Author: Prajatv Kannada

ಇಂಗ್ಲೆಂಡಿನ ರಾಜ ಕಿಂಗ್ ಚಾರ್ಲ್ಸ್ 3 ಅವರು ಬೆಂಗಳೂರಿಗೆ ರಹಸ್ಯ ಭೇಟಿ ನೀಡಿದ್ದಾರೆ. ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಮೇ 6, 2023ರಂದು ಇಂಗ್ಲೆಂಡಿನ ರಾಜರಾಗಿ ಪಟ್ಟಾಭಿಷೇಕ ಮಾಡಿಕೊಂಡ ನಂತರ ಕಿಂಗ್ ಚಾರ್ಲ್ಸ್ 3 ಅವರು ಬೆಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಪ್ರಕೃತಿ ಚಿಕಿತ್ಸೆ ಪಡೆಯುವುದಕ್ಕಾಗಿ ಅಕ್ಟೋಬರ್ 27 ರಂದು ಬೆಂಗಳೂರಿಗೆ ಆಗಮಿಸಿದ್ದ ಕಿಂಗ್ ಚಾರ್ಲ್ಸ್ 3 ಅಂದು ರಾತ್ರಿಯವರೆಗೆ ವೈಟ್‌ಫೀಲ್ಡ್‌ನಲ್ಲಿರುವ ಸೌಖ್ಯ ಇಂಟರ್‌ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅಕ್ಟೋಬರ್ 21ರಿಂದ 26 ರವರೆಗೆ 2024 ರ ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿದ ಕಿಂಗ್ ಚಾರ್ಲ್ಸ್ ಸಮೋವಾದಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿಗೆ ಅವರ ಆಗಮನವನ್ನು ರಹಸ್ಯವಾಗಿ ಇಡಲಾಗಿತ್ತು. ಅವರನ್ನು ನೇರವಾಗಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದು, ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಕೂಡ ಜೊತೆಯಲ್ಲಿದ್ದರು. ಯೋಗ, ಧ್ಯಾನ ಮೂಲಕ ಕಿಂಗ್ ಚಾರ್ಲ್ಸ್ 3 ದಂಪತಿ ದಿನಚರಿ ಆರಂಭಿಸಿದ್ದಾರೆ. ನಂತರ ಉಪಹಾರ ಮತ್ತು ಊಟ ಮಾಡುತ್ತಾರೆ.…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಬೆಳ್ಳಂ ಬೆಳಗ್ಗೆ ಕೂಲ್ ವಾತಾವರಣ ಇದ್ದು, ಸಿಲಿಕಾನ್ ಸಿಟಿ ಫುಲ್ ಥಂಡಾ ಥಂಡಾ ಹೊಡೆದಿದೆ. ನಗರದ ಬಹುತೇಕ ಭಾಗದಲ್ಲಿ ಫುಲ್ ಕೂಲ್ ವೆದರ್ ಉಂಟಾಗಿದೆ. ಮಧ್ಯಾಹ್ನದ ಬಳಿಕ ಮಳೆ ಸಾಧ್ಯತೆ ಇದೆ. ಇನ್ನೂ ಮುಂದಿನ ಮೂರು ದಿನಗಳ ಕಾಳ ಮಳೆ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆ, ಉತ್ತರಕನ್ನಡ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ.ಈ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮಳೆ ಆಗಲಿದೆ.

Read More

ಚನ್ನಪಟ್ಟಣ (ಅ.30:) ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆಯ ಮಾಜಿ ಸದಸ್ಯರು, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಮನಗರ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಸೈಯದ್ ಅಸ್ಗರ್ ಹಲಿರವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಚನ್ನಪಟ್ಟಣದ ಯರಬ್ ನಗರದಲ್ಲಿರುವ ಹಲಿರವರ ನಿವಾಸದಲ್ಲಿ ಬುಧವಾರ ಬೆಳಗ್ಗೆ ಕೇಂದ್ರ ಸಚಿವರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ಜೆಡಿಎಸ್ ಪಕ್ಷದ ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ ಸುರೇಶ್ ಬಾಬು, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕರಾದ ಮಾಗಡಿ ಮಂಜುನಾಥ ಸೇರಿದಂತೆ ಅನೇಕರಿದ್ದರು.

Read More

ನರಕ ಚತುರ್ದಶಿ ಸೂರ್ಯೋದಯ: 06:18, ಸೂರ್ಯಾಸ್ತ : 05:41 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ ಋತು, ಅಶ್ವಿನಿ ಮಾಸ, ತಿಥಿ: ಚತುರ್ದಶಿ ನಕ್ಷತ್ರ: ಚಿತ್ತ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಸಂ.5:32 ನಿಂದ రా.7:20 ತನಕ ಅಭಿಜಿತ್ ಮುಹುರ್ತ: ಬೆ.11:36 ನಿಂದ ಮ.12:22 ತನಕ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಈ ರಾಶಿಯವರಿಗೆ ಅಧಿಕಾರ ಸಂಪತ್ತು ತಾನಾಗಿಯೇ ಸಿಗಲಿದೆ, ಉದ್ಯೋಗದಲ್ಲಿ ಸಮಸ್ಯೆ ದಿಂದ ಉದ್ಯೋಗ ಬಿಡುವ ಸಾಧ್ಯತೆ, ಈ ದಿನ ನಿಮಗೆ ಸಂಬಂಧಿಗಳಿಂದ ಕುತಂತ್ರ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಮಾನಸಿಕ ವೇದನೆ ಕಡಿಮೆ ಆಗಲಿದೆ. ಮಾತಿನ ಮೇಲೆ ನಿಗಾವಿರಲಿ.ಈ ದಿನ ಗೌರವಕ್ಕೆ…

Read More

ಹಸಿ ಹಾಲು ಕುಡಿಯುವ ಜನತೆಗೆ ಬಿಗ್ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಹಸು ಹಾಲು ಕುಡಿದ್ರೆ ಮಾರಣಾಂತಿಕ ಕಾಯಿಲೆ ತುತ್ತಾಗಬಹುದು ಎಂಬ ವರದಿ ಆಗಿದೆ ಇತ್ತೀಚೆಗೆ, ಕೇರಳ ಮೂಲದ ಹೆಪಟಾಲಜಿಸ್ಟ್ ಒಬ್ಬರು ಹಸಿ ಹಾಲಿನ ಸೇವನೆಯಿಂದ ಉಂಟಾಗಬಹುದಾದ ಗಂಭೀರ ಸೋಂಕುಗಳನ್ನು ಎತ್ತಿ ತೋರಿಸಿದ್ದಾರೆ. ಹಸಿ ಹಾಲಿನಲ್ಲಿ ಇ.ಕೋಲಿ, ಕ್ಯಾಂಪಿಲೋಬ್ಯಾಕ್ಟರ್, ಯೆರ್ಸಿನಿಯಾ, ಬ್ರೂಸೆಲ್ಲಾ, ಕಾಕ್ಸಿಯೆಲ್ಲಾ ಮತ್ತು ಲಿಸ್ಟೇರಿಯಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಬ್ಯಾಕ್ಟೀರಿಯಾಗಳು ಮೆದುಳು ಮತ್ತು ಹೃದಯದ ಮೇಲೆ ದಾಳಿ ಮಾಡುವ, ರೋಗಗ್ರಸ್ತವಾಗುವಿಕೆಗಳು ಮತ್ತು ಸಾವಿಗೆ ಕಾರಣವಾಗುವ” ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ವೈದ್ಯರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಹಸಿ ಹಾಲಿನ ಪರಿಣಾಮಗಳ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ, ಸಾವಿರಾರು ಪ್ರತಿಕ್ರಿಯೆ ಬಂದಿವೆ. ಪಂಜಾಬ್‌ನ ಮಹಿಳೆಯೊಬ್ಬರು ಮಗುವಿಗೆ ಬಕೆಟ್‌ನಿಂದ ಹಸಿ ಹಾಲನ್ನು ನೀಡುವ ವೀಡಿಯೊವನ್ನು ಹಂಚಿಕೊಂಡಿರುವ ವೈದ್ಯರು, “ದಯವಿಟ್ಟು ನಿಮ್ಮ ಮಕ್ಕಳಿಗೆ ಹಸಿ ಹಾಲನ್ನು ಕುಡಿಸಬೇಡಿ. ನಮ್ಮ…

Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸಾಕ್ಸ್‌ ಧರಿಸದೇ ಶೂ ಧರಿಸುತ್ತಿರುವುದನ್ನು ನೀವು ನೋಡಿರಬಹುದು. ಸಣ್ಣ ಸಾಕ್ಸ್‌ ಧರಿಸುವುವ ಫ್ಯಾಶನ್‌ ಬಂದು ಹಲವು ವರ್ಷಗಳೇ ಆಗಿದ್ದವು ಆದರೆ ಈಗ ಸಾಕ್ಸ್‌ ಇಲ್ಲದೆ ಶೂ ಧರಿಸುವ ಟ್ರೆಂಡ್‌ ಕೂಡಾ ಬಂದಿದೆ. ಆದರೆ ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಮತ್ತು ಇದು ಪಾದಗಳಲ್ಲಿ ಮಾತ್ರವಲ್ಲದೆ ದೇಹಕ್ಕೂ ಹಲವಾರು ರೋಗಗಳನ್ನು ಉಂಟುಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ರಕ್ತ ಪರಿಚಲನೆ ಸಮಸ್ಯೆ ಸಾಕ್ಸ್ ಧರಿಸದೆ ಬೂಟುಗಳನ್ನು ಧರಿಸುವುದರಿಂದ ನಿಮ್ಮ ಪಾದಗಳಿಗೆ ಹಾನಿಯಾಗುವ ಅಪಾಯವನ್ನು ಉಂಟುಮಾಡುತ್ತದೆ, ಆದರೆ ಇದು ದೇಹದಲ್ಲಿ ರಕ್ತ ಪರಿಚಲನೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಸಾಕ್ಸ್ ಧರಿಸದೆ ಬೂಟುಗಳನ್ನು ಧರಿಸುವುದರಿಂದ ಪಾದಗಳ ಭಾಗಗಳ ಮೇಲೆ ಹೆಚ್ಚಿನ ಒತ್ತಡವನ್ನು ಅನುಭವಿಸಬಹುದು, ಈ ಸಂದರ್ಭದಲ್ಲಿ ರಕ್ತ ಪರಿಚಲನೆಯು ಪರಿಣಾಮ ಬೀರಬಹುದು. ಫಲಿತಾಂಶ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅಲರ್ಜಿ ಸಮಸ್ಯೆ ಸಾಕ್ಸ್ ಧರಿಸದೆ ಬೂಟುಗಳನ್ನು ಧರಿಸುವ ಜನರು ಪಾದದ ಅಲರ್ಜಿಯ ಸಮಸ್ಯೆಗಳನ್ನು ಹೊಂದಿರಬಹುದು.…

Read More

17 ವರ್ಷದ ಹುಡುಗಿ ಹುಚ್ಚಾಟಕ್ಕೆ 20 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿರುವ ಘಟನೆ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ನಡೆದಿದೆ. ಈ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲ ಎಂದಾಗ ಪುರುಷರನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದಳು. ಆಕೆ ಆಮಿಷಕ್ಕೆ ಮರುಳಾಗುವ ಹುಡುಗ್ರು ಈಗ ಪರಿತಪಿಸುವಂತಾಗಿದೆ. ಹುಡುಗಿ ಐದು ತಿಂಗಳಲ್ಲಿ ಅನೇಕ ಪುರುಷರ ಸಂಪರ್ಕಕ್ಕೆ ಬಂದಿದ್ದಾಳೆ. ಅದ್ರಲ್ಲಿ ಕೆಲವರು ವಿವಾಹಿತರು. ಹಾಗಾಗಿ ಅವರ ಪತ್ನಿಯರಿಗೂ ಎಚ್ ಐವಿ ಸೋಂಕು ತಗುಲಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರದಿಂದಿರುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಆಕೆ ಬಡ ಕುಟುಂಬಕ್ಕೆ ಸೇರಿದ ಹುಡುಗಿ ಎಂಬುದು ಪತ್ತೆಯಾಗಿದೆ. ಹಣಕ್ಕಾಗಿ ಆಕೆ ಮಾಡ್ತಿದ್ದ ಕೆಲಸವನ್ನು ಸಮಾಲೋಚಕರ ಮುಂದೆ ಹೇಳಿದ್ದಾಳೆ. ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂಬುದು ಆಕೆ ಸಂಪರ್ಕಕ್ಕೆ ಬಂದ ಜನರಿಗೆ ತಿಳಿದಿರಲಿಲ್ಲ. ಆದ್ರೆ ಆಕೆ ಹೆಸರು ಬಹಿರಂಗವಾಗ್ತಿದ್ದಂತೆ ಸಂಪರ್ಕಕ್ಕೆ ಬಂದವರು ಆಘಾತಕ್ಕೊಳಗಾಗಿದ್ದರು. ಪರೀಕ್ಷೆಗೆ ಮುಂದಾದಾಗ ಎಚ್ ಐವಿ ಪಾಸಿಟಿವ್ ಆಗಿರೋದು ಅವರಿಗೆ ತಿಳಿದಿದೆ. ರಾಮನಗರದಲ್ಲಿ…

Read More

ದೀಪಾವಳಿಯ ಮೊದಲ ದಿನ ನರಕ ಚತುರ್ದಶಿಯನ್ನು ಆಚರಣೆ ಮಾಡಲಾಗುತ್ತದೆ. ಇದನ್ನು ಕೆಲವರು ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಹಿಂದೂ ಪುರಾಣಗಳಲ್ಲಿ ಬಲಿ ಚಕ್ರವರ್ತಿ ಎಂದು ಕರೆಯಲ್ಪಡುವ ರಾಜನಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ. ನರಕ ಚತುರ್ದಶಿ ಯಾವಾಗ?: ಪಂಚಾಂಗದ ಪ್ರಕಾರ, ಅಶ್ವಯುಜ ಮಹಾ ಚತುರ್ದಶಿ ತಿಥಿ ಅಕ್ಟೋಬರ್ 30ರಂದು ಮಧ್ಯಾಹ್ನ 1:15ಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 31ರಂದು 3.52ಕ್ಕೆ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಹಬ್ಬಗಳನ್ನು ಸೂರ್ಯೋದಯದ ತಿಥಿಯ ಆಧಾರದ ಮೇಲೆ ಆಚರಿಸಲಾಗುತ್ತದೆ. ನರಕ ಚತುರ್ದಶಿಯನ್ನು ಅಕ್ಟೋಬರ್ 31ರ ಗುರುವಾರ ಆಚರಿಸಬೇಕೆಂದು ಪಂಚಾಂಗಗಳು ಸೂಚಿಸುತ್ತವೆ. ಪೂಜೆಗೆ ಮಂಗಳಕರ ಸಮಯ: ನರಕ ಚತುರ್ದಶಿಯಂದು ಪೂಜೆಗೆ ಬೆಳಿಗ್ಗೆ 5ರಿಂದ 9ರವರೆಗೆ ಮತ್ತು ನಂತರ 11ರಿಂದ ಮಧ್ಯಾಹ್ನ 1ರವರೆಗೆ ಪೂಜೆಗೆ ಶುಭ ಸಮಯ. ಪೂಜೆಯ ವಿಧಾನ: ಸೂರ್ಯೋದಯಕ್ಕೂ ಮುನ್ನ ಎದ್ದು ಎಳ್ಳೆಣ್ಣೆಯಿಂದ ತಲೆ ಸ್ನಾನ ಮಾಡಬೇಕು. ಮನೆಯ ಮುಂದೆ ರಂಗೋಲಿ ಬಿಡಿಸಬೇಕು. ಮನೆ ಬಾಗಿಲಿಗೆ ಮಾವಿನ ತೋರಣ ಮತ್ತು ಮಾಲೆಗಳಿಂದ ಅಲಂಕರಿಸಬೇಕು. ಹೊಸ ಬಟ್ಟೆ ಧರಿಸಿ. ಈ ದಿನ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಮಾರಾಟ ಜೋರಾಗಿದ್ದು, ವ್ಯಾಪಾರಿಗಳು ಖುಷ್ ಆಗಿದ್ದಾರೆ. https://youtu.be/uEB-Inlr9cI?si=kUeokX6CV6YH-aet ಚಾಮರಾಜಪೇಟೆ ಸೇರಿ ಹಲವೆಡೆ ಮೈದಾನಗಳಲ್ಲಿ ಪಟಾಕಿ ಸ್ಟಾಲ್​ಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದೆ. ಮೊದಲ ದಿನವಾದ್ದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಇದ್ದರೂ ಕೂಡ ಹಾಕಿರುವ ಬಂಡವಾಳಕ್ಕೆ ತಕ್ಕ ವ್ಯಾಪಾರ ಆಗುತ್ತಿರುವುದಕ್ಕೆ ವ್ಯಾಪಾರಿಗಳು ಖುಷಿಯಾಗಿದ್ದಾರೆ. ಇನ್ನು ಹಸಿರು ಪಟಾಕಿಗಳ ಮಾರಾಟ ಮಾಡಲು ಮಾತ್ರ ಅವಕಾಶ ಕೊಟ್ಟಿರುವುದರಿಂದ ಪೊಲೀಸರು ನೀಡಿರುವ ಮಾರ್ಗಸೂಚಿಯಂತೆಯೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪಟಾಕಿ ವ್ಯಾಪಾರ ನಡೆಸಲಾಗುತ್ತಿದೆ ಇನ್ನು ಬಗೆ ಬಗೆಯ ಗ್ರೀನ್ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸೂರಿನಿಂದ ಬಂದಿರುವ ಪಟ್ ಪಟ್ ಪಟಾಕಿಗಳು ಗ್ರಾಹಕರ ಗಮನಸೆಳೆಯುತ್ತಿವೆ. ಗ್ರೀನ್ ಪಟಾಕಿಗೆ ಮಾತ್ರ ಮಾರಾಟಕ್ಕೆ ಅವಕಾಶ ಇರುವುದರಿಂದ ಢಂ ಢಂ ಅಂತಾ ಸದ್ದುಮಾಡುವ ದೊಡ್ಡ ದೊಡ್ಡ ಪಟಾಕಿಗಳಿಗೆ ಹುಡುಕಾಡುವ ಜನರಿಗೆ ಸ್ವಲ್ಪ ಬೇಸರವಾಗಿದೆ. ಅತ್ತ ಪಟಾಕಿಗಳ ಬೆಲೆ ಏರಿಕೆಯಾಗಿರುವುದು ಕೂಡ ಗ್ರಾಹಕರನ್ನು ನಿರಾಸೆಗೊಳಿಸಿದೆ. ಸದ್ಯ ಇಂದಿನಿಂದ ದೀಪಾವಳಿಯ ಆಚರಣೆ ಶುರುವಾಗಿದ್ದು, ಹಬ್ಬವನ್ನು ದೀಪಗಳ ಜೊತೆ ರಂಗೇರಿಸಲು ಪಟಾಕಿಗಳು ಕೂಡ ಸಜ್ಜಾಗಿವೆ

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ ಪ್ರಕರಣ ದಂಪತಿಯನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಮಗು ಚೀರಾಟ ನೋಡಿದ್ರೆ ನಿಜಕ್ಕೂ ಕರಳು ಹಿಂಡುತ್ತೆ. https://youtu.be/otAsatb5nug?si=G2gNdQLrjb3WuKHB ಎಸ್, ಬೆಂಗಳೂರಿನ ಕಸವನಹಳ್ಳಿ ಅಮೃತ ಕಾಲೇಜು ಬಳಿ ರೋಡ್ ರೇಜ್ ಪ್ರಕರಣ ಕಂಡು ಬಂದಿದೆ. ದೀಪಾವಳಿ ಶಾಪಿಂಗ್‌ ಮುಗಿಸಿ ಮನೆಗೆ ಹೊರಟಿದ್ದ ಕುಟುಂಬದ ಮೇಲೆ ಪುಂಡರು ದಾಳಿ ನಡೆದಿದೆ. ಈ ವೇಳೆ 5 ವರ್ಷದ ಮಗುವಿನ ತಲೆಗೆ ಪೆಟ್ಟಾಗಿದೆ. ಅಕ್ಟೋಬರ್‌ 30 ರಂದು ದೀಪಾವಳಿ ಶಾಪಿಂಗ್‌ಗೆ ತಮ್ಮ ಮಕ್ಕಳೊಂದಿಗೆ ಬಂದಿದ್ದ ದಂಪತಿ ರಾತ್ರಿ 9:30ರ ಸುಮಾರಿಗೆ ಶಾಪಿಂಗ್‌ ಮುಗಿಸಿ ಹೊರಟಿದ್ದರು. ಚಾಲನ ಸೀಟ್‌ನಲ್ಲಿ ಪತಿ ಅನೂಪ್‌ ಜಾರ್ಜ್‌, ಪಕ್ಕದಲ್ಲಿ ಪತ್ನಿ, ಹಿಂಭಾಗ ಇಬ್ಬರು ಮಕ್ಕಳು ಕುಳಿತಿದ್ದರು. ಈ ವೇಳೆ ಕಿಡಿಗೇಡಿಗಳು ಆ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದಾರೆ. ಕಾರನ್ನು ಅಡ್ಡಗಟ್ಟಿ, ಗ್ಲಾಸ್‌ ಇಳಿಸುವಂತೆ ಆವಾಜ್‌ ಹಾಕಿದ್ದಾರೆ. ಚಾಲಕ ಅನೂಪ್‌ ಜಾರ್ಜ್‌ ಹೆದರಿ ಗ್ಲಾಸ್‌ ತೆರೆಯದೇ ಇದ್ದಿದ್ದರಿಂದ ಕೋಪಗೊಂಡ ಪುಂಡರು ಮಕ್ಕಳು ಇದ್ದಾರೆ ಎಂಬುದನ್ನೂ ನೋಡದೇ ಕಾರಿನ ಮೇಲೆ…

Read More