ಕಳೆದ ಕೆಲ ದಿನಗಳಿಂದ ಭಾರತದ ವಿರುದ್ಧ ಹೇಳಿಕೆ ನೀಡುವ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿವಾದ ಹುಟ್ಟುಹಾಕಿದ್ದಾರೆ. ಇದೀಗ ಕೆನಡಾ ಸರ್ಕಾರವು ಮುಂದಿನ ವರ್ಷದಿಂದ ತನ್ನ ಜನಸಂಖ್ಯೆಗೆ ತಕ್ಕಂತೆ ವಲಸಿಗರಿಗೆ ವೀಸಾ ನೀಡುವ ಪ್ರಮಾಣದಲ್ಲಿ ಶೇಕಡಾ 20ರಷ್ಟು ಕಡಿತಗೊಳಿಸಲು ಮುಂದಾಗಿದ್ದಾರೆ. ಕೋವಿಡ್ ಸಮಯದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು, 2025-2026 ರಲ್ಲಿ ತಲಾ 5 ಲಕ್ಷ ವಲಸಿಗರಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದಾಗ, ಉದ್ಯೋಗಿಗಳ ಅಗತ್ಯಗಳನ್ನು ಪರಿಹರಿಸುವ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ನಿರ್ವಹಿಸುವ ನಡುವೆ ಸರಿಯಾದ ಸಮತೋಲನ ಹೊಂದಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ಇದೀಗ ಕೆನಡಾ ಸರ್ಕಾರದ ಹೊಸ ಯೋಜನೆಯ ಪ್ರಕಾರ, 2025 ರಲ್ಲಿ 3.95 ಲಕ್ಷ ಹೊಸ ಖಾಯಂ ನಿವಾಸಿಗಳಿಗೆ ಅವಕಾಶ ನೀಡಲಾಗುವುದು, ಅದು ಈ ವರ್ಷದ 4.85 ಲಕ್ಷದಿಂದ ಕಡಿಮೆಯಾಗಿದೆ. 2026 ಮತ್ತು 2027 ರ ಪರಿಷ್ಕೃತ ಗುರಿಗಳು ಕ್ರಮವಾಗಿ 3.8 ಲಕ್ಷ ಮತ್ತು 3.65 ಲಕ್ಷಗಳಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿ ವೀಸಾಗಳನ್ನು ಸುಮಾರು ಶೇಕಡಾ 35…
Author: Prajatv Kannada
ಗದಗ:- ಕಳಪೆ ರೇಷನ್ ವಿತರಣೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ತಾಲೂಕಿನ ಕೋಟುಮಚಗಿ ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ತಿನ್ನಲು ಯೋಗ್ಯವಲ್ಲದ ಕಳಪೆ ಗುಣಮಟ್ಟದ ರೇಷನ್ ಹಂಚಿಕೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. https://youtu.be/2bJa1t3JjKE?si=FfgcO6x7v-Kj9Y4n ಪಡಿತರ ಚೀಟಿಗೆ ವಿತರಣೆ ಮಾಡುವ ಜೋಳದಲ್ಲಿ ಹಾಗೂ ಅಕ್ಕಿಯಲ್ಲಿ ಹುಳು ಕಂಡು ಗ್ರಾಹಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿ ಗ್ರಾಹಕರಿಗೆ ೩ ಕೇಜಿ ಜೋಳ ಕೊಡ್ತಾರೆ. ಆದರೆ ಗಲೀಜು ತುಂಬಿರೋ ಜೋಳ ವಿತರಣೆ ಮಾಡ್ತಿದ್ದಾರೆ. ನಮ್ಮ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಗದಗ:- ಗದಗ ಪೊಲೀಸರು ಕಾರ್ಯಚರಣೆ ಮಾಡಿ ಅಂತರ್ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡ್ತಿದ್ದ ಅಪ್ರಾಪ್ತನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. https://youtu.be/kmAkSPUko0s?si=V3j5cNa69pRVAMbj ಈ ಬಾಲಕ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಈ ಸಂಬಂಧ ದೂರು ದಾಖಲಿಸಿ ತನಿಖೆಗಿಳಿದ ಪೊಲೀಸರು, ಅಪ್ರಾಪ್ತ ಬಾಲಕನನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಆತನಿಂದ ಅಂದಾಜು 4 ಲಕ್ಷ 40 ಸಾವಿರ ಮೌಲ್ಯದ 12 ಬೈಕ್ ಹಾಗೂ ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಘಟನೆ ಸಂಬಂಧ ಭರ್ಜರಿ ಕಾರ್ಯಾಚರಣೆ ಮಾಡಿದ್ದ ಗದಗ ಬಡಾವಣೆ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ
ಬೆಂಗಳೂರು:- ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 39 ರಷ್ಟು PM 2.5 ಕಣಗಳ ಹೊರಸೂಸುವಿಕೆ ಆಗುತ್ತಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 48 ರಷ್ಟು ಮಾಲಿನ್ಯವಾಗುತ್ತಿದೆ. https://youtu.be/jPpQYrgZMUM?si=-Z-iJHRHYV7SwD88 ಕಡಿಮೆ ಮಾಲಿನ್ಯಕಾರಕ ಪರ್ಯಾಯ ಇಂಧನಗಳ ಲಭ್ಯತೆಯ ಹೊರತಾಗಿಯೂ ಮರ ಮತ್ತು ಕಲ್ಲಿದ್ದಲನ್ನು ಸುಡುವ ಮೂಲಕ ಕೈಗಾರಿಕೆಗಳು ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂಬುದು ಅಧ್ಯಯನ ವರದಿಯೊಂದರಿಂದ ಬಹಿರಂಗವಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ. ಗುಫ್ರಾನ್ ಬೀಗ್ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿತ್ತು. PM 2.5 ಕಣಗಳ ಹೊರಸೂಸುವಿಕೆ ಬಗ್ಗೆ ಸಂಶೋಧಕರು ಹಲವಾರು ತಿಂಗಳುಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಮೊದಲ ಬಾರಿಗೆ, ನಾವು ಅಲ್ಟ್ರಾ ಫೈನ್ ರೆಸಲ್ಯೂಶನ್ನ (200 ಚದರ ಮೀಟರ್ ಗ್ರಿಡ್‌ಗಳು) 80 ಮಾಲಿನ್ಯ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದ್ದೇವೆ. ಈ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮುಖ ಮೂಲಗಳ ಪತ್ತೆ ಮಾಡಲಾಗಿದೆ. ಸಾರಿಗೆ ವಲಯವು…
ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಸೂಪರ್ ಎಂಟ್ರಿ ಕೊಟ್ಟಿದ್ದಾರೆ. ಬರ್ತ್ ಡೇ ದಿನದಂದೇ ಈ ಒಂದು ಟೀಸರ್ ಬಂದಿರೋದು ವಿಶೇಷವಾಗಿಯೇ ಇದೆ. https://youtu.be/fR5wgUUf7lc?si=FcdGM7A2tJjh77Je ಈ ಮೂಲಕ ಚಿತ್ರದ ಒಂದಷ್ಟು ಝಲಕ್ ಕೂಡ ರಿವೀಲ್ ಆಗಿದೆ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಈ ಒಂದು ಟೀಸರ್ ಜಬರ್‌ದಸ್ತ್ ಆಗಿಯೇ ಇದೆ. ಇದಕ್ಕೆ ಬಳಸಿದ ಹಿನ್ನೆಲೆ ಸಂಗೀತ ಕುತೂಹಲ ಮೂಡಿಸುತ್ತಿದೆ. ಶಿವರಾಜ್ ಕುಮಾರ್ ಎಂಟ್ರಿ ಕೂಡ ಇಂಟ್ರಸ್ಟಿಂಗ್ ಆಗಿದೆ. ದೊಡ್ಡ ಸ್ಕೇಲ್‌ನಲ್ಲಿಯೇ ಈ ಚಿತ್ರ ತಯಾರಾಗಿದೆ ಅನ್ನೋ ಮಾಹಿತಿ ಕೂಡ ಈ ಟೀಸರ್‌ನಿಂದಲೇ ತಿಳಿಯುತ್ತದೆ. ಅಷ್ಟೊಂದು ರಿಚ್ ಆಗಿಯೇ ಸಿನಿಮಾ ಬಂದಿದೆ ಅನಿಸುತ್ತಿದೆ. ಡೈರೆಕ್ಟರ್ ನರ್ತನ್ ಈ ಚಿತ್ರದ ಮೂಲಕ ಮಫ್ತಿ ಚಿತ್ರದ ಪ್ರೀಕ್ವೆಲ್ ಕಥೆ ಹೇಳುತ್ತಿದ್ದಾರೆ. ಈ ಮೂಲಕ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಹೊಸದೊಂದು ಕಥೆ ಹೇಳುತ್ತಿದ್ದಾರೆ. ಈ ಸಿನಿಮಾದ ಈ ಒಂದು ಫಸ್ಟ್ ಟೀಸರ್‌ನ ಇತರ ವಿಶ್ಲೇಷಣೆ ಇಲ್ಲಿದೆ ಓದಿ. ಭೈರತಿ…
ಆಲಿಯಾ ಭಟ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ. ಮದುವೆಯಾದ ಬಳಿಕವೂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಆಲಿಯಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಆಲಿಯಾ ಅಭಿಮಾನಿಗಳು, ಕೆಲ ಸಿನಿಮಾ ಪ್ರೇಮಿಗಳು ನಟಿಯ ಮುಖದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದ್ದಾರೆ. ಆಲಿಯಾರ ಮುಖ ಮೊದಲಿನಂತಿಲ್ಲ. ಆಲಿಯಾರ ನಗು ಹಾಗೂ ಮಾತನಾಡುವ ಶೈಲಿಯೂ ಬದಲಾಗಿದೆ. ಆಲಿಯಾರ ಮುಖ ಬೇರೆ ಆಕಾರವನ್ನೇ ಪಡೆದುಕೊಂಡಿದೆ ಎಂದು ಗುರುತಿಸಿದ್ದರು. ಕಾಸ್ಮೆಟಿಕ್ ಸರ್ಜನ್ ಒಬ್ಬರು ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಸಖತ್ ವೈರಲ್ ಆಗಿತ್ತು. ವೈದ್ಯ ಸಾಯಿ ಗಣಪತಿ ಎಂಬುವರು ಸಂದರ್ಶನವೊಂದರಲ್ಲಿ ಮಾತನಾಡಿ, ‘ಆಲಿಯಾ ಭಟ್ರ ಇತ್ತೀಚೆಗಿನ ವಿಡಿಯೋ, ಚಿತ್ರಗಳನ್ನು ನೋಡಿದರೆ ಅವರಿಗೆ ಮುಖದ ಪಾರ್ಶ್ವವಾಯು ಆಗಿದೆ ಎನ್ನುವುದು ಖಾತ್ರಿಯಾಗುತ್ತಿದೆ. ಅವರು ಬಾಯಿ ಸೊಟ್ಟ ಮಾಡಿ ನಗುತ್ತಿದ್ದಾರೆ, ಬಾಯಿ ಸೊಟ್ಟ ಮಾಡಿ ಮಾತನಾಡುತ್ತಿದ್ದಾರೆ. ಅವರ ಮುಖದ ಒಂದು ಭಾಗ ಮಾತ್ರ ಸಕ್ರಿಯವಾಗಿದೆ. ಒಂದು ಭಾಗ ಸತ್ವ ಕಳೆದುಕೊಂಡಿದೆ. ಅವರು ಬೋಟಾಕ್ಸ್ (ಸೌಂದರ್ಯ ಹೆಚ್ಚು ಮಾಡುವ ಶಸ್ತ್ರಚಿಕಿತ್ಸೆ)ಗೆ ಒಳಗಾಗಿದ್ದಾರೆ ಎನಿಸುತ್ತಿದೆ. ಆದರೆ…
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://youtu.be/xExY7sOwNF4?si=GQGEh8X5FirRRMdX ಓಬಳೇಶ್ ಕಾಲೋನಿ,, ರಾಯಪುರ, ಬಿನ್ನಿ ಪೇಟೆ, ಪಾದರಾಯನಪುರ, ಜೆಜೆಆರ್ ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜನತಾ ಕಾಲೋನಿ, ಶಾಮನಾ ಗಾರ್ಡನ್, ರಂಗನಾಥ್ ಕಾಲೋನಿ, ಹೊಸಹಳ್ಳಿ ಮುಖ್ಯರಸ್ತೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾಟ್ರಸ್, ಎಸ್‌ಡಿ ಮಠ, ಕಾಟನ್ ಪೇಟೆ, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಸುಲ್ತಾನ್ ಪೇಟೆ, ನಲ್ಬಂಡ್‌ವಾಡಿ ಎದುರು ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಪ್ರದೇಶದಲ್ಲಿ ವಿದ್ಯುತ್ ಅಡಚಣೆಯಾಗಲಿದೆ. ಪೊಲೀಸ್ ರಸ್ತೆ, ಗೋಪಾಲನ್ ಅಪಾರ್ಟ್‌ಮೆಂಟ್, ಮರಿಯಪ್ಪ ಎ. ಕೆಪಿಎಸ್ ಮಠ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರಲ್ಲ.
ಕನ್ನಡದ ಕಿರುತೆರೆ ನಟಿ, ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ನಮ್ರತಾ ಗೌಡ ಫುಲ್ ಗರಂ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಕೆಂಡಾಮಂಡಲರಾಗಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನಮೃತಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಜೊತೆಗೆ ಜಾಹೀರಾತುಗಳಲ್ಲೂ ಮಿಂಚುತ್ತಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಹೊಸ ಹೊಸ ಲುಕ್ ಗಳ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಇದೀಗ ಫುಲ್ ಗರಂ ಆಗಿದ್ದಾರೆ. ಅಷ್ಟಕ್ಕೂ ಆಕೆಯ ಕೋಪಕ್ಕೆ ಕಾರಣವಾಗಿರೋದು ಆಕೆಗೆ ಬರುತ್ತಿರುವ ನೆಗೆಟಿವ್ ಫೋಸ್ಟ್ ಗಳು ನಾನು ಯಾವಾಗಲೂ ಪಾಲಿಸುವುದು ಒಂದೇ, ನೆಗೆಟಿವ್ ಜನರಿಗೆ ನಾನು ಪ್ರಿತಿಕ್ರಿಯೆ ನೀಡುವುದು ಕಡಿಮೆ ಮಾಡಿದರೆ ಶಾಂತಿಯುತವಾಗಿ ಇರಲು ಸಾಧ್ಯ. ಆದರೆ ನಿಮ್ಮ ನಡುವಳಿಕೆ ಮತ್ತು ಆಲೋಚನೆಗಳು ಬೇರೆಯವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರಿಗೆ ತೊಂದರೆ ಆಗುವುದು ಗ್ಯಾರೆಂಟಿ ಎಂದು ನಾನು ನಂಬಿದ್ದೀನಿ. ಟ್ರೋಲಿಂಗ್ ಮತ್ತು ಅರ್ಥವಿಲ್ಲದ ವಿಚಾರಕ್ಕೆ ನನ್ನ ಬಗ್ಗೆ ಮಾತನಾಡುವುದನ್ನು…
ಬಿಗ್ ಬಾಸ್ ಅಂದರೆ ಅದು ಸುದೀಪ್ ಅನ್ನೋ ಅಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಸುದೀಪ್ ಹೊರತಾಗಿ ಆ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಕನ್ನಡದ ಬಿಗ್ ರಿಯಾಲಿಟಿ ಶೋ ಆರಂಭವಾದಾಗಿನಿಂದಲೂ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ. ಸೀಸನ್ 1ರಿಂದ 10ರವೆರೆಗೂ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಬಿಗ್ಬಾಸ್ ಮೂಡಿ ಬರುತ್ತಿತ್ತು. ಆದ್ರೆ ಈ ವಾರ ಬಿಗ್ಬಾಸ್ ಶೋನಲ್ಲಿ ನಿರೂಪಕರು ಬದಲಾಗಿದ್ದಾರೆ. ಯೆಸ್. ಇದೇ ಮೊದಲ ಬಾರಿಗೆ ಬಿಗ್ಬಾಸ್ ಸೀಸನ್ 11ರಲ್ಲಿ ಇಬ್ಬರು ಶೋ ನಿರೂಪಣೆ ಮಾಡಲಿದ್ದಾರೆ. ಪ್ರತಿ ವಿಕೇಂಡ್ನಲ್ಲೂ ಬಿಗ್ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಬರುತ್ತಿದ್ದರು. ಆದರೆ ಮೂಲಗಳು ಪ್ರಕಾರ ಶನಿವಾರ ಎಪಿಸೋಡ್ ಅನ್ನು ನಿರ್ದೇಶಕ ಯೋಗರಾಜ್ ಭಟ್, ಹಾಗೂ ಭಾನುವಾರ ಎಪಿಸೋಡ್ ಅನ್ನು ನಟ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರಂತೆ. ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ನಿಧನರಾಗಿದ್ದರು. ಸದ್ಯ ಕಿಚ್ಚ ಸುದೀಪ್ ಅವರು ಅನುಪಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಈ ಇಬ್ಬರು…
ಆತ ಎಷ್ಟೇ ಬಡವನಾಗಿದ್ದರು ಕೆಲವೊಂದು ಸಂದರ್ಭಗಳು ಅವರನ್ನು ಏಕಾಏಕಿ ಕೋಟ್ಯಾಧಿಪತಿಯಾಗಿ ಮಾಡಿ ಬಿಡುತ್ತವೆ. ಅಂತೆಯೇ ಇಲ್ಲೊಬ್ಬ ಬಡ ಕಾರ್ಮಿಕ ಜಸ್ಟ್ ಎಂಟೇ ಎಂಟು ನಿಮಿಷದಲ್ಲಿ 8.5 ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ. ಅಮೆರಿಕಾದ ವರ್ಜೀನಿಯಾದ ರೋನೋಕ್ನಲ್ಲಿ ಬಡ ಕಾರ್ಮಿಕನೊಬ್ಬ ಎಂಟೇ ನಿಮಿಷಗಳಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ. ಇಲ್ಲಿನ 604 ಮಿನಿಟ್ ಮಾರ್ಕೆಟ್ನ ಶಾಪಿಂಗ್ ಮಾಲ್ನಲ್ಲಿ ಆತ ಕಳೆದ 13 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ. ಇದೇ ತಿಂಗಳು ಕೂಡ ಆತ ಲಾಟರಿ ಖರೀದಿಸಿದ್ದ. ಅಷ್ಟು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರೂ ಆತನಿಗೆ ಲಾಟರಿಯಲ್ಲಿ ಯಾವುದೇ ಬಹುಮಾನ ಬಾರದೇ ಇದ್ದಿದ್ದನ್ನು ನೋಡಿ ಆತನನನ್ನು ಆತನ ಸ್ನೇಹಿತರು ಗೇಲಿ ಮಾಡಿದ್ದರು. ಸ್ನೇಹಿತರು ಎಷ್ಟೇ ಗೇಲಿ ಮಾಡಿದ್ರು ಆತ ಕೊಂಚವು ಬೇಸರಿಸಿಕೊಳ್ಳದೆ ಲಾಟರಿ ಖರೀದಿ ಮಾಡುತ್ತಿದ್ದ. ಜೊತೆ ನನ್ನ ಪ್ರಯತ್ನ ನಾನು ಮಾಡ್ತಾ ಇದೀನಿ. ನನಗೂ ಒಂದ್ ದಿನ ಅದೃಷ್ಟ ಖುಲಾಯಿಸುತ್ತೆ. ಖಂಡಿತವಾಗಿಯೂ ನನಗೆ ಲಾಟರಿ ಹೊಡೆದೇ ಹೊಡೆಯುತ್ತೆ ಅಂತ ಹೇಳಿದ. ಅದಾಗಿ ಕೆಲವೇ ಗಂಟೆಗಳಲ್ಲಿ,.. ಆತನಿಗೆ ಜಾಕ್ ಪಾಟ್ ಹೊಡೆದಿದೆ.…