವರಾಜ್ಕುಮಾರ್, ವಿಜಯ್ ರಾಘವೇಂದ್ರ ಅವರು ಗ್ರ್ಯಾಂಡ್ ವೆಲ್ ಕಮ್ ನೀಡಿದ್ದು, ಎಂದಿನಂತೆ ಜಗದೀಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. ‘ವೆಲ್ಕಮ್ ಜಗದೀಶ್. ಡ್ಯಾನ್ ಚೆನ್ನಾಗಿ ಮಾಡಿದ್ದೀರಿ’…
ಹಾಸನ: ವಿಧಾನ ಪರಿಷತ್ ಶಾಸಕ ಟಿಎ ಶರವಣರವರು, ಉಪ ಚುನಾವಣೆಯ ಬ್ಯುಸಿ ನಡುವೆಯೂ ಕುಟುಂಬ ಸಮೇತರಾಗಿ ಆಗಮಿಸಿ ಪುರಾಣ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಹಾಸನಾಂಬ ದೇವಿ ನಾಡಿನ ಜನತೆಗೆ ಒಳಿತು ಮಾಡಲಿ, ನೆಮ್ಮದಿ ಶಾಂತಿಯಿಂದ ಬದುಕಲಿ ಹಾಗೂ ಹಾಸನಾಂಬಾ ದೇವಿಯ ಎಲ್ಲ ಭಕ್ತರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ರಾಯಚೂರು: ರಾಯಚೂರು ನಗರದ ರಾಗಿಮನಗಡ್ಡದಲ್ಲಿ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಅಂದಿದ್ದಕ್ಕೆ ಕೊಲೆ ಮಾಡಿದ ಘಟನೆ ನಡೆದಿದೆ. ನರಸಿಂಹಲು(32) ಮೃತ ವ್ಯಕ್ತಿ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪರಸ್ಪರ ಕೇಸ್ ದಾಖಲಾಗಿದ್ದು, ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಗಿಮನಗಡ್ಡದಲ್ಲಿ ಕಾರ್ನರ್ ಬಳಿ ಮನೆ ಹೊಂದಿರುವ ಮೃತ ನರಸಿಂಹ, ನಿನ್ನೆ ರಾತ್ರಿ ರಸ್ತೆಯಲ್ಲಿ ಅದೇ ಏರಿಯಾದ ಹುಡುಗರು ಪಟಾಕಿ ಹೊಡೆಯುತ್ತಿದ್ದರು. ಆಗ ಯಾಕೆ ಪಟಾಕಿ ಹೊಡೆಯುತ್ತಿದ್ದಿರಿ ಅಂತ ನರಸಿಂಹ ಪ್ರಶ್ನಿಸಿದ್ದಾರೆ. ಆಗ ಏರಿಯಾ ಹುಡುಗರು ಮಾತು ಕೇಳದ ಹಿನ್ನೆಲೆ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯವರಿಂದ ನರಸಿಂಹನ ಹತ್ಯೆ ಮಾಡಿದ್ದಾರೆ. ಮೃತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿಲ್ಲ. ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಸ್ಪಷ್ಟನೆ ನೀಡಲಾಗಿದೆ.
ಚಾಮರಾಜನಗರ: ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗುಸು-ಗುಸು ಚರ್ಚೆ ನಡೆಯುತ್ತಿದೆ, ಯಾರು ಬರ್ತಾರೆ ಎಂದು ನಿಖರ ಮಾಹಿತಿ ಇಲ್ಲಾ, ಕಾದು ನೋಡೋಣ, ಯಾರ್ಯಾರು ಬರ್ತಾರೆ ಅಂತಾ, ಚರ್ಚೆ ಅಂತೂ ಆಗುತ್ತಿದೆ. 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು. ಇನ್ನೂ ರಾಜ್ಯ ಸರ್ಕಾರ ದಿವಾಳಿ ಎಂದಿದ್ದ ಪ್ರಹ್ಲಾದ್ ಜೋಶಿಗೆ ಕೇಂದ್ರ ಸರ್ಕಾರ ದಿವಾಳಿ ಆಗುತ್ತಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ತಿರುಗೇಟು ನೀಡಿದ್ದಾರೆ. ಮೋದಿ ಬಂದ ಮೇಲೆ ಎಷ್ಟು ಲಕ್ಷ ಕೋಟಿ ಸಾಲ ಮಾಡಿದ್ದಾರೆ ಅದನ್ನು ಹೇಳಲಿ ಎಂದು ಹೇಳಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದ ಪ್ರಸಿದ್ದ ಯಾತ್ರಾ ಸ್ಥಳ ಪವಾಡ ಮಲೈಮಹದೇಶ್ವರಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ನಾಡಿನ ನಾನಾ ಭಾಗಗಳಿಂದ ಮಾದಪ್ಪನ ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದರು. https://youtu.be/PzzCwyFA8Jk?si=_erco_AB3JGRWEvW ವಿವಿಧ ಹರಕೆಗಳನ್ನು ಹೊತ್ತ. ಭಕ್ತರು ಉಘೇಉಘೇ ಮಾದಪ್ಪ ಎಂದು ಝೇಂಕರಿಸುತ್ತಾ ಮಾದಪ್ಪನ ಸನ್ನಿದಿಯಲ್ಲಿ ಭಕ್ತಿ ಪರಾಕಾಷ್ಟಯಲ್ಲಿ ಮಿಂದೆದ್ದರು. ದೀಪಾವಳಿ ಜಾತ್ರೆಯ ಪ್ರಯುಕ್ತ ಹಾಲರವೆ ಉತ್ಸವವು ಬಹಳ ವಿಜೃಂಬಣೆಯಿಂದ ಜರುಗಿತು. ನೂರ ಒಂದು ಬಾಲಕಿಯರು ಉಪವಾಸವಿದ್ದು ಮಾದಪ್ಪನ ಬೆಡ್ಟದ 7 ಕಿಲೊಮೀಟರ್ ದೂರದಿಂದ ಹಳ್ಳಕ್ಕೆ ತೆರಳಿ ಮಡಿ ಮಾಡಿ ಹಾಲು ಹಳ್ಳ ಗಂಗೆಯನ್ನು ಹೊತ್ತು ಕಾಲ್ನಡಿಯೆಲ್ಲಿ ಸಾಗಿ ಪವಾಡ ಪುರುಷನ ಸನ್ನಿದಿಗೆ ಆಗಮಿಸಿ ವಿಶೇಷ ಪೂಜೆಯಲ್ಲಿ ತೊಡಗಿದರು. ನಂತರ ಮಾದಪ್ಪನ ಚಿನ್ನದ ತೇರು ಉತ್ಚವವು ಕಣ್ಮನ ಸೆಳೆಯಿತು.
ಹಾಸನ: ವಿಧಾನ ಪರಿಷತ್ ಶಾಸಕ ಟಿಎ ಶರವಣರವರು, ಉಪ ಚುನಾವಣೆಯ ಬ್ಯುಸಿ ನಡುವೆಯೂ ಕುಟುಂಬ ಸಮೇತರಾಗಿ ಆಗಮಿಸಿ ಪುರಾಣ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಹಾಸನಾಂಬ ದೇವಿ ನಾಡಿನ ಜನತೆಗೆ ಒಳಿತು ಮಾಡಲಿ, ನೆಮ್ಮದಿ ಶಾಂತಿಯಿಂದ ಬದುಕಲಿ ಹಾಗೂ ಹಾಸನಾಂಬಾ ದೇವಿಯ ಎಲ್ಲ ಭಕ್ತರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ರಾಮನಗರ : ಕಾಂಗ್ರೆಸ್ ನವರ ನಿಯತ್ತು, ಉದ್ದೇಶ ಸರಿಯಾಗಿಲ್ಲ. ಅವರು ರೈತರಿಗೆ ಯಾವುದೇ ಗ್ಯಾರಂಟಿ ನೀಡಿಲ್ಲ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿರವರ ಪರವಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚಿಕ್ಕೇನಹಳ್ಳಿಯಲ್ಲಿ ಗುರುವಾರ ಮತಯಾಚನೆ ನಡೆಸಿ ಅವರು ಮಾತನಾಡಿದರು. ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿ.ಪಿ ಯೋಗೇಶ್ವರ್ ರವರು ದುಡ್ಡಿಗಾಗಿ ಕಾಂಗ್ರೆಸ್ ಗೆ ಹೋಗಿದ್ದಾರೆ. ಅವರಿಗೆ ಜೆಡಿಎಸ್, ಬಿಜೆಪಿ ಎರಡು ಪಕ್ಷಗಳಿಂದ ಟಿಕೆಟ್ ನೀಡಲು ನಾವು ಸಿದ್ದರಿದ್ದೇವು. ಆದರೇ ಅವರು ಎಲ್ಲವನ್ನೂ ಕಡೆಗಣಿಸಿ ಕಾಂಗ್ರೆಸ್ ಗೆ ಹೋಗಿದ್ದಾರೆ. ನಾವು ಅಧಿಕಾರದಲ್ಲಿ ಇದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇವು. ಕಾಂಗ್ರೆಸ್ ನವರು ರೈತರಿಗಾಗಿ ಯಾವುದೇ ಗ್ಯಾರಂಟಿ ನೀಡಿಲ್ಲ. ಕುಮಾರಸ್ವಾಮಿರವರ ಬಗ್ಗೆ ಮಾತನಾಡುವ ಯೋಗ್ಯತೆ ಯೋಗೇಶ್ವರರಿಗೆ ಇಲ್ಲ. ಕುಮಾರಸ್ವಾಮಿರವರು ಏನೆಲ್ಲಾ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಬೇಕಿದ್ರೆ ನಾನು ಕೊಡ್ತಿನಿ ಎಂದು…
ಬೆಂಗಳೂರು:- ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 1 ಲಕ್ಷಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಆದೇಶ ಹೊರಡಿಸಿದೆ. ಇದೊಂದು ಐತಿಹಾಸಿಕ ಸಂದರ್ಭವಾಗಿರುವುದರಿಂದ ಸುವರ್ಣ ಮಹೋತ್ಸವ ಪ್ರಶಸ್ತಿಯ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗುರುವಾರ ಮಾಹಿತಿ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಈ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 100 ಸಾಧಕರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಇದಕ್ಕೆ ಕಾರಣಕರ್ತರಾದ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ.
ಆನೇಕಲ್:- ರಾಜ್ಯ ಗಡಿಭಾಗ ಆನೇಕಲ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಆನೇಕಲ್ ನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಆನೇಕಲ್ ಪಟ್ಟಣದ ಹೊಸ ಮಾಧ್ಯಮಿಕ ಪಾಠಶಾಲೆ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಶಾಸಕ ಬಿ.ಶಿವಣ್ಣರಿಂದ ಧ್ವಜಾರೋಹಣ ನೆರವೇರಿಸಿದರು. ಪೊಲೀಸರು ಮತ್ತು ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆದಿದೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ರಿಂದ ಧ್ವಜಾರೋಹಣ ಸಂದೇಶ ಕೊಡಲಾಗಿದೆ.