ಬೆಂಗಳೂರು: ಕಿತ್ತೂರು ಉತ್ಸವ 2024ರ ಜ್ಯೋತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ವಿಧಾನಸೌಧದ ಗ್ರ‍್ಯಾಂಡ್ ಸ್ಟೆಪ್ ಮುಂದೆ ನಡೆದ ಕಾರ್ಯಕ್ರಮದಲ್ಲಿ ಕಿತ್ತೂರು ಉತ್ಸವ ಜ್ಯೋತಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು. https://youtu.be/ar80sPfVI-Q?si=-_AgscN9jQ7L0Paf ಅಕ್ಟೋಬರ್ 23, 24, 25 ರಂದು ಕಿತ್ತೂರಿನಲ್ಲಿ ಉತ್ಸವ ನಡೆಯಲಿದೆ ಅಂತ ಸಿಎಂ ತಿಳಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ ಕೂಡ, ಕಿತ್ತೂರು ರಾಣಿ ಚನ್ನಮ್ಮ ಅವರ ಸೈನ್ಯದಲ್ಲಿದ್ದರು. ಬ್ರಿಟೀಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಎಂದರು. ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ಕಿತ್ತೂರಿನಲ್ಲಿ ಆಚರಿಸಲ್ಪಡುತ್ತಿರುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಸಕಲ ನೆರವನ್ನು ನೀಡುತ್ತಿದೆ. ಅಗತ್ಯ ಅನುದಾನವನ್ನೂ ನೀಡುತ್ತಿದೆ ಎಂದರು
Author: Prajatv Kannada
ಮಾಗಡಿರಸ್ತೆಯ ಚಿಕ್ಕವೀರಯ್ಯನಪಾಳ್ಯ, ರಿಸರ್ವ್ ಬ್ಯಾಂಕ್ ನೌಕರರ ವಸತಿ ಕಲ್ಯಾಣ ಸಂಘ, ಸುತ್ತಾಮುತ್ತಾ ಹಲವು ಪ್ರಾಣಹಾನಿಗೆ ಕಾರಣವಾದ ಚಿರತೆ ಭೀತಿ ಎದುರಾಗಿದೆ. ನಗರದಂಚಿನ ರಸ್ತೆಯ ಚನ್ನೇನಹಳ್ಳಿ ಬಳಿ ಚಿರತೆ ಪ್ರತ್ಯಕ್ಷವಾಗಿದೆ.ಮಾಗಡಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾದರು ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. https://youtu.be/MjRXHcGPVac?si=FJ6MXl1q8udTNe86 ರಾತ್ರಿಯಾದ್ರೆ ಸಾಕು ಚೆನ್ನನಹಳ್ಳಿ ಮತ್ತು ತಾವರೆಕರೆ ಸುತ್ತಾಮುತ್ತಾ ಚಿರತೆ ಓಡಾಡ್ತಿದೆ. ಇದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವೂದೇ ಪ್ರತಿಕ್ರಿಯೆ ನೀಡ್ತಿಲ್ಲ. ಬಡಾವಣೆಯ ಮನೆಯ ಕಾಂಪೌಂಡ್ ಮೇಲೆ ಚಿರತೆ ಓಡಾಡ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಗಡಿ ರಸ್ತೆ ತಾವರೆಕೆರೆ, ಚಿಕ್ಕವೀರಯ್ಯನಪಾಳ್ಯ, ರಿಸರ್ವ್ ಬ್ಯಾಂಕ್ ನೌಕರರ ವಸತಿ ಕಲ್ಯಾಣ ಸಂಘ, ಸುತ್ತಲೂ ಚಿರತೆ ಓಡಾಟ ನಡೆಸಿದೆ. ಈ ಕಾರಣಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ವಿರುಧ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಉತ್ತರ ಪ್ರದೇಶ:- ಇಲ್ಲಿನ ಸೋನ್ಭದ್ರಾ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಥಳಿಸಿ ಬಾಯಿಯೊಳಗೆ ಮೂತ್ರ ಮಾಡಿರುವ ಹೇಯ ಕೃತ್ಯ ನಡೆದಿದೆ ವ್ಯಕ್ತಿಯೊಬ್ಬ ಯುವಕನನ್ನು ಕೆಟ್ಟದಾಗಿ ಥಳಿಸಿ, ಮುಖ, ಬಾಯಿಗೆ ಮೂತ್ರ ವಿಸರ್ಜಿಸಿದ್ದಲ್ಲದೇ ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. https://youtu.be/uEDROj4Ffbs?si=88QEynuwKG9gJrVx ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಮುಖ ಆರೋಪಿಯನ್ನೂ ಬಂಧಿಸಲಾಗಿದೆ. ಶಕ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯುವಕನನ್ನು 22 ವರ್ಷದ ಪವನ್ ಖಾರ್ವಾರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸೆಪ್ಟೆಂಬರ್ 26 ರ ಸಂಜೆ, ಅಂಕಿತ್ ಭಾರ್ತಿ ಎಂಬ ವ್ಯಕ್ತಿ ಮತ್ತು ಅವನ ಕೆಲವು ಸಹಚರರು ಪವನ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಾಯಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ರಕ್ತಸಿಕ್ತವಾಗಿದ್ದ ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಘಟನೆಯ ಬಳಿಕ ಯುವಕ ಸಹೋದರ ಶಿವಕುಮಾರ್ ಖಾರ್ವಾರ್ ಅವರೊಂದಿಗೆ ಮಧ್ಯಪ್ರದೇಶದ ಬೈದಾನ್‌ಗೆ ಹೋಗಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲು ಸಿಂಗ್ ಹೇಳಿದ್ದಾರೆ.…
ಸರ್ವಪಿತೃ ಅಮವಾಸೆ( ಮಹಾನವಮಿ ಅಮಾವಾಸ್ಯೆ ) ಸೂರ್ಯ ಗ್ರಹಣ ವಲಯಾಕಾರದ ಸೂರ್ಯೋದಯ: 06:10, ಸೂರ್ಯಾಸ್ತ : 06:00 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ ಋತು, ಭಾದ್ರಪದ ಮಾಸ, ತಿಥಿ: ಅಮಾವಾಸ್ಯೆ, ನಕ್ಷತ್ರ:ಉತ್ತರ ರಾಹು ಕಾಲ:12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30ನಿಂದ 12:00 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ:ಇಲ್ಲ ಮೇಷ ರಾಶಿ ಇಂದು ನಿಮಗೆ ಸಮಸ್ಯೆಗಳ ಅಂತ್ಯ ಕಾಣಬಹುದು, ಹೊಸ ಯೋಜನೆಗಳು ಚಾಲನೆ, ನಿಮಗೆ ಹೋಟೆಲ್ ವ್ಯವಹಾರ ಸಾಲಾವಳಿ ಬಂದಿದೆ ಅಧಿಕ ಧನ ಲಾಭ, ಯಂತ್ರಗಳ ಬಿಡಿ ಭಾಗಗಳ ಉದ್ಯಮದಾರರಿಗೆ ಆರ್ಥಿಕ ನಷ್ಟ, ಗುತ್ತಿಗೆದಾರರಿಗೆ ಹೊಸ ಟೆಂಡರ್ ಭಾಗ್ಯ, ಒಳಸಂಚುಗಳ ಬಗ್ಗೆ ಜಾಗೃತಿ ಇರಲಿ,ರಿಯಲ್ ಎಸ್ಟೇಟ್ ಮತ್ತು ಡೆವಲಪರ್ಸ್ ನವರಿಗೆ ಉದ್ಯಮದಲ್ಲಿ ಚೇತರಿಕೆ,ತಮಗೆ ಬರಬೇಕಾದ ಬಾಕಿ ಸಾಲದ ಮೊತ್ತ ಕೈಸೇರುವುದು. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ವ್ಯಾಪಾರ- ವ್ಯವಹಾರ…
ಮೈಸೂರು:- ಇಂದಿನಿಂದ 9 ದಿನಗಳ ಕಾಲ ಮೈಸೂರು ನಗರ ಸ್ವರ್ಗದಂತೆ ಕಂಗೊಳಿಸುತ್ತದೆ. ಇದಕ್ಕೆ ಕಾರಣ ಇವತ್ತಿನಿಂದ ಆರಂಭವಾಗುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವಿದ್ದು, ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು. https://youtu.be/uEDROj4Ffbs?si=I3oVPyY5Djyaz9LD ದೇವಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.. ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಜೋರಾಗಿದೆ. ಉದ್ಘಾಟನೆಗೆ ಭಕ್ತರಿಗೂ ಅವಕಾಶ ನೀಡಲಾಗಿದೆ. ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದಾರೆ.
ಕಲಘಟಗಿ: ತಾಲೂಕಿನ ಬೇಗೂರು ಗ್ರಾಮದ ನಿಂಗಪ್ಪ ದೊಡಮನಿಯವರು ಭೂಸೇನೆಯಲ್ಲಿ ಕಳೆದ 24 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಹಿನ್ನೆಯಲ್ಲಿ ಊರಿನ ಗ್ರಾಮಸ್ಥರು ಮೆರವಣಿಗೆ ಮುಖಾಂತರ ಅದ್ದೂರಿಯಾಗಿ ಬರಮಾಡಿಕೊಂಡರು. https://youtu.be/ar80sPfVI-Q?si=c8bOeurb_oKBxX55 ಗ್ರಾಮ ಪಂಚಾಯತಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಭವ್ಯವಾದ ಸ್ವಾಗತ ದೊರೆಯಿತು. ಗ್ರಾಮದ ಹುತಾತ್ಮ ವೀರ ಯೋಧನ ಪುತ್ಥಳಿಗೆ ಹೂವಿನ ಹಾರ ಹಾಕಿ ನಿಂಗಪ್ಪ ದೊಡ್ಡಮನಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಸವರಾಜ್ ಕಟ್ಟಪ್ಪಗೌಡ್ರು, ಮಲ್ಲಿಕಾರ್ಜುನ ದನಿಗೊಂಡ, ಮಡಿವಾಳಪ್ಪ ನೂಲ್ವಿ, ಬಸವಣ್ಣಪ್ಪ ಬೋಳಣ್ಣವರ್,ನಿಂಗಪ್ಪ ನಿಗದಿ, ಬಸವರಾಜ್ ಮುಗನ್ನವರ್, ಫಕೀರಪ್ಪ ಸುಣಗಾರ, ನಿಂಗಪ್ಪ ಕೆಲಗೇರಿ, ಬಸವರಾಜ್ ಸುಳದ, ಮಾಜಿ ಸೈನಿಕರಾದ ಚನ್ನಪ್ಪ ಕಾಮಧೇನು, ಈರಪ್ಪ ರೊಟ್ಟಿ, ಮಂಜುನಾಥ್ ಬೋಳಣ್ಣವರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುನಾಥ್ ಹರಿಜನ, ಗ್ರಾಮದ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ರಾಥೋಡ್, ಪ್ರಭು ಅಂಗಡಿ, ಡಾ:ಸುರೇಶ್ ಕಳಸಣ್ಣವರ, ಗಿರೀಶ್ ಬಂಡಿ, ಉಪಸ್ಥಿತರಿದ್ದರು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿದ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಶಿಲ್ಪಾ ಫೌಂಡೇಶನ್ ವತಿಯಿಂದ ಸ್ಮಾರ್ಟ್ ಬಸ್ ಸ್ಡ್ಯಾಂಡ್ ರೆಡಿಯಾಗಿದ್ದು ನಗರದ ನೃಪತುಂಗ ರಸ್ತೆಯಲ್ಲಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಮಹಿಳಾ ಸ್ನೇಹಿಯಾಗಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಉದ್ಘಾಟನೆ ಮಾಡಲಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ https://youtu.be/BGKxd74QrMo?si=qX3tq2w7oeyLuYr5 ಬಸ್ ಸ್ಟ್ಯಾಂಡ್ ನ ವಿಶೇಷತೆ? ಸ್ಮಾರ್ಟ್ ಬಸ್ ಸ್ಟ್ಯಾಂಡ್ ನಲ್ಲಿ ಎರಡು ಸಿಸಿಟಿವಿ ಇದೆಪ್ಯಾನಿಕ್ ಬಟನ್ ಕೂಡ ಬಸ್ ಸ್ಟ್ಯಾಂಡ್ ನಲ್ಲಿದೆಸಿಸಿಟಿವಿ, ಪ್ಯಾನಿಕ್ ಬಟನ್ ಸ್ಥಳೀಯ ಠಾಣೆಗೆ ಆಯಕ್ಸಸ್ ಇರುತ್ತೆಹಲಸೂರು ಗೇಟ್ ಪೊಲೀಸರಿಗೆ ಆಕ್ಸಸ್ ಇರುತ್ತೆದಿನದ 24 ಗಂಟೆಯೂ ಕೂಡ ಇಲ್ಲಿ ಕರೆಂಟ್ ಲೈಟಿಂಗ್ಇದೆಬಸ್ ಇನ್ಫರ್ಮೇಷನ್ ಡಿಸ್ಲೇ ಲ್ಯಾಪ್ ಟಾಪ್ , ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನ ಒಳಗೊಂಡಿದೆ
ಬೆಂಗಳೂರು: ಇಂದಿನಿಂದ ನಾಡ ಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ.. https://youtu.be/MjRXHcGPVac?si=qxFdlHpF_iRFxI8e ಹೌದು … ಅಕ್ಟೋಬರ್ 3 ಅಂದರೆ ಇಂದಿನಿಂದ 20ರವರೆಗೆ ದಸರಾ ರಜೆ ಆರಂಭವಾಗಲಿದ್ದು, ಹಾಗಾಗಿ ಇಂದಿನಿಂದಲೇ ಮಕ್ಕಳಿಗೆ ದಸರಾ ರಜೆ ಇರಲಿದೆ.
ಮೈಸೂರು:- ಇಂದಿನಿಂದ 9 ದಿನಗಳ ಕಾಲ ಮೈಸೂರು ನಗರ ಸ್ವರ್ಗದಂತೆ ಕಂಗೊಳಿಸುತ್ತದೆ. ಇದಕ್ಕೆ ಕಾರಣ ಇವತ್ತಿನಿಂದ ಆರಂಭವಾಗುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವಿದ್ದು, ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು. ದೇವಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.. ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಜೋರಾಗಿದೆ. ಉದ್ಘಾಟನೆಗೆ ಭಕ್ತರಿಗೂ ಅವಕಾಶ ನೀಡಲಾಗಿದೆ. ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದಾರೆ.
ಲೆಬನಾನ್‌ನಲ್ಲಿ ಇತ್ತೀಚೆಗೆ ಸಂಘಟಿತ ಪೇಜರ್ ಹಾಗೂ ವಾಕಿಟಾಕಿಗಳು ಸ್ಫೋಟಗೊಂಡು ಹಲವರು ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಭಾರತ ಸರ್ಕಾರ ವಿದೇಶದಲ್ಲಿ ಸಿದ್ಧವಾದ ಇಂಥ ಉಪಕರಣಗಳು ಭಾರತದ ಭದ್ರತೆಯ ಮೇಲೆ ದುಷ್ಪರಿಣಾಮ ಬೀರಬಲ್ಲವು ಎಂದು ಅನುಮಾನ ವ್ಯಕ್ತಪಡಿಸಿದೆ. ಭಾರತ ಸರ್ಕಾರವು ಸಿಸಿ ಕ್ಯಾಮೆರಾದಂಥ ‘ಕಣ್ಗಾವಲು ಮಾರುಕಟ್ಟೆ’ಯಲ್ಲಿ ವಿದೇಶಿ ಉಪಕರಣಗಳ ಮೇಲೆ ನಿರ್ಬಂಧ/ನಿಯಂತ್ರಣ ಹೇರಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ಪೇಜರ್ ಸ್ಫೋಟಗಳ ಬಳಿಕ ಭಾರತ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಿದೆ. ಸರ್ಕಾರದ ಕಣ್ಗಾವಲು ಕ್ಯಾಮೆರಾ ನೀತಿಯು ಅ.8 ರಂದು ಜಾರಿಗೆ ಬರುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಿಂದ ಚೀನಾದ ಕಂಪನಿಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ ಮತ್ತು ಭಾರತೀಯ ಕಂಪನಿಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ. ಸಂಶೋಧನಾ ವಿಶ್ಲೇಷಕ ವರುಣ್ ಗುಪ್ತಾ ಪ್ರತಿಕ್ರಿಯಿಸಿ, ‘ಪ್ರಸ್ತುತ, ಸಿಪಿ ಪ್ಲಸ್, ಹಿಕಿವಿಷನ್ ಮತ್ತು ದಹುವಾ ಎಂಬ ಕಂಪನಿಗಳು ಭಾರತ ಕಣ್ಗಾವಲು ಮಾರುಕಟ್ಟೆಯಲ್ಲಿ ಶೇ.60ರಷ್ಟು ಪಾಲು ಹೊಂದಿವೆ. ಈ ಪೈಕಿ ಸಿಪಿ ಪ್ಲಸ್ ಮಾತ್ರ ಭಾರತದ್ದು. ಉಳಿದವು ಚೀನೀ ಕಂಪನಿಗಳು.…