ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಳಿಕ ನಟಿ ರುಕ್ಮಿಣಿ ವಸಂತ್ ಗೆ ಬೇಡಿಗೆ ಹೆಚ್ಚಾಗಿದೆ. ಕನ್ನಡದ ಜೊತೆ ಜೊತೆಗೆ ಪರಭಾಷೆಯಲ್ಲೂ ರುಕ್ಮಿಣಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದೀಗ ರುಕ್ಮಿಣಿ ಜೂನಿಯರ್ ಎನ್ ಟಿ ಆರ್ ನಟನೆಯ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಇಗದೆ. ಇನ್ನೆನ್ನೂ ಕೆಲವೇ ತಿಂಗಳಲ್ಲಿ ಜೂ ಎನ್ಟಿಆರ್ ನಟನೆಯ ಮೊದಲ ಹಿಂದಿ ಸಿನಿಮಾ ‘ಫೈಟರ್’ ತೆರೆಗೆ ಬರಲಿದೆ. ‘ಫೈಟರ್’ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿದಿದೆ. ಇದೀಗ ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸಲಿದ್ದಾರೆ. ಈ ಸಿನಿಮಾ ಮುಹೂರ್ತ ಕೆಲ ವಾರಗಳ ಹಿಂದಷ್ಟೆ ನಡೆದಿದ್ದು, ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ. ಈ ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆ ನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡದ ನಟಿಗೆ ದೊಡ್ಡ ಅವಕಾಶವನ್ನು ನೀಡಿದ್ದಾರೆ. ರುಕ್ಮಿಣಿ…
Author: Prajatv Kannada
ಹಮಾಸ್ ನಾಯಕರ ಹತ್ಯೆ ಬಳಿಕ ಇರಾಕ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಜೋರಾಗಿದೆ. ಇದೀಗ ಇಸ್ರೇಲ್ ಮೇಲೆ ಇರಾನ್ ಮತ್ತೆ ಭೀಕರ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 400 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಉಡಾಯಿಸಿದೆ. ಇರಾನ್‌ನ ಪ್ರಮುಖ ನಗರಗಳಿಂದ ಇಸ್ರೇಲ್ ಗುರಿಯಾಗಿಸಿ, ಕ್ಷಿಪಣಿ ದಾಳಿ ನಡೆಸಲಾಗಿದೆ. ಇರಾನ್‌ನ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್, ಕರಾಜ್ ಮತ್ತು ಅರಾಕ್‌ಸೇರಿದಂತೆ ಹಲವೆಡೆಯಿಂದ ಇಸ್ರೇಲ್ ಮೇಲೆ ಸುಮಾರು 400 ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಹಮಾಸ್ ನಾಯಕ ಹತ್ಯೆಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸುವ ನಿರ್ಧಾರವನ್ನು ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಮಾಡಿದೆ ಅಂತ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಜುಲೈ 31ರಂದು ಟೆಹ್ರಾನ್‌ನಲ್ಲಿ ಫೆಲೆಸ್ತೀನ್ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ನನ್ನು ಇಸ್ರೇಲ್ ಹತ್ಯೆ ಮಾಡಲಾಗಿತ್ತು. ಸೆಪ್ಟೆಂಬರ್ 27 ರಂದು ಬೈರುತ್, ಲೆಬನಾನ್‌ನಲ್ಲಿ ತನ್ನ ಬೃಹತ್ ವೈಮಾನಿಕ ದಾಳಿಯಲ್ಲಿ, ಇಸ್ರೇಲ್ ಇರಾನಿನ ಬ್ರಿಗೇಡಿಯರ್ ಜನರಲ್ ಅಬ್ಬಾಸ್ ನಿಲ್ಫೊರೌಶನ್…
ಜಪಾನ್ ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ ಡಿಪಿ) ನಾಯಕ ಶಿಗೆರು ಇಶಿಬಾ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ಇಶಿಬಾ ಅವರನ್ನು ಆಯ್ಕೆ ಮಾಡಲಾಗಿದ್ದು ಇಶಿಬಾ ಅವರು ಫ್ಯೂಮಿಯೊ ಕಿಶಿಡಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಜಪಾನ್ ಸಂಸತ್ತಿನ ಕೆಳ ಮತ್ತು ಮೇಲ್ಮನೆ ಎರಡರಲ್ಲೂ ಪ್ರಧಾನಿ ಸ್ಥಾನಕ್ಕಾಗಿ ಕಳೆದ ವಾರ ಎಲ್ಡಿಪಿ ಅಧ್ಯಕ್ಷ ಸ್ಥಾನವನ್ನು ಗೆದ್ದ ಇಶಿಬಾ ಅವರ ಹೆಸರನ್ನು ಅನುಮೋದಿಸಿದವು. ಹಗರಣಗಳಿಂದ ಕುಖ್ಯಾತಿ ಪಡೆದಿರುವ ಎಲ್ಡಿಪಿಯ ಮೇಲೆ ಮತದಾರರ ವಿಶ್ವಾಸವನ್ನು ಪುನಃಸ್ಥಾಪಿಸಲು ಇಶಿಬಾ ಬಹಳ ಶ್ರಮಪಡಬೇಕಾಗಲಿದೆ. ಹೀಗಾಗಿ ಅವರ ಅಧಿಕಾರಾವಧಿಯು ಬಹಳಷ್ಟು ಸವಾಲುಗಳಿಂದ ಕೂಡಿತ್ತು. ಕಳೆದ ವಾರ ನಡೆದ ಚುನಾವಣೆಯಲ್ಲಿ ಆರ್ಥಿಕ ಭದ್ರತಾ ಸಚಿವ ಸನೇ ತಕೈಚಿ ಅವರನ್ನು ಸೋಲಿಸುವ ಮೂಲಕ ಇಶಿಬಾ ತಮ್ಮ ಐದನೇ ಪ್ರಯತ್ನದಲ್ಲಿ ಎಲ್ಡಿಪಿ ನಾಯಕನಾಗಿ ಜಯ ಘಳಿಸಿದರು. ಇಶಿಬಾ 215 ಮತಗಳನ್ನು ಗಳಿಸಿ 194 ಮತ ಪಡೆದ ತಕೈಚಿ ಅವರನ್ನು ಹಿಂದಿಕ್ಕಿದರು. ಇದಕ್ಕೂ ಮುನ್ನ ಸೋಮವಾರ, ಇಶಿಬಾ ಅಕ್ಟೋಬರ್ 9ರಂದು…
ಸ್ಯಾಂಡಲ್ ವುಡ್ ಖ್ಯಾತ ನಟಿ ರಚಿತಾ ರಾಮ್ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ. ಅಕ್ಟೋಬರ್ 3ರಂದು ರಚಿತಾ ರಾಮ್ 32ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ನಟಿ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ರಚಿತಾ ರಾಮ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಾರೆ. ಸೀರೆಯುಟ್ಟು, ಅದಕ್ಕೆ ತಕ್ಕ ಆಭರಣ ತೊಟ್ಟು, ಹಣೆಗೆ ಬಿಂದಿ ಇಟ್ಟು, ಮಲ್ಲಿಗೆ ಮುಡಿದು ಸಾಂಪ್ರದಾಯಿಕ ನೋಟದಲ್ಲಿ ಬಹಳ ಸೊಗಸಾಗಿ ಕಾಣಿಸಿಕೊಂಡಿರುವ ಫೋಟೋವನ್ನು ನಟಿ ಪೋಸ್ಟ್ ಮಾಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬ (ಅಕ್ಟೋಬರ್ 3) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಚಿಸುತ್ತೇನೆ. ಎಲ್ಲರಿಗೂ ಕ್ಷಮೆ ಯಾಚಿಸುತ್ತಾ, ಎಂದಿನಂತೆ ಪ್ರತೀ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ.’ – ನಿಮ್ಮ ಪ್ರೀತಿಯ ರಚ್ಚು ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ಗೆ…
ಸದಾ ವಿವಾದಗಳಿಂದ ಸುದ್ದಿಯಾಗುವ ನಟಿ ವನಿತಾ ವಿಜಯ್ಕುಮಾರ್ ಇದೀಗ ನಾಲ್ಕನೇ ಮದುವೆಯಾಗಲು ರೆಡಿಯಾಗಿದ್ದಾರೆ. ಸದ್ಯ ವನಿತಾ ವಿಜಯ್ ಕುಮಾರ್ ಅವರಿಗೆ 43 ವರ್ಷ ವಯಸ್ಸಾಗಿದ್ದು ಮತ್ತೆ ಮದುವೆಯಾಗಲು ಮುಂದಾಗಿದ್ದಾರೆ. ಹಿಂದಿನ ಮೂವರು ಪತಿಯರಿಗೆ ಡಿವೋರ್ಸ್ ನೀಡಿರುವ ವನಿತಾ ಇದೀಗ ಹಳೇ ಗೆಳೆಯ ರಾಬರ್ಟ್ಗೆ ಪ್ರಪೋಸ್ ಮಾಡಿದ್ದು ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ವನಿತಾ ವಿಜಯ್ಕುಮಾರ್ ಅವರು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಈ ಫೋಟೋದಲ್ಲಿ ರಾಬರ್ಟ್ ಅವರು ನಗು ಬೀರಿದ್ದಾರೆ. ‘ದಿನಾಂಕ ನೆನಪಿಟ್ಟುಕೊಳ್ಳಿ. 5 ಅಕ್ಟೋಬರ್ 2024. ವನಿತಾ ವಿಜಯ್ ಕುಮಾರ್ ಲವ್ಸ್ ರಾಬರ್ಟ್’ ಎಂದು ಈ ಫೋಟೋಗೆ ಕ್ಯಾಪ್ಷನ್ ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ರಾಬರ್ಟ್ ಕೂಡ ಶೇರ್ ಮಾಡಿಕೊಂಡಿದ್ದು, ‘ವಿಆರ್. ದೊಡ್ಡ ಘೋಷಣೆ. 5 ಅಕ್ಟೋಬರ್ 2024’ ಎಂದು ಬರೆದುಕೊಂಡಿದ್ದಾರೆ. ವನಿತಾ ವಿಜಯ್ಕುಮಾರ್ ಅವರು 2000ನೇ ಇಸವಿಯಲ್ಲಿ ಮೊದಲ ಮದುವೆ ಆಗಿದ್ದರು. ಆದರೆ 2007ರಲ್ಲಿ ಅವರು ವಿಚ್ಛೇದನ ಪಡೆದರು.…
ಬಾಲಿವುಡ್ ಹಿರಿಯ ನಟ ಗೋವಿಂದ್ ಅ.1ರಂದು ಮುಂಜಾನೆ ತಮ್ಮದ್ದೇ ಗನ್ ನಿಂದ ಕಾಲಿಗೆ ಆಕಸ್ಮಿಕವಾಗಿ ಫೈರ್ ಮಾಡಿಕೊಂಡಿದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಕುಟುಂಬಸ್ಥರು ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿದ ಅಭಿಮಾನಿಗಳು ಕಂಗಲಾಗಿದ್ದರು. ಸದ್ಯ ನಟನ ಆರೋಗ್ಯ ಸುಧಾರಿಸಿದೆ. ಕಾಲಿಗೆ ಹೊಕ್ಕಿದ್ದ ಗುಂಡನ ತೆಗೆದ ವೈದ್ಯರು 8ರಿಂದ 10 ಹೊಲಿಗೆ ಹಾಕಿದ್ದಾರೆ. ‘ಗೋವಿಂದ ಅವರಿಗೆ 8ರಿಂದ 10 ಹೊಲಿಗೆ ಹಾಕಿದ್ದೇವೆ. ಇನ್ನು ಎರಡು-ಮೂರು ದಿನದಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಮೊಣಕಾಲಿನಿಂದ ಎರಡು ಇಂಚು ಕೆಳಗಿನ ಜಾಗದಲ್ಲಿ ಅವರಿಗೆ ಗುಂಡೇಟು ಆಗಿದೆ’ ಎಂದು ಮುಂಬೈನ ಖಾಸಗಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ತಮ್ಮ ಭದ್ರತೆಗಾಗಿ ಇಟ್ಟುಕೊಂಡಿದ್ದ ರಿವೋಲ್ವಾರ್ ಆಕಸ್ಮಿಕವಾಗಿ ಫೈರ್ ಆದ ಪರಿಣಾಮದಿಂದ ಗೋವಿಂದ ಅವರಿಗೆ ಗುಂಡೇಟು ತಗುಲಿತ್ತು. ಆಪ್ತರು ಮತ್ತು ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಗೋವಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಗೋವಿಂದ ಸಹೋದರ ಕೀರ್ತಿ ಕುಮಾರ್, ಮಗಳು ಟೀನಾ ಅಹುಜಾ ಮುಂತಾದವರು ಆಸ್ಪತ್ರೆಗೆ ಆಗಮಿಸಿ ನಟನ ಆರೋಗ್ಯ…
ಸೂಪರ್ ಸ್ಟಾರ್ ರಜನಿಕಾಂತ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಕಾಏಕಿ ನೆಚ್ಚಿನ ನಟನನ್ನು ಅಡ್ಮಿಟ್ ಮಾಡಿದ್ದು ತಿಳಿದು ಅಭಿಮಾನಿಗಳು ಕಂಗಾಲಾಗಿದ್ದರು. ಇದೀಗ ಆಸ್ಪತ್ರೆ ಮೂಲಗಳು ರಜನಿಕಾಂತ್ ಅವರಿಗೆ ಏನಾಗಿದೆ ಎಂಬುದನ್ನು ತಿಳಿಸಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟೆಂಟ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೆ.30ರಂದು ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತನಾಳದಲ್ಲಿ ಊತ ಕಾಣಿಸಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಹಿರಿಯ ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಸ್ಟೆಂಟ್ ಹಾಕಿದ್ದು ಸದ್ಯ ರಜನಿಕಾಂತ್ ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಕಡೆಯಿಂದ ಹೆಲ್ತ್ ಅಪ್ಡೇಟ್ ನೀಡಲಾಗಿದೆ. ಆದಷ್ಟು ಬೇಗ ರಜನಿಕಾಂತ್ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ‘ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು ದಿನಗಳಲ್ಲಿ ಅವರು…
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಕೇಂದ್ರ ಸಚಿವರನ್ನು ನಿಂದಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ. ಎ.ಶರವಣ ನೇತೃತ್ವದಲ್ಲಿ ರಾಜ್ಯ ಪೊಲೀಸ್ ನಿರ್ದೇಶಕರಾದ ಡಾ. ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ಜೆಡಿಎಸ್ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು. ಕುಮಾರಸ್ವಾಮಿ ವಿರುದ್ಧ ಪತ್ರದ ಮೂಲಕ ಹಂದಿಗೆ ಹೋಲಿಸಿ, ಚಂದ್ರಶೇಖರ್ ಟೀಕಿಸಿದ್ದಾರೆ. ಇದರಿಂದ ಕೇಂದ್ರ ಸಚಿವರಿಗೆ ಅಪಮಾನ ಮಾಡಲಾಗಿದೆ ಎಂದು ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಜೆಡಿಎಸ್ ಉಪನಾಯಕ ಟಿ. ಎ.ಶರವಣ ಆಗ್ರಹಿಸಿದ್ದಾರೆ.
ಬೆಂಗಳೂರು: ರಾಯರ ದರ್ಶನಕ್ಕೆ ಹೋದವರ ಮನೆ ಕಳ್ಳತನ ಮಾಡಿ, ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲು ಹೊರಟಿದ್ದ. ಒಂದೂವರೆ ಕೆ.ಜಿ ಚಿನ್ನ ಕದ್ದಿದ್ದ ಖತರ್ನಾಕ್ ಕಳ್ಳನ ಗ್ಯಾಂಗ್ ಅನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಸನ್ಯಾಸಿ ನಂದೀಶ್, ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳಾಗಿದ್ದು, ಮನೆಗೆಲಸದವರ ಮಾತನ್ನ ಕದ್ದು ಕೇಳಿಸಿಕೊಂಡವನು ಕಳ್ಳತನಕ್ಕೆ ಇಳಿದಿದ್ದ. https://youtu.be/fo5uRzbTAgA?si=S7ubghv0rDm1H8kU ಖತರ್ನಾಕ್ ಪ್ಲ್ಯಾನ್ ಮಾಡಿಯೂ 12 ಗಂಟೆಯೊಳಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನೆಯವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ ಎಂದು ಕೆಲಸದವರು ಮಾತಾಡಿದ್ದರು. ಇದನ್ನ ಪಕ್ಕದಲ್ಲೇ ನಿಂತು ಸನ್ಯಾಸಿ ಮಠ ನಂದೀಶ ಕೇಳಿಕೊಂಡಿದ್ದ. ಈ ವಿಚಾರವನ್ನು ತನ್ನ ಸ್ನೇಹಿತರಿಗೆ ಹೇಳಿ ಕಳ್ಳತನಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಮನೆಯವರು ಮಂತ್ರಾಲಯಕ್ಕೆ ಹೊರಡುತ್ತಿದ್ದಂತೆ ಮನೆ ಬಳಿ ಕಾದು ಕುಳಿತಿದ್ದ ಈ ಕಿಡಿಗೇಡಿಗಳು, ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಮನೆಯಲ್ಲಿದ್ದ 1ಕೆ.ಜಿ 800 ಗ್ರಾಂ ಚಿನ್ನ ಎಗರಿಸಿ ಕಾಲ್ಕಿತ್ತಿದ್ದರು. ಮನೆ ಮಾಲೀಕರು ಮಂತ್ರಾಲಯದಿಂದ ವಾಪಸು ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ…