ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾಗಿದ್ದ ಗೀತಾ ಶಿವರಾಂರವರು ಕಾಂಗ್ರೆಸ್ ತೊರೆದು ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆಗೊಂಡರು. ಚನ್ನಪಟ್ಟಣದಲ್ಲಿರುವ ಗೀತಾ ಶಿವರಾಂರವರ ನಿವಾಸಕ್ಕೆ ಭೇಟಿ ನೀಡಿದ್ದ, ಎನ್ಡಿಎ ನಾಯಕರ ನಿಯೋಗ ಜೆಡಿಎಸ್, ಬಿಜೆಪಿ ಶಾಲು ಹೊದಿಸುವ ಮೂಲಕ ಗೀತಾರವರನ್ನು ಎನ್ಡಿಎ ಒಕ್ಕೂಟಕ್ಕೆ ಬರಮಾಡಿಕೊಂಡಿತು. https://youtu.be/dSJtM3MESz4?si=-f7yatByUePhpG_t ಈ ವೇಳೆ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್, ಗೀತಾ ಶಿವರಾಂರವರು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿರವರನ್ನು ಬೆಂಬಲಿಸುವ ಸಲುವಾಗಿ ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದಾರೆ. ಎನ್ಡಿಎ ಅಭ್ಯರ್ಥಿಯ ಪರವಾಗಿ ಅವರು ಕೆಲಸ ಮಾಡುತ್ತಾರೆ ಎಂದರು ಎರಡು ಪಕ್ಷದ ಹಿರಿಯ ಮುಖಂಡರು ನನ್ನ ಮನೆಗೆ ಬಂದಿದ್ದಾರೆ. ಅವರ ಸಮ್ಮುಖದಲ್ಲಿ ನಾನು ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದೇನೆ. ಈ ಮುಂಚೆ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೆ. ಅದರಂತೆಯೇ ಇನ್ನೂಮುಂದೆ ಎನ್ಡಿಎ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇನೆ. ನಿಖಿಲ್ ಕುಮಾರಸ್ವಾಮಿರವರ ಪರವಾಗಿ ನನ್ನ ಎಲ್ಲಾ ಬೆಂಬಲವಿದೆ ಎಂದು ಗೀತಾ ಶಿವರಾಂರವರು…
Author: Prajatv Kannada
ಬೆಂಗಳೂರು:ನಾಡಿನ ಸಮಸ್ತ ಜನತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ವಿಶ್ವದೆಲ್ಲೆಡೆ ಇರುವ ಎಲ್ಲಾ ಕನ್ನಡಿಗರಿಗೂ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಎಂದರೆ ಕೇವಲ ಭಾಷೆಯಷ್ಟೆಯಲ್ಲ. ಅದು ನಮ್ಮ ಉಸಿರು, ಪರಂಪರೆ, ಭಾವನೆ, ಹೆಮ್ಮೆ ಮತ್ತು ಶಕ್ತಿ. ಕನ್ನಡ ನಮ್ಮೆಲ್ಲರ ಸ್ವಾಭಿಮಾನ ಮತ್ತು ಗೌರವದ ಸಂಕೇತ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನವೆಂಬರ್ 1 ಇಡೀ ವಿಶ್ವದೆಲ್ಲೆಡೆ ಇರುವ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಯಿಂದ ಕನ್ನಡಾಂಬೆಯನ್ನು ಸಂಭ್ರಮಿಸುವ ದಿನ. ಕನ್ನಡ ಭಾಷೆ ಮೇಲಿನ ನಮ್ಮ ಕಾಳಜಿ ಪ್ರೀತಿ ಈ ಒಂದು ದಿನಕ್ಕೆ ಸೀಮಿತವಾಗುವುದು ಬೇಡ. ಇಡೀ ವರ್ಷ ಕನ್ನಡ ಭಾಷೆ ಬಳಸಿ, ಬೆಳೆಸೋಣ. ವಿಶ್ವದೆಲ್ಲೆಡೆ ಕನ್ನಡದ ಕಂಪು ಪಸರಿಸೋಣ ಎಂದು ಅವರು ತಿಳಿಸಿದ್ದಾರೆ. ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಮುಂದಿನ ವರ್ಷವೂ ಮಳೆ, ಬೆಳೆ ಸಮೃದ್ಧವಾಗಲಿ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಐಶ್ವರ್ಯವಂತರಾಗಿ, ಶಾಂತಿ, ನೆಮ್ಮದಿಯ ಬದುಕು ನಡೆಸುವಂತಾಗಲಿ ಎಂದು ಶಿವಕುಮಾರ್ ಅವರು…
ಪಾದಗಳಿಂದ ಟ್ಯಾನ್ ತೆಗೆದುಹಾಕುವುದು ಸುಲಭವಲ್ಲ, ಆದರೆ ಕೆಲವು ನೈಸರ್ಗಿಕ ಪದಾರ್ಥಗಳು ಟ್ಯಾನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾದ್ರೆ ಬನ್ನಿ ಅವು ಯಾವುವು ಎಂದು ತಿಳಿಯೋಣ. ಪಾದಗಳ ಟ್ಯಾನ್ ಅನ್ನು ತೆಗೆದುಹಾಕಲು ನೈಸರ್ಗಿಕ ಮಾರ್ಗಗಳು ಅಲೋವೆರಾ ಜೆಲ್: ಮಲಗುವ ಮೊದಲು ತಾಜಾ ಅಲೋವೆರಾ ಜೆಲ್ ಅನ್ನು ನೇರವಾಗಿ ನಿಮ್ಮ ಟ್ಯಾನ್ ಆಗಿರುವ ಪಾದಗಳಿಗೆ ಅನ್ವಯಿಸಿ, ನಂತರ ಬೆಳಗ್ಗೆ ಅದನ್ನು ತೊಳೆಯಿರಿ. ಅಲೋವೆರಾ ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಬಹುದು ಹಾಗೂ 2008 ರಲ್ಲಿ ಜರ್ನಲ್ ಆಫ್ ಇನ್ವೆಸ್ಟಿಗೇಟಿವ್ ಡರ್ಮಟಾಲಜಿ ಸಿಂಪೋಸಿಯಮ್ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮೆಲನಿನ್ ಬಿಡುಗಡೆಯನ್ನು ನಿಗ್ರಹಿಸುತ್ತದೆ ಎಂದು ಸೂಚಿಸುತ್ತದೆ. ಸೌತೆಕಾಯಿ: ಸೌತೆಕಾಯಿಯನ್ನು ತುರಿದು ಅದರ ರಸವನ್ನು ಕಂದುಬಣ್ಣದ ಚರ್ಮಕ್ಕೆ(ಟ್ಯಾನ್) ಹಚ್ಚಿ. ಸೌತೆಕಾಯಿಯ ರಸವನ್ನು ನಿಮ್ಮ ಪಾದಗಳ ಮೇಲೆ ಸುಮಾರು 20 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಅದನ್ನು ತೊಳೆಯಿರಿ. ಸೌತೆಕಾಯಿ ಚರ್ಮವನ್ನು ತಂಪಾಗಿಸುತ್ತದೆ ಮತ್ತು ಟ್ಯಾನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.…
ದೀಪಾವಳಿ ಹಬ್ಬಕ್ಕೆ ಏನಾದರು ವಿಶೇಷ ಸಿಹಿ ತಿಂಡಿ ಮಾಡುವುದು ಸಾಮಾನ್ಯ. ಕಜ್ಜಾಯ, ಹೋಳಿಗೆ ಹೀಗೆ ಹಲವು ಬಗೆಯ ತಿಂಡಿಗಳನ್ನು ಮಾಡಲಾಗುತ್ತದೆ.ಪ್ರತಿ ಬಾರಿಯೂ ಅದನ್ನು ಯಾಕೆ ಮಾಡುವುದು. ಈ ಬಾರಿ ಹೆಚ್ಚು ವಿಭಿನ್ನವಾಗಿ ಕಾಜು ಬರ್ಫಿ ಮಾಡಿದ್ರೆ ಹೇಗಿರತ್ತೆ. ಹೌದು, ಸಾಮಾನ್ಯವಾಗಿ ಕಾಜು ಬರ್ಫಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ನೀವು ಈ ಸಿಹಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಆರೋಗ್ಯದ ದೃಷ್ಟಿಯಿಂದ ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಕಾಜು ಬರ್ಫಿ ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಬೇಕಾಗುವ ಸಾಮಾಗ್ರಿಗಳು : ಗೋಡಂಬಿ – 250 ಗ್ರಾಂ ಹಾಲಿನ ಪುಡಿ – 4 ಕಪ್ ಸಕ್ಕರೆ – 4 ಕಪ್ ಏಲಕ್ಕಿ ಪುಡಿ – 4 ಚಮಚ ತುಪ್ಪ – 2 ಚಮಚ ಸಿಲ್ವರ್ ಪೇಪರ್/ಬೆಳ್ಳಿ ಲೇಪನ ಮಾಡುವ ವಿಧಾನ: * ಮೊದಲಿಗೆ ಗೋಡಂಬಿಯನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ. * ಗೋಡಂಬಿ ಒಣಗಿದ ಬಳಿಕ ನೀರಿನ ಪಸೆ ಇಲ್ಲದ…
ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಪದೇಪದೇ ಕೊಲೆ ಬೆದರಿಕೆ ಬರುತ್ತಲೆ ಇದೆ. ಇತ್ತೀಚೆಗಷ್ಟೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನವರು ಎನ್ನಲಾದ ಕೆಲವರು ಸಲ್ಮಾನ್ ಖಾನ್ರ ಆಪ್ತ ಬಾಬಾ ಸಿದ್ಧಿಕಿಯನ್ನು ಹತ್ಯೆ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಅವರನ್ನು ಕೊಂದೇ ಕೊಲ್ಲುವುದಾಗಿ ಹೇಳಿದ್ದಾರೆ. ಇದರ ನಡುವೆ ಸಲ್ಮಾನ್ ಖಾನ್ರ ಮಾಜಿ ಗೆಳತಿ ಸೋಮಿ ಅಲಿ, ‘ಲಾರೆನ್ಸ್ ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ’ ಎಂದು ಹೇಳಿದ್ದಾರೆ. ಸೋಮಿಯ ಈ ಹೇಳಿಕೆ ವೈರಲ್ ಆಗುತ್ತಿದೆ. ಐಎಎನ್ಎಸ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋಮಿ ಅಲಿ, ‘ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ. ಆತನೊಂದಿಗೆ ರಿಲೇಷನ್ಶಿಪ್ನಲ್ಲಿದ್ದಾಗ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನಾನು ಅನುಭವಿಸಿದ್ದೆ. ನಾನು ಮಾತ್ರವೇ ಅಲ್ಲ ಸಲ್ಮಾನ್ ಖಾನ್ ಜೊತೆಗೆ ಪ್ರೇಮ ಸಂಬಂಧದಲ್ಲಿದ್ದ ಎಲ್ಲ ನಟಿಯರೂ ಸಹ ಸಾಕಷ್ಟು ಹಿಂಸೆ ಮತ್ತು ನೋವನ್ನು ಅನುಭವಿಸಿದ್ದಾರೆ, ಆದರೆ ನನ್ನಷ್ಟು ಕೆಟ್ಟದಾಗಿ ಆತ ಇನ್ಯಾರೊಂದಿಗೂ ನಡೆದುಕೊಂಡಿರಲಿಲ್ಲ’ ಎಂದಿದ್ದಾರೆ. ‘ಐಶ್ವರ್ಯಾ ರೈ ಮೇಲೆಯೂ ಸಹ ಬಹಳ ಕೆಟ್ಟದಾಗಿ ಆತ ಹಲ್ಲೆ…
ಡಾಲಿ ಧನಂಜಯ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಡಾಲಿ ಧನಂಜಯ್ ಅವರ ಕೈ ಹಿಡಿಯೋ ಹುಡುಗಿ ಯಾರು ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅವರ ಬಾಳ ಸಂಗಾತಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ತಮ್ಮ ಬಾಳ ಸಂಗಾತಿಯನ್ನು ಧನಂಜಯ್ ಅವರು ಪರಿಚಯಿಸಿದ್ದಾರೆ. ಫೆಬ್ರವರಿ 16ರಂದು ಧನಂಜಯ್ ಮದುವೆ ನಡೆಯಲಿದೆ. ಧನಂಜಯ್ ಅವರ ಮದುವೆ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆಗಳು ಎದುರಾಗುತ್ತಿದ್ದವು. ಮದುವೆ ಯಾವಾಗ ಎಂದು ಅವರನ್ನು ಕೇಳಲಾಗುತ್ತಿತ್ತು. ಇದೀಗ ಆ ಪ್ರಶ್ನೆಗೆ ಡಾಲಿ ಧನಂಜಯ ಕಡೆಯಿಂದ ಉತ್ತರ ಸಿಕ್ಕಿದೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋನ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಸ್ತ್ರೀರೋಗ ತಜ್ಞೆ ಆಗಿರುವ ಧನ್ಯತಾ, ಧನಂಜಯ್ಗೆ ಜೊತೆಯಾಗುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಮಧ್ಯೆ ಅನೇಕ ವರ್ಷಗಳ ಪರಿಚಯ ಇದ್ದು, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.…
ಲಕ್ಷ್ಮಿ ಪೂಜಾ,ದೀಪಾವಳಿ ಸೂರ್ಯೋದಯ: 06:18, ಸೂರ್ಯಾಸ್ತ : 05:40 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ ಋತು, ಅಶ್ವಿನಿ ಮಾಸ, ತಿಥಿ: ಅಮಾವಾಸ್ಯೆ ನಕ್ಷತ್ರ: ಸ್ವಾತಿ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಸಂ.5:42 ನಿಂದ ರಾ 7:29 ತನಕ ಅಭಿಜಿತ್ ಮುಹುರ್ತ: ಬೆ.11:36 ನಿಂದ ಮ.12:22 ತನಕ ಮೇಷ ರಾಶಿ ಅಡುಗೆ ಗುತ್ತಿಗೆದಾರರಿಗೆ ಧನಲಾಭ, ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ವಾಹನ ಚಾಲನೆ ಜಾಗೃತಿ ವಹಿಸಿ,ಮೊದಲನೇ ಬಾರಿ ಗರ್ಭಿಣಿಯಾದ ಹೆಣ್ಣುಮಕ್ಕಳು ಎಚ್ಚರದಿಂದಿರಬೇಕು, ಇವರಿಗೆ ಕುಟುಂಬ ವರ್ಗದಿಂದ ಕಾಳಜಿ ಮಾಡುವುದು ಉತ್ತಮ, ವಿಶ್ರಾಂತಿ ಅವಶ್ಯಕವಾಗಿದೆ, ವಿಚ್ಛೇದನ ಪಡೆದ ಮತ್ತು ವಿಧವಾ ಎರಡನೇ ಮದುವೆ ಚರ್ಚೆ ನಡೆಯಲಿದೆ, ಕೆಲವರಿಗೆ ಅತ್ತೆ ಮತ್ತು…
ವಿಜಯಪುರ: ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದೆ. ಈ ಮಧ್ಯೆ ವಕ್ಫ್ ಬೋರ್ಡ್‌ನಿಂದ ಭಾರತೀಯರಿಗೆ ಅನ್ಯಾಯವಾಗುತ್ತಿದ್ದು, ವಕ್ಫ್ ಆಸ್ತಿಯನ್ನ ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸುವಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವಕ್ಫ್ ಬೋರ್ಡ್‌ನಿಂದಾಗಿ ಜಮೀನು ಮಾಲಿಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲಿಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್ಫ್ ಆಕ್ರಮಿಸಿಕೊಳ್ಳುತ್ತದೆ. ವಕ್ಫ್ ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್ಫ್ ಬೋರ್ಡ್‌ಗೆ ಅನಿಯಂತ್ರಿತ, ಪರಿಮಿತ ಅಧಿಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ. ಧಾರವಾಡದ ಉಪ್ಪಿನಬೆಟಗೇರಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಎಂಬುವವರು ಕಳೆದ ವರ್ಷ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.
ಅಮರಾವತಿ: ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ವಿಶೇಷ ಪಟಾಕಿ-ಆನಿಯನ್ ಬಾಂಬ್‌ಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯ ದೇವಸ್ಥಾನದ ಬಳಿಯ ಗುಂಡಿಗೆ ಬೈಕ್ ಬಿಟ್ಟಿದ್ದಾರೆ. ಈ ವೇಳೆ ಬಾಂಬ್‌ಗಳು ಕೆಳಕ್ಕೆ ಬಿದ್ದು ಸ್ಫೋಟಗೊಂಡಿವೆ. ದೀಪಾವಳಿ ಹಿನ್ನೆಲೆ ಸಾಗಿಸುತ್ತಿದ್ದ ಬಾಂಬ್‌ಗಳು IED ಅಥವಾ ಸುಧಾರಿತ ಸ್ಫೋಟಕ ಸಾಧನದಂತೆಯೇ ಅದೇ ಸ್ಫೋಟಕ ಸಾಮರ್ಥ್ಯವನ್ನು ಹೊಂದಿತ್ತು. ದುರಂತದ ಸಿಸಿಟಿವಿ ದೃಶ್ಯಾವಳಿಯು, ಬಿಳಿ ಸ್ಕೂಟರ್‌ನಲ್ಲಿ ಇಬ್ಬರು ಪುರುಷರು ಕಿರಿದಾದ ರಸ್ತೆಯ ಮೂಲಕ ವೇಗದಲ್ಲಿ ಚಾಲನೆ ಮಾಡುವುದನ್ನು ತೋರಿಸಿದೆ. ರಸ್ತೆ ಅಗಲೀಕರಣಗೊಂಡು ಮುಖ್ಯರಸ್ತೆ ಸಂಧಿಸುವ ಹಂತಕ್ಕೆ ಬರುತ್ತಿದ್ದಂತೆ ಬೈಕ್ ಸ್ಫೋಟಗೊಂಡಿದೆ. ಜಂಕ್ಷನ್‌ನಲ್ಲಿ ಐದರಿಂದ ಆರು ಮಂದಿಯ ಸಣ್ಣ ಗುಂಪು ಇತ್ತು. ಸ್ಫೋಟದ ತೀವ್ರತೆಗೆ ಇಡೀ ಪ್ರದೇಶವು ಗಾಢ ಬೂದು ಹೊಗೆಯಿಂದ ಆವೃತವಾಗಿತ್ತು. ಸ್ಫೋಟದಿಂದ ಹೇಗೋ ಬದುಕುಳಿದ ಇಬ್ಬರು, ಸುರಕ್ಷಿತವಾಗಿ ಓಡಿ ಬಂದರು. ಬೈಕಿನ ಭಾಗಗಳು ಮತ್ತು ಮೃತನ ದೇಹದ ಭಾಗಗಳು ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಕಂಡುಬಂದಿದೆ.…
ನವದೆಹಲಿ: 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ನಾಡಿನಾದ್ಯಂತ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದೆ. ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದೆ. ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನತೆ ಸದಾ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಹೇಳಿದ್ದಾರೆ. ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ 50 ಮಹಿಳಾ ಸಾಧಕರು, 50 ಪುರುಷ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಕೂಡ ಈ ಬಾರಿ ಘೋಷಣೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದನ್ನು ಒಳಗೊಂಡಿದೆ