ಸೂರ್ಯೋದಯ: 06:17 ಸೂರ್ಯಾಸ್ತ : 05:41 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶರದ ಋತು, ಅಶ್ವಿನಿ ಮಾಸ, ತಿಥಿ: ತ್ರಯೋದಶಿ ನಕ್ಷತ್ರ: ಹಸ್ತಾ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30ನಿಂದ 12:00 ತನಕ ಅಮೃತಕಾಲ: ಮ.2:56 ನಿಂದ ಸಂ.4:44 ತನಕ ಅಭಿಜಿತ್ ಮುಹುರ್ತ: ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ವೃತ್ತಿ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಸಾಧ್ಯತೆ, ಸಹೋದ್ಯೋಗಿಗಳು ಮಿತ್ರರಾಗುವರು, ಉದ್ಯೋಗದಲ್ಲಿ ಭಡ್ತಿ ವಿಷಯ ಕೇಳಿ ತುಂಬಾ ಸಂತಸ ಅದರ ಜೊತೆಗೆ ಸ್ಥಳ ಬದಲಾವಣೆಯಿಂದ ಅತೃಪ್ತಿ, ವ್ಯವಸಾಯ ಕ್ಷೇತ್ರದಲ್ಲಿ ಬೃಹತ್ ವಿಸ್ತರಣೆಗೆ ಆದ್ಯತೆ, ಸಂತೋಷ ಕೂಟಗಳಲ್ಲಿ ಭಾಗವಹಿಸಿ ಸಮಸ್ಯೆ ಎದುರಾದಿತು, ತುಂಬಾ ದಿನದ ಪ್ರೀತಿ, ಕೆಲವರು…
Author: Prajatv Kannada
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್ ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ಅವರಿಗೆ ಸರ್ಜರಿಯ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನನ್ನು ನೀಡಿದೆ. ಈ ಅವಧಿಯನ್ನು ಅವರು ಕೇವಲ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ದರ್ಶನ್ ಅವರು ಖುಷಿ ಹೊರ ಹಾಕಿದ್ದಾರೆ. ದರ್ಶನ್ಗೆ ಈಗ ಜಾಮೀನು ನೀಡಿರುವುದು ಸಂಪೂರ್ಣವಾಗಿ ವೈದ್ಯಕೀಯ ವರದಿ ಆಧರಿಸಿಯೇ ಆಗಿದೆ. ಹೀಗಾಗಿ, ಅವರು ಮುಂದಿನ ಆರು ವಾರಗಳನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ದರ್ಶನ್ ಅವರಿಗೆ ಜಾಮೀನು ನೀಡಿದ ಬಳಿಕ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ದರ್ಶನ್ ಇಷ್ಟಪಟ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೆ, ಒಂದು ವಾರಗಳಲ್ಲಿ ಚಿಕಿತ್ಸೆಯ ವಿವರವನ್ನು ದರ್ಶನ್ ಕೋರ್ಟ್ಗೆ ಸಲ್ಲಿಕೆ ಮಾಡಬೇಕಿದೆ. ಈ ರೀತಿಯ…
ಮುಂಬೈ: ಶಾಸಕ ಜೀಶನ್ ಸಿದ್ದಿಕಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ನೋಯ್ಡಾದ ತಯ್ಯಬ್ (20) ಎಂದು ಗುರುತಿಸಲಾಗಿದೆ. ಮುಂಬೈ ಪೊಲೀಸರು ಆತನನ್ನು ನಗರಕ್ಕೆ ಕರೆತರುತ್ತಿದ್ದಾರೆ. ಅ.25ರ ಸಂಜೆ ಆರೋಪಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಜೀಶನ್ ಸಿದ್ದಿಕಿ ಅವರ ಕಚೇರಿಯಿಂದ ದೂರು ದಾಖಲಿಸಲಾಗಿತ್ತು. ಅಕ್ಟೋಬರ್ 12 ರಂದು ಜೀಶನ್ ಸಿದ್ದಿಕಿಯವರ ಕಚೇರಿಯ ಹೊರಗೆ ದಸರಾ ಆಚರಣೆ ವೇಳೆ ಪಟಾಕಿ ಸಿಡಿಸುವಾಗ ಬಾಬಾ ಸಿದ್ದಿಕಿ ಅವರನ್ನು ಬಿಷ್ಣೋಯ್ ಗ್ಯಾಂಗ್‌ನ ಸಹಚರರು ಗುಂಡಿಕ್ಕಿ ಹತ್ಯೆಗೈದಿದ್ದರು. ಸಿದ್ದಿಕಿಯವರು ಈ ಹಿಂದೆ ಬಾಂದ್ರಾ ಕ್ಷೇತ್ರದಿಂದ ಶಾಸಕರಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಎನ್‌ಸಿಪಿ ಸೇರಿದ್ದರು. ಅ.25 ರಂದು ಜೀಶನ್ ಸಿದ್ದಿಕಿ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರ್ಪಡೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ ಮುಂಬೈಯ ವಂಡ್ರೆ ಪೂರ್ವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದ ನಟ ದರ್ಶನ್ ಗೆ ಐದು ತಿಂಗಳ ಬಳಿಕ ವೈದ್ಯಕೀಯ ವರದಿ ಆಧರಿಸಿ ಷರತ್ತು ಬದ್ದ ಜಾಮೀನು ನೀಡಲಾಗಿದೆ. ಪವಿತ್ರಾ ಗೌಡಗಾಗಿ ದರ್ಶನ್ ಜೈಲು ಸೇರಿದ್ದರು ದರ್ಶನ್ ಪರವಾಗಿ ಅಂದಿನಿಂದಲೂ ನಿಂತಿದ್ದ ಪತ್ನಿ ವಿಜಯಲಕ್ಷ್ಮಿ. ದರ್ಶನ್ ಬಿಡುಗಡೆಗಾಗಿ ಅನೇಕ ದೇವಾಲಯಗಳಿಗೆ ಅವರು ಭೇಟಿ ಕೊಟ್ಟಿದ್ದರು. ಈಗ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು ಕೊಂಚ ನಿರಾಳರಾಗಿದ್ದಾರೆ. ದರ್ಶನ್ಗೆ ಆರು ವಾರಗಳ ಷರತ್ತುಬದ್ಧ ಜಾಮೀನು ಸಿಗುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಕಾಮಕ್ಯ ದೇವಸ್ಥಾನದ ಫೋಟೋ ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇವಿ ಆಶೀರ್ವಾದಿಂದ ಬೇಲ್ ಸಿಕ್ಕಿದೆ ಎಂದು ವಿಜಯಲಕ್ಷ್ಮೀ ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ದರ್ಶನ್ ಅವರು ಇಂದೇ ಬಿಡುಗಡೆ ಆಗೋ ಸಾಧ್ಯತೆ ಇದೆ. ಹಾಗದಲ್ಲಿ ದರ್ಶನ್ ಅವರನ್ನು ಹೊರಕ್ಕೆ ಬಂದ ಬಳಿಕ ಅವರನ್ನು ಕರೆದುಕೊಂಡು ಬರಲು ವಿಜಯಲಕ್ಷ್ಮಿ ತೆರಳುವ ಸಾಧ್ಯತೆ ಇರುತ್ತದೆ. ದರ್ಶನ್ ಅವರು ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.…
ದೇಶದ ಈ ರಾಜ್ಯ ಒಂದರಲ್ಲಿ ಗೋವುಗಳಿಗೆ ವಿಶೇಷ ಗೌರವ ಸೂಚಿಸಲಾಗಿದೆ. ಅಂದ್ರೆ ಬಿಡಾಡಿ ದನಗಳನ್ನು ಬೀದಿ ಹಸು ಅನ್ನಬಾರದಂತೆ. ಒಂದು ವೇಳೆ ಆ ರೀತಿ ಕರೆದರೆ ಕಠಿಣ ಶಿಕ್ಷೆ ಗ್ಯಾರಂಟಿ ಅಂತೆ. ಎಸ್, ಭಾರತ ದೇಶದ ರಾಜ್ಯದಲ್ಲಿ ಒಂದಾದ ರಾಜಸ್ಥಾನದ ಸರ್ಕಾರದ ಆದೇಶವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆಗಳಲ್ಲಿ ತಿರುಗಾಡುವ ಹಸುಗಳಿಗೆ ಬೀದಿ ಹಸುಗಳು ಎಂಬ ಪದವನ್ನು ಬಳಸುವುದನ್ನು ಸರ್ಕಾರವು ನಿಷೇಧಿಸಿದೆ. ಅದು ಅವಹೇಳನಕಾರಿಯೆಂದು ಹೇಳಿರುವ ಸರ್ಕಾರ ಅದರ ಬದಲಿಗೆ ಹೆಚ್ಚು ಗೌರವಾನ್ವಿತವಾಗಿ ನಿರ್ಗತಿಕ ಹಸುಗಳು ಎಂಬ ಪದವನ್ನು ಬಳಸಲು ಅಧಿಸೂಚನೆಯನ್ನು ಹೊರಡಿಸಿದೆ. ಈ ಸಂಬಂಧ ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಗೋಪಾಲನಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಗೋವುಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಇಂದಿನ ಕಾಲದಲ್ಲಿ ನಾನಾ ಕಾರಣಗಳಿಂದ ಕೆಲವು ಹಸುಗಳು ನಿರ್ಗತಿಕರಾಗುತ್ತಿವೆ. ಅವು ಬೀದಿಗಳಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಈ ಹಸುಗಳಿಗೆ ಬೀದಿ ಹಸು ಎಂಬ ಪದವನ್ನು ಬಳಸುವುದು…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಐದು ತಿಂಗಳ ಬಳಿಕ ಕೊನೆಗೂ ನಟ ದರ್ಶನ್ಗೆ ಜಾಮೀನು ಸಿಕ್ಕಿದೆ. ಆದರೆ ಈಗ ಕೇವಲ ಆರು ವಾರಗಳ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್ಗೆ ಜಾಮೀನು ಲಭ್ಯವಾದ ಬೆನ್ನಲ್ಲೆ ದರ್ಶನ್ ಪರ ವಕೀಲರ ತಂಡದ ಸುನಿಲ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ಗೆ ಇರುವ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಾನ್ಯ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಎಲ್ಲ ಕಾನೂನು ಪ್ರಕ್ರಿಯೆಗಳು ಇಂದೇ ಮುಗಿದು ಇಂದೇ ದರ್ಶನ್ ಜೈಲಿನಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ ಎಂದು ವಕೀಲ ಸುನಿಲ್ ಹೇಳಿದ್ದಾರೆ. ‘ನಾವು, ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದೆವು. ದರ್ಶನ್ ಅವರಿಗೆ ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ. ಅವರ ಎಲ್5 ಮತ್ತು ಎಸ್1 ಅಲ್ಲಿ ಸಮಸ್ಯೆಯಿದ್ದು ಸೂಕ್ತ ಚಿಕಿತ್ಸೆ ತುರ್ತು ಅಗತ್ಯವಿದೆ. ದರ್ಶನ್ಗೆ ಈ ಸಮಸ್ಯೆ ಈಗ ಬಂದಿದ್ದಲ್ಲ, ಅಥವಾ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆದ ಬಳಿಕ ಬಂದಿದ್ದಲ್ಲ, ಅವರಿಗೆ ಈ ಸಮಸ್ಯೆ 2022-23 ರಿಂದಲೂ…
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸದೆ ಇರಲು ವಾಷಿಂಗ್ಟನ್ ಪೋಸ್ಟ್ ನಿರ್ಧರಿಸಿದೆ. ಕಳೆದ ವಾರ ಪತ್ರಿಕೆಯು ಈ ನಿರ್ಧಾರ ತೆಗೆದುಕೊಂಡ ಬಳಿಕ ಸುಮಾರು 2 ಲಕ್ಷ ಮಂದಿ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಚಂದಾದಾರಿಕೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಪತ್ರಿಕೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಪತ್ರಿಕೆಯು ಈಗಾಗಲೇ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಇದರ ಮಧ್ಯದಲ್ಲೇ ದೊಡ್ಡ ಸಂಖ್ಯೆಯಲ್ಲಿ ಚಂದಾದಾರಿಕೆ ಹಿಂದೆ ಸರಿದಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ವರ್ಷದ ಅಂಕಿಅಂಶದ ಪ್ರಕಾರ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 25 ಲಕ್ಷ ಚಂದಾದಾರಿಕೆ ಹೊಂದಿದ್ದು, ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಡಿಜಿಟಲ್ ಆವೃತ್ತಿಯ ಚಂದಾದಾರಾಗಿದ್ದರು. ಪ್ರಸರಣ ಸಂಖ್ಯೆಯಲ್ಲಿ ‘ನ್ಯೂಯಾರ್ಕ್ ಟೈಮ್ಸ್’, ‘ವಾಲ್ ಸ್ಟ್ರೀಟ್ ಜರ್ನಲ್’, ಪತ್ರಿಕೆಯು ಮೊದಲ ಎರಡು ಸ್ಥಾನಗಳಲ್ಲಿದೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪತ್ರಿಕೆಯ ವಕ್ತಾರೆ ಒಲಿವಿಯಾ ಪೀಟರ್‌ಸನ್ ನಿರಾಕರಿಸಿದ್ದಾರೆ.
ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ಕಣದಲ್ಲಿದ್ದ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಸಿ ವಾಪಸ್ ಪಡೆಯುವಲ್ಲಿ ಯಶಸ್ವಿಯಾದ ಸಚಿವ ಜಮೀರ್ ಅಹ್ಮದ್ ಖಾನ್ ಅಜ್ಜಂಪೀರ್ ಖಾದ್ರಿ ಜೊತೆಯಲ್ಲಿಯೇ ಹುಬ್ಬಳ್ಳಿ ವಿಮಾನಕ್ಕೆ ತಡರಾತ್ರಿ ಆಗಮಿಸಿದರು. https://youtu.be/mH1OMjOJp1k?si=m2tG5Y-jPjYqYm9e ನಂತರ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಖಾದ್ರಿ ಯಾವುದೇ ಕರಾರು ಹಾಕದೇ ಹಣದಿಂದ ಹಿಂದೇ ಸರಿದಿದ್ದಾರೆ ಎಂದರು. ಈ ಕುರಿತು ಡಿಟೇಲ್ ಸ್ಟೋರಿ ಇದೆ ನೋಡಿ. ಇದೇ ವೇಳೆ ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ವಕ್ಪ್ ವಿಚಾರವಾಗಿ ಭಾರತೀಯ ಜನತಾ ಪಕ್ಷ ರಾಜಕೀಯ ಮಾಡುತಿದ್ದು ವಿನಾಕಾರಣ ಸರ್ಕಾರ ಹಾಗೂ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎಂದರು.ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಅಪ ಪ್ರಚಾರ ಮಾಡುತ್ತಿದ್ದು, ಅದಕ್ಕೆಲ್ಲ ನಾನು ಹೆದರುವುದಿಲ್ಲ ಎಂದರು. ವಕ್ಫ್ ಆಸ್ತಿ ತೆರವು ಸಂಬಂಧ ನೋಟಿಸ್ ನೀಡುವ ಪ್ರಕ್ರಿಯೆ ಎಲ್ಲ ಸರ್ಕಾರದಿಂದಲೂ ನಡೆದಿದೆ. ಬಿಜೆಪಿ ಸರ್ಕಾರದಲ್ಲೂ ಕೊಡಲಾಗಿದೆ.…
ಬೆಂಗಳೂರು:- ರಾಜ್ಯದಲ್ಲಿ ಈ ವಾರದಲ್ಲಿ ಮತ್ತೆ ಮಳೆ ಆಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ಮಳೆಯೊಂದು ಮಂಜು ಮತ್ತು ಚಳಿ ಕೂಡ ಇರಲಿದೆ ಎನ್ನಲಾಗುತ್ತಿದೆ. https://youtu.be/mH1OMjOJp1k?si=eHxE77BwBTOwlqii ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇನ್ನುಳಿದ ದಿನಗಳಲ್ಲಿ ಮಳೆ ಕಡಿಮೆ ಇರುವ ಸಾಧ್ಯತೆಯಿದೆ. ಅದೇ ರೀತಿಯಾಗಿ ಉತ್ತರ ಒಳನಾಡು ಜಿಲ್ಲೆಗಳಿಗೆ ನವೆಂಬರ್ 1 ಮತ್ತು 2 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇನ್ನುಳಿದ ದಿನಗಳಲ್ಲಿ ಮಳೆ ಕಡಿಮೆ ಇರುವ ಸಾಧ್ಯತೆಯಿದೆ. ಇಂದು ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ
ಬೆಂಗಳೂರು:- ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟಿರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನಿಂದ KSRTCಗೆ ಹೊಸ ಬಸ್ಗಳು ಸೇರ್ಪಡೆಗೊಳ್ಳಲಿದ್ದು, ಹೀಗಾಗಿ KSRTC ಸಿಹಿ ಸುದ್ದಿ ಕೊಟ್ಟಿದೆ. https://youtu.be/Ol8t6d-JiCI?si=ycOmOCIRstZIqRtx ದೀಪಾವಳಿಗೆ ರಜೆ ಇದ್ದು, ಬಹುತೇಕರು ಬೆಂಗಳೂರು ಬಿಟ್ಟು ಊರಿಗೆ ಹೊರಟಿದ್ದಾರೆ. ಹೀಗಾಗಿ ಬಸ್ ಸಿಗದೆ ಕೆಲವರು ಕಂಗೆಟ್ಟಿದ್ದರು. ಆದರೆ ಕಡೆಯಿಂದ ಅಂತವರಿಗಾಗಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಇಂದು ರಸ್ತೆಗಿಳಿಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಬಸ್ಗಳಿಗೆ ಚಾಲನೆ ಕೊಡಲಿದ್ದಾರೆ