ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ಸಾಕಷ್ಟು ಜನರನ್ನ ಆಕರ್ಷಿಸುವ ಸ್ಥಳ ಇಲ್ಲಿನ ಲೈಬ್ರರಿ ಕೂಡ ಅಷ್ಟೇ ಫೇಮಾಸ್ ಆಗಿತ್ತು. ಆದರೆ ಈಗ ಲೈಬ್ರೈರಿ ಕ್ಲೋಸ್ ಆಗಿದ್ದು, ಓದುಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. https://youtu.be/pTxYb_Lq31g?si=x2sTV1mhjFMMtaG4 ಕಳೆದ ಮಳೆಯಲ್ಲಿ ಗ್ರಂಥಾಲಯ ನೀರು ನುಗ್ಗಿತ್ತು ಎನ್ನುವ ಕಾರಣಕ್ಕೆ ಲಾಲ್ ಬಾಗ್ ಅಧಿಕಾರಿಗಳು ಕಾಮಗಾರಿ ಮಾಡುಸ್ತೀವಿ ಅಂತ ಗ್ರಾಂಥಾಲಯವನ್ನ ಕ್ಲೋಸ್ ಮಾಡಿದ್ದಾರೆ. ಓದುಗರಿಗೆಂದೇ ಲಾಲ್ ಬಾಗ್ನಲ್ಲಿ ಸಾರ್ವಜನಿಕ ಗ್ರಾಂಥಾಲಯವನ್ನ ತೆರೆಯಲಾಗಿತ್ತು. ಇಲ್ಲಿ ಪ್ರತಿದಿನ ಮುಂಜಾನೆ ವಾಕಿಂಗ್ ಗೆ ಬಂದಂತಹವರು, ವಿದ್ಯಾರ್ಥಿಗಳು, ಸ್ಫರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಸೇರಿದಂತೆ ಸಾಕಷ್ಟು ಜನರು ತಮಗೆ ಇಷ್ಟದ ಪುಸ್ತಕಗಳನ್ನ ಓದುತ್ತಿದ್ರು. ಆದ್ರೆ ಕಳೆದ ಮಳೆಯಲ್ಲಿ ಗ್ರಂಥಾಲಯ ನೀರು ನುಗ್ಗಿತ್ತು ಎನ್ನುವ ಕಾರಣಕ್ಕೆ ಲಾಲ್ ಬಾಗ್ ಅಧಿಕಾರಿಗಳು ಕಾಮಗಾರಿಗಾಗಿ ಗ್ರಾಂಥಾಲಯವನ್ನ ಕ್ಲೋಸ್ ಮಾಡಿದ್ದಾರೆ.
Author: Prajatv Kannada
ಜಪಾನಿನ ವಿಮಾನ ನಿಲ್ದಾಣದಲ್ಲಿ ಹೂಳಲಾಗಿದ್ದ ಎರಡನೇ ಮಹಾಯುದ್ಧದ ಯುಎಸ್ ಬಾಂಬ್ ಸ್ಫೋಟಗೊಂಡಿದ್ದು, ಟ್ಯಾಕ್ಸಿವೇಯಲ್ಲಿ ದೊಡ್ಡ ಕುಳಿ ಉಂಟಾಗಿದೆ. ಪರಿಣಾಮ 80 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೈಋತ್ಯ ಜಪಾನ್ ನ ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡಾಗ ಹತ್ತಿರದಲ್ಲಿ ಯಾವುದೇ ವಿಮಾನ ಇರಲಿಲ್ಲ. ಇದರಿಂದ ಯಾವುದೇ ಅನಾಹುತ ಸಂಭವಿಸಲ್ಲ ಎಂದು ಭೂ ಮತ್ತು ಸಾರಿಗೆ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ವಯಂ ರಕ್ಷಣಾ ಪಡೆಗಳು ಮತ್ತು ಪೊಲೀಸರ ತನಿಖೆಯಲ್ಲಿ ಸ್ಫೋಟವು 500 ಪೌಂಡ್ ಯುಎಸ್ ಬಾಂಬ್ ನಿಂ ಸಂಭವಿಸಿದೆ ಮತ್ತು ಹೆಚ್ಚಿನ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರ ಹಠಾತ್ ಸ್ಫೋಟಕ್ಕೆ ಕಾರಣವೇನೆಂದು ಅವರು ನಿರ್ಧರಿಸುತ್ತಿದ್ದರು. ಹತ್ತಿರದ ವಾಯುಯಾನ ಶಾಲೆ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಸ್ಫೋಟವು ಕಾರಂಜಿಯಂತೆ ಗಾಳಿಯಲ್ಲಿ ಡಾಂಬರು ತುಂಡುಗಳನ್ನು ಉಗುಳುತ್ತಿರುವುದನ್ನು ತೋರಿಸಿದೆ. ಜಪಾನಿನ ದೂರದರ್ಶನದಲ್ಲಿ ಪ್ರಸಾರವಾದ ವೀಡಿಯೊಗಳು ಟ್ಯಾಕ್ಸಿವೇಯಲ್ಲಿ ಸುಮಾರು 7 ಮೀಟರ್ ವ್ಯಾಸ ಮತ್ತು…
ಹೈದರಾಬಾದ್: ತಿರುಪತಿ ತಿರುಮಲ ದೇವಸ್ಥಾನ ಲಡ್ಡು ವಿವಾದ ಹಿನ್ನೆಲೆ ಆಂಧ್ರ ಪ್ರದೇಶದ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ ಕೈಗೊಂಡಿದ್ದ 11 ದಿನಗಳ ಪ್ರಾಯಶ್ಚಿತ ಪೂಜೆ ಯಶಸ್ವಿಯಾಗಿದೆ. ಪೂಜೆಯ ಕೊನೆ ದಿನ ನಟ ತಮ್ಮ ಮಗಳೊಟ್ಟಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಳೆದ ತಿಂಗಳು ದೇಶದ ಕೋಟ್ಯಾಂತರ ಜನರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನ ಪ್ರಸಾದವು ವಿವಾದಕ್ಕೆ ಕಾರಣವಾಗಿತ್ತು. ತಿರುಪತಿ ಲಡ್ಡುವಿಗೆ ಬಳಸುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಮಿಶ್ರಣವಿದೆ ಎಂಬ ಲ್ಯಾಬ್ ವರದಿಯು ದೊಡ್ಡ ಸದ್ದು ಮಾಡಿತ್ತು. ಹಿಂದಿನ ಸರ್ಕಾರದ ಅಕ್ರಮ ಎಂದು ರಾಜಕೀಯ ಸಂಘರ್ಷಗಳು ನಡೆದಿದ್ದವು. ಈ ಬಗ್ಗೆ ತನಿಖೆಗೆ ಅಲ್ಲಿನ ಸರ್ಕಾರವು ಮುಂದಾಗಿತ್ತು. ಇನ್ನು ವಿವಾದದಿಂದ ನೊಂದ ದೇವಸ್ಥಾನ, ಭಕ್ತರು ಪರವಾಗಿ ಆಂಧ್ರ ಪ್ರದೇಶ ನೂತನ ಡಿಸಿಎಂ ಪವನ್ ಕಲ್ಯಾಣ್ ಅವರು ವಿಶೇಷ ಪೂಜೆ ಕೈಗೊಂಡಿದ್ದರು. ದೀಕ್ಷೆಯ ಕೊನೆಯ ದಿನವಾದ ಬುಧವಾರ ಮಧ್ಯಾಹ್ನ ಕೇಸರಿ ಬಟ್ಟೆಯನ್ನು ಧರಿಸಿ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ನಟ ಪವನ್ ಕಲ್ಯಾಣ ಬಂದರು.…
ಬಾಲಿವುಡ್ ನಟ ಗೋವಿಂದ ಕಾಲಿಗೆ ತಮ್ಮದೇ ಗನ್ ನಿಂದ ಮಿಸ್ ಫೈಯರ್ ಆಗಿದ್ದು ಸದ್ಯ ಚೇರತಿಸಿಕೊಳ್ಳುತ್ತಿದ್ದಾರೆ. ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬುಲೆಟ್ ಕಾಲಿಗೆ ತಗುಲಿದೆ ಅಂತ ಗೋವಿಂದ ಪೊಲೀಸರ ಬಳಿ ಹೇಳಿದ್ದಾರೆ. ಆದ್ರೆ ಗೋವಿಂದ್ ಹೇಳಿಕೆ ಪೊಲೀಸರಿಗೆ ಸಮಾಧಾನ ತಂದಿಲ್ಲ. ಬೇರೇನೋ ನಡೆದಿದೆ ಎಂದು ಅನುಮಾನ ಶುರುವಾಗಿದ್ದು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಗೋವಿಂದ್ ಮತ್ತೆ ಸುದ್ದಿಯಾಗಿರೋದು ಅವರ ಮೂಢನಂಬಿಕೆಗಳಿಂದಾಗಿ. ಮುಂಬೈನಲ್ಲಿ ಜನಿಸಿದ ಗೋವಿಂದ 1980ರ ದಶಕದ ಕೊನೆಯಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದವರಲ್ಲಿ ಒಬ್ಬರು. ನಾಲ್ಕು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ 165ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ, ಲೋಕಸಭೆ ಚುನಾವಣೆಗೆ ಒಂದು ತಿಂಗಳ ಮೊದಲು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದರು. ಸುಮಾರು ಎರಡು ದಶಕಗಳ ನಿವೃತ್ತ ಜೀವನದ ನಂತರ ಗೋವಿಂದ ಮತ್ತೆ ಹಾಗೆ ರಾಜಕೀಯ ಕ್ಷೇತ್ರಕ್ಕೆ ಮರು ಪ್ರವೇಶ ಮಾಡಿದ್ದರು. 2004ರ ಚುನಾವಣಾ ಯುದ್ಧದಲ್ಲಿ ಮುಂಬೈ ಉತ್ತರ…
ಮಂಡ್ಯ:- ದಸರಾಗೆ ಕೌಂಟ್ ಡೌನ್ ಶುರುವಾಗಿದ್ದು, ಶ್ರೀರಂಗಪಟ್ಟಣದಲ್ಲಿ ಇಂದಿನಿಂದ 5 ದಿನಗಳ ಕಾಲ ಕಾವೇರಿ ಆರತಿ ನಡೆಯಲಿದೆ. https://youtu.be/pt56TYKmqeM?si=KfmWsuDEY2rAh4tO ವಿಶ್ವವಿಖ್ಯಾತ ಮೈಸೂರು ದಸರಾಗೂ ಮುನ್ನವೇ ಕಾವೇರಿ ಆರತಿಯಾಗಲಿದ್ದು, ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ ಬಳಿಯ ಸ್ನಾನಘಟ್ಟದಲ್ಲಿ ಕಾವೇರಿ ನದಿ ಆರತಿ ಪೂಜೆ ನಡೆಯಲಿದೆ. ಶ್ರೀರಂಗಪಟ್ಟಣದ ಪ್ರಸಿದ್ದ ಅರ್ಚಕ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕಾವೇರಿ ಆರತಿ ಪೂಜಾ ಕೈಂಕರ್ಯ ನಡೆಯಲಿದ್ದು, ಇಂದಿನಿಂದ ಅ.7 ರವರೆಗೆ ಪ್ರಾಯೋಗಿಕವಾಗಿ 5 ದಿನ ಕಾವೇರಿ ಆರತಿ ಪೂಜೆ ನಡೆಯಲಿದೆ. ಆರತಿ ಇಂದು ಸಂಜೆ 6:15 ರಿಂದ ರಾತ್ರಿ 7 ಗಂಟೆವರೆಗೂ ನಡೆಯಲಿದೆ. ಕಾವೇರಿ ಆರತಿಗಾಗಿ ಪಟ್ಟಣದ ಸ್ನಾನಘಟ್ಟದ ಬಳಿ ಭರದ ಸಿದ್ದತೆ ಕಾರ್ಯ ಪ್ರಾರಂಭವಾಗಿದೆ. ರಾತ್ರಿ ವೇಳೆ ಆರತಿ ಪೂಜಾ ಸಂದರ್ಭದಲ್ಲಿ ಬೆಳಕಿಗಾಗಿ ವಿದ್ಯುತ್ ದೀಪದ ವ್ಯವಸ್ಥೆಯನ್ನು ಮಾಡಲಾಗಿದೆ.
ಹುಬ್ಬಳ್ಳಿ: ಸಾಮಾಜಿಕ ಕಾರ್ಯಕರ್ತ ನಿಖಿಲ್ ಹಂಜಗಿ ಅವರ ನೇತೃತ್ವದಲ್ಲಿ ರಸ್ತೆ ಬದಿಯ ನಿರ್ಗತಿಕರಿಗೆ ಜೀವ ಧ್ವನಿ ಫೌಂಡೇಶನ್‌ನಿಂದ ಪಾದರಕಕ್ಷೆ ವಿತರಣೆ ಮಾಡಲಾಯಿತು. https://youtu.be/uEDROj4Ffbs?si=WI7DZTzj3JnoMCEl ಬೀದಿ ಬದಿಯ ನಿವಾಸಿಗಳು, ನಿರ್ಗತಿಕರು ಹಾಗೂ ಭಿಕ್ಷುಕರ ಪಾದಗಳನ್ನು ಕಠಿಣ ಹವಾಮಾನದಿಂದ ರಕ್ಷಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೀವ ಧ್ವನಿ ಫೌಂಡೇಶನ್ ಹಿಂದುಳಿದವರಿಗೆ ಸೇವೆ ಸಲ್ಲಿಸುವುದು ಮತ್ತು ಅಗತ್ಯವಿರುವವರಿಗೆ ಭರವಸೆ ಕಾಳಜಿಯನ್ನು ಪ್ರದರ್ಶಿಸುತಿದೆ. ಕಿರಣ್ ಕೊಪ್ಪದ ,ಕೃಷ್ಣ ಸಾಬೋಜಿ,ರಾಘವೇಂದ್ರ ಬಳ್ಳಾರಿ ಮುಂತಾದವರು ಇದ್ದರು.
ಮೈಸೂರು: ಕೇಂದ್ರದಿಂದ ರಾಜ್ಯಕ್ಕೆ ಏನು ತರಬೇಕೋ ಅದನ್ನು ನೋಡಿ. ಅದನ್ನು ಬಿಟ್ಟು ಬರೀ ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.ದಸರಾ ಉದ್ಘಾಟನೆ ಸಮಾರಂಭದ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಎಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ. https://youtu.be/oaaBYMX77ZI?si=7Xr_b7punl65s8et ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದ್ಯಾ? ಎಫ್‌ಐಆರ್ ಆದವರು ರಾಜೀನಾಮೆ ಕೊಡಬೇಕಾಗಿದ್ದರೆ ಜೆಡಿಎಸ್‌ನಲ್ಲಿ ಇರುವವರು ರಾಜೀನಾಮೆ ಕೊಡುತ್ತಾರಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡ್ವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ ಎಂದು ಪ್ರಶ್ನಿಸಿದರು. 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಲು ಆಗುತ್ತಾ? ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ನೀಡುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು. ಒಂದು ಅತ್ಯಾಚಾರ, ಕೊಲೆಯನ್ನು ಮೂರು ತಿಂಗಳು ಮಾಧ್ಯಮ ತೋರಿಸುತ್ತದೆ. ಒಂದು ಎಫ್‌ಐಆರ್ ಅನ್ನು ಎಷ್ಟು ದಿನ ತೋರಿಸುತ್ತಿರಾ? ಯಾರ ಯಾರ ಮೇಲೆ ಎಫ್‌ಐಆರ್ ಆಗಿದೆಯೋ ಎಲ್ಲರೂ ರಾಜೀನಾಮೆ ಕೊಡಿ. ಎಲ್ಲಾ…
ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಇದೀಗ ಕ್ಷಮೆ ಕೇಳಿದ್ದಾರೆ. ಅವರು ತಮ್ಮ ಉದ್ದೇಶವನ್ನು ಹೇಳಿ ಮಾತನ್ನು ಹಿಂಪಡೆದಿದ್ದಾರೆ. ಸಮಂತಾ ಬಗ್ಗೆ ಸುರೇಖಾ ಹೇಳಿದ್ದ ಅಶ್ಲೀಲ ಕಮೆಂಟ್ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಜೂನಿಯರ್ ಎನ್ಟಿಆರ್, ನಾಗ ಚೈತನ್ಯ ಸೇರಿದಂತೆ ಅನೇಕರು ಈ ಬಗ್ಗೆ ಧ್ವನಿ ಎತ್ತಿದ್ದರು. ಈಗ ಈ ಸಂಬಂಧ ಸುರೇಖಾ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದ್ದಾರೆ. ‘ಎನ್ ಕನ್ವೆಷನ್ ಹಾಲ್ ಉಳಿಸಿಕೊಳ್ಳಲು ಸಮಂತಾ ಅವರನ್ನು ಕಳುಹಿಸುವಂತೆ ನಾಗಾರ್ಜುನ ಬಳಿ ಕೆಟಿಆರ್ ಕೇಳಿದ್ದರು. ಆ ಬಳಿಕ ನಾಗಾರ್ಜುನ ಅವರು ಸಮಂತಾ ಬಳಿ ಹೋಗಿ ಈ ಡೀಲ್ ಬಗ್ಗೆ ಮಾತನಾಡಿದ್ದರು. ಆದರೆ, ಇದಕ್ಕೆ ಒಪ್ಪದ ಸಮಂತಾ ಪತಿ ನಾಗ ಚೈತನ್ಯ ಇಂದ ವಿಚ್ಛೇದನ ಪಡೆದರು’ ಎಂದು ಸುರೇಖಾ ಹೇಳಿಕೆ ನೀಡಿದ್ದರು. ಜೊತೆಗೆ ನಟಿಯರ ಫೋನ್ನ ಕೆಟಿ ರಾಮ್ ರಾವ್ ಟ್ಯಾಪ್ ಮಾಡಿ ನಂತರ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎಂದು…
ಬೆಂಗಳೂರು: ಕಿತ್ತೂರು ಉತ್ಸವ 2024ರ ಜ್ಯೋತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ವಿಧಾನಸೌಧದ ಗ್ರ‍್ಯಾಂಡ್ ಸ್ಟೆಪ್ ಮುಂದೆ ನಡೆದ ಕಾರ್ಯಕ್ರಮದಲ್ಲಿ ಕಿತ್ತೂರು ಉತ್ಸವ ಜ್ಯೋತಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು. https://youtu.be/ar80sPfVI-Q?si=-_AgscN9jQ7L0Paf ಅಕ್ಟೋಬರ್ 23, 24, 25 ರಂದು ಕಿತ್ತೂರಿನಲ್ಲಿ ಉತ್ಸವ ನಡೆಯಲಿದೆ ಅಂತ ಸಿಎಂ ತಿಳಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ ಕೂಡ, ಕಿತ್ತೂರು ರಾಣಿ ಚನ್ನಮ್ಮ ಅವರ ಸೈನ್ಯದಲ್ಲಿದ್ದರು. ಬ್ರಿಟೀಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಎಂದರು. ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ಕಿತ್ತೂರಿನಲ್ಲಿ ಆಚರಿಸಲ್ಪಡುತ್ತಿರುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಸಕಲ ನೆರವನ್ನು ನೀಡುತ್ತಿದೆ. ಅಗತ್ಯ ಅನುದಾನವನ್ನೂ ನೀಡುತ್ತಿದೆ ಎಂದರು
ಮಾಗಡಿರಸ್ತೆಯ ಚಿಕ್ಕವೀರಯ್ಯನಪಾಳ್ಯ, ರಿಸರ್ವ್ ಬ್ಯಾಂಕ್ ನೌಕರರ ವಸತಿ ಕಲ್ಯಾಣ ಸಂಘ, ಸುತ್ತಾಮುತ್ತಾ ಹಲವು ಪ್ರಾಣಹಾನಿಗೆ ಕಾರಣವಾದ ಚಿರತೆ ಭೀತಿ ಎದುರಾಗಿದೆ. ನಗರದಂಚಿನ ರಸ್ತೆಯ ಚನ್ನೇನಹಳ್ಳಿ ಬಳಿ ಚಿರತೆ ಪ್ರತ್ಯಕ್ಷವಾಗಿದೆ.ಮಾಗಡಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾದರು ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. https://youtu.be/MjRXHcGPVac?si=FJ6MXl1q8udTNe86 ರಾತ್ರಿಯಾದ್ರೆ ಸಾಕು ಚೆನ್ನನಹಳ್ಳಿ ಮತ್ತು ತಾವರೆಕರೆ ಸುತ್ತಾಮುತ್ತಾ ಚಿರತೆ ಓಡಾಡ್ತಿದೆ. ಇದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವೂದೇ ಪ್ರತಿಕ್ರಿಯೆ ನೀಡ್ತಿಲ್ಲ. ಬಡಾವಣೆಯ ಮನೆಯ ಕಾಂಪೌಂಡ್ ಮೇಲೆ ಚಿರತೆ ಓಡಾಡ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಗಡಿ ರಸ್ತೆ ತಾವರೆಕೆರೆ, ಚಿಕ್ಕವೀರಯ್ಯನಪಾಳ್ಯ, ರಿಸರ್ವ್ ಬ್ಯಾಂಕ್ ನೌಕರರ ವಸತಿ ಕಲ್ಯಾಣ ಸಂಘ, ಸುತ್ತಲೂ ಚಿರತೆ ಓಡಾಟ ನಡೆಸಿದೆ. ಈ ಕಾರಣಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ವಿರುಧ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.