ಲಕ್ನೋ: ಮಗಳ ಸೆಕ್ಸ್ ವೀಡಿಯೋ ವೈರಲ್ ಮಾಡೋದಾಗಿ ಆನ್‌ಲೈನ್ ವಂಚಕರು ಕರೆ ಮಾಡಿ ಬೆದರಿಕೆ ಹಾಕಿದ ಪರಿಣಾಮ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಶಿಕ್ಷಕಿಗೆ ವಂಚಕರು ಕರೆ ಮಾಡಿ ನಿಮ್ಮ ಮಗಳ ಅಶ್ಲೀಲ ವೀಡಿಯೋ ನಮ್ಮ ಬಳಿ ಇದೆ. 1 ಲಕ್ಷ ರೂ. ಹಣ ವರ್ಗಾಯಿಸದೇ ಇದ್ದರೆ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಮಹಿಳೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಮಾಲ್ತಿ ವರ್ಮಾ ಎಂದು ಗುರುತಿಸಲಾಗಿದೆ. ಅವರಿಗೆ ಸೆಪ್ಟೆಂಬರ್ 30 ರಂದು ಪೊಲೀಸ್ ಅಧಿಕಾರಿಯಂತೆ ವ್ಯಕ್ತಿಯಿಂದ ವಾಟ್ಸಾಪ್ ಕರೆ ಬಂದಿದೆ. ಈ ವೇಳೆ ನಿಮ್ಮ ಮಗಳನ್ನು ಲೈಂಗಿಕ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ನಿಮ್ಮ ಮಗಳನ್ನು ಒಳಗೊಂಡ ಅಶ್ಲೀಲ ವೀಡಿಯೋ ಸಿಕ್ಕಿದೆ. ಅದನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಳಿಕ ಘಟನೆಯ ಬಗ್ಗೆ ಮಹಿಳೆ ತನ್ನ ಮಗನಿಗೆ ತಿಳಿಸಿದ್ದು,…
Author: Prajatv Kannada
ಸೂರ್ಯೋದಯ: 06:10, ಸೂರ್ಯಾಸ್ತ : 05:58 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ ಋತು, ಅಶ್ವಿಜ ಮಾಸ, ತಿಥಿ: ತೇದಿಗಿ ನಕ್ಷತ್ರ: ಸ್ವಾತಿ ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ತನಕ ಅಮೃತಕಾಲ: ಬೆ.11:41 ನಿಂದ ಮ.1:28 ತನಕ ಅಭಿಜಿತ್ ಮುಹುರ್ತ: ಬೆ.11:40 ನಿಂದ ಮ.12:27 ತನಕ ಮೇಷ: ಗಂಡ ಹೆಂಡತಿ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ, ರಾಜಕಾರಣಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಅನಿವಾರ್ಯವಾಗಿ ಎದುರಿಸಿ, ರಾಜಕಾರಣಿಗಳಿಗೆ ಮತ್ತು ಅಧಿಕಾರಿ ವರ್ಗದವರಿಗೆ ಶುಭದಾಯಕ,ಸಿರಿಧಾನ್ಯ ವ್ಯಾಪಾರಸ್ಥರಿಗೆ ಅಧಿಕ ಲಾಭ,ಬಾಡಿ ಮಸೇಜ್, ಮೇಕಪ್, ವೃತ್ತಿ ಹೊಂದಿದವರಿಗೆ ಧನ ಲಾಭ, ಅತ್ತೆ ಸೊಸೆ ಭಿನ್ನಾಭಿಪ್ರಾಯ ಶುರು, ಉಪನ್ಯಾಸಕರಿಗೆ ಸಿಹಿಸುದ್ದಿ, ಆಸ್ತಿ ಮಾರಾಟದ ಅಡಚಣೆ ನಿವಾರಣೆ, ಪಾಲುದಾರಿಕೆ ಸಮಸ್ಯೆಗಳ ಪರಿಹಾರ, ಪತಿ-ಪತ್ನಿ ಭಿನ್ನಾಭಿಪ್ರಾಯದಿಂದ ಮುಕ್ತಿ, ಮುಕ್ತ ಮನಸ್ಸಿನಿಂದ ಸಂಸಾರ ಭೋಗ,ವಿವಾಹ ಸಮಸ್ಯೆಗಳಿಗೆ ಬಂಧುಗಳ…
ಹುಬ್ಬಳ್ಳಿ: ಮುಡಾ ವಿಚಾರದಲ್ಲಿ ಬಿಜೆಪಿ ಅನವಶ್ಯಕವಾಗಿ ರಾಜಕೀಯ ಮಾಡುತ್ತಿದೆ. ಪ್ರಧಾನಿ ಅಂಥವರು ವಿವಿಧ ರಾಜ್ಯಗಳ ಚುನಾವಣಾ ರ್‍ಯಾಲಿಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. https://youtu.be/zTaK3ZBI1G4?si=qPf8oAQuhCrpLdHB ನಮಗೂ ಸಹ ಇವರ ರೀತಿ ರಾಜಕಾರಣ ಮಾಡಲು ಬರುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹರಿಹಾಯ್ದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ತನಿಖೆ ನಡೆಯುತ್ತಿದೆ. ಇದನ್ನು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿಯವರು ಈ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸುತ್ತಾರೆ. ಇದು ರಾಜಕಾರಣ ಅಲ್ಲದೇ ಮತ್ತಿನ್ನೇನು. ನಮಗೂ ರಾಜಕಾರಣ ಮಾಡಲು ಬರುತ್ತದೆ. ನಮ್ಮ ಕಾಂಗ್ರೆಸ್ ಸರ್ಕಾರ ಅದಕ್ಕೆ ಸಮರ್ಥ ಉತ್ತರ ಕೊಡುತ್ತದೆ ಎಂದು ಕುಟುಕಿದರು. ನಾವು ಯಾರ ಮೇಲೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮುಡಾ ವಿಚಾರವಾಗಿ ಈಗಾಗಲೇ ತನಿಖೆ ನಡೆದಿದೆ. ಪ್ರತಿ ಪಕ್ಷದವರು ಸರ್ಕಾರಕ್ಕೆ ಸಲಹೆ, ಸೂಚನೆ ಕೊಡಬೇಕು. ಅದನ್ನು ಮೀರಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದರು. ಸೈಟ್ ವಾಪಸ್ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ ಮೊದಲು…
ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಭರ್ಜರಿ ಮಳೆಯಾಗಿದ್ದು ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ https://youtu.be/gMUdKA0vG1E?si=jrt5SFlwOzT1NaJj ಭಾರೀ ಮಳೆಯ ಪರಿಣಾಮ ಸಂಡೂರಿನ ಗಣಿ ಪ್ರದೇಶದಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರಿನಲ್ಲಿ ನೂರಾರು ಗಣಿ ಲಾರಿಗಳು ಭಾಗಶಃ ಮುಳುಗಡೆಯಾಗಿದೆ. ಲಾರಿಗಳು ಜಲಾವೃತಗೊಂಡ ಹಿನ್ನೆಲೆ ಇಡೀ ರಾತ್ರಿ ಚಾಲಕರು ಪರದಾಡಿದ್ದಾರೆ. ಸಂಡೂರಿನ ನಂದಿಹಳ್ಳಿ ವಾಶಿಂಗ್ ಪ್ಲಾಂಟ್ ಬಳಿ ಮಳೆ ಅವಾಂತರಕ್ಕೆ ಲಾರಿ ಚಾಲಕರು ನಲುಗಿ ಹೋಗಿದ್ದಾರೆ. ಕುಮಾರಸ್ವಾಮಿ ಬೆಟ್ಟದಲ್ಲಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲು ಆಗುತ್ತಿದ್ದಂತೆ,ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರೊಡೆದಿದೆ.ಈ ಹಿನ್ನಲೆಯಲ್ಲಿ ಕೆಲ ನಾಯಕರು ತೆರೆಮರೆಯಲ್ಲಿ ಸಿಎಂ ಆಗಲು ಕಸರತ್ತು ಶುರು ಮಾಡಿದ್ದಾರೆ.ಅದ್ರಲ್ಲೂ ಸತೀಶ್ ಜಾರಕಿಹೊಳಿ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿರೋದು ಮತ್ತಷ್ಟು ಕೂತೂಹಲ ಕೆರಳಿಸಿದೆ. https://youtu.be/xtaRg6OEV2Q?si=EcHLIbdXfwQ_wJly ಯೆಸ್,ಸಿಎಂ ಸಿದ್ದರಾಮಯ್ಯ ಸದ್ಯ ಮುಡಾ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.ಒಂದು ಕಡೆ ಲೋಕಾಯುಕ್ತದಲ್ಲಿ ಎಫ್ ಐ ಆರ್ ಮತ್ತೊಂದು ಕಡೆ ಜಾರಿ ನಿದರ್ಶನಾಲಯದಿಂದ ಇಸಿಎಆರ್ ದಾಖಲು ಮಾಡಿರೋದು ಸಿಎಂ ಸಿದ್ದರಾಮಯ್ಯಗೆ ಟೆನ್ಷನ್ ಮೇಲೆ ಟೆನ್ಷನ್ ಗೆ ಒಳಗಾಗಿದ್ದಾರೆ.ಇದ್ರ ನಡುವೆ ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್ ನಾಯಕರೇ ಮರು ಜೀವ ಕೊಟ್ಟಿದ್ದಾರೆ.ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕುತ್ತಿದ್ದಂತೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ನಾಯಕರು ಇತ್ತೀಚೆಗೆ ಕ್ಲೋಸ್ ಡೋರ್ ಮೀಟಿಂಗ್ ಗಳನ್ನ ಮಾಡುತ್ತಿದ್ದಾರೆ.ಡಿ.ಕೆ.ಶಿವಕುಮಾರ್ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ್ದು,ಸತೀಶ್ ಜಾರಕಿಹೊಳಿ,ಎಂ.ಬಿ.ಪಾಟೀಲ್ ನಿವಾಸಕ್ಕೆ ಪರಮೇಶ್ವರ್ ಭೇಟಿ ಮಾಡಿ ಕ್ಲೋಸ್ ಡೋರ್…
ಬೆಂಗಳೂರು:- ಕಳೆದ ಒಂದು ವಾರದ ಹಿಂದೆ ಕೆಜಿಗೆ 40 ರೂ. ಇದ್ದ ದರ ಈಗ ಎರಡು ಪಟ್ಟು ಹೆಚ್ಚಳವಾಗಿದೆ. ಶುಕ್ರವಾರದಿಂದ ಕೆಜಿಗೆ 80 ರೂ. ದರದಲ್ಲಿ ಟೊಮೆಟೊ ಮಾರಾಟವಾಗುತ್ತಿದೆ. https://youtu.be/TxM5WovzZMU?si=oSBpkek-bmZfZhAM ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು ಈರುಳ್ಳಿ, ಬೆಳ್ಳುಳ್ಳಿ ಬಳಿಕ ಟೊಮೆಟೊ ದರ ಏರಿಕೆಯಾಗಿದೆ. ಅಕಾಲಿಕ ಮಳೆಯಿಂದ ಟೊಮೆಟೊ ಇಳುವರಿ ಕುಸಿತಗೊಂಡಿದೆ. ಇದರ ಜೊತೆ ಈಗ ನವರಾತ್ರಿ ಹಬ್ಬ ಆರಂಭಗೊಂಡಿದೆ. ಬೇಡಿಕೆ ಜಾಸ್ತಿ ಇದೆ. ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ದರ 70 ರೂ. ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ ಸಮಯದಲ್ಲಿ ಜನರ ಜೇಬು ಮತ್ತಷ್ಟು ಖಾಲಿಯಾಗಲಿದೆ.
ಕಳೆದ ಕೆಲ ದಿನಗಳಿಂದ ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದೆ. ಇದೀಗ ಇರಾನ್ ಗೆ ಇಸ್ರೇಲ್ ಸೇನೆ ಮತ್ತೊಂದು ಅಘಾತ ನೀಡಿದೆ. ತನ್ನ ಗುಪ್ತಚರ ಸಂಸ್ಥೆ ನೀಡಿದ್ದ ಮಾಹಿತಿ ಆಧಾರದ ಮೇಲೆ ಬೈರುತ್‌ನಲ್ಲಿ ವಾಯುದಾಳಿ ನಡೆಸಿದ ಇಸ್ರೇಲ್ ಸೇನೆ ಹೆಜ್ಬೊಲ್ಲಾದ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿಯನ್ನು ಹತ್ಯೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ಸೇನೆ, ಮೃತ ಸಕಾಫಿ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದರು. ಆವರು 2000 ರಿಂದ ಸಂಘಟನೆಯ ಸಂವಹನ ಘಟಕದ ಮುಖ್ಯಸ್ಥನಾಗಿದ್ದರು. ಹೆಜ್ಬೊಲ್ಲಾದ ಎಲ್ಲಾ ಘಟಕಗಳ ನಡುವೆ ಸಂವಹನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಕಾಫಿ ಗಮನಾರ್ಹ ಪ್ರಯತ್ನಗಳನ್ನು ನಡೆಸಿದ್ದರು ಎಂದು ಐಡಿಎಫ್ ಮಾಹಿತಿ ನೀಡಿದೆ. ಬೈರುತ್‌ನ ದಕ್ಷಿಣದ ಉಪನಗರವಾದ ದಹಿಯೆಹ್, ಇರಾನ್ ಬೆಂಬಲಿತ ಹಿಜ್ಬುಲ್ಲಾದ ಭದ್ರಕೋಟೆಯಾಗಿದ್ದು, ಗುರುವಾರ ಮಧ್ಯರಾತ್ರಿ ವೇಳೆ ಇಸ್ರೇಲ್ ವಾಯುಸೇನೆ ದಾಳಿ ನಡೆಸಿ ಮೊಹಮ್ಮದ್ ರಶೀದ್ ಸಕಾಫಿಯನ್ನು ಹೊಡೆದುರುಳಿಸಿದೆ. ಇದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಜನರು ತಮ್ಮ ಮನೆಗಳನ್ನು…
ಕಳೆದ ಕೆಲ ತಿಂಗಳಿನಿಂದ ಇರಾನ್ ಹಾಗೂ ಇಸ್ರೇಲ್ ಯುದ್ಧದಲ್ಲಿ ತೊಡಗಿಕೊಂಡಿವೆ. ಇದರಿಂದ ಈಗಾಗಲೇ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇಸ್ರೇಲ್ ವಿರುದ್ಧ ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಗುಡುಗಿದ್ದಾರೆ. ತೆಹ್ರಾನ್ ನ ಇಮಾಮ್ ಖೊಮೇನಿ ಮೊಸಲ್ಲಾ ಮಸೀದಿಯಲ್ಲಿ ಭಾಷಣ ಮಾಡಿರುವ ಅಯತೊಲ್ಲಾ, ಜಾಗತಿಕ ಮಟ್ಟದಲ್ಲಿ, ಕುರಾನ್ ಅಡಿಯಲ್ಲಿ ಮುಸ್ಲಿಮರ ಒಗ್ಗಟ್ಟಿಗೆ ಕರೆ ನೀಡಿದ್ದಾರೆ. ಪ್ಯಾಲೇಸ್ಟಿನಿಯನ್ ರಾಜ್ಯ, ಲೆಬನಾನ್ ಮತ್ತು ಇತರ ಮುಸ್ಲಿಂ ರಾಷ್ಟ್ರಗಳ ಶತ್ರುವೇ ಇರಾನ್‌ನ ಶತ್ರು ಆಗಿದೆ ಎಂದು ಅವರು ಹೇಳಿದ್ದಾರೆ. 2020 ರಲ್ಲಿ ಬಾಗ್ದಾದ್‌ನ ವಿಮಾನ ನಿಲ್ದಾಣದ ಬಳಿ ಯುಎಸ್ ಡ್ರೋನ್ ದಾಳಿಯಲ್ಲಿ ಇರಾನ್ ಜನರಲ್ ಖಾಸಿಮ್ ಸೊಲೈಮಾನಿ ಸಾವನ್ನಪ್ಪಿದ ನಂತರ ಮತ್ತು ನಂತರ ಇರಾಕ್‌ನಲ್ಲಿನ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಖಮೇನಿ ಇತ್ತೀಚೆಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ್ದರು. 2012ರಲ್ಲಿ ಅದಕ್ಕೂ ಮೊದಲು ಪ್ರಾರ್ಥನೆ ಸಲ್ಲಿಸಿದ್ದರು. ಮಂಗಳವಾರ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯನ್ನು ಖಮೇನಿ ಶ್ಲಾಘಿಸಿದ್ದಾರೆ…
9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಳಸಿರುವಂತೆಯೇ ಈ ಭೇಟಿ ಅಚ್ಚರಿಗೆ ಕಾರಣವಾಗಿದೆ. 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪ್ರಯಾಣಿಸುತ್ತಿದ್ದು, ಭಾರತದ ಈ ಅಚ್ಚರಿ ನಡೆಯ ಹಿಂದೆ ಮಹತ್ವದ ಕಾರಣವೊಂದು ಅಡಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಇದೇ ಅಕ್ಟೋಬರ್ 15 ಮತ್ತು 16 ರಂದು ಪಾಕಿಸ್ತಾನದ ಇಸ್ಲಾಮಾಬಾದ್ ಗೆ ಜೈ ಶಂಕರ್ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಒಳಗೊಂಡಿರುವ SCO, ಪ್ರಭಾವಿ ಆರ್ಥಿಕ ಮತ್ತು ಭದ್ರತಾ ಸಂಸ್ಥೆಯಾಗಿದ್ದು, ಇದು ಅತಿದೊಡ್ಡ ಟ್ರಾನ್ಸ್-ಪ್ರಾದೇಶಿಕ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿ…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಜೈಲು ಸೇರಿ 4 ತಿಂಗಳು ಕಳೆದಿದೆ. ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದ್ದು ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಿನ್ನೆ ಅರ್ಜಿ ವಿಚಾರಣೆ ಇಂದು ಇಂದಿಗೆ ಮುಂದೂಡಲಾಗಿತ್ತು. ಇವತ್ತು ದಾಸನ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಕಂಗಲಾಗಿದ್ದಾರೆ. ಇದೀಗ ಕೊಂಚ ರಿಲ್ಯಾಕ್ಸ್ ಆಗಿರೋ ದರ್ಶನ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. 3 ಬಾರಿ ಮೂಂದೂಡಿಕೆಯಾಗಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ. ನಿನ್ನೆ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಸಿ.ವಿ. ನಾಗೇಶ್ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ ಎಂದು ವಾದಿಸಿದ್ದಾರೆ. ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವ ಮಾಹಿತಿಗೂ ಸಾಕ್ಷಿಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ಮನೆಯಿಂದ ಪೊಲೀಸರು ವಶಕ್ಕೆ ಪಡೆದ ಬಟ್ಟೆ, ಶೂಗಳ ಬಗ್ಗೆ…