Author: Prajatv Kannada

ತಿರುವನಂತಪುರಂ: ಕೇರಳದ ಪರಸ್ಸಾಲ ಪಟ್ಟಣದಲ್ಲಿ ಯೂಟ್ಯೂಬ್ ಚಾನಲ್‌ನಲ್ಲಿ ಸಕ್ರಿಯವಾಗಿದ್ದ ದಂಪತಿ ಭಾನುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಸೆಲ್ವರಾಜ್ (45), ಪ್ರಿಯಾ (40) ಶವವಾಗಿ ಪತ್ತೆಯಾದ ದಂಪತಿ. ಎರಡು ದಿನಗಳಿಂದ ಮನೆಯಿಂದ ಆಚೆ ಬಾರದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೆಲ್ವರಾಜ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಿಯಾ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ ಎಂದು ಪರಸ್ಸಾಲ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಎರಡು ದಿನಗಳ ಹಿಂದೆ ಘಟನೆ ಸಂಭವಿಸಿರಬಹುದು ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸೆಲ್ವರಾಜ್ ಹಾಗೂ ಪ್ರಿಯಾ ದಂಪತಿ ‘ಸೆಲ್ಲು ಫ್ಯಾಮಿಲಿ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಅವರ ಚಾನಲ್ ಸುಮಾರು 18,000 ಫಾಲೋವರ್ಸ್ ಅನ್ನು ಹೊಂದಿದ್ದು, 1,400ಕ್ಕೂ ಹೆಚ್ಚು ವೀಡಿಯೋಗಳನ್ನು ತಮ್ಮ ಚಾನಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೊನೆಯದಾಗಿ ಅ.25ರಂದು (ಶುಕ್ರವಾರ) ತಮ್ಮ ಫ್ಯಾಮಿಲಿ ಫೋಟೋಗಳನ್ನ ಎಡಿಟಿಂಗ್…

Read More

ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಸಂಜೆ ಶ್ವೇತಭವನದಲ್ಲಿ ಅನಿವಾಸಿ ಭಾರತೀಯರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಹಿಂದಿನ ವರ್ಷಗಳ ಸಂಪ್ರದಾಯದಂತೆ ಅಧ್ಯಕ್ಷರು ಭಾಷಣಕ್ಕೂ ಮುನ್ನಾ ಬ್ಲೂ ರೂಮ್‌ನಲ್ಲಿ ದೀಪವನ್ನು ಬೆಳಗಿಸುತ್ತಾರೆ ಎಂದು ಶ್ವೇತಭವನ ತಿಳಿಸಿದೆ. ದೀಪಾವಳಿ ಆಚರಣೆ ಬಳಿಕ ಅನಿವಾಸಿ ಭಾರತೀಯರನ್ನುದ್ದೇಶಿಸಿ ಬೈಡನ್ ಭಾಷಣ ಮಾಡಲಿದ್ದಾರೆ. ಅವರಿಗಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ. ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದ ಕಾರಣ ಇದು ಅಧ್ಯಕ್ಷ ಬೈಡನ್ ಅವರ ಶ್ವೇತಭವನದಲ್ಲಿನ ಕೊನೆಯ ದೀಪಾವಳಿ ಆಚರಣೆಯಾಗಿದೆ. ಅಧ್ಯಕ್ಷರ ಭಾಷಣದ ವೇಳೆ ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ಸುನಿ ವಿಲಿಯಮ್ಸ್ ಅವರ ವೀಡಿಯೊ ಸಂದೇಶವಿದೆ. ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವೀಡಿಯೊ ಶುಭಾಶಯವನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದಾರೆ. ಹಿಂದೂ ಧರ್ಮದ ಸುನೀತಾ ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಪ್ರಪಂಚದಾದ್ಯಂತದ ಜನರಿಗೆ ದೀಪಾವಳಿ ಶುಭಾಶಯಗಳನ್ನು ಕಳುಹಿಸಿದ್ದಾರೆ.

Read More

ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ಜಾನಿ ಮಾಸ್ಟರ್ ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ವಿಡಿಯೋದಲ್ಲಿ ಹೆಂಡತಿ ಮತ್ತು ಮಕ್ಕಳನ್ನು ಭೇಟಿ ಮಾಡಿದ ಎಮೋಷನಲ್ ಕ್ಷಣ ಇದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಅನೇಕರು ಜಾನಿ ಮಾಸ್ಟರ್ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ‘ಕಳೆದ 37 ದಿನಗಳಲ್ಲಿ ನಮ್ಮಿಂದ ಸಾಕಷ್ಟನ್ನು ಕಸಿದುಕೊಳ್ಳಲಾಗಿದೆ. ನನ್ನ ಕುಟುಂಬದವರು ಮತ್ತು ಹಿತೈಷಿಗಳ ಪ್ರಾರ್ಥನೆಯಿಂದ ನಾನು ಇಂದು ಇಲ್ಲಿ ಇದ್ದೇನೆ. ಸತ್ಯಕ್ಕೆ ಆಗಾಗ ಕತ್ತಲು ಕವಿದಿರುತ್ತದೆ. ಆದರೆ ಸತ್ಯ ನಾಶ ಆಗುವುದಿಲ್ಲ. ಅದು ಒಂದು ದಿನ ಗೆದ್ದೇ ಗೆಲ್ಲುತ್ತದೆ. ನನ್ನ ಜೀವನದ ಈ ಹಂತದಲ್ಲಿ ಕುಟುಂಬವರು ಅನುಭವಿಸಿದ ಕಷ್ಟ ನನ್ನ ಹೃದಯವನ್ನು ಯಾವಾಗಲೂ ಚುಚ್ಚುತ್ತದೆ’ ಎಂದು ಈ ವಿಡಿಯೋ ಜೊತೆ ಜಾನಿ ಮಾಸ್ಟರ್​ ಅವರು…

Read More

ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಮದುವೆಯಾದ ನಾಲ್ಕೇ ನಾಲ್ಕು ವರ್ಷಕ್ಕೆ ದೂರ ದೂರವಾಗಿದ್ದಾರೆ. ಸಮಂತಾರಿಂದ ದೂರವಾದ ನಾಗಚೈತನ್ಯ ಇದೀಗ ನಟಿ ಶೋಭೀತಾ ಜೊತೆ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಕೆಲವೇ ದಿನಗಳಲ್ಲಿ ನಾಗಚೈತನ್ಯ ಹಾಗೂ ಶೋಭೀತಾ ಮದುವೆ ನಡೆಯಲಿದ್ದು ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಸಮಂತಾ ಜೊತೆಗಿನ ಕೊನೇಯ ಫೋಟೋವನ್ನು ಡಿಲೀಟ್​ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ಅವರು ಡಿವೋರ್ಸ್​ ಪಡೆದ ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದ್ದ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದರು. ಆದರೆ ಸಮಂತಾ ಅವರಿಗೆ ಸಂಬಂಧಿಸಿ 3 ಪೋಸ್ಟ್​ಗಳು ನಾಗ ಚೈತನ್ಯ ಅವರ ಇನ್​ಸ್ಟಾಗ್ರಾಮ್​ ವಾಲ್​ನಲ್ಲಿ ಹಾಗೆಯೇ ಇತ್ತು. ಒಂದು- ವಿಚ್ಛೇದನ ಘೋಷಿಸಿದ್ದು, ಎರಡು- ಮಜಿಲಿ ಸಿನಿಮಾದ ಪೋಸ್ಟರ್​, ಮೂರು- ಸಮಂತಾ ಹಾಗೂ ನಾಗ ಚೈತನ್ಯ ಜೊತೆಯಾಗಿ ರೇಸ್​ ಕಾರ್​ ಜೊತೆ ನಿಂತಿದ್ದ ಫೋಟೋಗಳಾಗಿದ್ದವು. ಮೊದಲ ಎರಡು ಫೋಟೋವನ್ನು ನಂತರದ ದಿನಗಳಲ್ಲಿ ನಾಗ ಚೈತನ್ಯ ಅವರು…

Read More

ಕಿಚ್ಚ ಸುದೀಪ್ ತಾಯಿ ಸರೋಜ ಸಂಜೀವ್ ಕಳೆದ ಕೆಲ ದಿನಗಳ ಹಿಂದೆ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರದ ವೀಕೆಂಡ್ ಶೋ ನಡೆಸಲು ಸುದೀಪ್ ಗೈರಾಗಿದ್ದರು. ಸುದೀಪ್ ಬದಲಾಗಿ ಯೋಗರಾಜ್ ಭಟ್ ಹಾಗೂ ಸೃಜನ್ ಲೋಕೇಶ್ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಇದೀಗ ಸುದೀಪ್ ತಾಯಿ ನಿಧನರಾಗಿರುವ ಸುದ್ದಿಯನ್ನು ಯೋಗರಾಜ್ ಭಟ್ ಬಿಗ್ ಬಾಸ್ ಮನೆ ಸದಸ್ಯರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಕಳೆದ ಭಾನುವಾರ ಸುದೀಪ್​ ಅವರು ಬಿಗ್ ಬಾಸ್ ಸಂಚಿಕೆಯ ಶೂಟಿಂಗ್ ಮಾಡಿರಲಿಲ್ಲ. ಆದರೆ ಅದಕ್ಕೆ ಕಾರಣ ಏನು ಎಂಬುದು ಬಿಗ್ ಬಾಸ್ ಮನೆಯೊಳಗೆ ಇರುವ ಯಾರಿಗೂ ತಿಳಿದಿರಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಊಹಿಸಿಕೊಂಡಿದ್ದರು. ಆದರೆ ಸುದೀಪ್ ಅವರ ತಾಯಿ ನಿಧನರಾಗಿದ್ದಾರೆ ಎಂಬುದನ್ನಂತೂ ಯಾರೂ ಊಹಿಸಿರಲಿಲ್ಲ. ಈಗ ಯೋಗರಾಜ್ ಭಟ್ ಅವರು ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ. ‘ಶನಿವಾರ ಸುದೀಪ್ ಅವರ ತಾಯಿ ವಿಪರೀತ ಸೀರಿಯಸ್ ಆಗಿ ಐಸಿಯುನಲ್ಲಿ ಇದ್ದರು. ಈ ವಿಷಯ ಕೇಳಿದ ಮೇಲೂ…

Read More

ಹುಬ್ಬಳ್ಳಿ; ಈಚೆಗೆ ಸುರಿದ ಮಳೆ ನೀರು ಕೋಳಿ ಫಾರ್ಮ್‌ಗೆ ನುಗ್ಗಿ 3 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಕರಬಸಪ್ಪ ಉಳಾಗಡ್ಡಿ ಎಂಬುವವರಿಗೆ ಸೇರಿದ ಕೋಳಿಗಳು ನೀರು ಪಾಲು ಆಗಿವೆ. https://youtu.be/MU6Gx4sR3to?si=M84vhp8EoILbAl33 ಫಾರ್ಮ್‌ನಲ್ಲಿ 4.500 ಸಾವಿರ ಕೋಳಿ ಮರಿಗಳನ್ನು ಕರಬಸಪ್ಪ ಅವರು ಸಾಕಾಣಿಕೆ ಮಾಡಿದ್ದರು. ಅದರಲ್ಲಿ ಮೂರು ಸಾವಿರ ಕೋಳಿ ಮೃತಪಟ್ಟು ಅಂದಾಜು ₹ 2 ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದರು. ಮೇಲೆ ಇದ್ದ ಕೆರೆ ನೀರು ಈಚೆಗೆ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಹರಿದಿದೆ. ಅಲ್ಲದೆ ಹೊಲಗದ್ದೆಗಳಲ್ಲಿಯ ನೀರು ಸೇರಿಕೊಂಡು ಶೆಡ್‌ನಲ್ಲಿ 1 ಅಡಿ ನೀರು ನಿಂತಿದ್ದರಿಂದ ಕೋಳಿಗಳು ಮುಳಗಿ ಮೃತಪಟ್ಟಿವೆ. ಇನ್ನೂ ಮರಿಗಳಾಗಿದ್ದ ಇವು ಹೊರಬಾರದೇ ಸತ್ತಿವೆ. ಫಾರ್ಮ್ ಅನ್ನು ಎತ್ತರದಲ್ಲಿ ಕಟ್ಟಿದ್ದೇವೆ. ಸಾಮಾನ್ಯ ಮಳೆ ಬಂದಿದ್ದರೆ ಏನು ಸಮಸ್ಯೆ ಆಗುತ್ತಿರಲಿಲ್ಲ. ವಿಪರೀತ ಮಳೆಯಿಂದ ನೀರು ನುಗ್ಗಿ ಕೋಳಿ ಮೃತಪಟ್ಟಿವೆ. ಫಾರ್ಮ್ ನಂಬಿ ಜೀವನ ಸಾಗಿಸುತ್ತಿದೆ. ಮಳೆ ಬದುಕನ್ನೇ ಹಾಳು…

Read More

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರ ಅಂತ್ಯವಾಗಿದೆ. ಈಗ ಧಾರಾವಾಹಿಯಿಂದ ಹೊರ ಬಂದ ಬಗ್ಗೆ ಸಂಜನಾ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಸಂಜನಾ ಹಂಚಿಕೊಂಡಿದ್ದಾರೆ. ನಮಸ್ತೆ ಪ್ರಿಯರೇ ಎಲ್ಲಾ ನನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್‌ಗಳ ಜತೆ ಒಂದು ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದ ಜತೆ ನನ್ನ ಪ್ರಯಾಣ ಕೂಡ ಎಂಡ್‌ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಮುಂದುವರಿದು, ಕಳೆದ 3 ವರ್ಷಗಳಿಂದ ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ಕಳೆದ ಮೂರು ವರ್ಷಗಳಿಂದಲೂ ನನ್ನ ವೃತ್ತಿ ಜೀವನದ ಭಾಗವಾಗಿತ್ತು. ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ನನ್ನನ್ನು ಸ್ನೇಹಾ ಆಗಿ ಆಯ್ಕೆ ಮಾಡಿದ್ದಕ್ಕಾಗಿ ಜೀ ವಾಹಿನಿ ಮತ್ತು ಪ್ರೊಡಕ್ಷನ್ ಹೌಸ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹಂಚಿಕೊಳ್ಳುತ್ತೇನೆ. ಕೆಲವು ವೈಯಕ್ತಿಕ ಕಾರಣಿಗಳಿಗಾಗಿ ಹಾಗೂ ಬಂದು ನಿಂತಿರುವ ಕೆಲವು ಸವಾಲುಗಳನ್ನು ಎದುರಿಸಲು ನಾನು ಈ ಧಾರಾವಾಹಿಂದ ಹೊರಗೆ…

Read More

ನವೆಂಬರ್‌ 15ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ನವೆಂಬರ್ 15ರ ಒಳಗಡೆ ರಾಜಕಾಲುವೆ ತೆರವು ಕಾರ್ಯಾಚರಣೆ ಮಾಡುವಂತೆ ಬಿಬಿಎಂಪಿಯ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರ್ ಅವರು ಪರಾಮರ್ಶಿಸಿ ಕೂಡಲೇ ತೆರವಿಗೆ ಆದೇಶ ಮಾಡಬೇಕು ಅಂತಾ ಸೂಚಿಸಿದ್ದಾರೆ. ಬಿಎಂಪಿಯ ದಾಖಲೆಗಳ ಪ್ರಕಾರ ಒಟ್ಟು 1,712 ರಾಜಕಾಲುವೆ ಒತ್ತುವರಿಯಾಗಿದೆ. ಈ ಪೈಕಿ ಬರೋಬ್ಬರಿ 1,348 ಪ್ರಕರಣಗಳು ಸರ್ವೇ ಹಾಗೂ ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯದಿಂದ ತೆರವಿಗೆ ಆದೇಶವಿರುವ 167 ಒತ್ತುವರಿಯನ್ನು ಸಹ ಬಿಬಿಎಂಪಿ ಇನ್ನೂ ತೆರವುಗೊಳಿಸಿಲ್ಲ. ರಾಜಕಾಲುವೆ ಒತ್ತುವರಿ ವಿವರ ಹೀಗಿದೆ: ವಲಯ                              ಒತ್ತುವರಿ ಸಂಖ್ಯೆ                        ತೆರವು ಆದೇಶ ಪೂರ್ವ ವಲಯ             …

Read More

ವಿಜಯನಗರದ ಹಂಪಿನಗರದಲ್ಲಿ ಕನ್ನಡ ಬರಲ್ಲ ಅಂದಿದ್ದಕ್ಕೆ ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿದ ಘಟನೆ  ನಡೆದಿದೆ ಮದ್ಯ ಸೇವಿಸಿದ ವ್ಯಕ್ತಿಯಿಂದ ಅಂಗಡಿ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದಾನೆ. ಶನಿವಾರ ಮಧ್ಯಾಹ್ನ 3:30ಕ್ಕೆ ಈ ಘಟನೆ ನಡೆದಿದ್ದು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. https://youtu.be/NvXzrD3kXNI?si=7q-c-tM09_JLIy6K ಅಂಗಡಿಗೆ ಬರುವ ಮೊದಲೇ ಮದ್ಯ  ಸೇವಿಸಿದ್ದ ವ್ಯಕ್ತಿ ವಸ್ತು ಖರೀದಿಸಿದ ಬಳಿಕ ಹಣ ಪಾವತಿಸಿರಲಿಲ್ಲ. ಈ ವೇಳೆ ಹಣ ಪಾವತಿಸುವಂತೆ ಕ್ಯಾಶಿಯರ್‌ ಹೇಳಿದಾಗ ಕನ್ನಡದಲ್ಲಿ ಮಾತನಾಡು ಎಂದಿದ್ದಾನೆ. ಈ ವೇಳೆ ಕನ್ನಡ ಬರುವುದಿಲ್ಲ ಎಂದಿದ್ದಕ್ಕೆ ಅತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.  ನಂತರ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಕನ್ನಡ ಬಾರದೇ ಇದ್ದರೆ ಕಲಿ ಎಂದು ಅವಾಜ್ ಹಾಕಿದ್ದಾನೆ.

Read More

ಬೆಳಗಾವಿ:- ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಎಂದೇ ಕರೆಯಲ್ಪಡುವ ಈ ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ಅದ್ವಾನ ನಡೆದು ಹೋಗಿದೆ. ಮಹಾರಾಷ್ಟ್ರದ ಕೆಲ ತಾಲೂಕುಗಳಿಂದ ಹಾಗೂ ಗೋವಾದ ಕೆಲ ಭಾಗದಿಂದ ಸಾಕಷ್ಟು ರೋಗಿಗಳು ಈ ಬಿಮ್ಸ್ ಆಸ್ಪತ್ರೆಗೆ ಬರುತ್ತಾರೆ. ಅಪಘಾತ, ಹೆರಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆಗೆ ಜನ ದಾಖಲಾಗುತ್ತಾರೆ. ನಿತ್ಯ ಸಾವಿರಾರು ರೋಗಿಗಳು ಬಂದು ಹೋಗುವ ಈ ಆಸ್ಪತ್ರೆಯಲ್ಲಿ ಕಂದಮ್ಮಗಳು ಸಾವನ್ನಪ್ಪುತ್ತಿರುವ ವಿಷಯ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ. ಅಧಿಕಾರಿಗಳು ಹಾಗೂ ಕೆಲ ವೈದ್ಯರ ಬೇಜವಾಬ್ದಾರಿಯಿಂದ ಬದುಕಿ ಬಾಳಬೇಕಿದ್ದ ಕಂದಮ್ಮಗಳು ಈಗ ಉಸಿರು ಚೆಲ್ಲುತ್ತಿವೆ. https://youtu.be/6dXUzEDAMCU?si=EPoxQkQYpZRY7NbV ಬಿಮ್ಸ್ ಆಸ್ಪತ್ರೆಯಲ್ಲಿ ನಿತ್ಯ ಸುಮಾರು ಇಪ್ಪತ್ತರಿಂದ ಮೂವತ್ತು ಹೆರಿಗೆಗಳು ತಿಂಗಳಿಗೆ 800 ಹೆರಿಗೆಗಳು ಇಲ್ಲಿ ಆಗುತ್ತಿವೆ. ಆದರೆ ಕಳೆದ 3 ತಿಂಗಳಿನಲ್ಲಿ 41 ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಖುದ್ದು ಸಾವಿನ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿಯವರೇ ಒಪ್ಪಿಕೊಂಡಿದ್ದು ಹೀಗಾಗಿ ಜನರಿಗೆ ಸಾಕಷ್ಟು ಆತಂಕ ಹುಟ್ಟುವಂತೆ ಮಾಡಿದೆ. ಆಗಸ್ಟ್‌ನಲ್ಲಿ 12 ಮಕ್ಕಳು ಸೆಪ್ಟಂಬರ್‌ನಲ್ಲಿ 18 ಮತ್ತು…

Read More