Author: Prajatv Kannada

ಸ್ಯಾಂಡಲ್ ವುಡ್ ನಟ ಅಭಿಷೇಕ್ ಅಂಬರೀಶ್.. ತಂದೆ,ತಾಯಿಯವರಂತೆ ಸಿನಿಮಾರಂಗ ಮತ್ತು ರಾಜಕೀಯರಂಗ ಯಾವುದರಲ್ಲಿದ್ದರೆ ಅವರ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ..? ಸಿನಿಮಾರಂಗ ರಾಜಕೀಯರಂಗ ಸಿನಿಮಾ & ರಾಜಕೀಯ

Read More

ಹಿಂದೂಗಳಿಗೆ ನವರಾತ್ರಿ ಒಂದು ವಿಶೇಷವಾದ ಹಬ್ಬ. ಭಾರತದ ಬಹಳಷ್ಟು ಭಾಗಗಳಲ್ಲಿ ನವರಾತ್ರಿಯಂದು ಉಪವಾಸ ಮಾಡುವ ಪದ್ಧತಿ ಇದೆ. ಉಪವಾಸ ಆಚರಣೆ ಮಾಡುವುದರಿಂದ ಭಕ್ತರ ಮನಸ್ಸು, ದೇಹ ಹಾಗೂ ಆತ್ಮವು ಪರಿಶುದ್ಧವಾಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ಆರಾಧಿಸಿ ಶಕ್ತಿ ಸ್ವರೂಪಿಣಿಯ ಕೃಪೆಗೆ ಪಾತ್ರರಾಗುತ್ತಾರೆ. *ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಭಕ್ತರು ಮಾತೆ ದುರ್ಗೆಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಇದರಿಂದಾಗಿ ಭಕ್ತರ ಬದುಕಿನಲ್ಲಿ ಯಶಸ್ಸು ಹಾಗೂ ಶಾಂತಿ ಪ್ರಾಪ್ತಿಯಾಗುತ್ತದೆ. * ವೈಯಕ್ತಿಕ ಆಸೆಗಳನ್ನು ತ್ಯಾಗ ಮಾಡುವುದೂ ಸಹ ಭಕ್ತಿಯ ಒಂದು ರೂಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ದುರ್ಗೆಯನ್ನು ಒಲಿಸಿಕೊಳ್ಳಲು ಕೆಲವರು ಉಪವಾಸ ವ್ರತಾಚರಣೆ ಮಾಡುತ್ತಾರೆ. * ನವರಾತ್ರಿಯ ದಿನ ಕೈಗೊಳ್ಳಬೇಕಾದ ಉಪವಾಸದ ಕ್ರಮಗಳನ್ನು ಮಾತೆ ದುರ್ಗೆಯೇ ಭಕ್ತರಿಗೆ ಉಪದೇಶಿಸಿದ್ದಾಳೆ ಎಂದು ನಂಬಲಾಗಿದೆ. * ಋತುಮಾನವು ಬದಲಾಗುತ್ತಿದ್ದಂತೆಯೇ ನವರಾತ್ರಿ ಬರುತ್ತದೆ. ಋತುಮಾನ ಬದಲಾದಂತೆ ಮನುಷ್ಯನ ದೈಹಿಕ, ಮಾನಸಿಕ, ಆಧ್ಯಾತ್ಮಿಕತೆಯ ಮೇಲೆ ಆಗುವ ಪರಿಣಾಮಗಳೂ ಬದಲಾಗುತ್ತಾ ಹೋಗುತ್ತವೆ. ನವರಾತ್ರಿಯಲ್ಲಿ ಉಪವಾಸ ಕೈಗೊಳ್ಳುವುದರಿಂದ ನೀವು ಶಕ್ತಿ…

Read More

ಇತ್ತೀಚಿನ ದಿನದಲ್ಲಿ ನಾವು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ನಾವು ಸೇವಿಸುವ ಆಹಾರವೂ ಸಹ ಒಂದು ಕಾರಣವಾಗಿರುತ್ತದೆ. ಹೀಗಾಗಿ ನಾವು ಎಷ್ಟು ಪ್ರಮಾಣದ ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿಡುವುದು ಬಹಳ ಮುಖ್ಯವಾಗಿದೆ. ಅಲ್ಲದೆ ನಾವು ಸೇವಿಸು ಆಹಾರದಲ್ಲಿ ಎಲ್ಲಾ ವಿಟಮಿನ್‌ಗಳು, ಅಗತ್ಯ ಪೋಷಕಾಂಶಗಳು ಇವೆಯೇ ಎಂಬುದನ್ನು ಸಹ ಖಚಿತ ಮಾಡಿಕೊಳ್ಳಬೇಕು. ಹೀಗಾಗದಿದ್ದರೆ ನಮಗೆ ಹಲವು ಸಮಸ್ಯೆ ಭವಿಷ್ಯದಲ್ಲಿ ಎದುರಾಗಬಹುದು. ಇನ್ನು ನಾವು ಸದೃಢ ಆರೋಗ್ಯಕ್ಕಾಗಿ ಮೊಳಕೆ ಕಾಳುಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಈ ಅಭ್ಯಾಸ ಇಲ್ಲದವರು ಮೊಳಕೆ ಕಾಳುಗಳ ಸೇವಿಸುವ ಅಭ್ಯಾಸ ಇನ್ನುಮುಂದೆ ಆದರೂ ಬೆಳೆಸಿಕೊಳ್ಳಿ. ಏಕೆಂದರೆ ಈ ಮೊಳಕೆ ಕಾಳುಗಳಲ್ಲಿ ಎಲ್ಲಿಲ್ಲದ ಪೋಷಕಾಂಶವಿರುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಜೊತೆ ಪೋಷಕಾಂಶಗಳು ಸಿಗುತ್ತವೆ. ಹಾಗಾದರೆ ಈ ಮೊಳಕೆ ಕಾಳುಗಳಿಂದಾಗುವ 5 ಪ್ರಮುಖ ಲಾಭವೇನು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಜೀರ್ಣ ಶಕ್ತಿ ಉತ್ತಮವಾಗುತ್ತದೆ ನಿಮ್ಮ ಜೀರ್ಣ ಶಕ್ತಿ ಸರಿಯಾಗಿ ಕೆಲಸ ಮಾಡದಿದ್ದರೆ ಇಂದಿನಿಂದಲೇ ಮೊಳಕೆ ಬರಿಸಿದ ಕಾಳುಗಳ ಸೇವಿಸಲು ಆರಂಭಿಸಿ. ಏಕೆಂದರೆ ಇದು…

Read More

ಬಾಂಗ್ಲಾದೇಶದ ಮುಹಮ್ಮದ್ ಯೂನುಸ್ ನೇತೃತ್ವದ ಸರ್ಕಾರವು ಭಾರತದಲ್ಲಿನ ತನ್ನ ರಾಯಭಾರಿ ಸೇರಿದಂತೆ ಐದು ರಾಯಭಾರಿಗಳಿಗೆ ತಮ್ಮ ಹುದ್ದೆಗಳನ್ನು ತ್ಯಜಿಸಿ ತಕ್ಷಣ ಢಾಕಾಗೆ ಮರಳುವಂತೆ ಆದೇಶಿಸಿದೆ ಎಂದು ಬಾಂಗ್ಲಾ ದಿನಪತ್ರಿಕೆ ವರದಿ ಮಾಡಿದೆ ಮಧ್ಯಂತರ ಸರ್ಕಾರವು ಬ್ರಸೆಲ್ಸ್, ಕ್ಯಾನ್ಬೆರಾ, ಲಿಸ್ಬನ್, ನವದೆಹಲಿಯಲ್ಲಿರುವ ತನ್ನ ರಾಯಭಾರಿಗಳನ್ನು ಮತ್ತು ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಖಾಯಂ ನಿಯೋಗವನ್ನು ವಾಪಸ್ ಕರೆಸಿಕೊಂಡಿದೆ. ಇವರಲ್ಲಿ ಮುಸ್ತಾಫಿಜುರ್ ರೆಹಮಾನ್, ಭಾರತದ ಹೈಕಮಿಷನರ್; ಮುಹಮ್ಮದ್ ಅಬ್ದುಲ್ ಮುಹಿತ್, ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ರಾಯಭಾರಿ ಮತ್ತು ಖಾಯಂ ಪ್ರತಿನಿಧಿ; ಮೆಹಬೂಬ್ ಹಸನ್ ಸಲೇಹ್, ಬೆಲ್ಜಿಯಂ ರಾಯಭಾರಿ * ಅಲ್ಲಮ ಸಿದ್ದಿಕಿ, ಆಸ್ಟ್ರೇಲಿಯಾದ ಹೈಕಮಿಷನರ್ ಮತ್ತು ಪೋರ್ಚುಗಲ್ ನ ರಾಯಭಾರಿ ರೆಜಿನಾ ಅಹ್ಮದ್. ಬ್ರಿಟನ್ ನ ಹೈಕಮಿಷನರ್ ಸೈದಾ ಮುನಾ ತಸ್ನೀಮ್ ಅವರನ್ನು ಇದೇ ರೀತಿ ಮರಳುವಂತೆ ಕೇಳಿಕೊಳ್ಳಲಾದ ನಂತರ ಪ್ರಮುಖ ರಾಜತಾಂತ್ರಿಕ ಪುನರ್ರಚನೆ ನಡೆದಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಭಾರತದೊಂದಿಗಿನ ಬಾಂಗ್ಲಾದೇಶದ ಸಂಬಂಧವು ಹದಗೆಟ್ಟಿದೆ. ಆಗಸ್ಟ್ 5 ರಂದು…

Read More

ಬೆಳಗಾವಿ:- ಜಿಲ್ಲೆಯ ಖಾನಾಪುರ ಅರಣ್ಯದಲ್ಲಿ ಅಕ್ರಮವಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಖಾಕಿ ಖೆಡ್ಡಾಗೆ ಬಿದ್ದ ಘಟನೆ ಜರುಗಿದೆ. https://youtu.be/G7hOABIBInw?si=0Lb-lq3MgeesWXp8 ಭರ್ಜರಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಜೀವಂತ ಒಂದು ಚಿಪ್ಪು ಹಂದಿ, ಇಬ್ಬರು ಆರೋಪಿಗಳು ಅರೆಸ್ಟ್ ಮಾಡಿದ್ದಾರೆ. ನಾಲ್ಕು ಜನ ಆರೋಪಿಗಳು ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ಕಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರು ವರ್ಷದ ನಾಲ್ಕೂವರೆ ಕೆಜಿ ತೂಕದ ಜೀವಂತ ಚಿಪ್ಪು ಹಂದಿಯನ್ನು ಅಧಿಕಾರಗಳು ವಶಕ್ಕೆ ಪಡೆದಿದ್ದಾರೆ. ಖಾನಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾತನಾಡಿ, ಚಿಪ್ಪು ಹಂದಿಯನ್ನು ಪುರುಷತ್ವ ಹೆಚ್ಚಿಸುವ ಔಷಧ ತಯಾರಿಕೆಗಾಗಿ ಬಳಸಲಾಗುತ್ತದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಖಾನಾಪುರದಿಂದ ಚೀನಾವರೆಗೂ ಚಿಪ್ಪು ಹಂದಿಯನ್ನು ಸಾಗಾಟ ಮಾಡುತ್ತಿದ್ದು, ಸಾಗಾಟ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದರು. ಖಾನಾಪುರದಿಂದ ಕಾರವಾರಕ್ಕೆ ಕಳಿಸಿ ಅಲ್ಲಿಂದ ಬೋಟ್ ಮೂಲಕ ಕೋಲ್ಕತ್ತಾಗೆ ಸಾಗಿಸುತ್ತಾರೆ. ಬಳಿಕ ಹಡಗಿನಲ್ಲಿ ಚೀನಾಕ್ಕೆ ಸಾಗಾಟ ಮಾಡುತ್ತಿದ್ದರು. ಸದ್ಯ ಚಿಪ್ಪು…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ದಿನೇ ದಿನವೇ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಇದರಿಂದ ದರ್ಶನ್ ಸಾಕಷ್ಟು ತೊಂದರೆ ಅನುಭವಿಸ್ತಿದ್ದಾರೆ. ಬಳ್ಳಾರಿ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ದರ್ಶನ್ ಪರದಾಡುತ್ತಿದ್ದಾರೆ. ಬೆನ್ನು ನೋವು ಹೆಚ್ಚಾಗಿರುವುದರಿಂದ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿನಲ್ಲೇ ದರ್ಶನ್ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈಗಾಗಲೇ ಬೆನ್ನಿನ ಹಿಂಭಾಗದಲ್ಲಿ ಊತ ಬಂದಿರುವ ಸಾಧ್ಯತೆ ಇದೆ. ಅವರಿಗೆ ಸರ್ಜರಿ ಮಾಡಿಸಲೇಬೇಕಾದ ಅಗತ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್​ಗೆ ಸ್ಕ್ಯಾನ್ ಮಾಡಿಸಲು ವೈದ್ಯರು ಸೂಚನೆ ನೀಡಿದ್ದಾರೆ. ಆದರೆ, ದರ್ಶನ್ ಅವರು ಸ್ಕ್ಯಾನ್ ಮಾಡಿಸೋದಕ್ಕೆ ರೆಡಿ ಇಲ್ಲ. ‘ನಾನು ಬೆಂಗಳೂರಿಗೆ ಹೋದ್ಮೇಲೆ ಸ್ಕ್ಯಾನ್ ಮಾಡಿಸ್ತೀನಿ. ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಸಾಕು’ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಅವರು ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ (ಅಕ್ಟೋಬರ್ 4) ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್ ಅವರು ಜಾಮೀನು ಸಿಕ್ಕೇ ಸಿಗುತ್ತದೆ ಎನ್ನುವ…

Read More

ಚಿತ್ರದುರ್ಗ:- ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಪರಿಸ್ಥಿತಿಯನ್ನು ಅರ್ಥ ಮಾಡ್ಕೊಂಡು ಕೆಲಸ ಮಾಡೋಣ. https://youtu.be/scaZtmo9nkw?si=caoaXlha51T5LeRD ಸಿದ್ದರಾಮಯ್ಯ ಒಂದು ತಪ್ಪು ಮುಚ್ಚಲು ಹೋಗಿ ತಪ್ಪಿನ ಮೇಲೆ ತಪ್ಪು ಮಾಡ್ತಾರೆ. ತಮ್ಮ ಕಾಲ‌ಮೇಲೆ ತಾವೇ ಚಪ್ಪಡಿ ಎಳೆದುಕೊಳ್ತಿದಾರೆ. ಇದರ ಅವಶ್ಯಕತೆ ಇರಲಿಲ್ಲ. ಆತ್ಮ ಸಾಕ್ಷಿ ಮತ್ತೊಂದು ಸಾಕ್ಷಿ ಎಂದು ಹೇಳುವ ಬದಲು. ಅಂದೆ ಹೌಸ್ ನಲ್ಲಿ‌ ಮಾತಾಡಿ ಬಗೆ ಹರಿಸಿದ್ರೆ ಮುಗಿದು ಹೋಗ್ತಾ ಇತ್ತು. ಈಗ ಅಂತಿಮ ಹಂತಕ್ಕೆ ಹೋಗಿದೆ ಕಾನೂನು ತನ್ನ ಕೆಲಸ ಮಾಡುತ್ತದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ಆದರೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಇದ್ದುಕೊಂಡು ಮಾತಾಡೋದು ಸರಿಯಿಲ್ಲ ಎಂಬ ವೈಯುಕ್ತಿಕ ಭಾವನೆ ನನ್ನದು. ತಕ್ಷಣ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಕ್ಲೀನ್ ಚಿಟ್ ತಗೊಂಡು ಮತ್ತೆ ಸಿಎಂ ಆಗಲಿ ಬೇಡ ಅನ್ನೋರು ಯಾರು ಎಂದರು. ಆತ್ಮ‌ಸಾಕ್ಷಿ ಅನ್ನೋದಕ್ಕಿಂತ ನೈತಿಕತೆ ದೊಡ್ಡದು…

Read More