ವಿಶ್ವದ ಎಲ್ಲ ರಾಷ್ಟ್ರಗಳು ಪೋಲಿಯೊ ರೋಗದಿಂದ ಮುಕ್ತವಾಗಿದ್ದರೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರ ಇನ್ನೂ ಈ ರೋಗದಿಂದ ಹೊರಬಂದಿಲ್ಲ. ಎರಡು ರಾಷ್ಟ್ರಗಳಲ್ಲಿ ಪೋಲಿಯೊ ಪ್ರಕರಣಗಳು ಹಠಾತ್ ಏರಿಕೆ ಕಾಣುತ್ತಿದ್ದು ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಸದ್ಯ ಪಾಕ್ನಲ್ಲಿ 26, ಅಫ್ಘಾನಿಸ್ತಾನದಲ್ಲಿ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಎರಡು ಮತ್ತು ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಎರಡು ಪೋಲಿಯೊ ಪ್ರಕರಣಗಳು ವರದಿಯಾಗಿವೆ. ರೋಗವನ್ನು ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ಇದು ಸವಾಲಾಗಿದೆ. ಇತ್ತ, ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್ಒ) ಎರಡು ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಪೋಲಿಯೊ ಪ್ರಕರಣಗಳ ಬಗ್ಗೆ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಪೋಲಿಯೊ ಉಲ್ಬಣಿಸುತ್ತಿದ್ದರೂ, ಅಲ್ಲಿನ ತಾಲಿಬಾನ್ ಸರ್ಕಾರ ಲಸಿಕೆ ನೀಡುವುದನ್ನು ನಿಷೇಧಿಸಿದೆ. ಹೀಗಾಗಿ ಪೋಲಿಯೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಮೂರು ಹೊಸ ಪೋಲಿಯೊ ಪ್ರಕರಣಗಳನ್ನು ಡಬ್ಲ್ಯುಎಚ್‌ಒ ದೃಢಪಡಿಸಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. WHOದ ಪ್ರಾದೇಶಿಕ ನಿರ್ದೇಶಕ ಡಾ.ಅಹ್ಮದ್ ಅಲ್-ಮಂಧಾರಿ ಪ್ರತಿಕ್ರಿಯಿಸಿ, “ಅಫ್ಘಾನಿಸ್ತಾನ…
Author: Prajatv Kannada
ಸ್ಯಾಂಡಲ್‌ವುಡ್ ನ ಬುಲ್ ಬುಲ್ ಬೆಡಗಿ ನಟಿ ರಚಿತಾ ರಾಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಳೆದ ಎರಡು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ಬರ್ತಡೇ ಸೆಲೆಬ್ರೇಟ್ ಮಾಡಲ್ಲ ಎಂದು ರಚಿತಾ ರಾಮ್ ತಿಳಿಸಿದ್ದರು. ಆದ್ರೆ ಕಲ್ಟ್ ಸಿನಿಮಾ ತಂಡದ ಒತ್ತಾಯಕ್ಕೆ ಮಣಿದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಕಲ್ಟ್ ಚಿತ್ರದ ಸೆಟ್‌ನಲ್ಲಿಯೇ ಇಡೀ ತಂಡ ರಚಿತಾ ರಾಮ್ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದೆ. ಅದ್ಧೂರಿಯಾಗಿಯೇ ಈ ಸೆಲೆಬ್ರೇಷನ್ ನಡೆದಿದೆ. ರಚ್ಚು ಬರ್ತಡೇ ಸಂಭ್ರಮದಲ್ಲಿ ಕಲ್ಟ್ ಸಿನಿಮಾದ ನಟ ಝೈದ್ ಖಾನ್ ರಚಿತಾ ರಾಮ್ ಅವರಿಗೆ ಕೇಕ್ ತಿನಿಸಿದ್ದಾರೆ. ರಚಿತಾ ಕೂಡ ಝೈದ್ ಖಾನ್‌ಗೆ ಕೇಕ್ ತಿನ್ನಿಸಿದ್ದಾರೆ. ರಚ್ಚು ಬರ್ತಡೇ ಸೆಲೆಬ್ರೇಷನ್ ನಲ್ಲಿ ಕ್ಯಾಮರಾಮನ್ ಜೆ.ಎಸ್.ವಾಲಿ, ಆಲ್ ಓಕೆ ಅಲೋಕ್, ಡೈರೆಕ್ಷರ್ ಅನಿಲ್ ಕುಮಾರ್ ಸೇರಿದಂತೆ ಇನ್ನು ಅನೇಕರು ಭಾಗಿ ಆಗಿದ್ದರು. ಕಲ್ಟ್ ಸಿನಿಮಾದ 20 ದಿನದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಉಡುಪಿಯಲ್ಲಿಯೇ ಸದ್ಯ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಬಿರುಸಿನ ಚಿತ್ರೀಕರಣದ…
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಜಾಮೀನಿನ ದೊಡ್ಡ ಟೆನ್ಷನ್ ಆಗಿದೆ. ಇದರ ಬೆನ್ನಲ್ಲೇ ಬಳ್ಳಾರಿ ಜೈಲಿಗೆ ಪುತ್ರ ವಿನೀಶ್ ಮತ್ತು ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ಅಪ್ಪನನ್ನು ನೋಡಲು ಬಳ್ಳಾರಿಗೆ ಜೈಲಿಗೆ ವಿನೀಶ್ ಭೇಟಿ ಕೊಟ್ಟಿದ್ದಾನೆ. https://youtu.be/jDYPzalufzI?si=srHCYL2bdITXDww8 ದರ್ಶನ್ ಜೈಲು ಸೇರಿ 3 ತಿಂಗಳಿಗಿಂತ ಅಧಿಕವಾಗಿದೆ. ಕಾನೂನು ಸಮರದ ಕುರಿತು ಚರ್ಚಿಸಲು ಪ್ರತಿ ವಾರ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿದ್ದರು. ಈ ಬಾರಿ ಅಮ್ಮನ ಜೊತೆ ಪುತ್ರ ವಿನೀಶ್ ಕೂಡ ಭೇಟಿ ನೀಡಿದ್ದಾರೆ. ಈ ವೇಳೆ, ದರ್ಶನ್‌ಗೆ ಅಗತ್ಯವಿರುವ ಬಟ್ಟೆ, ಬೆಡ್‌ಶಿಟ್ ಮತ್ತು ಬೇಕರಿ ತಿನಿಸುಗಳೊಂದಿಗೆ 2 ಬ್ಯಾಗ್ ಹಿಡಿದು ಆಪ್ತರೊಂದಿಗೆ ಪತ್ನಿ, ಪುತ್ರ ಜೈಲಿಗೆ ಆಗಮಿಸಿದ್ದಾರೆ. ಇನ್ನೂ ಬಳ್ಳಾರಿಗೆ ಜೈಲಿಗೆ ಭೇಟಿ ಕೊಟ್ಟ ವೇಳೆ, ಅಪ್ಪ ದರ್ಶನ್‌ರನ್ನು ನೋಡಿ ವಿನೀಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಗನನ್ನು ಸಂತೈಸಿ, ಯೋಗ ಕ್ಷೇಮ ವಿಚಾರಿಸಿದ್ದಾರೆ. ಬಳಿಕ ಪತ್ನಿ ವಿಜಯಲಕ್ಷ್ಮಿ ಜೊತೆ ದರ್ಶನ್…
ಬೆಂಗಳೂರು: 14 ಸೈಟ್ ಗಳ ಸಂಬಂಧ ಸಿದ್ದರಾಮಯ್ಯ ಸಾಕ್ಷಿ ನಾಶದ ಆರೋಪ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಇ.ಡಿಗೆ ದೂರು ನೀಡಿ ಮನವಿ ಮಾಡಿರೋ ಪ್ರದೀಪ್. https://youtu.be/w7yePEQzKoM?si=3SF5LaFypOpGLZQj ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ಇದರಲ್ಲಿ ಪಾಲುದಾರರು ಆಗಿದ್ದಾರೆ ಅಲ್ಲದೇ ಸೈಟ್ ಅನ್ನು ವಾಪಸ್ಸು ಪಡೆಯೋ ಮೂಲಕ ಸಾಕ್ಷ್ಯ ನಾಶ ಆಗಿದೆ ಮುಡಾ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸಾಕ್ಷ್ಯ ನಾಶ ಮಾಡಲಾಗ್ತಿದೆ ಸಾಕ್ಷ್ಯ ನಾಶ ಪ್ರಕರಣವನ್ನು ದಾಖಲು ಮಾಡಬೇಕೆಂದು ದೂರಿನಲ್ಲಿ ಮನವಿ. ಮುಡಾ ಆಯುಕ್ತ ಶ್ರೀಮತಿ ಪಾರ್ವತಿ ಅವರ ಮನೆಗೆ ಹೋಗಿ ಸೈಟ್ ವಾಪಸ್ ಪ್ರತಿ ಸಹಿ ಮಾಡಿಸಿಕೊಂಡು ಬಂದಿದ್ದಾರೆ ಮೂಡಾ ಅಧಿಕಾರಿಗಳು ಆರೋಪಿಗಳ ಜೊತೆಗೆ ಸಾಕ್ಷಿ ನಾಶಕ್ಕೆ ಕೈ ಜೋಡಿಸಿದ್ದಾರೆ ಹೀಗಾಗಿ ಮುಡಾ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಮನವಿ ತಕ್ಷಣ 14 ಸೈಟ್ ಗಳನ್ನ ವಶಕ್ಕೆ ಪಡೆಯಬೇಕು. ದಾಖಲೆಗಳನ್ನ ಬದಲಾವಣೆ ಮಾಡುತ್ತಿರುವ ಮುಡಾ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹ ಸಿಎಂ ಸಿದ್ದರಾಮಯ್ಯ ಮುಡಾ ಆಯುಕ್ತರು ಮತ್ತು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಸಾಕ್ಷಿ…
ಸ್ಯಾಂಡಲ್ ವುಡ್ ಚೆಲುವೆ,ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ನಿಮ್ಮಿಷ್ಟವಾದ ಚಲನಚಿತ್ರ ಯಾವುದು..? ರನ್ನ ಸೀತಾರಾಮ ಕಲ್ಯಾಣ ನಟಸಾರ್ವಭೌಮ ಮುಕುಂದ ಮುರಾರಿ
ಸ್ಯಾಂಡಲ್ ವುಡ್ ನಟ ಅಭಿಷೇಕ್ ಅಂಬರೀಶ್.. ತಂದೆ,ತಾಯಿಯವರಂತೆ ಸಿನಿಮಾರಂಗ ಮತ್ತು ರಾಜಕೀಯರಂಗ ಯಾವುದರಲ್ಲಿದ್ದರೆ ಅವರ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ..? ಸಿನಿಮಾರಂಗ ರಾಜಕೀಯರಂಗ ಸಿನಿಮಾ & ರಾಜಕೀಯ
ಹಿಂದೂಗಳಿಗೆ ನವರಾತ್ರಿ ಒಂದು ವಿಶೇಷವಾದ ಹಬ್ಬ. ಭಾರತದ ಬಹಳಷ್ಟು ಭಾಗಗಳಲ್ಲಿ ನವರಾತ್ರಿಯಂದು ಉಪವಾಸ ಮಾಡುವ ಪದ್ಧತಿ ಇದೆ. ಉಪವಾಸ ಆಚರಣೆ ಮಾಡುವುದರಿಂದ ಭಕ್ತರ ಮನಸ್ಸು, ದೇಹ ಹಾಗೂ ಆತ್ಮವು ಪರಿಶುದ್ಧವಾಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ಆರಾಧಿಸಿ ಶಕ್ತಿ ಸ್ವರೂಪಿಣಿಯ ಕೃಪೆಗೆ ಪಾತ್ರರಾಗುತ್ತಾರೆ. *ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಭಕ್ತರು ಮಾತೆ ದುರ್ಗೆಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಇದರಿಂದಾಗಿ ಭಕ್ತರ ಬದುಕಿನಲ್ಲಿ ಯಶಸ್ಸು ಹಾಗೂ ಶಾಂತಿ ಪ್ರಾಪ್ತಿಯಾಗುತ್ತದೆ. * ವೈಯಕ್ತಿಕ ಆಸೆಗಳನ್ನು ತ್ಯಾಗ ಮಾಡುವುದೂ ಸಹ ಭಕ್ತಿಯ ಒಂದು ರೂಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ದುರ್ಗೆಯನ್ನು ಒಲಿಸಿಕೊಳ್ಳಲು ಕೆಲವರು ಉಪವಾಸ ವ್ರತಾಚರಣೆ ಮಾಡುತ್ತಾರೆ. * ನವರಾತ್ರಿಯ ದಿನ ಕೈಗೊಳ್ಳಬೇಕಾದ ಉಪವಾಸದ ಕ್ರಮಗಳನ್ನು ಮಾತೆ ದುರ್ಗೆಯೇ ಭಕ್ತರಿಗೆ ಉಪದೇಶಿಸಿದ್ದಾಳೆ ಎಂದು ನಂಬಲಾಗಿದೆ. * ಋತುಮಾನವು ಬದಲಾಗುತ್ತಿದ್ದಂತೆಯೇ ನವರಾತ್ರಿ ಬರುತ್ತದೆ. ಋತುಮಾನ ಬದಲಾದಂತೆ ಮನುಷ್ಯನ ದೈಹಿಕ, ಮಾನಸಿಕ, ಆಧ್ಯಾತ್ಮಿಕತೆಯ ಮೇಲೆ ಆಗುವ ಪರಿಣಾಮಗಳೂ ಬದಲಾಗುತ್ತಾ ಹೋಗುತ್ತವೆ. ನವರಾತ್ರಿಯಲ್ಲಿ ಉಪವಾಸ ಕೈಗೊಳ್ಳುವುದರಿಂದ ನೀವು ಶಕ್ತಿ…