ಮಹಿಳೆಯರಿಗೆ ತಾಲಿಬಾನ್ ಸರ್ಕಾರ ಈಗಾಗಲೇ ಸಾಕಷ್ಟು ನಿಷೇಧ ಹೇರಿದೆ. ಶಿಕ್ಷಣ, ಉದ್ಯೋಗ, ಉಡುಗೆ-ತೊಡುಗೆಯೂ ಸೇರಿ ಈಗಾಗಲೇ ಸ್ತ್ರೀಯರ ಬಹುತೇಕ ಸ್ವಾತಂತ್ರ್ಯ ಕಸಿದಿರುವ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಇದೀಗ, ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಎದುರು ಜೋರಾಗಿ ಕುರಾನ್ ಪಠಿಸಬಾರದು. ಸುಶ್ರಾವ್ಯವಾಗಿ ಅಜಾನ್ ಹೇಳಬಾರದು ಎಂದು ನಿಷೇಧ ಹೇರಿದೆ. ಈ ಮೂಲಕ ಮಹಿಳೆಯರು ಸಂಗೀತವನ್ನು ಆಸ್ವಾದಿಸದಂತೆ ಖಾತರಿ ಪಡಿಸಿಕೊಳ್ಳಲಾಗುವುದು ಎಂದು ಹೇಳಿಕೊಂಡಿದೆ. ಹೊಸ ತಾಕೀತಿನ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಮಾತನಾಡಿದ್ದು, “ಇಸ್ಲಾಂನಲ್ಲಿ ಮಹಿಳೆಯರ ಧ್ವನಿಯನ್ನು “ಅವ್ರಾ’ (ಗೌಪ್ಯ) ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಧ್ವನಿ ಎತ್ತರಿಸುವಂತಿಲ್ಲ. ಜತೆಗೆ ತಕಿರ್ (ಅಲ್ಲಾ ಹು ಅಕ್ಬರ್) ಅಥವಾ ಅಜಾನ್ ಅನ್ನು ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆ ಮುಂದೆ ಜೋರಾಗಿ ಪಠಿಸಿದರೆ ಸುಶ್ರಾವ್ಯವಾಗಿ ಹಾಡುವುದು ಅಭ್ಯಾಸವಾಗಿಬಿಡುತ್ತದೆ. ಮಹಿಳೆಯರ ಧ್ವನಿಯು ಅವ್ರಾ ಆದ ಕಾರಣ ಇದು ನಿಷಿದ್ಧ. ಹಾಗಾಗಿ ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆಯ ಮುಂದೆ ಜೋರಾಗಿ ಕುರಾನ್ ಪಠಿಸುವುದು, ಪ್ರಾರ್ಥಿಸುವು…
Author: Prajatv Kannada
ತಮ್ಮ ಬೆಂಬಲಿಗರನ್ನು ‘ಕಸ’ಕ್ಕೆ ಹೋಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕಸದ ವಾಹನವನ್ನು ಚಲಾಯಿಸುವ ಮೂಲಕ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಭಾನುವಾರ ಟ್ರಂಪ್ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ್ದ ಹಾಲಿವುಡ್ ಹಾಸ್ಯನಟ ಟೋನಿ ಹಿಂಚ್‌ಕ್ಲಿಫ್, ಪೋಟೊ ರಿಕೊವನ್ನು ‘ತೇಲುವ ಕಸದ ದ್ವೀಪ’ ಎಂದು ಕರೆದಿದ್ದರು. ಅಲ್ಲದೇ ತಮ್ಮ ಭಾಷಣದುದ್ದಕ್ಕೂ ಲ್ಯಾಟಿನ್ ಅಮೆರಿಕನ್ನರು, ಯಹೂದಿಗಳು, ಪ್ಯಾಲೆಸ್ಟೀನಿಯರನ್ನು ಅವಹೇಳನ ಮಾಡಿದ್ದರು. ಜನಾಂಗೀಯ ನಿಂದನೆ ಮಾಡಿದ್ದ ಹಿಂಚ್‌ಕ್ಲಿಫ್ ಹೇಳಿಕೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಬೈಡನ್, ‘ನಾನು ಕಂಡ ಏಕೈಕ ತೇಲುತ್ತಿರುವ ಕಸವೆಂದರೆ ಅದು ಟ್ರಂಪ್ ಬೆಂಬಲಿಗರು’ ಎಂದು ಹೇಳಿದ್ದರು. ಬೈಡನ್ ಹೇಳಿಕೆ ಬೆನ್ನಲ್ಲೇ ಟ್ರಂಪ್ ಅವರು ಕಸದ ವಾಹನವನ್ನು ಚಲಾಯಿಸುತ್ತಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಉದ್ಯಮಿ ಮತ್ತು ರಿಪಬ್ಲಿಕ್ ಪಕ್ಷದ ಬೆಂಬಲಿಗ ವಿವೇಕ್ ರಾಮಸ್ವಾಮಿ, ‘ನಾವು ಕಸವಲ್ಲ… ಕಸವನ್ನು ತೆಗೆದು ಹಾಕುವವರು’ ಎಂದು ಬರೆದುಕೊಂಡಿದ್ದಾರೆ. ಅಮೆರಿಕದಲ್ಲಿ ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್…
ಚರ್ಚೆಯೊಂದರಲ್ಲಿ ಭಾಗಿಯಾಗಿದ್ದ ಬ್ರಿಟನ್ ಸಂಜಾತ ಅಮೆರಿಕ ಪತ್ರಕರ್ತ ಮೆಹ್ದಿ ಹಸನ್ ವಿರುದ್ಧ ವಂಚನೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದ ರಾಜಕೀಯ ವಕ್ತಾರ ರ್ಯಾನ್ ಜೇಮ್ಸ್ ಗಿರ್ಡುಸ್ಕಿ ಅವರನ್ನು ಸಿಎನ್‌ಎನ್ ಸುದ್ದಿ ಸಂಸ್ಥೆ ಶಾಶ್ವತವಾಗಿ ನಿಷೇಧಿಸಿದೆ. ಸೋಮವಾರ ರಾತ್ರಿ ನಡೆದ ‘NewsNight With Abby Phillip’ ಚರ್ಚಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಚರ್ಚಾ ಕಾರ್ಯಕ್ರಮದಲ್ಲಿ ಪತ್ರಕರ್ತ ಮೆಹ್ದಿ ಹಸನ್ ಅವರನ್ನು ಉದ್ದೇಶಿಸಿ ಗಿರ್ಡುಸ್ಕಿ, “ನಿಮ್ಮ ಹೃದಯ ಬಡಿತ ನಿಂತು ಹೋಗುವುದಿಲ್ಲ ಎಂದು ಆಶಿಸುತ್ತೇನೆ” ಎಂದು ವ್ಯಂಗ್ಯವಾಡಿದ್ದರು. ಲೆಬನಾನ್ ನಲ್ಲಿ ನಡೆಯುತ್ತಿರುವ ಸರಣಿ ಸ್ಫೋಟಗಳನ್ನು ಉಲ್ಲೇಖಿಸಿ ಅವರು ಅಂತಹ ಹೇಳಿಕೆ ನೀಡಿದ್ದರು. ಇತ್ತೀಚೆಗೆ ನಡೆದಿದ್ದ ಚುನಾವಣಾ ಸಮಾವೇಶವೊಂದರಲ್ಲಿ ಅಲ್ಪಸಂಖ್ಯಾತತರನ್ನುದ್ದೇಶಿಸಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಸುತ್ತ ಈ ಚರ್ಚಾ ಕಾರ್ಯಕ್ರಮ ನಡೆದಿತ್ತು. ನೂತನವಾಗಿ ಝೆಟಿಯೊ ಎಂಬ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿರುವ ಮೆಹ್ದಿ ಹಸನ್, ಸಮಾವೇಶದಲ್ಲಿ ಬಳಸಲಾಗಿದ್ದ ಅವಹೇಳನಕಾರಿ ಹೇಳಿಕೆಗಳನ್ನು ಟೀಕಿಸಿ, “ನಿಮ್ಮನ್ನು ನಾಝಿಗಳು ಎಂದು…
ಪೆಪ್ಸಿಕೋ ಸಂಸ್ಥೆ ಅಮೆರಿಕದಲ್ಲಿರುವ ತನ್ನ ನಾಲ್ಕು ಬಾಟ್ಲಿಂಗ್ ಯೂನಿಟ್ಗಳನ್ನು ಮುಚ್ಚಲು ನಿರ್ಧರಿಸಿದೆ. ಚಿಕಾಗೊ, ಸಿನ್ಸಿನಾಟಿ, ಪೆನ್ಸಿಲ್ವೇನಿಯಾ ಮತ್ತು ಅಟ್ಲಾಂಟಾದಲ್ಲಿರುವ ತನ್ನ ಬಾಟ್ಲಿಂಗ್ ಫ್ಯಾಕ್ಟರಿ ಬಂದ್ ಮಾಡಲು ನಿರ್ಧರಿಸಿದ್ದು ಇದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ತನ್ನ ಉತ್ಪನ್ನಗಳ ಮಾರಾಟ ಪ್ರಮಾಣ ಕಡಿಮೆ ಆಗಿರುವುದರಿಂದ ಈ ನಿರ್ಧಾರ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ. ಷೇರು ವಿನಿಮಯ ಕೇಂದ್ರಕ್ಕೆ ಪೆಪ್ಸಿಕೋ ನೀಡಿದ ಮಾಹಿತಿ ಪ್ರಕಾರ ಅಮೆರಿಕದ ಸಿನ್ಸಿನಾಟಿ, ಚಿಕಾಗೋ, ಪೆನ್ಸಿಲ್ವೇನಿಯಾ ಮತ್ತು ಅಟ್ಲಾಂಟಾದ ಬಾಟ್ಲಿಂಗ್ ಯೂನಿಟ್ಗಳು ಮುಚ್ಚಲ್ಪಡುತ್ತಿವೆ. ಸಿನ್ಸಿನಾಟಿಯಲ್ಲಿ 136 ಮಂದಿ, ಚಿಕಾಗೋದಲ್ಲಿ 131 ಮಂದಿ, ಪೆನ್ಸಿಲ್ವೇನಿಯಾದ ಹ್ಯಾರಿಸ್ಬರ್ಗ್ನಲ್ಲಿ 127 ಮಂದಿ ಹಾಗೂ ಅಟ್ಲಾಂಟಾದಲ್ಲಿ 45-50 ಮಂದಿಗೆ ಕೆಲಸ ಕಳೆದುಕೊಳ್ಳಲಿದ್ದಾರೆ. ಮುಚ್ಚಲಾಗುತ್ತಿರುವ ನಾಲ್ಕು ಘಟಕಗಳ ಪೈಕಿ ಚಿಕಾಗೋ ಯೂನಿಟ್ ಪೂರ್ಣವಾಗಿ ಬಂದ್ ಆಗುತ್ತದೆ. ಇನ್ನುಳಿದ ಮೂರು ಘಟಕಗಳಲ್ಲಿ ಬಾಟ್ಲಿಂಗ್ ಯೂನಿಟ್ ಮಾತ್ರವೇ ಮುಚ್ಚಲಾಗುತ್ತದೆ. ವೇರ್ಹೌಸ್, ಸೇಲ್ಸ್, ಡೆಲಿವರಿ ಸೇವೆಗಳು ಈ ಮೂರು ಕಡೆ ಮುಂದುವರಿಯಲಿವೆ ಎನ್ನಲಾಗಿದೆ. ಅಮೆರಿಕದ ನ್ಯೂಯಾರ್ಕ್ ಮೂಲದ ಪೆಪ್ಸಿಕೋ ಸಂಸ್ಥೆ ಅಮೆರಿಕದಲ್ಲಿ 75ಕ್ಕೂ…
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 5 ತಿಂಗಳ ಬಳಿಕ ದರ್ಶನ್ ರಿಲೀಸ್ ಆಗಿದ್ದು, ಅಭಿಮಾನಿಗಳು ಹಾಗೂ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಂತಾಗಿದೆ. https://youtu.be/uEB-Inlr9cI?si=5gd3dm1vXwoUIocT ಷರತ್ತುಬದ್ಧ ಜಾಮೀನು ಸಿಕ್ಕಿರುವ ಹಿನ್ನೆಲೆ, ದರ್ಶನ್ ಮೇಲೆ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಕೊಲೆ ಆರೋಪಿ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ರೂ ನೆಮ್ಮದಿಯಿಂದ ಇರವುದಕ್ಕೆ ಸಾಧ್ಯವಾದಂತೆ ಕಾಣುತ್ತಿಲ್ಲ. ಕಾರಣ ದರ್ಶನ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ದರ್ಶನ್‌ನ ಪ್ರತಿಯೊಂದು ಚಲನವಲನದ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಸದ್ಯ ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸದಲ್ಲಿ ಬೀಡುಬಿಟ್ಟಿರುವ ನಟ ದರ್ಶನ್ ಇಂದು ಮಗ ವಿನೀಶ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಇಂದು ಮದ್ಯಾಹ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 5 ತಿಂಗಳ ಬಳಿಕ ದರ್ಶನ್ ಜಾಮೀನ ಮೇಲೆ ಹೊರ ಬಂದಿದ್ದಾರೆ. ಹೀಗಾಗಿ ಸಹಜವಾಗಿ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. https://youtu.be/XfOqZtTf1tc?si=du0-tLGC5rhLyZku ಒಂದೆಡೆ ದರ್ಶನ್ ರಿಲೀಸ್ ಆಗುತ್ತಿದ್ದಂತೆ ಹೆಂಡ್ತಿ ಮನೆಗೆ ಬಂದಿದ್ದಾರೆ. ವಿಶೇಷ ಅಂದ್ರೆ ಇಂದು ಮಗ ವಿನೀಶ್ ಜನ್ಮದಿನ. ಈ ವಿಶೇಷ ದಿನಕ್ಕೆ ಸರಿಯಾಗಿ ಅವರು ಮನೆಗೆ ಬಂದಿದ್ದಾರೆ. ಬಳ್ಳಾರಿಯಿಂದ ಕಾರಿನಲ್ಲಿ ಪತ್ನಿ ಜೊತೆ ಹೊಸಕೆರೆಹಳ್ಳಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ದರ್ಶನ್ ಅವರನ್ನು ನೋಡಲು ಫ್ಯಾನ್ಸ್ ನೆರೆದಿದ್ದರು. ಅವರಿಂದ ತಪ್ಪಿಸಿಕೊಂಡು ದರ್ಶನ್ ಮನೆ ಸೇರಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ದರ್ಶನ್ ಮನೆಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ ಮಗ ವಿನೀಶ್ಗೆ ಇಂದು ಜನ್ಮದಿನ. ಹೀಗಾಗಿ, ರಾತ್ರಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಮಗನ ಜೊತೆಯೇ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಬಳಿಕ ಊಟ ಮಾಡಿ ವಿಶ್ರಾಂತಿ ಪಡೆದಿದ್ದಾರೆ. ಹಲವು ತಿಂಗಳ ಬಳಿಕ ಬೆಡ್ನಲ್ಲಿ ಅವರು ಹಾಯಾಗಿ ನಿದ್ರಿಸಿದ್ದಾರೆ. ಈ…
ನವದೆಹಲಿ: ಕೇಂದ್ರ ಸರ್ಕಾರ ಜನರಿಗೆ ದೀಪಾವಳಿ ಗಿಫ್ಟ್ ನೀಡಿದೆ. ಬೆಲೆ ಏರಿಕೆಯ ಬಿಸಿ ತಡೆಯಲು, ಮತ್ತೊಮ್ಮೆ ಭಾರತ್ ಬ್ರಾಂಡ್-2.0 ಅನ್ನು ಆರಂಭಿಸಲಾಗಿದೆ. ಲೋಕಸಭೆ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಭಾರತ್ ಬ್ರ್ಯಾಂಡ್ ಅಕ್ಕಿ ಜೊತೆ ಮೂರು ಧಾನ್ಯಗಳು ಬೆಂಗಳೂರಲ್ಲಿ ಇಂದಿನಿಂದ ಜನರಿಗೆ ಸಿಗಲಿವೆ. https://youtu.be/XfOqZtTf1tc?si=g-uJaoJEI7OJlEEN ಇತ್ತೀಚಿನ ದಿನಗಳಲ್ಲಿ ದಿನಸಿ, ಧಾನ್ಯ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಈ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಹಿಂದೆ ಭಾರತ್ ಬ್ರ‍್ಯಾಂಡ್ ಅಡಿಯಲ್ಲಿ ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡಿತ್ತು ಆದರೆ ಲೋಕಸಭಾ ಚುನಾವಣೆ ನೀತಿಸಂಹಿತೆ ಹಿನ್ನೆಲೆ, ಸ್ಥಗಿತಗೊಂಡಿದ್ದ ಭಾರತ್ ಬ್ರಾಂಡ್ 2.0ವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಹಾಗೂ ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಆರಂಭಿಸಿದೆ. ಇದರ ಭಾಗವಾಗಿ ಇಂದಿನಿಂದ ಭಾರತ್ ಬ್ರ‍್ಯಾಂಡ್ ಅಡಿಯಲ್ಲಿ ಅಕ್ಕಿ, ಗೋಧಿಹಿಟ್ಟು, ಕಡಲೆಬೇಳೆ, ಹೆಸರು ಬೇಳೆಯನ್ನು ಮಾರಾಟ ಮಾಡಲು ಮುಂದಾಗಿದೆ. ಈ ಹಿಂದೆ…
ರೈತರ ಭೂಮಿಯನ್ನ ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಹರಿಹಾಯ್ತಿದ್ರೆ. ಅತ್ತ ಕಾಂಗ್ರೆಸ್ ಕೂಡಾ ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ದಾಖಲೆಯನ್ನ ಬಿಟ್ಟು ತಿರುಗೇಟು ಕೊಟ್ಟಿದೆ. https://youtu.be/7eNKXn685UI?si=EMLFCArclhi7Cd-d ಈ ಮಧ್ಯೆ ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪುತ್ರ ಬಸವ ಪ್ರಸಾದ್ ಜೊಲ್ಲೆ ಮಾಲೀಕತ್ವದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಯಕ್ಸಂಬಾ ಪಟ್ಟಣದಲ್ಲಿರುವ ಜೊಲ್ಲೆ ಮಾಲೀಕತ್ವದ 3 ಎಕರೆಗಿಂತಲೂ ಹೆಚ್ಚಿನ ಜಮೀನಿನ ಮೇಲೆ ವಕ್ಫ್ ಕಣ್ಣು ಹಾಕಿದೆ. ಇಷ್ಟೇ ಅಲ್ಲದೇ ಯಕ್ಸಂಬಾ ಪಟ್ಟಣದ ಜೊಲ್ಲೆ ಕುಟುಂಬದ ಹಲವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದಕ್ಕೂ ಮೊದಲು ವಿಜಯಪುರದಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿತ್ತು. ಜಿಲ್ಲಾ ಉಸ್ತುವಾರಿ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಐದು ತಿಂಗಳ ಬಳಿಕ ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿದ್ದಾರೆ. ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿದೆ. 5 ತಿಂಗಳ ಜೈಲುವಾಸದ ಬಳಿಕ ಮನೆಗೆ ಬಂದಿರುವ ಮಗನನ್ನು ನೋಡಲು ಮೀನಾ ತೂಗುದೀಪ ರಾಜ ರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಗೆ ಆಗಮಿಸಿದ್ದಾರೆ. ವಿಜಯಲಕ್ಷ್ಮಿ ನೆಲೆಸಿರುವ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಮೊಮ್ಮಗ ಚಂದನ್ ಜೊತೆ ಮಗನನ್ನು ನೋಡಲು ಆಗಮಿಸಿದ್ದಾರೆ. ದೀಪಾವಳಿ ಹಬ್ಬ, ಮೊಮ್ಮಗ ವಿನೀಶ್ ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಮಗ ದರ್ಶನ್‌ನನ್ನು ನೋಡಿ ಮೀನಾ ಖುಷಿಪಟ್ಟಿದ್ದಾರೆ. ಇದೇ ವೇಳೆ, ಅಪಾರ್ಟ್‌ಮೆಂಟ್ ಬಳಿ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಕ್ಟೋಬರ್ 30ರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ತಂಡದ ಜೊತೆ ಮಹತ್ವದ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈಗ ಹೈಕೋರ್ಟ್ ನೀಡಿರುವ ಆದೇಶವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಸೋಮವಾರ (ಅಕ್ಟೋಬರ್ 4) ಕಾನೂನು ತಜ್ಞರ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದ ನಟ ದರ್ಶನ್ ಐದು ತಿಂಗಳ ಬಳಿಕ ಹೊರ ಬಂದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಒಂದೂವರೆ ತಿಂಗಳು ಜಾಮೀನು ನೀಡಲಾಗಿದೆ. ದರ್ಶನ್ ಅವರು ಈಗ ಕೆಲವರ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಅವರು ಕ್ಷಮೆ ಕೇಳಿದ್ದು ಯಾರ ಬಳಿ ಎಂಬುದಕ್ಕೆ ಉತ್ತರ ಇಲ್ಲಿದೆ. ದರ್ಶನ್ ಅವರು ರೇಣುಕಾ ಸ್ವಾನಿ ಕೊಲೆ ಕೇಸ್ನಲ್ಲಿ ಜೂನ್ 11ರಂದು ಅರೆಸ್ಟ್ ಆದರು. ಈ ಅವಧಿಯಲ್ಲಿ ದರ್ಶನ್ ಅವರು ಸಾಕಷ್ಟು ಕುಗ್ಗಿದ್ದಾರೆ. ಬೆಂಗಳೂರು ಜೈಲಿನಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದ ಅವರಿಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಸಮಸ್ಯೆ ಆದವು. ಬೆನ್ನು ನೋವು ಬಿಟ್ಟು ಬಿಡದೆ ಕಾಡುತ್ತಿದೆ. ಇದರಿಂದ ಮುಕ್ತಿ ಪಡೆಯಲು ದರ್ಶನ್ ಎರಡು ವಾರ ಜಾಮೀನು ಪಡೆದು ಬಂದಿದ್ದಾರೆ. ಚಿಕಿತ್ಸೆಯ ಬಳಿಕ ಮತ್ತೆ ಜೈಲು ಸೇರುವುದು ಅನಿವಾರ್ಯವಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಎರಡು ತಿಂಗಳು ಇದ್ದರು. ಈಗ ದರ್ಶನ್ ಅವರು ಜೈಲಿನಲ್ಲಿದ್ದ ಸಿಬ್ಬಂದಿಗೆ ಕ್ಷಮೆ ಕೇಳಿದ್ದಾರೆ. ‘ನನ್ನಿಂದ ಏನಾದರೂ…