ಬೆಂಗಳೂರು: ಸರ್ಕಾರ ನಡೆಸಬೇಕಾಗಿರುವುದು ಸಂವಿಧಾನದ ಮೇಲೆ ಹೊರತು ಷರಿಯಾ ಕಾನೂನಿನ ಮೇಲೆ ಅಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳಿಗೆ ಅಪಮಾನ ಮಾಡಿ ಮುಸ್ಲಮರಿಗಷ್ಟೇ ಜಮೀನು ಕೊಡಲು ಹೊರಟಿದ್ದೀರಾ? ಪಹಣಿಯಲ್ಲಿ ಯಾಕೆ ವಕ್ಪ್ ಬೋರ್ಡ್ ಕರ್ನಾಟಕ ಸರ್ಕಾರ ಅಂತ ಹಾಕುತ್ತಿದ್ದೀರಿ? https://youtu.be/6us7KIDUAAY?si=TlWSt9lrJTgo71E1 ತಹಸೀಲ್ದಾರ್ಗಳು, ಜಿಲ್ಲಾಧಿಕಾರಿಗಳು ಸರ್ಕಾರ ನಡೆಸಬೇಕಾಗಿರುವುದು ಸಂವಿಧಾನದ ಮೇಲೆ ಹೊರತು ಷರಿಯಾ ಕಾನೂನಿನ ಮೇಲೆ ಅಲ್ಲ. ಜಮೀರ್ ಅಹಮದ್ ಹೇಳಿದರು, ಮಸೀದಿಯ ಮುಲ್ಲಾ ಹೇಳಿದರು ಅಂತ ಕೆಲಸ ಮಾಡುವುದು ಅಲ್ಲ. ಇದು ಮುಂದುವರಿದರೆ ಹೈಕೋರ್ಟ್ ಮತ್ತು ಲೋಕಾಯುಕ್ತಕ್ಕೆ ಹೋಗಿ ನಿಮ್ಮನ್ನು ಅಮನಾತು ಮಾಡಲು ಆದೇಶ ತರುವಲ್ಲಿ ನಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಬಹಳಷ್ಟು ಜನರಿಗೆ ಕೇಂದ್ರ ಸರ್ಕಾರ ಯಾಕೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಅಂತ ಗೊತ್ತಿಲ್ಲ. ಸಚಿವ ಜಮೀರ್ ಅಹಮದ್ ಕೆಲವು ದಿನಗಳ ಹಿಂದೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ,ವಕ್ಫ್ ಬೋರ್ಡ್ ಯಾವ ಆಸ್ತಿಗಳು ತನ್ನದು ಅಂತ ಹೇಳುತ್ತದೆ ಅದನ್ನು 15 ದಿನಗಳಲ್ಲಿ…
Author: Prajatv Kannada
‘ಬಿಗ್ ಬಾಸ್ ಕನ್ನಡ’ 11ರ ಸ್ಪರ್ಧಿ ‘ಮೋಕ್ಷಿತಾ ಪೈ’ ಈ ಬಾರಿ ಗೆಲ್ಲುವ ವಿಶ್ವಾಸವಿದೆಯೇ..? Prajaatv ಗೆಲ್ಲುತ್ತಾರೆ ಸಾಧ್ಯವಿಲ್ಲ ಅವಕಾಶವಿದೆ
ಭಾರತದಲ್ಲಿ ಸಾಕಷ್ಟು ಧರ್ಮಗಳು ಅಸ್ತಿತ್ವದಲ್ಲಿವೆ.. ಅದರಲ್ಲಿ ಒಟ್ಟು ಜನಸಂಖ್ಯೆಯ 79% ಅಂದರೆ ಸುಮಾರು 97 ಕೋಟಿ ಹಿಂದೂ ಧರ್ಮದ ಜನರಿದ್ದಾರೆ.. ಹೀಗಾಗಿ ಭಾರತ ಅನೇಕ ದೇವಾಲಯಗಳ ಆಗರವಾಗಿದೆ.. ಹಾಗಾದರೆ ಭಾರತದ ಯಾವ ರಾಜ್ಯವು ಅತಿ ಹೆಚ್ಚು ದೇವಾಲಯಗಳನ್ನು ಹೊಂದಿದೆ ಎಂದು ಇದೀಗ ತಿಳಿಯೋಣ.. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ಆಂಧ್ರ ಪ್ರದೇಶವು ಆರನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಸುಮಾರು 47,000 ದೇವಾಲಯಗಳಿವೆ. ಇವುಗಳಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಕಾಳಹಸ್ತಿ, ವಿಜಯವಾಡ ಕನಕದುರ್ಗಮ್ಮ, ಶ್ರೀಶೈಲಂ ಮಲ್ಲಿಕಾರ್ಜುನ, ಕಾಣಿಪಾಕ ವರಸಿಧಿ ವಿನಾಯಕ, ಮಂತ್ರಾಲಯಂ ರಾಘವೇಂದ್ರ ಸ್ವಾಮಿ, ಅಣ್ಣಾವರಂ ಸತ್ಯನಾರಾಯಣ ಸ್ವಾಮಿ, ನೆಲ್ಲೂರು ರಂಗನಾಥ ದೇವಸ್ಥಾನ ಇತ್ಯಾದಿಗಳು ಪ್ರಸಿದ್ಧವಾಗಿವೆ. ಹೆಚ್ಚು ದೇವಾಲಯಗಳನ್ನು ಹೊಂದಿರುವ ಐದನೇ ರಾಜ್ಯ ಗುಜರಾತ್. ಇಲ್ಲಿ ಸುಮಾರು 50,000 ದೇವಾಲಯಗಳಿವೆ. ಇವುಗಳಲ್ಲಿ ದ್ವಾರಕಾದೀಶ್ ದೇವಾಲಯ, ಸೋಮನಾಥರ ಜ್ಯೋತಿರ್ಲಿಂಗ, ನಾಗೇಶ್ವರ ಜ್ಯೋತಿರ್ಲಿಂಗ, ಭಾವಗತ ಬೆಟ್ಟ, ಅಂಬಾಜಿ ದೇವಾಲಯ, ಅಕ್ಷರಧಾಮ ದೇವಾಲಯ, ದೇವರೇಶ್ವರ ಮಹಾದೇವ ದೇವಾಲಯ, ರುಕ್ಮಣಿ ದೇವಿ, ದ್ವಾರಕಾ, ರಾಮಚೋತ್ರೈ ದೇವಾಲಯ…
ಕೋಲ್ಕತ್ತಾ: ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಡಾನಾ ಚಂಡಮಾರುತ ನಿರೀಕ್ಷೆಯಂತೆ ಮಧ್ಯರಾತ್ರಿ ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ಮತ್ತು ಭದ್ರಕ್‌ನ ಧಮ್ರಾ ನಡುವೆ ಅಪ್ಪಳಿಸಿ ಜೋರು ಮಳೆಯಾಗುತ್ತಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತರ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಮತ್ತು ಕೋಲ್ಕತ್ತಾದಲ್ಲಿ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ ಸುರಿಯುತ್ತಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಮತ್ತು ಸಮೀಪದ ಜಗತ್‌ಸಿಂಗ್‌ಪುರದಲ್ಲಿ ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಗುರುವಾರ ಸಂಜೆಯಿಂದ ಸ್ಥಗಿತಗೊಂಡಿದ್ದ ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಳು ಇಂದು ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಳ್ಳಲಿದೆ. ವಿಮಾನ ನಿಲ್ದಾಣವನ್ನು ಬಂದ್…
ಹುಬ್ಬಳ್ಳಿ: ಮೂರು ಕ್ಷೇತ್ರದಲ್ಲಿ ನೂರಕ್ಕೆ ನೂರು ನಾವು ಗೆದ್ದೆ ಗೆಲ್ತಿವೆ. ವಾತಾವರಣ ನಮಗೆ ಅನುಕೂಲವಾಗಿದೆ. ಮೋದಿ ಅವರ ಪರವಾಗಿ ಜಗತ್ತೇ ನೋಡ್ತಾ ಇದೆ. ಜನರು ಸಹ ಮೋದಿ ಅವರ ಪರವಾಗಿ ಮತ ಹಾಕ್ತಾರೆ ಅನ್ನೋ ನಂಬಿಕೆ ಇದೆ. https://youtu.be/7CBFvlmYH1E?si=H2PopMSpj6LdssJ_ ಹೀಗಾಗಿ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ತೇವೆ ಅನ್ನೋ ವಿಶ್ವಾಸ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. ಇನ್ನು ಎಸ್ ಟಿ ಸೋಮಶೇಖರ್ ಹೇಳಿಕೆಗೆ ನನಗೆ ಮಾಹಿತಿ ಇಲ್ಲ ಎಂದು ಬಿಎಸ್ ವೈ, ಅವರ ಹೇಳಿಕೆ ಬಗ್ಗೆ ನನಗೆ ಕಲ್ಪನೆ ಇಲ್ಲ ಎಂದರು.
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕಳೆದ ಒಂದು ವಾರದ ಹಿಂದೆ ಸುರಿದ ಮಳೆಯಿಂದಾಗಿ ರೈತ ಬೆಳೆದ ಬೆಳೆ ಸಂಪೂರ್ಣವಾಗಿ ಜಲಾವೃತಗೊಂಡಿತು ಈ ವಿಚಾರವನ್ನು ತಿಳಿದ ಕೂಡಲೇ ಕೃಷಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. https://youtu.be/oaFjyhWt0Es?si=PXD_cLompueR7hbx ಚಿತ್ರದುರ್ಗ ತಾಲೂಕಿನ ಬೆಳಗಟ್ಟ, ವಿಜಾಪುರ, ಲಕ್ಷ್ಮಿಸಾಗರ ಗ್ರಾಮಗಳಲ್ಲಿ ಬೆಳೆ ಸಂಪೂರ್ಣವಾಗಿ ಕಣ್ಣೀರಿನಲ್ಲಿ ಕೊಚ್ಚು ಹೋಗಿದ್ದು ನನ್ನ ಸ್ಥಳಕ್ಕೆ ಧಾವಿಸಿದ ಸಚಿವ ಕೃಷ್ಣ ಬೈರೇಗೌಡ ರೈತರೊಂದಿಗೆ ಸಮಾಲೋಚಿಸಿ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.
ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಬೆಳಿಗ್ಗೆಯಿಂದಲೆ ಟೆಂಪಲ್ ರನ್ ಮಾಡಿದ ನಿಖಿಲ್ ಕುಟುಂಬದ ಜೊತೆ ಸೇರಿ ಕೆಂಗಲ್ ಹನುಮಂತರಾಯ ದೇವರ ದರ್ಶನ ಮಾಡಿದರು. https://youtu.be/PbaCxDI2fNk?si=2GwF1wyUtzsA5idR ನಾಮಪತ್ರ ಸಲ್ಲಿಕೆಗು ಮುನ್ನ ಶಕ್ತಿ ಪ್ರದರ್ಶನ ಮಾಡಿರುವ ದೋಸ್ತಿಗಳು ತೆರೆದ ವಾಹನದಲ್ಲಿ ಸುಮಾರು 1.50 ಕಿ.ಮೀ ಮೆರವಣಿಗೆ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ರೋಡ್ಶೋನಲ್ಲಿ ಕುಮಾರ್ಸ್ವಾಮಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಾದ ಆರ್.ಅಶೋಕ್, ಬಿ,ವೈ ರಾಘವೇಂದ್ರ, ಅಶ್ವತ್ ನಾರಯಣ್ ಸೇರಿದಂತೆ ಬಿಜೆಪಿ ಪ್ರಮುಖರು ಭಾಗವಹಿಸಿದರು. ಇವರೆಲ್ಲರ ಜೊತೆ ಮೈಸೂರು ಸಂಸದ ಯದುವೀರ್ ಒಡೆಯರ್ ಕೂಡ ಈ ಮೆರವಣಿಗೆಯಲ್ಲಿ ಭಾಗವಹಿಸಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡಿದರು. ಅಧಿಕೃತವಾಗಿ ಮಧ್ಯಾಹ್ನ 1:30 ಕ್ಕೆ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಮಯದಲ್ಲಿ ನಿಖಿಲ್ ಪತ್ನಿರೇವತಿ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ನಿಖಿಲ್ ಕುಮಾರಸ್ವಾಮಿಗೆ ಸಾಥ್…
ಹಾವೇರಿ: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಘೋಷಣೆ ಮಾಡಿದ್ದ ಆಡಳಿತಾರೂಢ ಕಾಂಗ್ರೆಸ್ ಶಿಗ್ಗಾವಿ ಟಿಕೆಟ್ ಘೋಷಣೆ ಮಾಡದೇ ಉಳಿಸಿಕೊಂಡಿತ್ತು. https://youtu.be/PbaCxDI2fNk?si=nL1TKtQyWURVdxYr ಈ ಹಿನ್ನೆಲೆಯಲ್ಲಿ ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಅಲ್ಪಸಂಖ್ಯಾತರಿಗೆ ಮಣೆ ಹಾಕಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿದ ಸ್ಪರ್ಧಿಸಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋಲು ಅನುಭವಿಸಿದ್ದ ಯಾಸಿರ್ ಅಹಮದ್ ಖಾನ್ ಪಟಾಣ್‌ಗೆ ಮತ್ತೊಮ್ಮೆ ಟಿಕೆಟ್ ಘೋಷಿಸಿದೆ. ಇನ್ನೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ನಾಮಪತ್ರ ಸಲ್ಲಿಸಿದ್ದಾರೆ. ತನ್ನ ಆಪ್ತರೊಂದಿಗೆ ಬಂದು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಮಾಜಿ ಸಿಎಂ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮಾದ್ಯಮವರೊಂದಿಗೆ ಮಾತನಾಡಿದ ಅವರು, ನಾವು ಎಲ್ಲರೂ ಈ ಮೊದಲೇ ಜನತಾ ನ್ಯಾಯಾಲಯದಲ್ಲಿ ಪ್ರಮಾಣ ಮಾಡಿದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ…
ಬೆಂಗಳೂರು/ಮೈಸೂರು: ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿಸಿ ರಾಜ್ಯಪಾಲರು ನೀಡಿರುವ ಆದೇಶ ಎತ್ತಿಹಿಡಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ವಿಭಾಗೀಯ ಪೀಠದದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. https://youtu.be/sCThrjRSr1Q?si=3UkeCt6GQEoO71fL ಏಕಸದಸ್ಯ ಪೀಠ ಆದೇಶ ನೀಡಿದ ಬರೋಬ್ಬರಿ 1 ತಿಂಗಳ ನಂತರ, ಸಾಕಷ್ಟು ಅಳೆದುತೂಗಿ ಸಿದ್ದರಾಮಯ್ಯ ಕಾನೂನಾತ್ಮಕವಾಗಿ ಮುಂದಡಿ ಇಟ್ಟಿದ್ದಾರೆ. ಈ ಅರ್ಜಿ ವಿಚಾರಣೆ ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಿದೆ. ಇದೇ ವೇಳೆ, ಮುಡಾ ಕೇಸ್ ತನಿಖೆ ಜೋರಾಗಿದೆ. ಇತ್ತೀಚೆಗಷ್ಟೇ ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದ ಇಡಿ ಈಗ ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ತಹಸೀಲ್ದಾರ್ ರಾಜಶೇಖರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.ಇತ್ತ, ಲೋಕಾಯುಕ್ತ ತನಿಖೆಯೂ ಚುರುಕಾಗಿದೆ. 2004ರಲ್ಲಿ ಮೈಸೂರಿನ ಹೆಚ್ಚುವರಿ ಡಿಸಿ ಆಗಿದ್ದ ಪಾಲಯ್ಯರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡ ಹಾಗೂ ಅಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿದ್ದ ಸುಬ್ರಹ್ಮಣ್ಯರಾವ್‌ರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ಕಳೆದ ವಾರ ಲೋಕಾಯುಕ್ತ…
ಬೆಂಗಳೂರು:- ಟ್ರಾಫಿಕ್ ಪೊಲೀಸರ ಮೇಲೆನೆ ಯುವತಿ ಹಲ್ಲೆಗೆ ಯತ್ನಿಸಿದ್ದು ಬಾಡಿ ಕ್ಯಾಮರ ಎಳೆದಾಡಿ ಕಿರಿಕ್ ತೆಗೆದ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯ ESI ಆಸ್ಪತ್ರೆಯ ಜಂಕ್ಷನ್ ನಲ್ಲಿ ಜರುಗಿದೆ. ಸೋನಂ ಎಂಬ ಯುವತಿ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಇಂದಿರಾನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲು ಪೊಲೀಸರು ತಯಾರಿ ಮಾಡಿದ್ದಾರೆ. ಸವಾರನ ಜೊತೆ ಕಿರಿಕ್ ತೆಗೆದಿದ್ದ ಸೋನಂ, ಈ ವೇಳೆ ಸಂಚಾರಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ನಂತರ ಪೊಲೀಸರ ಮೇಲೆನೆ ಯುವತಿ ಹಲ್ಲೆಗೆ ಯತ್ನಿಸಿದ್ದಾಳೆ. ಯುವತಿ ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಾಹಿತಿ ಲಭ್ಯವಾಗಿದೆ.