ಮೈಸೂರು:- ಇಂದಿನಿಂದ 9 ದಿನಗಳ ಕಾಲ ಮೈಸೂರು ನಗರ ಸ್ವರ್ಗದಂತೆ ಕಂಗೊಳಿಸುತ್ತದೆ. ಇದಕ್ಕೆ ಕಾರಣ ಇವತ್ತಿನಿಂದ ಆರಂಭವಾಗುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವಿದ್ದು, ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು. https://youtu.be/uEDROj4Ffbs?si=I3oVPyY5Djyaz9LD ದೇವಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.. ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಜೋರಾಗಿದೆ. ಉದ್ಘಾಟನೆಗೆ ಭಕ್ತರಿಗೂ ಅವಕಾಶ ನೀಡಲಾಗಿದೆ. ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದಾರೆ.
Author: Prajatv Kannada
ಕಲಘಟಗಿ: ತಾಲೂಕಿನ ಬೇಗೂರು ಗ್ರಾಮದ ನಿಂಗಪ್ಪ ದೊಡಮನಿಯವರು ಭೂಸೇನೆಯಲ್ಲಿ ಕಳೆದ 24 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಹಿನ್ನೆಯಲ್ಲಿ ಊರಿನ ಗ್ರಾಮಸ್ಥರು ಮೆರವಣಿಗೆ ಮುಖಾಂತರ ಅದ್ದೂರಿಯಾಗಿ ಬರಮಾಡಿಕೊಂಡರು. https://youtu.be/ar80sPfVI-Q?si=c8bOeurb_oKBxX55 ಗ್ರಾಮ ಪಂಚಾಯತಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಭವ್ಯವಾದ ಸ್ವಾಗತ ದೊರೆಯಿತು. ಗ್ರಾಮದ ಹುತಾತ್ಮ ವೀರ ಯೋಧನ ಪುತ್ಥಳಿಗೆ ಹೂವಿನ ಹಾರ ಹಾಕಿ ನಿಂಗಪ್ಪ ದೊಡ್ಡಮನಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಸವರಾಜ್ ಕಟ್ಟಪ್ಪಗೌಡ್ರು, ಮಲ್ಲಿಕಾರ್ಜುನ ದನಿಗೊಂಡ, ಮಡಿವಾಳಪ್ಪ ನೂಲ್ವಿ, ಬಸವಣ್ಣಪ್ಪ ಬೋಳಣ್ಣವರ್,ನಿಂಗಪ್ಪ ನಿಗದಿ, ಬಸವರಾಜ್ ಮುಗನ್ನವರ್, ಫಕೀರಪ್ಪ ಸುಣಗಾರ, ನಿಂಗಪ್ಪ ಕೆಲಗೇರಿ, ಬಸವರಾಜ್ ಸುಳದ, ಮಾಜಿ ಸೈನಿಕರಾದ ಚನ್ನಪ್ಪ ಕಾಮಧೇನು, ಈರಪ್ಪ ರೊಟ್ಟಿ, ಮಂಜುನಾಥ್ ಬೋಳಣ್ಣವರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುನಾಥ್ ಹರಿಜನ, ಗ್ರಾಮದ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ರಾಥೋಡ್, ಪ್ರಭು ಅಂಗಡಿ, ಡಾ:ಸುರೇಶ್ ಕಳಸಣ್ಣವರ, ಗಿರೀಶ್ ಬಂಡಿ, ಉಪಸ್ಥಿತರಿದ್ದರು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿದ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಶಿಲ್ಪಾ ಫೌಂಡೇಶನ್ ವತಿಯಿಂದ ಸ್ಮಾರ್ಟ್ ಬಸ್ ಸ್ಡ್ಯಾಂಡ್ ರೆಡಿಯಾಗಿದ್ದು ನಗರದ ನೃಪತುಂಗ ರಸ್ತೆಯಲ್ಲಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಮಹಿಳಾ ಸ್ನೇಹಿಯಾಗಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಉದ್ಘಾಟನೆ ಮಾಡಲಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ https://youtu.be/BGKxd74QrMo?si=qX3tq2w7oeyLuYr5 ಬಸ್ ಸ್ಟ್ಯಾಂಡ್ ನ ವಿಶೇಷತೆ? ಸ್ಮಾರ್ಟ್ ಬಸ್ ಸ್ಟ್ಯಾಂಡ್ ನಲ್ಲಿ ಎರಡು ಸಿಸಿಟಿವಿ ಇದೆಪ್ಯಾನಿಕ್ ಬಟನ್ ಕೂಡ ಬಸ್ ಸ್ಟ್ಯಾಂಡ್ ನಲ್ಲಿದೆಸಿಸಿಟಿವಿ, ಪ್ಯಾನಿಕ್ ಬಟನ್ ಸ್ಥಳೀಯ ಠಾಣೆಗೆ ಆಯಕ್ಸಸ್ ಇರುತ್ತೆಹಲಸೂರು ಗೇಟ್ ಪೊಲೀಸರಿಗೆ ಆಕ್ಸಸ್ ಇರುತ್ತೆದಿನದ 24 ಗಂಟೆಯೂ ಕೂಡ ಇಲ್ಲಿ ಕರೆಂಟ್ ಲೈಟಿಂಗ್ಇದೆಬಸ್ ಇನ್ಫರ್ಮೇಷನ್ ಡಿಸ್ಲೇ ಲ್ಯಾಪ್ ಟಾಪ್ , ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನ ಒಳಗೊಂಡಿದೆ
ಬೆಂಗಳೂರು: ಇಂದಿನಿಂದ ನಾಡ ಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ.. https://youtu.be/MjRXHcGPVac?si=qxFdlHpF_iRFxI8e ಹೌದು … ಅಕ್ಟೋಬರ್ 3 ಅಂದರೆ ಇಂದಿನಿಂದ 20ರವರೆಗೆ ದಸರಾ ರಜೆ ಆರಂಭವಾಗಲಿದ್ದು, ಹಾಗಾಗಿ ಇಂದಿನಿಂದಲೇ ಮಕ್ಕಳಿಗೆ ದಸರಾ ರಜೆ ಇರಲಿದೆ.
ಮೈಸೂರು:- ಇಂದಿನಿಂದ 9 ದಿನಗಳ ಕಾಲ ಮೈಸೂರು ನಗರ ಸ್ವರ್ಗದಂತೆ ಕಂಗೊಳಿಸುತ್ತದೆ. ಇದಕ್ಕೆ ಕಾರಣ ಇವತ್ತಿನಿಂದ ಆರಂಭವಾಗುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವಿದ್ದು, ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು. ದೇವಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.. ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಜೋರಾಗಿದೆ. ಉದ್ಘಾಟನೆಗೆ ಭಕ್ತರಿಗೂ ಅವಕಾಶ ನೀಡಲಾಗಿದೆ. ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದಾರೆ.
ಲೆಬನಾನ್‌ನಲ್ಲಿ ಇತ್ತೀಚೆಗೆ ಸಂಘಟಿತ ಪೇಜರ್ ಹಾಗೂ ವಾಕಿಟಾಕಿಗಳು ಸ್ಫೋಟಗೊಂಡು ಹಲವರು ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಭಾರತ ಸರ್ಕಾರ ವಿದೇಶದಲ್ಲಿ ಸಿದ್ಧವಾದ ಇಂಥ ಉಪಕರಣಗಳು ಭಾರತದ ಭದ್ರತೆಯ ಮೇಲೆ ದುಷ್ಪರಿಣಾಮ ಬೀರಬಲ್ಲವು ಎಂದು ಅನುಮಾನ ವ್ಯಕ್ತಪಡಿಸಿದೆ. ಭಾರತ ಸರ್ಕಾರವು ಸಿಸಿ ಕ್ಯಾಮೆರಾದಂಥ ‘ಕಣ್ಗಾವಲು ಮಾರುಕಟ್ಟೆ’ಯಲ್ಲಿ ವಿದೇಶಿ ಉಪಕರಣಗಳ ಮೇಲೆ ನಿರ್ಬಂಧ/ನಿಯಂತ್ರಣ ಹೇರಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ಪೇಜರ್ ಸ್ಫೋಟಗಳ ಬಳಿಕ ಭಾರತ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಿದೆ. ಸರ್ಕಾರದ ಕಣ್ಗಾವಲು ಕ್ಯಾಮೆರಾ ನೀತಿಯು ಅ.8 ರಂದು ಜಾರಿಗೆ ಬರುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಿಂದ ಚೀನಾದ ಕಂಪನಿಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ ಮತ್ತು ಭಾರತೀಯ ಕಂಪನಿಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ. ಸಂಶೋಧನಾ ವಿಶ್ಲೇಷಕ ವರುಣ್ ಗುಪ್ತಾ ಪ್ರತಿಕ್ರಿಯಿಸಿ, ‘ಪ್ರಸ್ತುತ, ಸಿಪಿ ಪ್ಲಸ್, ಹಿಕಿವಿಷನ್ ಮತ್ತು ದಹುವಾ ಎಂಬ ಕಂಪನಿಗಳು ಭಾರತ ಕಣ್ಗಾವಲು ಮಾರುಕಟ್ಟೆಯಲ್ಲಿ ಶೇ.60ರಷ್ಟು ಪಾಲು ಹೊಂದಿವೆ. ಈ ಪೈಕಿ ಸಿಪಿ ಪ್ಲಸ್ ಮಾತ್ರ ಭಾರತದ್ದು. ಉಳಿದವು ಚೀನೀ ಕಂಪನಿಗಳು.…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅಲ್ಲಿ ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜಾಮೀನಿನ ಮೇಲೆ ಹೊರಬರಲು ಎದುರು ನೋಡುತ್ತಿರುವ ದರ್ಶನ್ ವಿರುದ್ಧ ಶೀಘ್ರದಲ್ಲೇ ಮತ್ತೊಂದು ಆರೋಪಪಟ್ಟಿ ಸಲ್ಲಿಕೆ ಆಗಲಿದೆ. ಕೆಲ ದಿನಗಳ ಹಿಂದೆ ತೀವ್ರ ಸಂಚಲನ ಸೃಷ್ಟಿಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆ ಪ್ರಕರಣ ಸಂಬಂಧ ದರ್ಶನ್ ಹಾಗೂ ರೌಡಿಗಳ ವಿರುದ್ಧ ಶೀಘ್ರದಲ್ಲೇ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲಿದ್ದಾರೆ. ವಿಶೇಷ ಸೌಲಭ್ಯ ಪಡೆದ ದರ್ಶನ್ ಹಾಗೂ ಇಬ್ಬರು ರೌಡಿಗಳ ವಿರುದ್ಧ ತನಿಖೆಯಲ್ಲಿ ಸಾಕಷ್ಟು ಪುರಾವೆ ಸಿಕ್ಕಿದ್ದು, ಈ ಕೃತ್ಯಕ್ಕೆ ಕಾರಾಗೃಹದ ಸಿಬ್ಬಂದಿ ಸಹಕರಿಸಿರುವುದು ಗೊತ್ತಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲ ಮಾಹಿತಿಯನ್ನು ಕ್ರೋಢೀಕರಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಮುಂದಾಗಿದ್ದಾರೆ. ಈ ಪ್ರಕರಣದ ತನಿಖೆ ಮುಕ್ತಾಯ ಹಂತ ತಲುಪಿದ್ದು ಪೊಲೀಸರು ಆರೋಪ ಪಟ್ಟಿ ಸಲ್ಲಿಕೆಗೆ ಅಂತಿಮ ಹಂತದ ತಯಾರಿ ನಡೆಸಿದ್ದಾರೆ. ಈ ಆರೋಪ ಪಟ್ಟಿಯ…
ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಲೆಬನಾನ್ ಮೇಲೆ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ತನ್ನ 8 ಮಂದಿ ಯೋಧರನ್ನು ಕಳೆದುಕೊಂಡಿದೆ. ಇದು ಮಧ್ಯಪ್ರಾಚ್ಯ ಸಂಘರ್ಷದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮಂಗಳವಾರ ನಡೆದ ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿತ್ತು. ಎರಡು ಪ್ರತ್ಯೇಕ ದಾಳಿಗಳಲ್ಲಿ ತನ್ನ ಏಳು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ. ಇದು ತಿಂಗಳಲ್ಲಿ ಇಸ್ರೇಲಿ ಪಡೆಗಳ ವಿರುದ್ಧ ನಡೆದ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಒಂದಾಗಿದೆ. ವೈದ್ಯ ಸೇರಿದಂತೆ ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನಾ “22 ವರ್ಷದ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್ ಅವರು ಲೆಬನಾನ್‌ನಲ್ಲಿ ಯುದ್ಧದ ಸಮಯದಲ್ಲಿ ಹುತಾತ್ಮರಾಗಿದ್ದಾರೆ” ಎಂದು ಇಸ್ರೇಲ್ ಮಿಲಿಟರಿ ಪ್ರಕಟಣೆಯಲ್ಲಿ ತಿಳಿಸಿತ್ತು. ಲೆಬನಾನ್ ರಾಜಧಾನಿಯಲ್ಲಿ ಸೀಮಿತ ಮತ್ತು ಸ್ಥಳೀಯ ಭೂ…
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಹೀಗಾಗಿ ವಿಜಯ್ ಸಿನಿಮಾಗಳಿಂದ ದೂರವಾಗಲು ನಿರ್ಧರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವುಂಟು ಮಾಡಿದೆ. ಈ ಮಧ್ಯೆ ವಿಜಯ್ ನಟನೆಯ ಕೊನೆಯ ಸಿನಿಮಾಗೆ ಯಾರು ನಾಯಕಿಯಾಗ್ತಾರೆ ಎಂಬ ಕುತೂಹಲ ಮನೆ ಮಾಡಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದ್ದು ಕರಾವಳಿ ಬೆಡಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡಿದ್ದ ನಟಿ ಪೂಜಾ ಹೆಗ್ಡೆಗೆ ಕೆಲ ಸಮಯದಿಂದ ಹೇಳಿಕೊಳ್ಳಲು ಸಕ್ಸಸ್ ಸಿಗುತ್ತಿಲ್ಲ. ಆದರೆ ಅವಕಾಶಗಳು ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಇದೀಗ ಕಾಲಿವುಡ್‌ನಲ್ಲಿ ಮತ್ತೊಂದು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಮ್ಮೆ ಸ್ಟಾರ್ ನಟ ವಿಜಯ್ ದಳಪತಿಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಈ ಸುದ್ದಿಯನ್ನು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ವಿಜಯ್ ನಟನೆಯ ಕೊನೆಯ ಸಿನಿಮಾ ‘ದಳಪತಿ 69ನೇ’ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮತ್ತೊಮ್ಮೆ ವಿಜಯ್ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಪೂಜಾ…
ತಮಿಳು ಚಿತ್ರರಂಗದ ಖ್ಯಾತ ನಟ ಸಿಂಬು ವೈವಾಹಿಕ ಜೀವನಕ್ಕೆ ಕಾಲಿಡ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸಖತ್ ಸದ್ದು ಮಾಡುತ್ತಿದೆ. ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ಜೊತೆ ಸಿಂಬು ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಮದುವೆ ಸುದ್ದಿ ಬಗ್ಗೆ ನಟ ಸಿಂಬು ಟೀಮ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತೆಲುಗು ನಟಿ ನಿಧಿ ಅಗರ್ವಾಲ್ ಹಾಗೂ ಸಿಂಬು ಪ್ರೀತಿಸುತ್ತಿದ್ದಾರೆ. ಸದ್ಯದಲ್ಲೇ ನಿಶ್ಚಿತಾರ್ಥ ನಡೆಯಲಿದ್ದು ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಂಬು ಇದೊಂದು ಬೇಸ್ ಲೆಸ್ ಸುದ್ದಿ. ಈ ವಿಚಾರ ವದಂತಿಯಷ್ಟೇ, ಸತ್ಯವಲ್ಲ ಎಂದಿದ್ದಾರೆ. ಅಂದಹಾಗೆ, 2021ರಲ್ಲಿ ‘ಈಶ್ವರನ್’ ಎಂಬ ಸಿನಿಮಾದಲ್ಲಿ ಸಿಂಬುಗೆ ನಾಯಕಿಯಾಗಿ ನಿಧಿ ನಟಿಸಿದ್ದರು. ಈ ಸಿನಿಮಾ ನಂತರ ಇಬ್ಬರ ಡೇಟಿಂಗ್ ಬಗ್ಗೆ ವದಂತಿ ಹಬ್ಬಿತ್ತು. ಇನ್ನೂ ಈ ಹಿಂದೆ ತ್ರಿಷಾ, ಹನ್ಸಿಕಾ ಮೋಟ್ವಾನಿ, ನಯನತಾರಾ ಜೊತೆ ಸಿಂಬು ಡೇಟಿಂಗ್ ಮಾಡಿದ್ದರು ಎನ್ನಲಾದ ಸುದ್ದಿಗಳು ಹರಿದಾಡಿತ್ತು. ಯಾವುದು ಮದುವೆಯವರೆಗೂ ಬರಲಿಲ್ಲ.…