ಹಾವೇರಿ:-ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ವಿಧಿವಶರಾಗಿದ್ದು, ರಾಜಕೀಯ ಮುಖಂಡರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. https://youtu.be/NUNt8842Agg?si=8qwV-cCsXPwxkJ2S ಹಾನಗಲ್ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಮನೋಹರ್ ತಹಶೀಲ್ದಾರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು, ಬೆಂಗಳೂರಿನ ಚಾಮರಾಜಪೇಟೆಯ ಶಂಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಮನೋಹರ್ ತಹಶೀಲ್ದಾರ್ ಅವರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನ ಅಗಲಿದ್ದಾರೆ. ಹಾನಗಲ್ನ ಎನ್ಸಿಜೆಸಿ ಮಹಾವಿದ್ಯಾಲಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಅವರ ಹುಟ್ಟೂರು ಆದ ಅಕ್ಕಿಹೊಳಿ ಗ್ರಾಮದ ತೋಟದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. 2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಮನೋಹರ್ ತಹಶೀಲ್ದಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಕೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
Author: Prajatv Kannada
ಹುಬ್ಬಳ್ಳಿ: ಯಾವುದೇ ಪೂರ್ವಾಪರ ಯೋಚನೆಯಿಲ್ಲದೆ ಜಾರಿಗೊಳಿಸಿದ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸರಕಾರದಿಂದ ಆಗುತ್ತಿಲ್ಲ. ಹೀಗಾಗಿ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯ ಸರಕಾರ ಇನ್ನೊಂದು ಮಾರ್ಗದಲ್ಲಿ ನಡೆಯುತ್ತಿದೆ. https://youtu.be/xJq4KW79Q8w?si=HWw8kJGIeyaxFZpx ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಸರಕಾರ ಮಾಡುತ್ತಿದೆ. ಅಽಕಾರಕ್ಕೆ ಬಂದು ಒಂದೂವರೆ ವರ್ಷದ ನಂತರ ಅನರ್ಹ ಕಾರ್ಡುಗಳಿವೆ ಎಂಬುವುದು ಗೊತ್ತಾಗಿದೆ ಅನ್ನಿಸುತ್ತಿದೆ. ಎಲ್ಲಾ ಚುನಾವಣೆಗಳು ಮುಗಿದ ನಂತರ ಬಿಪಿಎಲ್ ಕಾರ್ಡುಗಳಿಗೆ ಕೈ ಹಾಕಿರುವುದು ಗ್ಯಾರಂಟಿ ಯೋಜನೆ ನಿಲ್ಲಿಸುವ ಸೂಚನೆಯಾಗಿದೆ ಎಂದು ಆರೋಪಿಸಿದರು. ಸರಕಾರಕ್ಕೆ ವಾಲ್ಮಿಕಿ ಹಗರಣ, ಮುಡಾ ಹಗರಣದ ಸೇರಿದಂತೆ ಇತರೆ ಅವ್ಯವಹಾರಗಳು ರಾಜ್ಯ ಸರಕಾರಕ್ಕೆ ಕೆಟ್ಟು ಹೆಸರು ಬಂದಿದೆ. ಇದನ್ನು ಮರೆ ಮಾಚುವ ಉದ್ದೇಶದಿಂದ ಬಿಜೆಪಿ ಪಕ್ಷದ ವಿರುದ್ಧ ಆರೋಪ ಮಾಡುವ ಕೆಲಸ ಶುರು ಮಾಡಿಕೊಂಡಿದ್ದಾರೆ. ರಾಜ್ಯ ಸರಕಾರವನ್ನು ಬೀಳಿಸುವ ಕೆಲಸ ಮಾಡಿಲ್ಲ.…
ಬೆಂಗಳೂರು:- ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಬೈಕ್ ಅಪಘಾತ ಸಂಭವಿಸಿದ್ದು, ರ್ಯಾಪಿಡೋ ಬೈಕ್ ನಲ್ಲಿದ್ದ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. https://youtu.be/y13CV8aMFCQ?si=92nmHeKagiIpC4du ಬೈಕ್ ಸವಾರರೊಬ್ಬರು, ರೈಲ್ವೆ ನಿಲ್ದಾಣದಿಂದ ಇಬ್ಬರು ಯುವಕರನ್ನ ಪಿಕ್ ಅಪ್ ಮಾಡಿದ್ದರು. ಸ್ವಲ್ಪ ಮುಂದೆ ಬರ್ತಿದ್ದಂತೆ ಟ್ಯಾಂಕರ್ ಗೆ ಡಿಕ್ಕಿ ಹೊಡೆದು, ಬಳಿಕ ಆಟೋಗೂ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮೂವರು ಬೈಕ್ ಸವಾರರು, ಕೆಳಗೆ ಬಿದ್ದಿದ್ದಾರೆ. ಹೆಲ್ಮೆಟ್ ಇಲ್ಲದೆ ಕಾರಣ ಮೂವರ ತಲೆಗೂ ಪೆಟ್ಟಾಗಿದೆ. ಸದ್ಯ ಮೂವರು ಯುವಕರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಮರಾಜಪೇಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೊಮ್ಮಾಯಿ ವಿರುದ್ಧ ಅಸಮಾಧಾನ ಇದೆ, ಶಿಗ್ಗಾವಿಯಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. https://youtu.be/HxF4bv9JtgE?si=N7zWDGDiOsFu6yfl ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 3 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಹಿಂದೆ ಬೊಮ್ಮಾಯಿ 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈಗ 10 ಸಾವಿರಕ್ಕೆ ಬಂದಿದ್ದಾರೆ ಅಂತಿದೆ. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಇದೆ. ಹೀಗಾಗಿ ಶಿಗ್ಗಾವಿಯಲ್ಲೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು. ಇನ್ನು ಇದೇ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ಭಿನ್ನ ವರದಿಗಳನ್ನು ಕೊಟ್ಟಿವೆ. ಅದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಜನರು ಮಹಾರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ.ಯುವಕರಿಗೆ ಸಿಗುತ್ತಿರುವ ಉದ್ಯೋಗಗಳು ಗುಜರಾತ್ ಪಾಲಾಗುತ್ತಿವೆ. ಜನರಲ್ಲಿ ಇದರ ಬಗ್ಗೆ ಅಸಮಾಧಾನ ಇದೆ. ಇದನ್ನೆಲ್ಲಾ ಗಮನಿಸಿದರೆ ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದರು.
ತುಂಬಾ ಹಿಂದಿನಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ಒಂದು ಮನೆ ಮದ್ದು ಎಂದರೆ ಅದು ನೀಲಗಿರಿ ಎಲೆಗಳ ಮನೆ ಮದ್ದು ಎಂದು ಹೇಳಬಹುದು. ಶೀತದಿಂದ ಉಂಟಾದ ನೆಗಡಿ, ಕಫ, ಎದೆ ಕಟ್ಟಿಕೊಳ್ಳುವಿಕೆ, ಮೂಗು ಮುಚ್ಚಿಕೊಳ್ಳುವಂತೆ ಆಗುವುದು ಇತ್ಯಾದಿ ಸಮಸ್ಯೆಗಳನ್ನು ನೀಲಗಿರಿಯ ಎಲೆಗಳ ವಿವಿಧ ರೀತಿಯ ಬಳಕೆಯಿಂದ ಬಗೆಹರಿಸಿಕೊಳ್ಳಬಹುದು. ಉಸಿರಾಟದ ಸಮಸ್ಯೆ ನಿವಾರಣೆಗೆ ನೀಲಗಿರಿಯ ಎಲೆಗಳ ಪರಿಣಾಮಕಾರಿ ಬಳಕೆ ಅಷ್ಟೇ ಅಲ್ಲದೆ ಮಾಂಸ ಖಂಡಗಳ ಮತ್ತು ಕೀಲು ನೋವುಗಳ ಉಪಶಮನದಲ್ಲಿ ಆಯಿಂಟ್ಮೆಂಟ್ ರೂಪದಲ್ಲಿ ಉಪಯೋಗಕ್ಕೆ ಬರುತ್ತದೆ. ಕೆಲವೊಮ್ಮೆ ನೀಲಗಿರಿ ಎಲೆಗಳನ್ನು ಬಳಸುವ ಸಂದರ್ಭ ಎದುರಾದರೆ ಇನ್ನು ಕೆಲವೊಮ್ಮೆ ನೀಲಗಿರಿ ಎಲೆಗಳಿಂದ ಎಣ್ಣೆಯನ್ನು ಹೊರ ತೆಗೆದು ಮನುಷ್ಯನ ಅನೇಕ ಸಮಸ್ಯೆಗಳಿಗೆ ಬಳಕೆ ಮಾಡುತ್ತಾರೆ. ನೀಲಗಿರಿ ಎಲೆಗಳ ಉಪಯೋಗಗಳು ನೀಲಗಿರಿ ಎಲೆಗಳನ್ನು ಹಾಗೇ ಸೇವಿಸಿದರೆ ಅದು ಸಾಮಾನ್ಯವಾಗಿ ನಮ್ಮ ದೇಹದ ಜೀರ್ಣಾಂಗಕ್ಕೆ ಹೊಂದಿಕೊಳ್ಳುವುದಿಲ್ಲ ಅಂದರೆ ಅದನ್ನು ಸುಲಭವಾಗಿ ಜೀರ್ಣವಾಗಿಸಿಕೊಳ್ಳುವ ಶಕ್ತಿ ನಮ್ಮ ಜೀರ್ಣಾಂಗಕ್ಕೆ ಇರುವುದಿಲ್ಲ. ನಿಮ್ಮ ಆಹಾರ ಪದ್ಧತಿಯಲ್ಲಿ ನೀಲಗಿರಿಯನ್ನು ಬಳಸುವ ಇಚ್ಛೆ ನಿಮಗಿದ್ದರೆ, ಒಣಗಿದ ನೀಲಗಿರಿ ಎಲೆಗಳಿಂದ…
ಹಿಂದೆ ಸಕ್ಕರೆ ಕಾಯಿಲೆ ಅಂದರೆ ಜನರು ಭೀತಿಪಡುತ್ತಿದ್ದರು. ಆದರೆ ಇಂದು ಅದು ಸಾಮಾನ್ಯ ವಿಚಾರ ಎನ್ನುವಂತಾಗಿದೆ. ಯಾಕೆಂದರೆ ಹದಿಹರೆಯದವರಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರಲ್ಲೂ ಇದು ಕಾಡುವುದು. ಹೀಗಾಗಿ ಮಧುಮೇಹಿಗಳ ಸಂಖ್ಯೆ ವಿಶ್ವ ಮಟ್ಟದಲ್ಲೂ ಹೆಚ್ಚಾಗುತ್ತಲಿದೆ. ಇದರ ನಿಯಂತ್ರಣ ಸಾಧ್ಯವಿಲ್ಲವೇ ಎಂದು ಕೇಳಿದರೆ ಆಗ ಖಂಡಿತವಾಗಿಯೂ ಇದನ್ನು ನಿಯಂತ್ರಿಸಬಹುದು. ಕೊತ್ತಂಬರಿ ಬೀಜ ಅಥವಾ ಕೊತ್ತಂಬರಿ ಸೊಪ್ಪು ಎಲ್ಲರ ಅಡುಗೆ ಮನೆಯಲ್ಲಿ ಕಾಣ ಸಿಗುತ್ತೆ. ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುವ ಈ ಸೊಪ್ಪಿನ ಬಳಕೆ ಕೂಡ ಅಷ್ಟಕಷ್ಟೇ ಎನ್ನಬಹುದು. ಆದರೆ ಇದರಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡರೆ ಮುಂದೆ ಪ್ರತಿ ಆಹಾರ ಪದಾರ್ಥಗಳಲ್ಲೂ ಕೊತ್ತಂಬರಿ ಬಳಸುತ್ತೀರಿ. ಅದರಲ್ಲೂ ಕೊತ್ತಂಬರಿ ಬೀಜದ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಲ್ಲದೆ ಮಧುಮೇಹವನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು ಅಸಾಧ್ಯ. ಹೀಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಆಗ ಖಂಡಿತವಾಗಿಯೂ ಅದರಿಂದ ಲಾಭವಿದೆ ಮತ್ತು ಜೀವಿತಾವಧಿ ಹೆಚ್ಚಿಸಬಹುದು. ಮಧುಮೇಹ ನಿಯಂತ್ರಣಕ್ಕೆ ಕೊತ್ತಂಬರಿ ನೀರು ಹೇಗೆ ನೆರವಾಗುವುದು? ಹೆಚ್ಚಿನ ಎಲ್ಲಾ ಅಡುಗೆಗಳಲ್ಲಿ ಬಳಸಲ್ಪಡುವಂತಹ ಕೊತ್ತಂಬರಿ…
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. 2025 ರ ಬೋರ್ಡ್ ಪರೀಕ್ಷೆಗಳು ಫೆ.15 ರಿಂದ ಪ್ರಾರಂಭವಾಗಲಿವೆ. CBSE ಇತ್ತೀಚೆಗೆ 10 ಮತ್ತು 12 ನೇ ತರಗತಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದರ ಕುರಿತು ವಿವರಗಳನ್ನು ಬಿಡುಗಡೆ ಮಾಡಿತ್ತು. 10 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು 2025ರ ಜ.1 ರಿಂದ ನಡೆಯಲಿದೆ. ಆದರೆ 12 ನೇ ತರಗತಿಯ ಪರೀಕ್ಷೆಗಳು ಫೆ.15 ರಂದು ಪ್ರಾರಂಭವಾಗುತ್ತವೆ ಎಂದು ತಿಳಿಸಿತ್ತು. ವೇಳಾಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಸ್ಟೆಪ್ 1: cbse.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ. ಸ್ಟೆಪ್ 3: ಹೊಸ ಪುಟ ತೆರೆದುಕೊಳ್ಳುತ್ತದೆ. ಆಗ, ಬೋರ್ಡ್ ಪರೀಕ್ಷೆಗಳಿಗಾಗಿ X ಮತ್ತು XII ತರಗತಿಯ ದಿನಾಂಕದ ವೇಳಾಪಟ್ಟಿ 2025 (7.65 MB) 20/11/2024New_img ಮೇಲೆ ಕ್ಲಿಕ್ ಮಾಡಿ. ಸ್ಟೆಪ್ 4: ಪಿಡಿಎಫ್ ತೆಗೆದುಕೊಳ್ಳುವಂತೆ ಸೂಚಿಸುತ್ತದೆ. ಸ್ಟೆಪ್ 5: CBSE ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಿ.
ಚೆನ್ನೈ: ಕಳ್ಳಭಟ್ಟಿ ಸಾರಾಯಿ ಸೇವಿಸಿ 68 ಜನ ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಿಂದ ವರದಿಯಾಗಿತ್ತು. ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮದಿಂದ ಆಗಿರುವ ದುರಂತವಾಗಿದೆ ಎಂದು ಬಿಜೆಪಿ ಮುಖಂಡ ಕೆ ಅಣ್ಣಾಮಲೈ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅಕ್ರಮ ಮದ್ಯ ದುರಂತ ಪ್ರಕರಣವನ್ನು ಕೇಂದ್ರ ತನಿಖಾ ದಳದ ನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. https://youtu.be/-KtsRZxv1qg?si=sKYvYz9UcOJ-wkqS ಡಿಎಂಕೆ ಸರ್ಕಾರ ಈ ಪ್ರಕರಣವನ್ನು ಈಗಾಗಲೇ ಸಿಐಡಿಯ ಕ್ರೈಂ ಬ್ರಾಂಚ್ ವಿಭಾಗಕ್ಕೆ ವರ್ಗಾಯಿಸಿತ್ತು. ಇನ್ನೂ ಸಿಬಿಐ ತನಿಖೆಗೆ ಈ ಪ್ರಕರಣದ ವರ್ಗಾವಣೆಯನ್ನು ವಿರೋಧಿಸಿತ್ತು. ಈ ಸಂಬಂಧ ಐಎಡಿಎಂಕೆ, ಪಿಎಂಕೆ ಮತ್ತು ಬಿಜೆಪಿ ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ಆಡಳಿತಾರೂಢ ಡಿಎಂಕೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಪ್ರಕರಣ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಎಸ್ಪಿಯನ್ನು ಅಮಾನತು ಮಾಡಲಾಗಿದೆ. ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರು ವಾದ…
ಬೆಳಗಾವಿ: ಬುಲೇರೋ ವಾಹನ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ನಡೆದಿದೆ. https://youtu.be/HxF4bv9JtgE?si=E-VAZBqT-OsErsZT ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಮಹೇಶ ಕರಿಕಟ್ಟಿ (32) ಮೃತ ದುರ್ಧೈವಿಯಾಗಿದ್ದು,ನಿನ್ನೆ ತಡರಾತ್ರಿ ಬೈಕ್ ಮೇಲೆ ಸಂಚರಿಸುವಾಗ ಬುಲೇರೋ ವಾಹನ ಓವರ್ ಟೇಕ್ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ವಾಹನ ಚಕ್ರಕ್ಕೆ ಸಿಲುಕಿದ ಬೈಕ್ ಸವಾರನ ಮೃತದೇಹ ಚಿದ್ರ ಚಿದ್ರವಾಗಿದ್ದು, ಬೈಲಹೊಂಗಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ
ಯಾದಗಿರಿ: ಕಟಾವಿಗೆ ಬಂದಿದ್ದ 4 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದಿದೆ. https://youtu.be/cwJHyFvg6so?si=9wbw1AEjTv6qgqwp ಗ್ರಾಮದ ಶಿವಪುತ್ರ ಎಂಬ ರೈತನಿಗೆ ಸೇರಿದ ಕಬ್ಬಿನ ಬೆಳೆಯಾಗಿದೆ. ಜಮೀನಿನಲ್ಲಿರುವ ಪಂಪ್ ಸೆಟ್ ನ ವಿದ್ಯುತ್ ವೈಯರ್ ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ದುರ್ಘಟನೆ ನಡೆದಿದೆ.ಬೆಂಕಿ ನಂದಿಸಲು ಗ್ರಾಮಸ್ಥರಿಂದ ಹರಸಾಹಸ ಪಟ್ಟಿದ್ದಾರೆ. ಆದ್ರೆ ಬೆಂಕಿ ನಂದಿಸುವಷ್ಟರಲ್ಲಿ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ. ಇನ್ನೂ ಬೆಳೆ ಕಳೆದುಕೊಂಡು ಅನ್ನದಾತ ಶಿವಪುತ್ರಪ್ಪ ಕಂಗಲಾಗಿದ್ದು, ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.