ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ ಬಿಡುಗಡೆಗಾಗಿ ಅವರ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆದ್ರೆ ದಿನೇ ದಿನೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗುತ್ತಿದೆ. ಇದೀಗ ಇದೇ ಮೊದಲ ಭಾರಿಗೆ ದರ್ಶನ್ ಬಂಧನದ ಬಗ್ಗೆ ಸಹೋದರ ಮೌನ ಮುರಿದಿದ್ದಾರೆ. ದಿನಾಕರ್ ಹೇಳಿದ ಮಾತೊಂದು ದರ್ಶನ್ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ. ದರ್ಶನ್ ಸೋದರ ದಿನಕರ್ ತೂಗುದೀಪ್ ತಮ್ಮ ನಿರ್ದೇಶನದ ಐದನೇ ಸಿನಿಮಾ ರಾಯಲ್ ಚಿತ್ರದ ಹಾಡಿನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇದೇ ವೇದಿಕೆ ಮೇಲೆ ದಿನಕರ್ ಆಡಿದ ಮಾತು 2011ರ ದರ್ಶನ್ ಸಿನಿ ಬದುಕಿನ ಪುನರ್ಜನ್ಮದ ಹಿಸ್ಟರಿ ರಿಪೀಟ್ ಮಾಡುವಂತಿದೆ. ನಮಗ್ಯಾವುದೇ ಸಮಸ್ಯೆ ಇರಲಿ ಏನೇ ಇರಲಿ ಯಾವಾಗಲೂ ಸಪೋರ್ಟ್ ಮಾಡೋ ಸೆಲೆಬ್ರೆಟೀಸ್‌ಗೆ ನಮ್ಮ ಫ್ಯಾಮಿಲಿ ಮತ್ತು ದರ್ಶನ್ ಮೇಲಿನ ಸಪೋರ್ಟ್ ಹೀಗೆ ಇರಲಿ. ನಿಮ್ಮ ಪ್ರೀತಿಗೆ ನಾವು ಯಾವಾಗಲೂ ಚಿರಋಣಿ. ನಾವೇನೇ ಹೆಸರು ಮಾಡಿದ್ರೂ, ಅದು ನಿಮ್ಮಿಂದ.…
Author: Prajatv Kannada
9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಎರಡು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಪಾಕಿಸ್ತಾನದಲ್ಲಿ ತಮ್ಮ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೈಶಂಕರ್ ರನ್ನು ಆಹ್ವಾನಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೈಶಂಕರ್ ಅವರನ್ನು ಆಹ್ವಾನಿಸಿಲ್ಲ ಎಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಕ್ಷದ ಮುಖಂಡ ನೀಡಿರುವ ಹೇಳಿಕೆಯಿಂದ ಪಿಟಿಐ ಪಕ್ಷ ಅಂತರ ಕಾಯ್ದುಕೊಂಡಿದ್ದು, ತಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜೈ ಶಂಕರ್ ರನ್ನು ಆಹ್ವಾನಿಸಿಲ್ಲ ಎಂದು ಹೇಳಿದೆ. ಜೈಲಿನಲ್ಲಿರುವ ಇಮ್ರಾನ್‍ಖಾನ್ ಅವರ ಬಿಡುಗಡೆಗೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಸ್ಲಮಾಬಾದ್ ಹಾಗೂ ಲಾಹೋರ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್…
ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೋರಗಾವಿ ಬಳಿ ನಡೆದಿದೆ. ಗುರುರಾಜ್ ಪ್ರಯಾಣಿಸುತ್ತಿದ್ದ ಕಾರು ಎದುರು ಬಂದ ವಾಹನ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಕಾರಿನಲ್ಲಿದ್ದ ಗುರುರಾಜ ಹೊಸಕೋಟೆ ಅವರು ಪ್ರಾಣಾಪಾದಿಂದ ಪಾರಾಗಿದ್ದು, ಯಾರಿಗೂ ಯಾವುದೇ ಗಾಯ ಹಾಗೂ ಪ್ರಾಣಹಾನಿ ಉಂಟಾಗಿಲ್ಲ. ಸಿಂಧನೂರಿನಿಂದ ಮಹಾಲಿಂಗಪುರಕ್ಕೆ ಹೊರಟಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಗುರುರಾಜ ಹೊಸಕೋಟೆ ಕರ್ನಾಟಕ ಜನಪದ ಗಾಯನ, ರಂಗಭೂಮಿ ಮತ್ತು ಸಿನಿಮಾ ಲೋಕದಲ್ಲಿ ಮಹತ್ವದ ಪ್ರತಿಭೆ. ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ ಆರಂಭವಾಗಿ 1 ವಾರವಾಗಿದ್ದು, ಈ ಸೀಸನ್ ನ ಮೊದಲ ಪಂಚಾಯಿತಿಗೆ ಕಿಚ್ಚ ಸುದೀಪ್ ಬರಿಗಾಲಲ್ಲಿ ನಿಂತುಕೊಂಡೇ ನಿರೂಪಣೆ ಮಾಡಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನವರಾತ್ರಿ ಹಿನ್ನೆಲೆ ಬರಿಗಾಲಲ್ಲಿ ನಿಂತಿರುವುದಾಗಿ ಹೇಳಿದ್ದು, ಅವರು ವೇದಿಕೆಗೆ ನೀಡಿರುವ ಗೌರವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟಿವಿಯಲ್ಲಿ ಒಂದೂವರೆ ಗಂಟೆ ಪ್ರಸಾರವಾಗುವ ಬಿಗ್ ಬಾಸ್ ಶೋ ಗೆ ಗಂಟೆಗಟ್ಟಲೆ ನಿಂತುಕೊಂಡೇ ಶೂಟಿಂಗ್ ಮಾಡಬೇಕಿದೆ. ಈ ವೇಳೆ ಸುದೀಪ್ ಚಪ್ಪಲಿ ಹಾಕದೆ ನಿಂತೇ ಶೂಟಿಂಗ್ ಮಾಡಿದ್ದಾರೆ. ದಿನಾಲು ಚಪ್ಪಲಿ ಧರಿಸುವವರಿಗೆ ಬರಿಗಾಲಲ್ಲಿ ಇರುವುದು ಕಷ್ಟವೇ ಆಗುತ್ತದೆ. ಅಂತಹದರಲ್ಲಿ ಗಂಟೆಗಟ್ಟಲೆ ಚಪ್ಪಲಿ ಹಾಕಿದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವುದು ಕಿಚ್ಚನ ಮೇಲೆ ಅಭಿಮಾನ ಹೆಚ್ಚಿಸಿದೆ. ಇನ್ನು ಕಿಚ್ಚ ಸುದೀಪ್ ಅವರ ಇಂದಿನ ಕಾಸ್ಟ್ಯೂಮ್ ಕೂಡ ಸಿಂಪಲ್ ಆಗಿ ಎಲಿಗೆಂಟ್ ಲುಕ್ ಕೊಡುತ್ತಿತ್ತು. ಕಂದು ಬಣ್ಣದ ಟಾಪ್ , ಬಿಳಿ ಬಣ್ಣದ ಪ್ಯಾಂಟ್ ಮತ್ತು ಕಡು ಕಂದು ಬಣ್ಣದ ಶಾಲು ಧರಿಸಿದ್ದರು. ಅದಕ್ಕೆ ತಕ್ಕನಾದ…
ಕನ್ನಡದ ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಒಂದೇ ವಾರಕ್ಕೆ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ವೈರಲ್ ಆದವರನ್ನು ತಮ್ಮ ಖಡಕ್ ಮಾತಿನ ಮೂಲಕವೇ ಸುದೀಪ್ ಸೈಲೆಂಟ್ ಮಾಡಿಸಿ ಬಿಡುತ್ತಾರೆ. ಅಂತೆಯೇ ಇದೀಗ ಕಿಚ್ಚ ಸುದೀಪ್ ಲಾಗರ್ ಜಗದೀಶ್ ಗೆ ತಮ್ಮ ಮಾತಿನ ಮೂಲಕವೇ ಬಿಸಿ ಮುಟ್ಟಿಸಿದ್ದಾರೆ. ಯೆಸ್, ಬಿಗ್‌ಬಾಸ್ ಆರಂಭವಾದ ಮೊದಲ ದಿನದಿಂದಲೇ ಸಖತ್ ಸೌಂಡ್ ಮಾಡುತ್ತಿದ್ದ ಲಾಯರ್ ಜಗದೀಶ್ ಮೈಚಳಿ ಬಿಡಿಸಿದ್ದಾರೆ ಕಿಚ್ಚ ಸುದೀಪ್. ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಅಕ್ಷರಶಃ ಕೆಂಡಕಾರಿದ್ದರು. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದರು. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದರು. ಇದೀಗ ವಾರದ ಕಥೆ ಕಿಚ್ಚ…
ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ನೋಡ ನೋಡುತ್ತಿದ್ದಂತೆ ಮಗುಚಿ ಬಿದ್ದ ಘಟನೆ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ನಡೆದಿದೆ. ಈ ಭೀಕರ ದುರಂತದಲ್ಲಿ ಬರೋಬ್ಬರಿ 78 ಮಂದಿ ಮೃತಪಟ್ಟಿದ್ದಾರೆ. ಪೂರ್ವ ಕಾಂಗೋದ ಕಿವು ಸರೋವರದಲ್ಲಿ ಸುಮಾರು 278 ಪ್ರಯಾಣಿಕರಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಮಾಹಿತಿ ನೀಡಿದ್ದಾರೆ. ಇನ್ನೂ ಈ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ಹೇಳಿದ್ದಾರೆ. 278 ಪ್ರಯಾಣಿಕರಿಂದ ತುಂಬಿದ್ದ ದೋಣಿಯು ನೋಡ ನೋಡುತ್ತಲೇ ಟೈಟಾನಿಕ್ ಬೋಟ್ ರೀತಿಯಲ್ಲೇ ಮಗುಚಿ ಬಿದ್ದಿದೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಈ ಘಟನೆ ನಡೆದಿದ್ದು ಗೋಮಾ ಕಾಂಗೋದಲ್ಲಿ ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಗೋವಾದಲ್ಲಿ ಈ ದುರಂತ ನಡೆದಿದೆ ಎಂದು ವೈರಲ್ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ ಎಂದು…
ತೆಲುಗು ಚಿತ್ರರಂಗದ ಹಿರಿಯ ನಟ ರಾಜೇಂದ್ರ ಪ್ರಸಾದ್ ಮನೆಯಲ್ಲಿ ಶೋಕ ಮಡುಗಟ್ಟಿದೆ. ರಾಜೇಂದ್ರ ಪ್ರಸಾದ್ ಮಗಳು ಗಾಯತ್ರಿ (38) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗಾಯತ್ರಿ ನಿಧನಕ್ಕೆ ನಟರಾದ ಚಿರಂಜೀವಿ, ಪವನ್ ಕಲ್ಯಾಣ್, ಜೂನಿಯರ್ ಎನ್ಟಿಆರ್, ನಾನಿ ಸೇರಿದಂತೆ ಹಲವರು ಸಂತಾಪ ಸೂಚಿಸುತ್ತಿದ್ದಾರೆ. ಗಾಯತ್ರಿ ಅವರಿಗೆ ಮನೆಯಲ್ಲಿ ಇರುವಾಗ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಹೈದರಾಬಾದ್ ನ ಗಚ್ಚಿಬೋಲಿನಲ್ಲಿರುವ ಎಐಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗಾಯತ್ರಿ ಅವರು ನಿಧನ ಹೊಂದಿದ್ದಾರೆ. ರಾಜೇಂದ್ರ ಪ್ರಸಾದ್ ಅವರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದರು. ಆದರೆ ಇದೀಗ ಮಗಳು ನಿಧನ ಹೊಂದಿರುವುದು ಅವರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಮೃತ ಗಾಯತ್ರಿ ಅವರಿಗೆ ಓರ್ವ ಮಗನಿದ್ದಾನೆ. ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಗಳ ಬಗ್ಗೆ ಮಾತನಾಡುವ ವೇಳೆ ರಾಜೇಂದ್ರ ಪ್ರಸಾದ್ ಕಣ್ಣೀರು ಹಾಕಿದ್ದರು. ಹತ್ತು ವರ್ಷಕ್ಕೆ ತಾಯಿಯನ್ನು ಕಳೆದುಕೊಂಡಿದ್ದ ರಾಜೇಂದ್ರ ಪ್ರಸಾದ್ ತಮ್ಮ ತಾಯಿಯನ್ನು ಮಗಳಲ್ಲಿ ಕಾಣುತ್ತಿರುವುದಾಗಿ ಹೇಳಿದ್ದರು. ಮಗಳನ್ನು ಕಳೆದುಕೊಂಡು…
ಪಿಆರ್ ಕೆ..ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೌಂಡೇಷನ್ ಆಗಿದೆ ‘ಪವರ್’ ಹೌಸ್ ಪ್ರೊಡಕ್ಷನ್,..ಪಿ ಅಂದ್ರೆ ಪುನೀತ್ ಅಲ್ಲ. ಅದು ಪಾರ್ವತಮ್ಮ ರಾಜ್ ಕುಮಾರ್..ಕನ್ನಡ ಚಿತ್ರರಂಗದ ಗ್ರೇಟೆಸ್ಟ್ ನಿರ್ಮಾಪಕಿ ಎನಿಸಿಕೊಂಡ ಪಾರ್ವತಮ್ಮ ಆಯ್ಕೆ ಮಾಡಿದ ಸಿನಿಮಾಗಳ ಪೈಕಿ ಗೆದ್ದಿದ್ದು ಶೇಖಡ 94ರಷ್ಟು. ಹೀಗಿದ್ಮೇಲೆ ವರನಟ ಡಾ. ರಾಜ್ ಕುಮಾರ್ ಹಿಂದಿನ ಶಕ್ತಿ ಪಾರ್ವತಮ್ಮನ ಫರ್ಪೆಕ್ಷನ್ ಎಷ್ಟಿದೆ ಅನ್ನೋದನ್ನು ನೀವೇ ಅರ್ಥ ಮಾಡಿಕೊಳ್ಳಿ. ನಾವಿತ್ತು ಅಣ್ಣಾವ್ರ ಮುದ್ದಿನ ಮಡದಿ ಪಾರ್ವತಮ್ಮ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಹಾಕೋದಿಕ್ಕೆ ಕಾರಣ ಅಶ್ವಿನಿ ಪುನೀತ್ ರಾಜ್ ಕುಮಾರ್. ಪಿಆರ್ ಕೆ ಈಗ ಅಪ್ಪು ಮನೆ ಮನ ಮೆಚ್ಚಿದ ಮಡದಿ ಅಶ್ವಿನಿ ಅವರ ಹೇಗಲೇರಿದೆ. ಹೊಸ ಸಿನಿಮೋತ್ಸಾಹಿಗಳ ಕನಸುಗಳಿವೆ ವೇದಿಕೆಯಾಗಿರುವ ಪಿಆರ್ ಕೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಮುನ್ನೆಡೆಸಿಕೊಂಡು ಹೋಗ್ತಿದ್ದಾರೆ,. ಈ ಪ್ರೊಡಕ್ಷನ್ ನಿಂದ ಸದಾಭಿರುಚಿ ಸಿನಿಮಾಗಳು ಚಿತ್ರರಂಗಕ್ಕೆ ಕಾಣಿಕೆಯಾಗಿ ಸಿಕ್ಕಿವೆ. ಪವರ್ ಸ್ಟಾರ್ ಪವರ್ ಹೌಸ್ ನಿಂದ ಈಗ ಬೊಂಬಾಟ್ ಸಮಾಚಾರ ಹೊರಬಿದ್ದಿದೆ. ಇದು PRK…
ಮೊಟ್ಟ ಮೊದಲ “ಒನ್ ಡೆ ಮ್ಯಾಚ್”ನ್ನು ಭಾರತ ಯಾವ ದೇಶದಲ್ಲಿ ಆಡಿತ್ತು..? ಶ್ರಿಲಂಕಾ ಭಾರತ ಇಂಗ್ಲೆಂಡ್ ಪಾಕಿಸ್ತಾನ
ಚಿತ್ರದುರ್ಗ : ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿಅನುಷ್ಠಾನಗೊಳಿಸದಿದ್ದರೆ ರಾಜ್ಯದ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ ಮಾಡುವುದಾಗಿ ಮಾದಿಗ ಸಮುದಾಯದ ರಾಜ್ಯ ಮುಖಂಡ ಪಾವಗಡ ಶ್ರೀರಾಮ್ ಎಚ್ಚರಿಸಿದ್ದಾರೆ. https://youtu.be/nDG8afs8-kY?si=5hFi0XeDcASWI7D0 ಹಿರಿಯೂರು ತಾಲ್ಲೂಕು ದಲಿತಪರಸಂಘಟನೆಗಳ ಒಕ್ಕೂಟ ಪಟ್ರೆಹಳ್ಳಿಯಿಂದಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಿ ನಂತರ ಮಾತನಾಡಿದ ಅವರು30 ವರ್ಷಗಳಿಂದ ಎಲ್ಲಾಪಕ್ಷಗಳು ಮಾದಿಗರಿಗೆ ಮೋಸ ಮಾಡುವ ಮೂಲಕ,ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಒಳ ಮೀಸಲಾತಿಜಾರಿಗೊಳಿಸುವವರೆಗೂ,ಈ ಹೋರಾಟಗಳುನಿಲ್ಲುವುದಿಲ್ಲ. ಮುಖ್ಯಮಂತ್ರಿಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಬಗ್ಗೆಮಾತನಾಡುವ ಬದಲು ಪರಿಶಿಷ್ಟ ಜಾತಿಯ ಎಲ್ಲಾ ಉಪ ಜಾತಿಗಳ ಮೇಲೆ ನಿಜವಾಗಿಯೂಕಾಳಜಿಯಿದ್ದರೆ ಮೊದಲು ಒಳ ಮೀಸಲಾತಿಜಾರಿಗೊಳಿಸಿ ದಲಿತ ವಿರೋಧಿಯಲ್ಲ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಮಠದಿಂದ2003 ರಲ್ಲಿ ಒಳ ಮೀಸಲಾತಿಗಾಗಿ ಮೊದಲುಪಾದಯಾತ್ರೆ ಆರಂಭಿ ಸಲಾಗಿತ್ತು.ಒಳ ಮೀಸಲಾತಿಜಾರಿಗೊಳಿಸದಿದ್ದರೆ ಪರಿಶಿಷ್ಟ ಜಾತಿಯಲ್ಲಿ 101ಉಪ ಜಾತಿಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ನಮ್ಮ ನಮ್ಮಲ್ಲೆ ಒಡಕುಮೂಡಿಸುವದುರಾಲೋಚನೆಯಿಟ್ಟುಕೊಂಡಿರುವ ರಾಜ್ಯದಮುಖ್ಯಮಂತ್ರಿ ಸಿದ್ದರಾಮಯ್ಯನವರುಮಲ್ಲಿಕಾರ್ಜುನ ಖರ್ಗೆಯವರ ಕಡೆಕೈತೋರಿಸುತ್ತಿರುವುದು ಯಾವ ನ್ಯಾಯ?ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿ ಕೊಟ್ಟಿದ್ದರೂ ಸಮಪಾಲು ಹಂಚಿಕೆಯಾಗಿಲ್ಲ. ದಲಿತರನ್ನು ಕೇವಲ ಮತಬ್ಯಾಂಕನ್ನಾಗಿ ಬಳಸಿಕೊಳ್ಳುವುದನ್ನು ಬಿಟ್ಟು…