Author: Prajatv Kannada

ಸದಾ ವಿವಾದಗಳಿಂದ ಸುದ್ದಿಯಾಗುವ ನಟಿ ವನಿತಾ ವಿಜಯ್​ಕುಮಾರ್ ಇದೀಗ ನಾಲ್ಕನೇ ಮದುವೆಯಾಗಲು ರೆಡಿಯಾಗಿದ್ದಾರೆ. ಸದ್ಯ ವನಿತಾ ವಿಜಯ್ ಕುಮಾರ್ ಅವರಿಗೆ 43 ವರ್ಷ ವಯಸ್ಸಾಗಿದ್ದು ಮತ್ತೆ ಮದುವೆಯಾಗಲು ಮುಂದಾಗಿದ್ದಾರೆ. ಹಿಂದಿನ ಮೂವರು ಪತಿಯರಿಗೆ ಡಿವೋರ್ಸ್ ನೀಡಿರುವ ವನಿತಾ ಇದೀಗ ಹಳೇ ಗೆಳೆಯ ರಾಬರ್ಟ್​ಗೆ ಪ್ರಪೋಸ್​ ಮಾಡಿದ್ದು ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ವನಿತಾ ವಿಜಯ್​ಕುಮಾರ್​ ಅವರು ಮಂಡಿಯೂರಿ ಪ್ರಪೋಸ್​ ಮಾಡಿದ್ದಾರೆ. ಈ ಫೋಟೋದಲ್ಲಿ ರಾಬರ್ಟ್​ ಅವರು ನಗು ಬೀರಿದ್ದಾರೆ. ‘ದಿನಾಂಕ ನೆನಪಿಟ್ಟುಕೊಳ್ಳಿ. 5 ಅಕ್ಟೋಬರ್​ 2024. ವನಿತಾ ವಿಜಯ್​ ಕುಮಾರ್​ ಲವ್ಸ್​ ರಾಬರ್ಟ್​’ ಎಂದು ಈ ಫೋಟೋಗೆ ಕ್ಯಾಪ್ಷನ್​ ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ. ಈ ಫೋಟೋವನ್ನು ರಾಬರ್ಟ್​ ಕೂಡ ಶೇರ್​ ಮಾಡಿಕೊಂಡಿದ್ದು, ‘ವಿಆರ್​. ದೊಡ್ಡ ಘೋಷಣೆ. 5 ಅಕ್ಟೋಬರ್​ 2024’ ಎಂದು ಬರೆದುಕೊಂಡಿದ್ದಾರೆ. ವನಿತಾ ವಿಜಯ್​ಕುಮಾರ್​ ಅವರು 2000ನೇ ಇಸವಿಯಲ್ಲಿ ಮೊದಲ ಮದುವೆ ಆಗಿದ್ದರು. ಆದರೆ 2007ರಲ್ಲಿ ಅವರು ವಿಚ್ಛೇದನ ಪಡೆದರು.…

Read More

ಬಾಲಿವುಡ್​ ಹಿರಿಯ ನಟ ಗೋವಿಂದ್ ಅ.1ರಂದು ಮುಂಜಾನೆ ತಮ್ಮದ್ದೇ ಗನ್ ನಿಂದ ಕಾಲಿಗೆ ಆಕಸ್ಮಿಕವಾಗಿ ಫೈರ್ ಮಾಡಿಕೊಂಡಿದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಕುಟುಂಬಸ್ಥರು ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿದ ಅಭಿಮಾನಿಗಳು ಕಂಗಲಾಗಿದ್ದರು. ಸದ್ಯ ನಟನ ಆರೋಗ್ಯ ಸುಧಾರಿಸಿದೆ. ಕಾಲಿಗೆ ಹೊಕ್ಕಿದ್ದ ಗುಂಡನ ತೆಗೆದ ವೈದ್ಯರು 8ರಿಂದ 10 ಹೊಲಿಗೆ ಹಾಕಿದ್ದಾರೆ. ‘ಗೋವಿಂದ ಅವರಿಗೆ 8ರಿಂದ 10 ಹೊಲಿಗೆ ಹಾಕಿದ್ದೇವೆ. ಇನ್ನು ಎರಡು-ಮೂರು ದಿನದಲ್ಲಿ ಅವರು ಡಿಸ್ಚಾರ್ಜ್​ ಆಗಲಿದ್ದಾರೆ. ಮೊಣಕಾಲಿನಿಂದ ಎರಡು ಇಂಚು ಕೆಳಗಿನ ಜಾಗದಲ್ಲಿ ಅವರಿಗೆ ಗುಂಡೇಟು ಆಗಿದೆ’ ಎಂದು ಮುಂಬೈನ ಖಾಸಗಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ತಮ್ಮ ಭದ್ರತೆಗಾಗಿ ಇಟ್ಟುಕೊಂಡಿದ್ದ ರಿವೋಲ್ವಾರ್​ ಆಕಸ್ಮಿಕವಾಗಿ ಫೈರ್​ ಆದ ಪರಿಣಾಮದಿಂದ ಗೋವಿಂದ ಅವರಿಗೆ ಗುಂಡೇಟು ತಗುಲಿತ್ತು. ಆಪ್ತರು ಮತ್ತು ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಗೋವಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಗೋವಿಂದ ಸಹೋದರ ಕೀರ್ತಿ ಕುಮಾರ್​, ಮಗಳು ಟೀನಾ ಅಹುಜಾ ಮುಂತಾದವರು ಆಸ್ಪತ್ರೆಗೆ ಆಗಮಿಸಿ ನಟನ ಆರೋಗ್ಯ…

Read More

ಸೂಪರ್ ಸ್ಟಾರ್ ರಜನಿಕಾಂತ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಕಾಏಕಿ ನೆಚ್ಚಿನ ನಟನನ್ನು ಅಡ್ಮಿಟ್ ಮಾಡಿದ್ದು ತಿಳಿದು ಅಭಿಮಾನಿಗಳು ಕಂಗಾಲಾಗಿದ್ದರು. ಇದೀಗ ಆಸ್ಪತ್ರೆ ಮೂಲಗಳು ರಜನಿಕಾಂತ್ ಅವರಿಗೆ ಏನಾಗಿದೆ ಎಂಬುದನ್ನು ತಿಳಿಸಿದ್ದಾರೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟೆಂಟ್​ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೆ.30ರಂದು ರಜನಿಕಾಂತ್​ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತನಾಳದಲ್ಲಿ ಊತ ಕಾಣಿಸಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಹಿರಿಯ ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್​ ಅವರಿಗೆ ಸ್ಟೆಂಟ್​ ಹಾಕಿದ್ದು ಸದ್ಯ ರಜನಿಕಾಂತ್ ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಕಡೆಯಿಂದ ಹೆಲ್ತ್​ ಅಪ್​ಡೇಟ್​ ನೀಡಲಾಗಿದೆ. ಆದಷ್ಟು ಬೇಗ ರಜನಿಕಾಂತ್​ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ‘ರಜನಿಕಾಂತ್​ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು ದಿನಗಳಲ್ಲಿ ಅವರು…

Read More

ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಕೇಂದ್ರ ಸಚಿವರನ್ನು ನಿಂದಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ. ಎ.ಶರವಣ ನೇತೃತ್ವದಲ್ಲಿ ರಾಜ್ಯ ಪೊಲೀಸ್ ನಿರ್ದೇಶಕರಾದ ಡಾ. ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ಜೆಡಿಎಸ್ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು. ಕುಮಾರಸ್ವಾಮಿ ವಿರುದ್ಧ ಪತ್ರದ ಮೂಲಕ ಹಂದಿಗೆ ಹೋಲಿಸಿ, ಚಂದ್ರಶೇಖರ್ ಟೀಕಿಸಿದ್ದಾರೆ. ಇದರಿಂದ ಕೇಂದ್ರ ಸಚಿವರಿಗೆ ಅಪಮಾನ ಮಾಡಲಾಗಿದೆ ಎಂದು ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಜೆಡಿಎಸ್ ಉಪನಾಯಕ ಟಿ. ಎ.ಶರವಣ ಆಗ್ರಹಿಸಿದ್ದಾರೆ.

Read More

ಬೆಂಗಳೂರು: ರಾಯರ ದರ್ಶನಕ್ಕೆ ಹೋದವರ ಮನೆ ಕಳ್ಳತನ ಮಾಡಿ, ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲು ಹೊರಟಿದ್ದ. ಒಂದೂವರೆ ಕೆ.ಜಿ ಚಿನ್ನ ಕದ್ದಿದ್ದ ಖತರ್ನಾಕ್ ಕಳ್ಳನ ಗ್ಯಾಂಗ್‌ ಅನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಸನ್ಯಾಸಿ ನಂದೀಶ್, ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳಾಗಿದ್ದು, ಮನೆಗೆಲಸದವರ ಮಾತನ್ನ ಕದ್ದು ಕೇಳಿಸಿಕೊಂಡವನು ಕಳ್ಳತನಕ್ಕೆ ಇಳಿದಿದ್ದ. https://youtu.be/fo5uRzbTAgA?si=S7ubghv0rDm1H8kU ಖತರ್ನಾಕ್ ಪ್ಲ್ಯಾನ್ ಮಾಡಿಯೂ 12 ಗಂಟೆಯೊಳಗೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಮನೆಯವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ ಎಂದು ಕೆಲಸದವರು ಮಾತಾಡಿದ್ದರು. ಇದನ್ನ ಪಕ್ಕದಲ್ಲೇ ನಿಂತು ಸನ್ಯಾಸಿ ಮಠ ನಂದೀಶ ಕೇಳಿಕೊಂಡಿದ್ದ. ಈ ವಿಚಾರವನ್ನು ತನ್ನ ಸ್ನೇಹಿತರಿಗೆ ಹೇಳಿ ಕಳ್ಳತನಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಮನೆಯವರು ಮಂತ್ರಾಲಯಕ್ಕೆ ಹೊರಡುತ್ತಿದ್ದಂತೆ ಮನೆ ಬಳಿ ಕಾದು ಕುಳಿತಿದ್ದ ಈ ಕಿಡಿಗೇಡಿಗಳು, ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಮನೆಯಲ್ಲಿದ್ದ 1ಕೆ.ಜಿ 800 ಗ್ರಾಂ ಚಿನ್ನ ಎಗರಿಸಿ ಕಾಲ್ಕಿತ್ತಿದ್ದರು. ಮನೆ ಮಾಲೀಕರು ಮಂತ್ರಾಲಯದಿಂದ ವಾಪಸು ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ…

Read More

ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು ಈ ವೇಳೆ ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂದಿದ್ದಾರೆ. ನೆತನ್ಯಾಹು ಅವರೊಂದಿಗಿನ ಮಾತುಕತೆಯ ವಿವರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಪ್ರಾದೇಶಿಕ ಉದ್ವಿಗ್ನ ಸ್ಥಿತಿಯನ್ನು ತಡೆಗಟ್ಟುವುದು ಮತ್ತು ಎಲ್ಲಾ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ. ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಬದ್ಧ ಎಂದು ಮೋದಿ ಹೇಳಿದ್ದಾರೆ. ಆದರೆ ಮೋದಿ ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸಿಲ್ಲ. ಕಳೆದ ವಾರ ಲೆಬನಾನ್‌ನಲ್ಲಿ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇಸ್ರೇಲಿ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಏಳು ಉನ್ನತ ಶ್ರೇಣಿಯ ಕಮಾಂಡರ್‌ಗಳು ಮತ್ತು ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ.

Read More

ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್‌ ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಬಸ್ ನಲ್ಲಿದ್ದ 25 ಮಂದಿ ಸಾವನ್ನಪ್ಪಿರುವ ಘಟನೆ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಹೊರವಲಯದಲ್ಲಿ ಸಂಭವಿಸಿದೆ. ಮಧ್ಯ ಉತೈ ಥಾನಿ ಪ್ರಾಂತ್ಯದಿಂದ ಬ್ಯಾಂಕಾಕ್‌ಗೆ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಬಸ್ ಹೊತ್ತಿ ಉರಿದಿದೆ. ಘಟನೆಯ ವೇಳೆ ಬಸ್ ನಲ್ಲಿ ಶಿಕ್ಷಕರು ಸೇರಿದಂತೆ 44 ಜನರಿದ್ದರು. ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಬ್ಯಾಂಕಾಕ್​ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಬಸ್ ಗೆ ಬೆಂಕಿ ಹತ್ತಿಕೊಂಡಿದೆ. ಘಟನಾ ಸ್ಥಳದ ತನಿಖೆಯನ್ನು ಪೂರ್ಣಗೊಳಿಸದ ಕಾರಣ ಅಧಿಕಾರಿಗಳು ಇನ್ನೂ ಸಾವಿನ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ಆಂತರಿಕ ಸಚಿವ ಅನುಟಿನ್ ಚಾರ್ನ್‌ವಿರಾಕುಲ್ ಹೇಳಿದ್ದಾರೆ. ಆದರೆ ಬದುಕುಳಿದವರ ಸಂಖ್ಯೆಯನ್ನು ಆಧರಿಸಿ, 25 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಒಂದು ಟೈರ್ ಸ್ಫೋಟಗೊಂಡ ನಂತರ ಬಸ್ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಘಟನಾಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.…

Read More

ಗುಪ್ತಚರ ಮೂಲಕ ಹಿಜ್ಬುಲ್ಲಾ ಭದ್ರಕೋಟೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿ ಇಸ್ರೇಲಿ ರಕ್ಷಣಾ ಪಡೆಗಳು ಮಂಗಳವಾರ ದಕ್ಷಿಣ ಲೆಬನಾನ್‌ನಲ್ಲಿ ಉದ್ದೇಶಿತ ಕಾಲಾಳುಪಡೆ, ಯುದ್ಧ ವಾಹನಗಳು ಮತ್ತು ಫಿರಂಗಿ ದಾಳಿ ನಡೆಸಿವೆ. ಸೀಮಿತ ಮತ್ತು ಸ್ಥಳೀಯ ದಾಳಿಗಳು ಗಡಿಯ ಸಮೀಪವಿರುವ ಹಳ್ಳಿಗಳಲ್ಲಿ ಕೇಂದ್ರೀಕೃತವಾಗಿವೆ, ಉತ್ತರ ಭಾಗದಲ್ಲಿ ಇಸ್ರೇಲಿ ಸಮುದಾಯಗಳಿಗೆ ಬೆದರಿಕೆಗಳನ್ನು ತಟಸ್ಥಗೊಳಿಸುವ ಗುರಿಯನ್ನು ಹೊಂದಿವೆ ಎನ್ನಲಾಗಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಐಡಿಎಫ್, ರಾಜಕೀಯ ಶ್ರೇಣಿಯ ನಿರ್ಧಾರಕ್ಕೆ ಅನುಗುಣವಾಗಿ ಕೆಲವು ಗಂಟೆಗಳ ಹಿಂದೆ IDF ಸೀಮಿತ, ಸ್ಥಳೀಯ ಮತ್ತು ಗುರಿಪಡಿಸಿದ ದಾಳಿಗಳನ್ನು ಹಿಜ್ಬುಲ್ಲಾ ಭಯೋತ್ಪಾದಕ ಗುರಿಗಳು ಮತ್ತು ದಕ್ಷಿಣ ಲೆಬನಾನ್‌ನಲ್ಲಿನ ಮೂಲಸೌಕರ್ಯಗಳ ವಿರುದ್ಧ ನಿಖರವಾದ ಗುಪ್ತಚರ ಆಧಾರದ ಮೇಲೆ ಪ್ರಾರಂಭಿಸಿದೆ ಎಂದು ಬರೆದುಕೊಂಡಿದೆ. ಈ ಗುರಿಗಳು ಗಡಿಯ ಸಮೀಪವಿರುವ ಹಳ್ಳಿಗಳಲ್ಲಿವೆ ಮತ್ತು ಉತ್ತರ ಇಸ್ರೇಲ್‌ನಲ್ಲಿರುವ ಇಸ್ರೇಲಿ ಸಮುದಾಯಗಳಿಗೆ ತಕ್ಷಣದ ಅಪಾಯವನ್ನುಂಟುಮಾಡುತ್ತವೆ ಎಂದು ಅದು ಸೇರಿಸಿದೆ. ಜನರಲ್ ಸ್ಟಾಫ್ ಮತ್ತು ನಾರ್ದರ್ನ್ ಕಮಾಂಡ್ ಅಭಿವೃದ್ಧಿಪಡಿಸಿದ ಯೋಜನೆಯ ಪ್ರಕಾರ ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆಗಳು…

Read More

ಬೆಂಗಳೂರು: ಮುಡಾ ಸೈಟ್ ವಾಪಾಸ್ ನೀಡಿರುವುದು ಒಳ್ಳೆಯ ನಿರ್ಧಾರ ಎಂದು ಸಿಎಂ ಪತ್ನಿ ಮುಡಾ ಸೈಟ್ ವಾಪಸ್ ನೀಡಿರುವ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ಮನೆಯಲ್ಲಿ ಯಜಮಾನರಿಗೆ ತೊಂದರೆ ಆಗುತ್ತಿದೆ ಅಥವಾ ತೇಜೋವಧೆ ಆಗುತ್ತಿದೆ ಎನ್ನವುದು ಅವರಿಗೆ ಗೊತ್ತಾಗಿದೆ. https://youtu.be/zZpZ0u6cBiI?si=OQ3bR3xnuNnUkt9i ಅದಕ್ಕಾಗಿ ವಾಪಸ್ ಮಾಡುತ್ತೇನೆ ಎಂದಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ ಅನಿಸುತ್ತದೆ. ತನಿಖೆ ಇರಲಿ ಆಪಾದನೆ ಬಂದ ತಕ್ಷಣ ಇದು ಸತ್ಯ ಆಗುವುದಿಲ್ಲ. ಆದರೆ ಇಷ್ಟು ದಿನ ರಾಜಕೀಯಕ್ಕೆ ಉಪಯೋಗಿಸುತ್ತಿದ್ದಾರೆ ಎನ್ನುವುದು ಅವರ ಅಭಿಪ್ರಾಯ ಅಷ್ಟೇ ಎಂದರು. ಕಾನೂನು ದೃಷ್ಟಿಯಲ್ಲಿ ಮುಂದೆ ಏನಾಗುತ್ತದೆ ಗೊತ್ತಿಲ್ಲ. ಸರೆಂಡರ್ ಮಾಡಿದ ಮೇಲೆ ಏನಾಗುತ್ತದೆ ಎಂದು ಗೊತ್ತಿಲ್ಲ. ರಾಜಕೀಯಕ್ಕೆ ಉಪಯೋಗ ಮಾಡುತ್ತಿದ್ದಾರೆ. ನನಗೆ ಮರ್ಯಾದೆ ಮುಖ್ಯ ಅನ್ನುವುದು ಅವರ ಭಾವನೆಯಾಗಿದೆ. ಹಾಗಾಗಿಯೇ ಮುಡಾ ಸೈಟುಗಳನ್ನು ವಾಪಸ್ ನೀಡಿದ್ದಾರೆ. ಆದರೆ ಮುಡಾ ವಿಚಾರ ಬಿಜೆಪಿಯವರಿಗೆ  ರಾಜಕೀಯಕ್ಕೆ ಉಪಯೋಗ ಆಗುತ್ತಿದೆ ಎನ್ನುವುದು ಖಾತ್ರಿಯಾಗಿದೆ ಎಂದು ತಿಳಿಸಿದ್ದಾರೆ.

Read More