Author: Prajatv Kannada

2019ರ ಈಸ್ಟರ್ ಭಾನುವಾರ ನಡೆದ ಬಾಂಬ್ ದಾಳಿ ಹಾಗು ಮತ್ತಿತರ ಅಹಿತಕರ ಘಟನೆಗಳಿಂದಾಗಿ ಶ್ರೀಲಂಕಾದ ಪ್ರವಾಸೋದ್ಯಮ ಗಮನಾರ್ಹ ಕುಸಿತ ಕಂಡಿತ್ತು. ಸದ್ಯ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಈ ಮಧ್ಯೆ ಭಾರತ ಸೇರಿದಂತೆ 35 ದೇಶಗಳಿಗೆ ವೀಸಾಮುಕ್ತ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಕಳೆದ ತಿಂಗಳು ಶ್ರೀಲಂಕಾ ತನ್ನ ಪೋರ್ಟಲ್​ ಸಮಸ್ಯೆಯಿಂದಾಗಿ ಆನ್​ಲೈನ್​ ವೀಸಾ ಸೇವೆಯನ್ನು ನಿಲ್ಲಿಸಿತ್ತು. ಇದರ ಪರಿಣಾಮ, ಅನೇಕರು ವೀಸಾ ಪಡೆಯಲು ಸಾಕಷ್ಟು ಸಮಯ ಕಾಯಬೇಕಾದಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಲು ಕಡ್ಡಾಯ ವೀಸಾ ನಿರ್ಬಂಧವನ್ನು ತೆಗೆದುಹಾಕಿದೆ. ಭಾರತೀಯರು ವೀಸಾಕ್ಕೆ ಕಾಯದೇ ವರ್ಷದ ಯಾವುದೇ ಸಮಯದಲ್ಲೂ ಪ್ರವಾಸ ಕೈಗೊಳ್ಳಬಹುದಾಗಿದೆ. ಭಾರತದ ಜೊತೆಗೆ ಯುಕೆ, ಯುಎಸ್​ಎ, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಚೀನಾ, ರಷ್ಯಾ, ದಕ್ಷಿಣ ಕೋರಿಯಾ ಮತ್ತು ಜಪಾನ್​ ಸೇರಿದಂತೆ ಒಟ್ಟು 35 ದೇಶಗಳಿಗೆ ವೀಸಾಮುಕ್ತ ಅವಕಾಶಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರೆ ತಿಳಿಸಿದ್ದಾರೆ. ಇದರಿಂದಾಗಿ, ಪ್ರವಾಸಿಗರು ಈ ಹಿಂದೆ…

Read More

ಬೆಂಗಳೂರು: ಇತ್ತೀಚಿಗೆ ಬಿಬಿಎಂಟಿಸಿ ಬಸ್​ ನಿರ್ವಾಹಕನಿಗೆ ಚಾಕು ಇರಿದ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು, ಬಿಎಂಟಿಸಿ ವೋಲ್ವೋ ಬಸ್​ ಚಾಲಕ ಮತ್ತು ನಿರ್ವಾಹಕನಿಗೆ ಸ್ಕ್ರೂಡ್ರೈವರ್​ ತೋರಿಸಿ ಬೆದರಿಕೆ ಹಾಕಲಾಗಿದೆ. https://youtu.be/BYixGlc4b68?si=DOehfoz89zefSaKo ಗುರುವಾರ ಸಂಜೆ 4:15ರ ಸುಮಾರಿಗೆ ಹೊಸ ರೋಡ್ ಬಸ್ ಸ್ಟ್ಯಾಂಡ್ ಗೆ ಹೋಗುವ ಮುನ್ನಕಂಡಕ್ಟರ್ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೆ ಹಿಂದಿನ ಸ್ಟಾಪ್ ನಲ್ಲಿ ಟಿಕೆಟ್ ನೀಡಬೇಕಿತ್ತುಹಾಗಾಗಿ ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ನೀಡಲು ಮುಂದಾಗಿದ್ದ ಕಂಡಕ್ಟರ್‌ಇದರಿಂದ ಆಕ್ರೋಶಗೊಂಡಿದ್ದ ಪ್ರಯಾಣಿಕಹೊಸ ರೋಡ್ ಬಸ್ ಸ್ಟಾಪ್ ನಲ್ಲಿ ಇಳಿದು ದಾಂದಲೆ ಸ್ಕ್ರೂಡ್ರೈವರ್ ತೋರಿಸಿ ಚುಚ್ಚಿತ್ತಿನಿ ನಿಮ್ಮಬ್ಬರಿಗೂ ಎಂದು ಅವಾಜ್ ಹಾಕಿದ್ದಾನೆ. ಬಿಎಂಟಿಸಿ ವೋಲ್ವೋ ಬಸ್​ ಅತ್ತಿಬೆಲೆಯಿಂದ ಮೆಜಸ್ಟಿಕ್​ಗೆ ಹೋಗುತ್ತಿತ್ತು. ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ​ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂಬಂಧ ಬಸ್​ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್…

Read More

ಲೆಬನಾನ್​ನ ಬೈರುತ್​ ಮೇಲೆ ಇಸ್ರೇಲ್​ ನಡೆಸಿರುವ ದಾಳಿಯಲ್ಲಿ 30 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಲೆಬನಾನ್‌ನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ರಾಜಧಾನಿಯಲ್ಲಿರುವ ಕಟ್ಟಡದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 9ಕ್ಕೂ ಅಧಿಕ ಜನರು ಮೃತಪಟ್ಟೊದ್ದಾರೆ.. ಸೆಪ್ಟೆಂಬರ್ ತಿಂಗಳ ಕೊನೆಯಿಂದ ಲೆಬನಾನ್ ದೇಶದಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಗುಂಪುಗಳು ಪ್ರಬಲವಾಗಿ ಇರುವ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ಬುಧವಾರ ಯಾವುದೇ ಎಚ್ಚರಿಕೆ ನೀಡದೇ ಇಸ್ರೇಲ್ ದಾಳಿ ನಡೆಸಿದ್ದು ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ಪ್ರಧಾನ ಮಂತ್ರಿ ಕಚೇರಿ ಮತ್ತು ಸಂಸತ್ತಿನ ಸಮೀಪದಲ್ಲಿರುವ ಕಟ್ಟಡಕ್ಕೆ ಅಪ್ಪಳಿಸಿದೆ. ​ಹಿಜ್ಬುಲ್ಲಾದ ನಾಗರಿಕ ರಕ್ಷಣಾ ಘಟಕದ ಏಳು ಸದಸ್ಯರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ನಿರಂತರವಾಗಿ ಇಸ್ರೇಲ್ ಮತ್ತು ಹಿಜ್ಬುಲ್ಲಾಗಳ ನಡುವೆ ಲೆಬನಾನ್​ನ ಗಡಿಯಾದ್ಯಂತ ಪ್ರತಿದಿನ ಯುದ್ಧ ನಡೆಯುತ್ತಿದೆ. ಅಕ್ಟೋಬರ್ 7, 2023 ರಂದು ಹಮಾಸ್‌ನ ಗಡಿಯಾಚೆಗೆ ನಡೆದ ದಾಳಿಯಲ್ಲಿ 1,200 ಇಸ್ರೇಲಿಗಳು ಮೃತಪಟ್ಟಿದ್ದರು.…

Read More

ಪೂರ್ವ ಕಾಂಗೋದ ಕಿವು ಸರೋವರದಲ್ಲಿ 278 ಪ್ರಯಾಣಿಕರಿದ್ದ ದೋಣಿ ಮುಳುಗಿದ ಪರಿಣಾಮ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ತಿಳಿಸಿದ್ದಾರೆ. ಈ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ. ಪ್ರಯಾಣಿಕರಿಂದ ತುಂಬಿದ್ದ ದೋಣಿಯು ಕಿಟುಕು ಬಂದರಿನಿಂದ ಕೇವಲ ಮೀಟರ್ (ಗಜ) ದೂರದಲ್ಲಿ ಡಾಕ್ ಮಾಡಲು ಪ್ರಯತ್ನಿಸುತ್ತಿರುವಾಗ ಮುಳುಗಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು ಎನ್ನಲಾಗಿದೆ. ದೋಣಿ ಮುಳುಗಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಸುಮಾರು 10 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಳುಗಿದ ದೋಣಿಯಿಂದ ಕನಿಷ್ಠ 50 ಶವಗಳನ್ನು ಹೊರತೆಗೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. 10 ಮಂದಿ ಬದುಕುಳಿದಿದ್ದು, ಅವರೆನ್ನಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.…

Read More

ಬೆಂಗಳೂರು: ನಿರೀಕ್ಷೆಯಂತೆ ಷೇರು ಮಾರುಕಟ್ಟೆಯಲ್ಲಿ  ರಕ್ತಪಾತವಾಗಿದ್ದು ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 10 ಲಕ್ಷ ಕೋಟಿ ರೂ. ಕರಗಿದೆ. https://youtu.be/mi-Zhjf5sZc?si=XE4zckIwOmuaerdK ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌  ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ  ಸೂಚಂಕ್ಯ ನಿಫ್ಟಿ  ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 10 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಯಾವುದು ಎಷ್ಟು ಇಳಿಕೆ? ಸೆನ್ಸೆಕ್ಸ್‌ 1,769.19 (-2.10%) ಅಂಕ ಕುಸಿದು 82.497.1ರಲ್ಲಿ ಕೊನೆಯಾಯಿತು. ನಿಫ್ಟಿ 50 546.80(-2.12%) ಇಳಿಕೆಯಾಗಿ 25,250.1ರಲ್ಲಿ ಮುಕ್ತಾಯಗೊಳಿಸಿತು. ನಿಫ್ಟಿ ಮಿಡ್‌ಕ್ಯಾಪ್‌ 100 1,333.60 (-2.04%) ಅಂಕ ಕುಸಿದು 59,024.7 ರಲ್ಲಿ ಕೊನೆಯಾಯಿತು. ಮಾರುಕಟ್ಟೆ ಮೌಲ್ಯ 5 ಸಾವಿರ ಕೋಟಿ ರೂ. ಇರುವ ಕಂಪನಿಗಳು ಸ್ಮಾಲ್‌ಕ್ಯಾಪ್‌ ಎಂದು ಗುರುತಿಸಿಕೊಂಡರೆ, 5 ಸಾವಿರ ಕೋಟಿ ರೂ.ನಿಂದ 20 ಸಾವಿರ ಕೋಟಿ ರೂ. ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಮಿಡ್‌ ಕ್ಯಾಪ್‌ ವ್ಯಾಪ್ತಿಯಲ್ಲಿ ಬರುತ್ತವೆ.

Read More

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆಯಷ್ಟೆ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಈ ಬೆನ್ನಲ್ಲೇ ರಜನಿಕಾಂತ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ರಜನೀಕಾಂತ್​ ರ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ದೂರು ದಾಖಲಾಗಿದೆ. ‘ವೆಟ್ಟೆಯಾನ್’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟ್ರೈಲರ್​ನಲ್ಲಿ ಕೇಳಿ ಬರುವ ಕೆಲ ಸಂಭಾಷಣೆಗಳ ವಿರುದ್ಧ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದಾರೆ. ಟ್ರೈಲರ್ ನಲ್ಲಿ ಬಳಸಲಾಗಿರುವ ಕೆಲವು ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಲನಿವೇಲುಸ್ವಾಮಿ ಎಂಬುವರು ಹೈಕೋರ್ಟ್​ನ ಮಧುರೈ ಬೆಂಚ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದು, ‘ವೆಟ್ಟೆಯಾನ್’ ಸಿನಿಮಾದಲ್ಲಿ ಬಳಸಲಾಗಿರುವ ಎನ್​ಕೌಂಟರ್ ಕುರಿತಾದ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಎತ್ತಿದ್ದು, ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಸಿನಿಮಾದ ಟ್ರೈಲರ್​ನಲ್ಲಿ ನಾಯಕ ಎನ್​ಕೌಂಟರ್ ಕುರಿತಾಗಿ ಹೀರೋಯಿಕ್ ಸಂಭಾಷಣೆಗಳನ್ನು ಹೇಳುವ ದೃಶ್ಯಗಳಿವೆ. ಈ ದೃಶ್ಯಗಳು ಹಾಗೂ ಸಂಭಾಷಣೆಗಳ ಬಗ್ಗೆ ಪಲನಿವೇಲುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಿನಿಮಾದಲ್ಲಿ ಅಕ್ರಮ ಚಟುವಟಿಕೆಯಾದ…

Read More

ಬೆಂಗಳೂರು: ಎಣ್ಣೆ ಮತ್ತಲ್ಲಿ ಬಿಹಾರಿ ಗೆಳೆಯರ ನಡುವೆ ಕಿರಿಕ್ ನಡೆದಿದ್ದು ಅತಿರೇಕದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಕೋ ಲೇಔಟ್ ಬಳಿಯ ಕುಟ್ಟಪ್ಪ ಗಾರ್ಡನ್ ನಲ್ಲಿ ನಡೆದಿದೆ.\ https://youtu.be/vJRwvVOloiU?si=5-pYSsQqQK2cFMiL ಈ ಮಧ್ಯೆ ಬಿಹಾರಿ ಮೂಲದ ವ್ಯಕ್ತಿ ಭೀಕರ ಹತ್ಯೆ ನಡೆದಿದ್ದಿ ಸಜಿತ್ (34) ಕೊಲೆಯಾದ ದುರ್ದೈವಿಯಾಗಿದ್ದು ಮೈಕೋ ಲೇಔಟ್ ಬಳಿಯ ಕುಟ್ಟಪ್ಪ ಗಾರ್ಡನ್ ನಲ್ಲಿ ಘಟನೆ ಸಂಭವಿಸಿದೆ. ಇಂಟೀರಿಯರ್ ಡಿಸೈನ್ ಗೋಡೌನ್ ನಲ್ಲಿ ಕೆಲಸ ಮಾಡುತ್ತಿದ್ದ ಮೃತ ಸಜೀತ್ ಮರದ ದೊಣ್ಣೆಗಳಿಂದ ಸಹೋದ್ಯೋಗಿಗಳಿಂದ ಹಲ್ಲೆ ಮಾಡಿ ಭೀಕರ ಹತ್ಯೆ ಸ್ಥಳಕ್ಕೆ ಸೊಕೋ & ಎಪ್.ಎಸ್.ಎಲ್ ಟೀಂ ಭೇಟಿ ಪರಿಶೀಲನೆ ನಡೆಸಿದ್ದು ಮೈಕೊಲೇಔಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

Read More

ಬೆಂಗಳೂರು: ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. https://youtu.be/yFjh2qqIz00?si=NUq52JI6AIB9oGYf ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದು ರಾಯಚೂರಿನ ದೇವದುರ್ಗ ಮೂಲದ ಪರಶುರಾಮ್(24)ಮೃತ ಕಾರ್ಮಿಕನಾಗಿದ್ದು ಪೈಪ್ ಲೈನ್ ಹಾಕಲು ಮಣ್ಣು ತೆಗೆಯುತ್ತಿದ್ದ ವೇಳೆ ಕುಸಿದ ಕಾಂಪೌಂಡ್ ಗೋಡೆ ಕಾಂಪೌಂಡ್ ಗೋಡೆ ಪಕ್ಕದಲ್ಲಿಯೇ ಗುಂಡಿ ತೆಗೆಯುತ್ತಿದ್ದ ವೇಳೆ ಅವಘಡ ರಾಯಚೂರು ಮೂಲದ ಐದಾರು ಮಂದಿ ಮಣ್ಣು ಕೆಲಸ ಮಾಡುತ್ತಿದ್ದರು ಈ ವೇಳೆ ಏಕಾಏಕಿ ಕಾರ್ಮಿಕ ಮೇಲೆಯೇ ಕುಸಿದ ಗೋಡೆ ಹೊಟ್ಟೆಪಾಡಿಗೆ ದೂರದ ರಾಯಚೂರಿನಿಂದ ಬಂದಿದ್ದ ಕಾರ್ಮಿಕ ಸಾವು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Read More

ಕಲಬುರ್ಗಿ:- ಪತಿಯೇ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿ ನಗರ ಹೊರವಲಯದ ಶಹಬಾದ್ ರಸ್ತೆಯ ಇಟ್ಟಿಗೆ ಭಟ್ಟಿಯಲ್ಲಿ ಜರುಗಿದೆ. https://youtu.be/TMgPTgej294?si=xv_MmrjYwNhaSGzZ 35 ವರ್ಷದ ಪ್ರಿಯಾಂಕ ಕೊಲೆಯಾದ ದುರ್ದೈವಿ. ಪ್ರಿಯಾಂಕಾಳನ್ನ ಅದೇ ತಾಲೂಕಿನ ನಿಂಬರ್ಗಾ ಗ್ರಾಮದ ವಕೀಲ್ ರಾಠೋಡ್ ಜೊತೆ ಮದ್ವೆ ಮಾಡಿಕೊಡಲಾಗಿತ್ತು. ಇವರು ಮಕ್ಕಳೊಂದಿಗೆ ಶಹಬಾದ್ ರಸ್ತೆಯಲ್ಲಿನ ಇಟ್ಟಿಗೆ ಭಟ್ಟಿ ಬಳಿ ಪುಟ್ಟದೊಂದು ಮನೆ ಮಾಡಿಕೊಂಡಿದ್ದರು. ಹಿಗೇ ಅದೇ ಇಟ್ಟಿಗೆ ಭಟ್ಟಿಯಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡ್ತಿದ್ದ ದಂಪತಿ ನಿತ್ಯವೂ ಕಂಠಪೂರ್ತಿ ಕುಡಿಯುತ್ತಿದ್ದರು. ಅದರಂತೆ ಕಳೆದ ರಾತ್ರಿ ಸಹ ಇಬ್ಬರು ಎಣ್ಣೆ ಹೊಡೆದಿದ್ದಾರೆ. ಎಣ್ಣೆ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ಅಲ್ಲೆ ಇದ್ದ ಇಟ್ಟಿಗೆಯಿಂದ ಪತ್ನಿ ಪ್ರಿಯಾಂಕಾಳ ತಲೆಗೆ ಜಜ್ಜಿ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಪತಿ ವಕೀಲ್ ರಾಠೋಡ್ ಮತ್ತು ಪತ್ನಿ ಪ್ರಿಯಾಂಕಾ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾ, ಸಂಜೆಯಾದರೆ ಸಾಕು ರಾಠೋಡ್ ಮನೆಗೆ ಎಣ್ಣೆ ತರುತ್ತಿದ್ದನು. ಬಳಿಕ ಇಬ್ಬರೂ ಒಟ್ಟೊಟ್ಟಿಗೆ ಎಣ್ಣೆ…

Read More

ಹುಬ್ಬಳ್ಳಿ : ನಗರದ ಜೀವೋತ್ತಮ ಕಾಲೋನಿ ಎಪಿಎಂಸಿ ವೀರರಾಣಿ ಕಿತ್ತೂರು ಚೆನ್ನಮ್ಮ ಮಹಿಳಾ ಮಂಡಲ ನವರಾತ್ರಿ ಹಬ್ಬದ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿತ್ತು. https://youtu.be/Of0q2izbOsw?si=cOAgy5MkJFhOhX1Z ಈ‌ ಸಂದರ್ಭದಲ್ಲಿ ಸ್ಥಳೀಯರು, ಜೀವೋತ್ತಮ ಕಾಲೋನಿ ಎಪಿಎಂಸಿ ವೀರರಾಣಿ ಕಿತ್ತೂರು ಚೆನ್ನಮ್ಮ ಮಹಿಳಾ ಮಂಡಲ ಸದಸ್ಯರು ಹಾಗೂ ಸಾಧಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಮತಿ ಚೇತನ ಶ್ರೀಮತಿ ನಾಗವೇಣಿ, ಸುಧಾ, ಶೋಭಾ,ಮೀನಾಕ್ಷಿ ಶ್ರೀಮತಿ ಸನ್ನಿಧಿ ಲತಾ ಕುಮಾರಿ, ಪೂಜಾ, ಕುಮಾರಿ ಪದ್ಮ ,ಪ್ರಿಯ ಕುಮಾರಿ ತ್ರಿಷಾ ಮುಂತಾದವರು ಇದ್ದರು.

Read More