Author: Prajatv Kannada

ಬೆಂಗಳೂರು: ಮೈಸೂರು ದಸರಾ-2024 ಮತ್ತು ದಸರಾ ರಜೆಗಳ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 9ರಿಂದ 12ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರ್‌ರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. https://youtu.be/GQqiY85jMr8?si=0yHP5V9hHhwGfd1V ಮೈಸೂರು ದಸರಾ ಹಾಗೂ ದಸರಾ ರಜೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು ಪ್ರವಾಸಿಗರು, ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಿಗೆ ಹೆಚ್ಚುವರಿಯಾಗಿ 2 ಸಾವಿರ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರು ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮ, ಪ್ರಸ್ತುತ ಕಾರ್ಯಾಚರಿಸುತ್ತಿರುವ ವೇಗದೂತ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಹಾಗೂ ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ಲೀಪರ್, ಅಶ್ವಮೇಧ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿದೆ.

Read More

ಬೆಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾ ಏಕಿ ಹೊತ್ತಿಕೊಂಡ ಬೆಂಕಿ ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು ಈ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಗೆಸ್ಟ್ ಲೈನ್ ಸರ್ಕಲ್ ಬಳಿ ನಡೆದಿದೆ. https://youtu.be/CaDA5IqvoW4?si=I66UFZGmHfOYsz7u ಚಂದಾಪುರದ ಕಾಚನಾಯಕನಹಳ್ಳಿ ಮೂಲದವರಿಗೆ ಸೇರಿದ ಕಾರು ಕಾಚನಾಯಕನಹಳ್ಳಿ ಗ್ರಾಮದಿಂದ ಚೆನೈಗೆ ಹೋಗುತ್ತಿದ್ದಾಗ ಘಟನೆ ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದರು. ಕಾರಿನ ಇಂಜಿನಲ್ಲಿ ಕಾಣಿಸಿಕೊಂಡ ಹೊಗೆ ಕಾಣಿಸುತ್ತಿದ್ದಂತೆ ತಕ್ಷಣ ಕಾರಿನಿಂದ ಇಳಿದ ಪ್ರಯಾಣಿಕರು ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಧಗಧಗಿಸಿದ ಬೆಂಕಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ. ಸದ್ಯ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಸ್ಥಳಕ್ಕೆ ಬಂದ ಅತ್ತಿಬೆಲೆ ಪೋಲಿಸರಿಂದ ಬೆಂಕಿ ನಂದಿಸುವ ಕಾರ್ಯ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

Read More

ಹೈಟಿಯಲ್ಲಿ ನಡೆದ ಸರಣಿ ಸಾಮೂಹಿಕ ದಾಳಿಯಲ್ಲಿ 10 ಮಹಿಳೆಯರು ಹಾಗೂ ಮೂವರು ಶಿಶುಗಳು ಸೇರಿದಂತೆ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ ದಾಳಿಯ ಬಗ್ಗೆ ತನ್ನ ಭಯಾನಕತೆಯನ್ನು ವ್ಯಕ್ತಪಡಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯುಎನ್ ವಕ್ತಾರ ತಮೀನ್ ಅಲ್-ಖೀತಾನ್ ಮಾತನಾಡಿ, ಗ್ರ್ಯಾನ್ ಗ್ರಿಫ್ ಗ್ಯಾಂಗ್ ನ ಸದಸ್ಯರು ನಾಗರಿಕರ ಮೇಲೆ ಗುಂಡು ಹಾರಿಸಲು ಸ್ವಯಂಚಾಲಿತ ರೈಫಲ್ಗಳನ್ನು ಬಳಸಿದರು. ಇದರ ಪರಿಣಾಮವಾಗಿ ವ್ಯಾಪಕ ಸಾವುನೋವುಗಳು ಸಂಭವಿಸಿವೆ ಮತ್ತು ಅನೇಕ ನಿವಾಸಿಗಳು ಪಲಾಯನ ಮಾಡಬೇಕಾಯಿತು ಎಂದರು.. ಹೈಟಿಯ ಆರ್ಟಿಬೊನೈಟ್ ವಿಭಾಗದ ಪಾಂಟ್ ಸೊಂಡೆ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ, ಇದರಲ್ಲಿ ಹೈಟಿ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಇಬ್ಬರು ಗ್ಯಾಂಗ್ ಸದಸ್ಯರು ಸೇರಿದ್ದಾರೆ. ಜನರನ್ನು ಗುಂಡಿಕ್ಕಿ ಕೊಲ್ಲುವುದರ ಜೊತೆಗೆ, ಗ್ಯಾಂಗ್ ಸದಸ್ಯರು ಕನಿಷ್ಠ 45 ಮನೆಗಳು ಮತ್ತು 34…

Read More

ಸುಮಾರು 9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಜೈ ಅವರಿಗೆ ನಮ್ಮ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಆಹ್ವಾನ ನೀಡಿದ್ದಾರೆ. ಜೈಶಂಕರ್​​​ ಅವರು ಅಕ್ಟೋಬರ್ 15 ಮತ್ತು 16 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಮಯಲ್ಲಿ ನಮ್ಮ ಜತೆಗೆ ನೀವು ನಿಲ್ಲಬೇಕು, ಪಾಕಿಸ್ತಾನ ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಾಯಕರಿಗೆ ತಿಳಿಸುವ ಅಗತ್ಯ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕ್​​ನಲ್ಲಿ ತಮ್ಮ ಪಕ್ಷದ ಪರವಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಭಾರತದ ವಿದೇಶಾಂಗ ಮಂತ್ರಿ ಎಸ್​​​. ಜೈಶಂಕರ್​​​ ಅವರಿಗೆ ಆಹ್ವಾನ ನೀಡಿದ್ದಾರೆ, ಜೈಶಂಕರ್​​​ ಅವರು ಅಕ್ಟೋಬರ್ 15 ಮತ್ತು 16 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ತಮ್ಮ ಹೋರಾಟದಲ್ಲಿ ಭಾಗವಹಿಸುವಂತೆ ಹಾಗೂ ಭಾಷಣ ಮಾಡುವಂತೆ ಆಹ್ವಾನ ನೀಡಿದ್ದಾರೆ. ಈ ಮೂಲಕ ತಮ್ಮ ಪಕ್ಷದ…

Read More

ಆಗಸ್ಟ್ 24, 2024 ರಂದು ಆಫ್ರಿಕಾ ಖಂಡದ ಪೂರ್ವ ರಾಷ್ಟ್ರವಾದ ಬುರ್ಕಿನಾ ಫಾಸೊದಲ್ಲಿ ನಡೆದಿದ್ದ ಆಲ್ ಖೈದಾ, ಐಸಿಸ್ ಬೆಂಬಲಿತ ಉಗ್ರರ ದಾಳಿ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಜಮಾತ್ ನುಸ್ರತ್ ಅಲಾ-ಇಸ್ಲಾಂ ವಾಲ್-ಮುಸ್ಲಿಮೀನ್ ಹೆಸರಿನ ಉಗ್ರ ಸಂಘಟನೆ ಸದಸ್ಯರು ಆ.24ರದುಬುರ್ಕಿನಾ ಫಾಸೊದ ಬರ್ಸಲೋಗೋ ಬಳಿ ಬೈಕ್, ಕಾರುಗಳಲ್ಲಿ ಏಕಾಕಾಲದಲ್ಲಿ ದಾಳಿ ನಡೆಸಿ ಮಹಿಳೆಯರು, ಮಕ್ಕಳು ಸೇರಿದಂತೆ 600 ಮಂದಿ ಗ್ರಾಮಸ್ಥರನ್ನು ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ 200 ಜನ ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆ ಅಂದು ಹೇಳಿದ್ದರೆ, 300 ಜನ ಮೃತಪಟ್ಟಿದ್ದರು ಎಂದು JNIM ಹೇಳಿತ್ತು. ಆದರೆ, ಅಂದಿನ ಘಟನೆಯಲ್ಲಿ 600 ಜನ ಮೃತಪಟ್ಟಿದ್ದರು. ಪೂರ್ವ ಆಫ್ರಿಕಾದ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ಭೀಕರ ಹತ್ಯಾಕಾಂಡ ಎಂದು ಫ್ರೆಂಚ್ ಸರ್ಕಾರದ ಭದ್ರತಾ ಮೌಲ್ಯಮಾಪನ ಘಟಕ ಈಗ ಹೇಳಿದೆ. ಅಲ್ಲದೇ ಉಗ್ರರು ಗುಂಡಿನ ದಾಳಿ ನಡೆಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಉಗ್ರರಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರು ಗ್ರಾಮದ ಹೊರವಲಯದ ಸುತ್ತ ಕಂದಕಗಳನ್ನು ನಿರ್ಮಿಸಿದ್ದರು. ಇದರಿಂದ ಸಿಟ್ಟಾಗಿದ್ದ…

Read More

ರಾಯಚೂರು: ಮುಡಾ ಕೇಸಲ್ಲಿ ಸಿಎಂ ಭಯಪಡುತ್ತಿದ್ದಾರೆಂಬ ಹೇಳಿಕೆ ವಿಚಾರ ಸಂಬಂಧಿಸಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ https://youtu.be/5G4_9CDV7FY?si=Lm3nOgcu-SO-zI-O ರಾಯಚೂರಿನಲ್ಲಿ ಮಾತನಾಡಿದ ಅವರು, ನಾನು ಏನೂ ತಪ್ಪು ಮಾಡಿಲ್ಲದಿದ್ದಾಗ ಯಾಕೆ ಭಯಪಡಬೇಕು? ನಾನು ಯಾರಿಗೂ ಭಯಪಡುವ ವ್ಯಕ್ತಿಯೇ ಅಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಹಾಗೆ ಸುಳ್ಳು ಆರೋಪ ಮಾಡಿದಾಗ ರಾಜೀನಾಮೆ ಕೊಡಲು ಆಗುತ್ತಾ? ವಿಪಕ್ಷಗಳು ಸುಳ್ಳು ಆರೋಪ ಮಾಡಿದ್ರೆ ನಾವು ಉತ್ತರ ಕೊಡ್ತೆವೆ ನಾನು ರಾಜೀನಾಮೆ ಕೊಡೇನ ಎಂದು ಪ್ರಶ್ನೆ ಮಾಡಿದರು. ಸಿಎಂ ರಾಜೀನಾಮೆ ಕೊಡ್ತಾರಾ ಎಂಬಕೆ ವಿಪಕ್ಷ ನಾಯಕ ಆ‌ರ್.ಅಶೋಕ್ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು R.ಅಶೋಕ್ ಮೊದಲು ರಾಜೀನಾಮೆ ಕೊಡಲಿ ಎಂದ ಸಿದ್ದರಾಮಯ್ಯ ರಾಯಚೂರಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಸಮರ ಸಾರಿದರು.

Read More

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಹುಟ್ಟಿದ ಆರು ತಿಂಗಳ ಬಳಿಕ ಇದೀಗ ಮಗಳ ಮುಖವನ್ನು ನಟಿ ರಿವೀಲ್ ಮಾಡಿದ್ದಾರೆ. ಅದಿತಿ ಪ್ರಭುದೇವ ಏಪ್ರಿಲ್‌ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ಸಿನಿಮಾಗಳಿಂದ ದೂರ ಉಳಿದ  ಅದಿತಿ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ರಿಯಾಲಿಟಿ ಶೋನಲ್ಲೂ ತೊಡಗಿಕೊಂಡಿದ್ದಾರೆ. ಇದೀಗ ಮಗಳಿಗೆ 6 ತಿಂಗಳು ತುಂಬಿದ ಹಿನ್ನೆಲೆ ಮಗಳ ಫೋಟೋ ಹಾಗೂ ಹೆಸರನ್ನು ನಟಿ ರಿವೀಲ್ ಮಾಡಿದ್ದಾರೆ. ನಟಿ ಅದಿತಿ ಪ್ರಭುದೇವ, ಯಶಸ್‌ ಪಾಟ್ಲಾ ದಂಪತಿ ಮಗಳಿಗೆ ನೇಸರ ಎಂಬ ನಾಮಕರಣ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಿತಿ ಮಗಳ ಫೋಟೋಗಳಿಗೆ ಲೈಕ್​​ಗಳ ಸುರಿಮಳೆ ಆಗಿದೆ. ಮಗಳಿಗೆ ಆರು ತಿಂಗಳಾದ ಸಂಭ್ರಮದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಕೇಕ್ ಮೇಲೆ ಬಾರ್ಬಿ ಎಂದು ಬರೆದಿದ್ದು ಮಗಳ ಡ್ರಸ್ ಗೆ ಮ್ಯಾಚ್ ಆಗುವ ಕಲರ್ ನಲ್ಲಿ ಕೇಕ್ ಡಿಸೈನ್ ಮಾಡಿದ್ದಾರೆ ಅದಿತಿ ಹಾಗೂ…

Read More

ವಿಜಯಪುರ : ಕೇಂದ್ರದ ಇಂಟಲಿಜೆನ್ಸ್ ಫೇಲ್ಯೂವರ್ ಆಗಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆ ವಿಚಾರ ಸಂಬಂಧ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ. https://youtu.be/XotKKIPsunI?si=YLhMfwlo-uDjS4o1 ವಿಜಯಪುರ ಜಿಲ್ಲೆಯ ಕ್ಯಾತನಕೇರಿ ಗ್ರಾಮದ ಬಳಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪರಮೇಶ್ವರ ‌ಅವರು ಏನಾದ್ರು ಹೇಳಲಿ‌ ಇಡೀ ದೇಶದ ಜನರಿಗೆ ಗೊತ್ತಿದೆ ಮೋದಿಯವರದ್ದು ಎಷ್ಟು ಗಂಡಸ್ತನ ಇದೆ ಎಂಬುದು ಇವರ ಪುಸಲಾಯಿತಿ ಇಂದಲೇ ಒಳಗೆ ಬರುತ್ತಾರೆ. ನಿನ್ನೆ ಐದಾರು ಜನರನ್ನು ಹಿಡಿದಿದ್ದಾರೆ, ಅವರಿಗೆ ಒಳಗೆ ತಂದು ಸೇರಿಸಿದವರಾರು. ಪಾಕಿಸ್ತಾನದವರನ್ನು ತಂದು ಒಳಗೊಳಗೆ ತಂದು ಬಿಟ್ಟಿದ್ದು ನೀವೇ ತಾನೇ ಎಂದ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Read More

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ನಿನ್ನೆ ಸಂಜೆ ಎಂಟು ಗಂಟೆಗೆ ಸುಮಾರಿಗೆ ಹುಸೇನಸಾಬ ರಾಇಸಾಬ ಘಡ್ಡೆಕರ ವಯಸ್ಸು (71) ಸಹಜ ಕಾಯಿಲೆಯಿಂದ ಮೃತಪಟ್ಟ ಘಟನೆ ನಡೆದಿದೆ. ಆದರೆ ಮೃತಪಟ್ಟ ವ್ಯಕ್ತಿಯನ್ನು ಅಂತ್ಯ ಸಂಸ್ಕಾರ ಮಾಡಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ https://youtu.be/5ROe-LhxEG8?si=8NpkAUTWnB-NqekU ಯಲ್ಲಟ್ಟಿ ಗ್ರಾಮದಲ್ಲಿ 50 ಮುಸ್ಲಿಂ ಸಮುದಾಯದ ಮನೆಗಳಿದ್ದು ಇಲ್ಲಿ ಯಾರೇ ಸತ್ತರು ಅಂತ್ಯ ಸಂಸ್ಕಾರ ಮಾಡಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ತಪ್ಪಿಲ್ಲಿ. ಸುಮಾರು ವರ್ಷಗಳಿಂದ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು ನಮಗೆ ಇಲ್ಲಿವರೆಗೂ ಅಂತ್ಯ ಸಂಸ್ಕಾರ ಮಾಡಲು ಜಾಗ ನೀಡಿಲ್ಲ. ಅಧಿಕಾರಿಗಳು ಬೇಗನೆ ಎಚ್ಚೆತ್ತುಕೊಂಡು ಮುಸ್ಲಿಂ ಸಮುದಾಯದವರಿಗೆ ಅಂತ್ಯ ಸಂಸ್ಕಾರ ಮಾಡಲು ಜಾಗ ನೀಡದಿದ್ದರೆ ನಾವು ಪ್ರತಿಪಟಿಸುತ್ತೇವೆ ಎಂದು ಎಚ್ಚರಿಕೆ ನೀಡುವ ಅಷ್ಟರಲ್ಲಿ ಸ್ಥಳಕ್ಕೆ ದೌಡಾಯಿಸಿದ ಕಂದಾಯ ಅಧಿಕಾರಿಗಳು ಮತ್ತು ತಹಶೀಲ್ದಾರ್ ಅವರ ಸಮಸ್ಯೆಗಳನ್ನು ಆಲಿಸಿ, ನೀವು ಶಾಂತ ರೀತಿಯಿಂದ ಬನಹಟ್ಟಿಯಲ್ಲಿ ಅಂತ್ಯ ಸಂಸ್ಕಾರ ಮಾಡಿ ತಹಸಿಲ್ದಾರ ಮಾರ್ಗದರ್ಶನದಲ್ಲಿ ಕಂದಾಯ ನಿರೀಕ್ಷಕರಾದ ಮಠಪತಿ…

Read More

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಪ್ರಾರಂಭವಾಗಿ ಸುಮಾರು ಐದಾರು ವರ್ಷಗಳೆ ಕಳೆದಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಇನ್ನೇನು ಇನ್ನೆನ್ನೂ ಕೊನೆಗೂ ಸಿನಿಮಾ ಕಣ್ಮುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ನಲ್ಲಿ ಅವರಿಗೆ ಗೆಲುವು ಸಕ್ಕಿದೆ. ನಿರ್ದೇಶಕ ಎಪಿ ಅರ್ಜುನ್ ಹಾಗೂ ‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಮಧ್ಯೆ ಮನಸ್ತಾಪ ಇದೆ ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇದೆ. ಆದರೆ, ಇದನ್ನು ತಂಡ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ತಂಡದವರು ಕೋರ್ಟ್ ಮೆಟ್ಟಿಲನ್ನು ಹತ್ತುತ್ತಲೇ ಇದ್ದಾರೆ. ತಮ್ಮ ಹೆಸರನ್ನು ಮಾರ್ಟಿನ್ ಸಿನಿಮಾ ತಂಡ ಕೈಬಿಟ್ಟಿದೆ ಎಂದು ನಿರ್ದೇಶಕ ಎಪಿ ಅರ್ಜುನ್ ಆರೋಪಿಸಿದ್ದರು. ಈಗ ಅವರ ಪರವಾಗಿ ಕೋರ್ಟ್ ಆದೇಶ ನೀಡಿದೆ. ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಅವರ ಹೆಸರನ್ನು ಸೇರಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ. ‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ…

Read More