ಏಲಕ್ಕಿಯ ಸುವಾಸನೆ ನಾವು ಸ್ವಲ್ಪ ದೂರದಲ್ಲಿದ್ದರೂ ನಮ್ಮ ಮೂಗಿಗೆ ಬಡಿಯುತ್ತದೆ. ಅಡುಗೆ ಎಲ್ಲೂ ಕೂಡ ಇದರ ಬಳಕೆಯಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ನಮಗೆ ಲಭ್ಯವಿವೆ. ಹಾಗಾಗಿಯೇ ಏಲಕ್ಕಿಗೆ ಆಯುರ್ವೇದ ಪದ್ಧತಿಯಲ್ಲಿ ಕೂಡ ಒಂದು ವಿಶೇಷ ಸ್ಥಾನಮಾನವಿದೆ. ಏಲಕ್ಕಿಯ ಉಪಯೋಗದಿಂದ ಹಲವು ಬಗೆಯ ಕಾಯಿಲೆಗಳು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಮನೆಯಲ್ಲಿನ ಹಿರಿಯರು ಹೇಳುತ್ತಾರೆ. ಭಯ ದುರ್ವಾಸನೆಯನ್ನು ದೂರ ಮಾಡುವುದರ ಜೊತೆಗೆ ಜೀರ್ಣಾಂಗಕ್ಕೆ ಸಂಬಂಧ ಪಟ್ಟ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಏಲಕ್ಕಿಯಿಂದ ಇಲ್ಲವಾಗುತ್ತವೆ. ಏಲಕ್ಕಿಯಲ್ಲಿ ಆಂಟಿ – ಮೈಕ್ರೋಬಿಯಲ್ ಚಟುವಟಿಕೆ ಕೂಡಿರುವ ಕಾರಣ ಆಹಾರದಲ್ಲಿ ಇದರ ಬಳಕೆಯಿಂದ ಸಾಕಷ್ಟು ಬಗೆಯ ಬ್ಯಾಕ್ಟೀರಿಯ ಮತ್ತು ಪಂಗಸ್ ಕಣಗಳು ಕೊಲ್ಲಲ್ಪಡುತ್ತವೆ. ಒಂದು ಅಧ್ಯಯನ ಹೇಳುವ ಪ್ರಕಾರ ‘ ಕಾರ್ಡಮಮ್ ಎಸೆನ್ಶಿಯಲ್ ಆಯಿಲ್ ‘ ಬ್ಯಾಕ್ಟೇರಿಯಾ ಗಳನ್ನು ಮತ್ತು ಪಂಗಸ್ ರೋಗಾಣುಗಳನ್ನು ಕೊಲ್ಲುವುದರಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಂಶೋಧಕರು…
Author: Prajatv Kannada
ಗುಜರಾತ್:- ಗುಜರಾತ್ನ ಸೂರತ್ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತ ಅಣ್ಣನೊಬ್ಬ 13 ವರ್ಷದ ತಂಗಿ ಮೇಲೆ ರೇಪ್ ಮಾಡಿದ್ದು, ಆಕೆ ಈಗ ಗರ್ಭಿಣಿ ಆಗಿರುವ ಘಟನೆ ಜರುಗಿದೆ. ಬಾಲಕಿ ಹೊಟ್ಟೆ ನೋವು ಎಂದು ಹೇಳಿದ ಬಳಿಕ ಆಕೆಯ ತಾಯಿ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಆಕೆಗೆ ಮೂರು ತಿಂಗಳಾಗಿರುವುದನ್ನು ದೃಢಪಡಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿ ತನ್ನ ತಾಯಿಗೆ ತನ್ನ ಅಣ್ಣ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಕೇಳಿದ್ದಾಗಿ ತಿಳಿಸಿದ್ದಾಳೆ. ಬಾಲಕಿ ನಿರಾಕರಿಸಿದಾಗ ಆತ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿ, ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಬಳಿಕ ಬಾಲಕಿಯ ತಾಯಿ ಸೆ.30ರಂದು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೋಲೀಸರ ಪ್ರಕಾರ, ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ಕೆಲಸಕ್ಕಾಗಿ ಪ್ರತಿದಿನ ಬೆಳಗ್ಗೆ ಮನೆಯಿಂದ ಹೊರಡುತ್ತಿದ್ದರು ಮತ್ತು ಅವರ ಇಬ್ಬರೂ ಮಕ್ಕಳು ಮನೆಯಲ್ಲಿ ಇರುತ್ತಿದ್ದರು. 8 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ಶಾಲೆಯಲ್ಲಿ…
ಉತ್ತರ ಪ್ರದೇಶ:- ಉತ್ತರ ಪ್ರದೇಶದ ಅಮೇಥಿಯಲ್ಲಿ ಮನೆಗೆ ನುಗ್ಗಿ ದುಷ್ಕರ್ಮಿಗಳು ಶಿಕ್ಷಕ ದಂಪತಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜರುಗಿದೆ. ದರೋಡೆ ಮಾಡಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಅಪರಾಧದ ಹಿಂದಿನ ಉದ್ದೇಶವು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸುನಿಲ್‌ಗೆ ಸಂಬಂಧಿಸಿದ ಕಾನೂನು ವಿವಾದ ಸೇರಿದಂತೆ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ಸಿಂಗ್ ಖಚಿತಪಡಿಸಿದ್ದಾರೆ. ಪೂನಂ ಆಗಸ್ಟ್ 18ರಂದು ಚಂದನ್ ವರ್ಮಾ ಎಂಬಾತನ ವಿರುದ್ಧ ಕಿರುಕುಳ, ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದರು. ಸ್‌ಪಿ ಅನೂಪ್ ಸಿಂಗ್ ಪ್ರಕಾರ, ಈ ಹಿಂದೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಭರವಸೆ ನೀಡಿದ್ದು, ತಮ್ಮ ಅಧಿಕಾರಿಗಳಿಗೆ ಅಪರಾಧ ನಡೆದ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದಾರೆ
ಸೂರ್ಯೋದಯ: 06:10, ಸೂರ್ಯಾಸ್ತ : 05:58 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ ಋತು, ಅಶ್ವಿನಿ ಮಾಸ, ತಿಥಿ:ದ್ವಿತೀಯ ನಕ್ಷತ್ರ: ಚಿತ್ತ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಬೆ.11:24 ನಿಂದ ಮ.1:12 ತನಕ ಅಭಿಜಿತ್ ಮುಹುರ್ತ: ಬೆ.11:41 ನಿಂದ ಮ.12:28 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಚಿಂತಿಸಬೇಡಿ ಮೇಲಾಧಿಕಾರಿಗಳ ಸಹಾಯ ನಿಮಗಿದೆ, ಎಷ್ಟೇ ಬಲಾಢ್ಯ ಶತ್ರುಗಳಿದ್ದರೂ ದೈವಾನುಶಕ್ತಿ ನಿಮಗೆ ರಕ್ಷಣೆ ಮಾಡಲಿದೆ, ನೂತನ ವ್ಯಾಪಾರ ಪ್ರಾರಂಭ, ಪ್ರೇಮಿಗಳ ಮದುವೆಗೆ ಕಿರಿಕಿರಿ,ಕುಟುಂಬದಲ್ಲಿ ಶುಭ ಸಮಾರಂಭ ನೆರವಿರುವುದು, ಮುಖ್ಯ ರಸ್ತೆ ಬದಿಯಲ್ಲಿ ವಾಣಿಜ್ಯ ಮಳಿಗೆ ಕಟ್ಟುವ ಯೋಜನೆ ರೂಪಿಸುವಿರಿ, ಸಂಜೇವೇಳೆಯಲ್ಲಿ…
ವಿಜಯಪುರ:- ರೈತರಲ್ಲಿ ಭಯ ಮೂಡಿಸಿದ್ದ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಅರಣ್ಯಾಧಿಕಾರಿಗು ಯಶಸ್ವಿಯಾಗಿದ್ದಾರೆ. https://youtu.be/O7vtPuKhG6k?si=2hhllTFQFH4Zz6NU ವಿಜಯಪುರ ಜಿಲ್ಲೆ ಸಿಂದಗಿ ತಾ. ಸೋಮಜಾಳ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ ಎನ್ನಲಾಗಿದೆ. L ೋಮಜಾಳ ಗ್ರಾಮದ ಜಮೀನೊಂದರಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ನಿನ್ನೆ ಮುಂಜಾನೆ ಸೋಮಜಾಳ ಸುತ್ತಮುತ್ತ ಚಿರತೆ ಕಂಡು ಬಂದಿದೆ. ಚಿರತೆ ಕಂಡಿದ್ದರಿಂದ ಸೋಮಜಾಳ ಗ್ರಾಮಸ್ತರು ಆತಂಕಗೊಂಡಿದ್ದರು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಬೋನು ಇರಿಸಿದ 24 ಗಂಟೆಯಲ್ಲೆ ಚಿರತೆ ಬಲೆಗೆ ಬಿದ್ದಿದೆ. ಕಳೆದ ತಿಂಗಳು ಮುದ್ದೇಬಿಹಾಳ ತಾಲೂಕಿನಲ್ಲು ಚಿರತೆ ಕಾಣಿಸಿಕೊಂಡಿತ್ತು. ಗ್ರಾಮಸ್ಥರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಳಗಾವಿ: ನವರಾತ್ರಿ ಸಂದರ್ಭದಲ್ಲಿ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್. ಎರಡು ತಿಂಗಳ ಹಣ ಅಕ್ಟೋಬರ್‌ನಲ್ಲಿ ಜಮೆಯಾಗಲಿದೆ. ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಮಾತನಾಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಇದೇ ಅ.7 ಮತ್ತು 9 ರಂದು ಎರಡೂ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು. https://youtu.be/LK_8N841mr4?si=-A1H1ZPVjtc8vNTW ತಾಂತ್ರಿಕ ಕಾರಣದಿಂದ ಎರಡು ತಿಂಗಳ ಕಂತಿನ ಹಣ ತಡವಾಗಿತ್ತು. ಈ ತಿಂಗಳು ಜುಲೈ ಮತ್ತು ಆಗಸ್ಟ್ ಕಂತಿನ ಹಣ ಜಮೆಯಾಗಲಿದೆ ಎಂದು ಹೇಳಿದರು.ಈ ಲಕ್ಷ್ಮೀ ಹೆಬ್ಬಾಳಕರ್ ಹಿಡಿದ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂದು ಮೊನ್ನೆ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ನನ್ನ ಬಗ್ಗೆ ಹೇಳಿದ್ದಾರೆ. ಈ ಹೆಣ್ ಮಗಳು ತುಂಬಾ ಕಿಲಾಡಿ, ಹಠ ಮಾಡಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೇ ಲಕ್ಷ್ಮೀ ಹೆಬ್ಬಾಳಕರ್ ಅಂತ ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಹೇಳಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೂ ಆತಂಕ…
ಬೆಂಗಳೂರು: ನಿರುದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ ಕೇಂದ್ರದಿಂದ ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಚಾಲನೆ ನೀಡಲಾಗಿದೆ. ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಪಡೆಯುವ ಯುವಕ – ಯುವತಿಯರಿಗೆ ಮಾಸಿಕ 5 ಸಾವಿರ ರೂ. ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ ಈ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು. https://youtu.be/wHcNLwLSLGo?si=V_JoQqQ4n2x2Yfg7 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡುವ ಯುವಕ – ಯುವತಿಯರಿಗೆ ಮಾಸಿಕ 5 ಸಾವಿರ ರೂ. ವರ್ಷಕ್ಕೆ 66 ಸಾವಿರ ರೂ.ನಂತೆ ಆರ್ಥಿಕ ನೆರವನ್ನು ಈ ಯೋಜನೆ ನೀಡಲಿದೆ. ಇದರಿಂದ 1.25 ಲಕ್ಷ ಯುವಕ – ಯುವತಿಯರು ಫಲಾನುಭವಿಗಳಾಗಲಿದ್ದಾರೆ. 21 ರಿಂದ 24 ವರ್ಷದ ಯುವಕ-ಯುವತಿಯರಿಗೆ 1 ವರ್ಷಗಳ ಕಾಲ ಇಂಟರ್ನ್‌ಶಿಪ್‌ನ್ನು ಅವಕಾಶ ಕಲ್ಪಿಸಿಕೊಡುತ್ತದೆ. ಇಂಟರ್ನ್‌ಶಿಪ್ ಮಾಡುವವರಿಗೆ ಮಾಸಿಕ 5 ಸಾವಿರ ರೂ. ಭತ್ಯೆ ಮತ್ತು ಒಂದು ಬಾರಿ 6 ಸಾವಿರ ರೂ. ಸಹಾಯ ಭತ್ಯೆಯನ್ನು ಸರ್ಕಾರ ಭರಿಸುತ್ತದೆ. ಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ನೀಡುತ್ತದೆ. ಇದು ಭಾರತಕ್ಕೆ…
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭರ್ಜರಿ ಬ್ಯಾಟ್ ಬೀಸಿದ್ದಾರೆ. https://youtu.be/UquAZkLSPhc?si=3aC_vOIGY-8MFP6I ಸಣ್ಣ ವಿಚಾರಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ಬೇಕಿಲ್ಲ ಎನ್ನುವ ಮೂಲಕ ಬಿಜೆಪಿ,ಜೆಡಿಎಸ್ ನಾಯಕರ ಹೋರಾಟಕ್ಕೆ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೊಡೆತ ಕೊಟ್ಟಿದ್ದಾರೆ.ಜಿ.ಟಿ.ದೇವೇಗೌಡ ಹೇಳಿಕೆ ಸಿಎಂ ಸಿದ್ದರಾಮಯ್ಯಗೆ ಬುಸ್ಟ್ ಕೊಟ್ಟಿದ್ರೆ,ಕೈ ನಾಯಕರು ಇದನ್ನೇ ನಾವು ಹೇಳುತ್ತಿದ್ದೇವು ಎಂದು ಮೀಸೆ ತಿರುಗಲು ಪ್ರಾರಂಭಿಸಿದ್ದಾರೆ. ಮೂಡಾ ವಿಚಾರದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.ಜಿ.ಟಿ.ದೇವೇಗೌಡ ಇವತ್ತು ನೀಡಿದ ಹೇಳಿಕೆ ಪ್ರತಿಪಕ್ಷ ಹೋರಾಟವನ್ನೇ ಕುಗ್ಗಿಸುವಂತೆ ಮಾಡಿದೆ.ಸಣ್ಣ ವಿಚಾರಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾದ ಅವಶ್ಯಕತೆಯಿಲ್ಲ ಅಂತ ಸಿದ್ದು ಪರ ಸಮರ್ಥನೆ ಮಾಡಿಕೊಂಡಿದ್ದಾರೆ.ಎಫ್ ಐಆರ್ ಆದವರೆಲ್ಲರು ರಾಜೀನಾಮೆ ಕೊಡಿ ನನ್ನನ್ನೂ ಸೇರಿಸಿ ತನಿಖೆ ಮಾಡಿ ಎಂಬ ಮಾತು ಪ್ರತಿಪಕ್ಷಗಳಿಗೆ ಛಡಿಯೇಟು ಕೊಟ್ಟಂತಾಗಿದೆ.ಅದ್ರಲ್ಲೂ ತಮ್ಮ ಪಕ್ಷದ ಕೇಂದ್ರ ಸಚಿವ ಕುಮಾರಸ್ವಾಮಿಗೆ ಪರೋಕ್ಷವಾಗಿ ಜಿ.ಟಿ.ದೇವೇಗೌಡ ತಿರುಗೇಟು ನೀಡಿದ್ದಾರೆ.ತಮ್ಮವಿರುದ್ಧವೂ ಎಫ್ ಐಆರ್ ಆಗಿದೆಯಲ್ಲನೀವು ರಾಜೀನಾಮೆ ಕೊಡಿ ಎಂದು ಅಣಕಿಸಿದಂತಿದೆ.ಗೌಡರ ಈ…
ಬಿಗ್ ಬಾಸ್ ಸೀಸನ್ 11ಕ್ಕೆ ಸ್ಪರ್ಧಿಯಾಗಿ ವಕೀಲ ಜಗದೀಶ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮನೆಗೆ ಕಾಲಿಟ್ಟ ದಿನದಿಂದಲೂ ತಮ್ಮ ಅಗ್ರೆಸೀವ್ ಹೇಳಿಕೆಗಳ ಮೂಲಕವೇ ಸದ್ದು ಮಾಡ್ತಿರುವ ಜಗದೀಶ್ ಇದೀಗ್ ವಕೀಲನೇ ಅಲ್ಲ ಅನ್ನೋದು ಗೊತ್ತಾಗಿದೆ. ಈತ ಮಾಡಿರುವ ವಂಚನೆ ಪ್ರಕರಣ ಇದೀಗ ಬಯಲಾಗಿದೆ. ಬಿಗ್ ಬಾಸ್ ಮನೆಯಲ್ಲಿರುವ ಕೆಎನ್ ಜಗದೀಶ್ ಕುಮಾರ್ ತಾವು ಎಲ್ಲ ಕಡೆಗಳಲ್ಲಿ ವಕೀಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಮೇ 7ರಂದು ಜಗದೀಶ್ ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ. ಇದಕ್ಕೆ ಅವರು ಮಾಡಿದ ವಂಚನೆಯೇ ಕಾರಣ ಎನ್ನಲಾಗುತ್ತಿದೆ. ಜಗದೀಶ್ ಕುಮಾರ್ ಅವರ 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ನಕಲಿ ಅನ್ನೋದು ದೃಢಪಟ್ಟಿದೆ. ಈ ಕಾರಣದಿಂದ ಅವರ ಡಿಗ್ರೀ ಹಾಗೂ ಎಲ್ಎಲ್ಬಿ ಪ್ರಮಾಣಪತ್ರವನ್ನು ಅಮಾನ್ಯಗೊಳಿಸಲಾಗಿದೆ. ಹಿಮಾಂಶು ಭಾಟಿ ಎಂಬುವವರು ಜಗದೀಶ್ ವಿರುದ್ಧ ದೂರು ನೀಡಿದ್ದರು. ಅವರ…
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 3ರಂದು ಬೆಳಗಿನ ಜಾವ 3ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಆಗಮನದಿಂದ ಸಂತಸಗೊಂಡಿರೋ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಈ ಬಗ್ಗೆ ಖುಷಿ ಶೇರ್ ಮಾಡಿದ್ದಾರೆ, ನಟಿ ಸುಂದರವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊನ್ನಣ್ಣ, ಎಲ್ಲರಿಗೂ ನಮಸ್ಕಾರ, ನಮ್ಮ “ಚೈಕಾರ್ತಿ ಮೂಡಿ” ಜನಿಸಿದ್ದನ್ನು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಹರ್ಷಿ ಮತ್ತು ಮಗಳು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಕಾಳಂತೆ ಇದ್ದರೆ ಅವಳ ಪ್ರಕಾರ ಮಗು ನನ್ನ ಕಾಪಿ ಎನ್ನುತ್ತಿದ್ದಾಳೆ.ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.