ರಾಯಚೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಸೈಟ್ ವಾಪಸ್ ನೀಡಿದ ಸಿಎಂ ಪತ್ನಿ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಜೀವನಕ್ಕೆ ಮಸಿ ಬಳಿಯಲು ಪ್ರಯತ್ನ ನಡೆದಿದೆ. ಇದಕ್ಕೆ ಬೇಸರಗೊಂಡು ನ್ಯಾಯಬದ್ಧವಾಗಿ ಪಡೆದಿರುವ ಸೈಟ್‌ಗಳನ್ನು ಸಿಎಂ ಪತ್ನಿ ವಾಪಸ್ ಕೊಟ್ಟಿದ್ದಾರೆ. ಪಾರ್ವತಿಯವರ ನಿರ್ಧಾರ ಉತ್ತಮವಾಗಿದೆ. ನಾವು ಅಭಿನಂದಿಸುತ್ತೇವೆ ಎಂದರು. ಬಿಜೆಪಿಯವರಿಗೆ ನ್ಯಾಯ, ಅಭಿವೃದ್ಧಿ ಬೇಕಿಲ್ಲ. ಕೇವಲ ಕುತಂತ್ರ ರಾಜಕೀಯ ಮಾತ್ರ ಬೇಕು. ನ್ಯಾಯ ಅನ್ಯಾಯದ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ರಾಜೀನಾಮೆ ಮಾಡಬೇಕು ಎಂದು ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ವಾಚ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿರುವ ವಿಚಾರದ ಕುರಿತು ಮಾತನಾಡಿ ವಿದೇಶದಲ್ಲಿದ್ದ ಸ್ನೇಹಿತರು ಬಂದು ವಾಚ್ ಕೊಟ್ಟಿದ್ದರು. ಅದರ ಬಗ್ಗೆ ಟೀಕೆ ಟಿಪ್ಪಣಿಗಳು ಬಂದ ಕೂಡಲೇ ತಕ್ಷಣ ಸರೆಂಡರ್ ಮಾಡಿದ್ದಾರೆ. ಜವಾಬ್ದಾರಿಯುತ ಜನಪ್ರತಿನಿಧಿ ಮಾಡಬೇಕಾದ ಕೆಲಸ ಮಾಡಿದ್ದಾರೆ. ಅದು ತಪ್ಪಾ? ಕುಮಾರಸ್ವಾಮಿ ಅವರ ಕುಟುಂಬ ಮಾಡಿದ ಹಾಗೆ…
Author: Prajatv Kannada
ಕೊಪ್ಪಳ: ಶಕ್ತಿ ಯೋಜನೆಗೆ ರಾಜ್ಯ ಸರಕಾರದಿಂದ 1600 ಕೋಟಿ ರೂ. ಬರಬೇಕು. ಸಿಎಂ ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯೂನಿಯನ್ ಲೀಡರ್ ಜೊತೆ ಮಾತನಾಡಿದ್ದೇನೆ. ನಿಗಮಗಳಿಗೆ ಕೊಡೋದು ಕೊಡಲೇಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು. ಸಾರಿಗೆ ಸಂಸ್ಥೆ ನಿಗಮಗಳಿಗೆ ಸರಕಾರದಿಂದ 7625 ಕೋಟಿ ಹಣ ಬಾಕಿ ಬಗ್ಗೆ ಬಿಜೆಪಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅವರಿಗೆ ಏನು ತಿಳುವಳಿಕೆ ಇಲ್ಲ. 2023 ರಲ್ಲಿ ನಮಗೆ ಅಧಿಕಾರ ಕೊಟ್ಟಾಗ 5900 ಕೋಟಿ ಸಾಲ ಇಟ್ಟು ಹೋಗಿದ್ದರು. ಅಂದು ಬಿಎಂಟಿಸಿ ಹೊರತುಪಡಿಸಿ ಒಂದು ಬಸ್ ಖರೀದಿ ಮಾಡಿರಲಿಲ್ಲ. ಆದರೆ, ನಮ್ಮ ಸರಕಾರ ಬಂದ ಮೇಲೆ 6300 ಬಸ್ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ. 9 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮಾಡಬೇಕಾದ ಕೆಲಸ ನಾವು ಮಾಡುತ್ತೇವೆ. ಬಿಜೆಪಿಯಿಂದ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ತಿರುಗೇಟು ನೀಡಿದರುಇನ್ನೂ ಕಾರ್ಮಿಕರಿಗೆ ನೀಡಬೇಕಾಗಿದ್ದ ಹಣ ಬಾಕಿ ಇದೆ.…
ಮಂಡ್ಯ: ಕಾಡು ಹಂದಿ ಏಕಾಏಕಿ ರೋಡಿಗೆ ಓಡಿ ಬಂದ ಪರಿಣಾಮ ಕಾಡು ಹಂದಿಗೆ ಗುದ್ದಿದ ಪರಿಣಾಂ ಬೈಕ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿ, ಗಂಡ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ನಂದಿಪುರ ಗ್ರಾಮದಲ್ಲಿ ನಡೆದಿದೆ. ಭವ್ಯ (26) ಮೃತ ದುರ್ಧೈವಿಯಾಗಿದ್ದುಸಂಬಂಧಿಕರ ಮನೆಯಿಂದ ತಮ್ಮ ಸ್ವಗ್ರಾಮ ನಂದೀಪುರಕ್ಕೆ ಹೋಗುವ ವೇಳೆ ಬೈಕ್ ಗೆ ಕಾಡು ಹಂದಿ ಅಡ್ಡ ಬಂದು ಬೈಕ್ ನಲ್ಲಿದ್ದ ಮೂವರು ಕೆಳಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆ ಭವ್ಯಗೆ ತಲೆ ಪೆಟ್ಟಾದ ಹಿನ್ನಲೆ ಸಾವನ್ನಪ್ಪಿದ್ದಾರೆ. ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಶವ ರವಾನೆ ಮಾಡಲಾಗುತ್ತದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಗರಾಭಿವೃದ್ಧಿ ಇಲಾಖೆಯಲ್ಲಿ ಮುಂಬಡ್ತಿ ಪಡೆದ 13 ಉಪ ನಿರ್ದೇಶಕರಿಗೆ ಸ್ಥಳ ನಿಯೋಜನೆಗೆ ಸಚಿವ ಭೈರತಿ ಸುರೇಶ್ ನಿಷ್ಕಾಳಜಿ.. ಬೆಂಗಳೂರು ಅ, 2 ನಗರಾಭಿವೃದ್ಧಿ ಇಲಾಖೆಯಡಿ ಬರುವ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಡಿ 13 ಜನ ಸಹಾಯಕ ನಿರ್ದೇಶಕರಿಗೆ ಉಪ ನಿರ್ದೇಶಕ ಹುದ್ದೆಗಳಿಗೆ ಮುಂಬಡ್ತಿ ನೀಡಿದ್ದು ಮೂರು ತಿಂಗಳು ಕಳೆದಿದ್ದರೂ ಇನ್ನೂ ಸ್ಥಳ ನಿಯುಕ್ತಿಗೊಳಿಸಿಲ್ಲ. https://youtu.be/lFJqmjja2ss?si=XrAx7clsxGyP6ZOb ಸಚಿವ ಭೈರತಿ ಸುರೇಶ್ ಮತ್ತು ಇಲಾಖೆಯ ಉನ್ನತಾಧಿಕಾರಿಗಳ ನಿಷ್ಕಾಳಜಿಯಿಂದ 13 ಮಂದಿ ಅಧಿಕಾರಿಗಳು ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ. ಜೂನ್ 20 ರಂದು ನಡೆದ ಪರಿಶೀಲನಾ ಸಭೆಯಲ್ಲಿ ಮುಂಬಡ್ತಿ ನೀಡಿದ್ದು, ಇನ್ನೂ ಸೂಕ್ತ ಜವಾಬ್ದಾರಿ ವಹಿಸಿಲ್ಲ. ಸಚಿವರು ಮತ್ತು ಉನ್ನತ ಅಧಿಕಾರಿಗಳು ಸ್ಥಳ ನಿಯೋಜಿಸುವ ಜವಾಬ್ದಾರಿಯನ್ನೇ ಮರೆತಂತೆ ವರ್ತಿಸುತ್ತಿದ್ದಾರೆ. ಮುಡಾ ಪ್ರಕರಣ ಧಗಧಗಿಸುತ್ತಿರುವ ಸಂದರ್ಭದಲ್ಲೇ ಸಚಿವರು ಮತ್ತು ಅಧಿಕಾರಿಗಳು ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬಡ್ತಿ ಪರಿಶೀಲನಾ ಸಭೆ ನಡೆಯುವುದು ಸಹ ವಿಳಂಬವಾಗಿತ್ತು. ಇಲಾಖೆಯಡಿ…
ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಮಚ್ಚು- ಲಾಂಗ್ʼಗಳನ್ನು ಬೀಸಿ ಅಟ್ಟಹಾಸ ಮೆರೆಯುವ ಪುಂಡಾಟಿಕೆಯ ಘಟನೆಗಳು ಹೆಚ್ಚುತ್ತಿವೆ. ಬೆಂಗಳೂರಿನ ಹನುಮಂತನಗರ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸೆಪ್ಟೆಂಬರ್ 22 ರಂದು ಗುಡ್ಡೆ ಭರತ ಹಾಗೂ ಸೈಕಲ್ ರವಿ ಹುಡುಗರ ನಡುವೆ ಗಲಾಟೆ ನಡೆದಿದ್ದು https://youtu.be/57swO40G-ms?si=PrRI672AVmh4CZae ತಡವಾಗಿ ಬೆಳಕಿಗೆ ಬಂದಿದೆ. ರೌಡಿಗಳು ಲಾಂಗ್, ಕ್ರಿಕೆಟ್ ಬ್ಯಾಟ್ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಪುಡಿ ರೌಡಿಗಳ ಬಡಿದಾಟದ ದೃಶ್ಯ ಏರಿಯಾದ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಇನ್ನು, ಇಷ್ಟೆಲ್ಲಾ ನಡೆದಿದ್ರು ಇವರ ವಿರುದ್ಧ ಯಾವುದೇ ದೂರು ದಾಖಲು ಆಗಿಲ್ಲ. ಈ ಬಗ್ಗೆ ಪೊಲಿಸರು ಯಾವ ಕ್ರಮ ಕೂಡ ಕೈಗೊಂಡಿಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕ್ತಿದ್ದಾರೆ.
ಜ್ಯೋತಿಷ್ಯ ನಂಬುವವರಿಗಾಗಿ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಬಂದಂತಹ ಆಚರಣೆಗಳನ್ನು ಅನುಸರಿಸುವರಿಗಾಗಿ… ಇನ್ನೇನು ಮಹಾಲಯ ಅಮವಾಸೆ.. ಇದನ್ನು ಒಮ್ಮೆ ಪಾಲಿಸಬಾರದೇಕೇ… ಪಿತೃಪಕ್ಷ.. ಅಂದರೆ ಏನು? ಯಾಕೆ ಆಚರಣೆ ಮಾಡಬೇಕು.. ನಮ್ಮ ಸಂಸ್ಕೃತಿ ಯಲ್ಲಿ ಬಂದ ಆಚಾರ, ವಿಚಾರಗಳ ಬಗ್ಗೆ.. ಒಮ್ಮೆ ಓದಿ ನೋಡಿ… ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತ:l ನಿತ್ಯ ಸನ್ನಿಹಿತೋ ಮೃತ್ಯು: ಕರ್ತವ್ಯೋ ಧರ್ಮ ಸಂಗ್ರಹ:ll ಧರ್ಮಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಹಾಗೆ, ಪಿತೃದೇವತೆಗಳಿಗೆ ಪಿಂಡಪ್ರದಾನ, ತರ್ಪಣ, ಮಾಡುವುದರಿಂದ ಆ ವ್ಯಕ್ತಿಗೆ ದೀರ್ಘಾಯಸ್ಸು, ಯಶಸ್ಸು,ಧನ,ಪುತ್ರ ಸುಖ,-ಸಂಪತ್ತು ಇವೆಲ್ಲವೂ ಪಿತೃಗಳ ಆಶೀರ್ವಾದದೊಂದಿಗೆ ಲಭ್ಯವಾಗುತ್ತದೆ. ಪ್ರತಿ ಸಂವತ್ಸರದಲ್ಲಿ ಭಾದ್ರಪದ ಕೃಷ್ಣ ಪಕ್ಷವನ್ನು ಪಿತೃಪಕ್ಷ ವೆಂದು ತಿಳಿದಿದ್ದೇವೆ .. 15 ದಿನಗಳ ಕಾಲ ಪಿತೃ ಪಕ್ಷವನ್ನುಆಚರಿಸಬೇಕಾದ ಈ ದಿನಗಳನ್ನು ಪಕ್ಷ ಮಾಸಾ ಎಂದು ಕೂಡ ಕರೆಯುತ್ತಾರೆ ಈ ಪಕ್ಷ ಮಾಸದ ಕೊನೆಯ ದಿನವಾದಂತ ಅಕ್ಟೋಬರ್ 2ರಂದು ಮಹಾಲಯ ಅಮಾವಾಸ್ಯೆ. 15 ದಿನಗಳಲ್ಲಿ ಆಚರಿಸದಿದ್ದರೂ ಕೂಡ ಈ ಮಹಾಲಯ ಅಮಾವಾಸ್ಯೆ ಯಂದು ಪಿತೃಪಕ್ಷದ ಪಿತೃ ಕಾರ್ಯಗಳನ್ನು ಬ್ರಾಹ್ಮಣ ಭೋಜನಗಳನ್ನು…
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ ಆಕ್ಟೀವ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಶ್ಮಿಕಾ ತಮ್ಮ ಕ್ಯೂಟ್ ಕ್ಯೂಟ್ ಎಕ್ಸ್ ಫ್ರೆಷನ್ಸ್ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾಗಳ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿರುವ ರಶ್ಮಿಕಾ ಒಡಾಟಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿರುತ್ತಾರೆ. ಎಷ್ಟೇ ಬ್ಯುಸಿಯಾಗಿದ್ದರು ರಶ್ಮಿಕಾ ಬಿಡುವು ಸಿಕ್ಕಾಗೆಲ್ಲಾ ತಮ್ಮ ಕ್ಯೂಟ್ ಕ್ಯೂಟ್ ಎಕ್ಸ್ ಪ್ರೆಷನ್ ಗಳನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯುತ್ತಿರುತ್ತಾರೆ. ಅಂತೆಯೇ ಇದೀಗ ಕೈಗಳಲ್ಲಿಯೇ ಹಾರ್ಟ್ ಇಮೋಜಿ ಮಾಡಿ ಫೋಟೋ ತೆಗೆದುಕೊಂಡಿದ್ದು ಅವುಗಳನ್ನು ಶೇರ್ ಮಾಡಿದ್ದಾರೆ. ಬಹುಶಃ ಕ್ಯಾರವಾನ್ ನಲ್ಲಿ ಕುಳಿತ ರಶ್ಮಿಕಾ ಮಂದಣ್ಣ, ತುಂಬಾನೆ ಕ್ಯೂಟ್ ಕ್ಯೂಟ್ ಎಕ್ಸಪ್ರೆಷನ್ ಕೊಟ್ಟಿದ್ದಾರೆ. ಇದು ನಿಜಕ್ಕೂ ತುಂಬಾನೆ ಸುಂದರವಾಗಿದ್ದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ರಶ್ಮಿಕಾ ಮಂದಣ್ಣ ಹೆಚ್ಚಾಗಿ ಹಾರ್ಟ್ ಸಿಂಪಲ್ ಅನ್ನೇ ಹೆಚ್ಚು ತೋರುತ್ತಾರೆ. ಹಾಗೆ ಇಲ್ಲೂ…
ಭಾರತದ ಎರಡನೆ ಪ್ರಧಾನಿಯಾಗಿ ಸೇವೆಸಲ್ಲಿಸಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ” ಜೈ ಜವಾನ್ ಪಾಲನೆಯಾಗಿದೆ ಪಾಲನೆಯಾಗಬೇಕಿದೆ ಪಾಲನೆಯಾಗಬೇಕಿದೆ
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಿದೆಯೇ..? ರಾಮರಾಜ್ಯವಾಗಿದೆ ರಾಮರಾಜ್ಯವಾಗಿಲ್ಲ 50-50