ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರ ಹರಿದಾಡುತ್ತಿದೆ. ಯಾವುದೇ ಲೆಟರ್ ಹೆಡ್ ಸೀಲ್ ಏನು ಇಲ್ಲ. ಇದು ಆಂತರಿಕ ಪತ್ರ. https://youtu.be/zZpZ0u6cBiI?si=iGMWwk-S09oCDCFj ಇದು ಸರ್ಕಾರಿ ನೌಕರ ಬರೆದಿರುವುದಾ, ಯಾರೋ ಕಿಡಿಗೇಡಿ ಬರೆದಿರೋದಾ ಎಂದು ಗೊತ್ತಾಗುತ್ತಿಲ್ಲ. ನೌಕರ ಬರೆದಿದ್ರೆ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಸಾ ರಾ ಮಹೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕುಮಾರಸ್ವಾಮಿ ಕೇಂದ್ರ ರಾಜ್ಯದ ಎಲ್ಲ ಅಧಿಕಾರಿಗಳನ್ನು ಒಳ್ಳೆಯ ರೀತಿ ನಡೆಸಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಕುಮಾರಣ್ಣ ಅವರಿಂದ ನೋವಾಗಿದ್ಯಾ? ಅವರಿಗೆ ನೋವಾಗಿದ್ದರೆ ಅದಕ್ಕೊಂದು ರೀತಿ ನೀತಿ ಇದೆ. ನ್ಯಾಯಾಲಯಕ್ಕೆ ಬೇಕಿದ್ರೆ ಹೋಗಬಹುದಿತ್ತು. ಅದನ್ನು ಬಿಟ್ಟು ಸರ್ಕಾರಿ ನೌಕರ ಕೇಂದ್ರ ಸಚಿವರ ಬಗ್ಗೆ ಈ ರೀತಿ ಪತ್ರ ಹರಿಬಿಟ್ಟಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟಿದೆ ಎಂದು ಗೊತ್ತಾಗುತ್ತದೆ. ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಬಹಳಷ್ಟು ಪ್ರಾಮಾಣಿಕರು ಇದ್ದಾರೆ ಎಂದರು.
Author: Prajatv Kannada
ಕಲಘಟಗಿ: ಭತ್ತದ ಕಣಜ, ತೊಟ್ಟಿಲ ನಗರಿ, ಕಲ್ಲು ಕಟ್ಟಿಗೆಯ ನಾಡು ಎಂದೆ ಪ್ರಸಿದ್ದಿ ಪಡೆದಿರುವ ಕಲಘಟಗಿ ಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥಯಾತ್ರೆಗೆ ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಕನ್ನಡ ಪರ ಅಭಿಮಾನಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು https://youtu.be/fuL4o2QwSsI?si=MqJXXdueVVLoVoGp ಬಮ್ಮಿಗಟ್ಟಿ ಸರ್ಕಲ್ ನಲ್ಲಿ ಸಮ್ಮೇಳನದ ರಥದಲ್ಲಿನ ಕನ್ನಡದ ತಾಯಿ ಶ್ರೀ ಭುವನೇಶ್ವರಿ ಮೂರ್ತಿಗೆ ಅದ್ದೂರಿ ಪೂಜೆಯ ಮುಖಾಂತರ ಭವ್ಯವಾಗಿ ಸ್ವಾಗತ ಕೋರಿದರು. ಕಲಾತಂಡದವರಿಂದ ಡೊಳ್ಳು ಮೆರವಣಿಗೆ ಮುಖಾಂತರ ಸಂಚರಿಸಿ. ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಲಿಂಗರಾಜ್ ಅಂಗಡಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ಜರುಗಲಿದ್ದು,ಜಿಲ್ಲೆಯವಿವಿಧ ತಾಲೂಕಿನ ಕನ್ನಡ ಪರ ಅಭಿಮಾನಿಗಳು ಭಾಗವಹಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ವೀರೇಶ ಮುಳಗುಂದಮಠ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣ, ಸಿಪಿಐ ಶ್ರೀಶೈಲ ಕೌಜಲಗಿ, ಬಸವರಾಜ ಯದ್ದಲಗುಡ್ಡ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವ ಬಸಾಪುರ, ಶಾಸಕರ ಕಾರ್ಯದರ್ಶಿ ಹರೀಶ್ ಬ್ಲೂಕರ್ಮ, ಕಾಂಗ್ರೆಸ್…
ಬೆಂಗಳೂರು. ರಾಜ್ಯದಲ್ಲಿರುವ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಸಿದ್ದರಾಮಯ್ಯ ರವರ ಸರ್ಕಾರ ಹೊರಡಿಸಿರುವ ಆದೇಶ ತಾರತಮ್ಯ ಹಾಗೂ ಆವೈಜ್ಞಾನಿಕ ವಾಗಿದ್ದು ಇದಕ್ಕೆ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತೀವ್ರವಾಗಿ ಖಂಡಿಸುತ್ತಿದ್ದು, ಈ ಕರಾಳ ಆದೇಶಕ್ಕೆ ರಾಜ್ಯಾಧ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಜೊತೆಗೆ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಸಿದ್ದರಾಮಯ್ಯನವರಿಗೆ ನಮ್ಮ ಕಾನಿಪ ಧ್ವನಿಯಿಂದ ಕೆಲ ಪ್ರಶ್ನೆಗಳು https://youtu.be/B3ghJ5tdMcY?si=hba6ZpBazog1askU 1)ಮಾಧ್ಯಮ ಪಟ್ಟಿಯಲ್ಲಿರಲೇಬೇಕೆಂಬ ಮಾನದಂಡಕ್ಕೆ ಸಂಬಂಧಿಸಿದಂತೆ, ಮಾಧ್ಯಮ ಪಟ್ಟಿಯಲ್ಲಿರದ ಪತ್ರಕರ್ತರು ನಕಲಿ ಪತ್ರಕರ್ತರೇ? 2)ತಾವು ಜಾಹಿರಾತಿನಲ್ಲಿ ತಿಳಿಸಿರುವಂತೆ ವಿದ್ಯುನ್ಮಾನ/ಮುದ್ರಣ ಮಾಧ್ಯಮ ಸಂಸ್ಥೆಗಳ 5,222 ಪತ್ರಕರ್ತರಿಗೆ ಮಾತ್ರ ಅನುಕೂಲ. ರಾಜ್ಯದಲ್ಲಿ 5,222 ಮಾತ್ರ ಪತ್ರಕರ್ತರ ಸಂಖ್ಯೆ ಇದೆನಾ. 3)ದಿನ ಪತ್ರಿಕೆ ಹಾಗೂ ವಿದ್ಯುನ್ಮಾನ ಗಳಲ್ಲಿ ಕೆಲಸ ನಿರ್ವಹಿಸುವವರು ಮಾತ್ರ ಪತ್ರಕರ್ತರೇ? ನಿಯತಕಾಲಿಕ ಪತ್ರಿಕೆಗಳಲ್ಲಿ ಅಂದರೆ ವಾರ,ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವವರು ಪತ್ರಕರ್ತರಲ್ಲವೇ ಅವರೇನಾದರೂ ಭಯೋತ್ಪಾದಕರೇ? 4)ಅರ್ಜಿದಾರರು ಪೂರ್ಣಾವಧಿಗೆ ನೇಮಕಗೊಂಡು ನಾಲ್ಕು ವರ್ಷಗಳಾಗಿರಬೇಕು ಜೊತೆಗೆ…
ದಾವಣಗೆರೆ:- ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿಯಲ್ಲಿ ಅನೈತಿಕ ಸಂಬಂಧಕ್ಕಾಗಿ ಎರಡನೇ ಪತ್ನಿಯನ್ನು ನೀರಲ್ಲಿ ಮುಳುಗಿಸಿ ಪತಿ ಕೊಲೆ ಮಾಡಿರುವ ಘಟನೆ ಜರುಗಿದೆ. https://youtu.be/B3ghJ5tdMcY?si=yreX7V0udAO2jTY- 39 ವರ್ಷದ ಗೌರಮ್ಮ ಮೃತ ದುರ್ದೈವಿ ಎನ್ನಲಾಗಿದೆ. ಚಿದಾನಂದ ಆಚಾರ್ಯ ಕೊಲೆ ಮಾಡಿದ ಆರೋಪಿ. ಕಳೆದ ಕೆಲ ದಿನಗಳ ಹಿಂದೆ ಪಾಂಡೋಮಟ್ಟಿಯ ಹಳ್ಳದಲ್ಲಿ ಅರೆಬೆತ್ತಲೆಯಾಗಿ ಬಿದ್ದ ಓರ್ವ ಮಹಿಳೆಯ ಶವ ಪತ್ತೆಯಾಗಿತ್ತು. ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಮೇಲ್ನೋಟಕ್ಕೆ ಮಹಿಳೆ ಕಾಲುಜಾರಿ ಬಿದ್ದು ಸತ್ತಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ಹುಟ್ಟಿದೆ. ಆದರೆ, ಪೊಲೀಸರು ಇದು ಕೊಲೆ ಎಂದು ಸಂಶಯ ಪಟ್ಟು, ತನಿಖೆ ನಡೆಸಿದಾಗ ಸತ್ಯ ಹೊರ ಬಂದಿದೆ. ಆರೋಪಿ ಚಿದಾನಂದ ಆಚಾರ್ಯ ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ನಂತರ, ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಗೌರಮ್ಮ ಎಂಬುವರನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದನು. ಇನ್ನು, ಗೌರಮ್ಮ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲನೇ ಪತಿ ಕುಡಿದು…
ಕೋಲಾರ : ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಾಚ್ಯ ಅಸಭ್ಯ ಮತ್ತು ಅವಹೇಳನಕಾರಿ ಪದಬಳಕೆ ಮಾಡಿ, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಎಂ.ಚಂದ್ರಶೇಖರ್ ರನ್ನು ಭಾರತೀಯ ಪೋಲಿಸ್ ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಜಿಲ್ಲಾ ಜೆಡಿಎಸ್ ಪಕ್ಷದಿಂದ ನಗರದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. https://youtu.be/fuL4o2QwSsI?si=JWw5ZQw8e_lMQz5L ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎ.ಡಿ.ಜಿ.ಪಿ. ಎಂ.ಚಂದ್ರಶೇಖರ್ ಅವರ ವಿರುದ್ದ ಉನ್ನತ ಮಟ್ಟದ ತನಿಖೆಯನ್ನು ನಡೆಸಿ, ಭ್ರಷ್ಟಾಚಾರ, ದುರ್ನಡತೆ ಮತ್ತು ಸೂಲಿಗೆ ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎ.ಡಿ.ಜಿ.ಪಿ. ಎಂ.ಚಂದ್ರಶೇಖರ್ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಾಚ್ಯ ಪದದಿಂದ ನಿಂಧಿಸಿರುವ ಇವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಅವಾಚ್ಯ ಪದದಿಂದ ನಿಂಧಿಸಿದ್ದು, ಭಾರತೀಯ ಸಾಂವಿಧಾನಿಕ ಉನ್ನತ ಹುದ್ದೆಯಲ್ಲಿರುವ ಈ ಅಧಿಕಾರಿಯು ದುರ್ನಡತೆ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡಿರುವ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಹೇಳಿದರು
ಅಮೆರಿಕದ ಆಗ್ನೇಯ ದಿಕ್ಕಿನಲ್ಲಿ ಸಂಭವಿಸಿದ ಹೆಲೆನ್ ಚಂಡಮಾರುತದಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಹಲವು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ. ಘಟನೆಯಲ್ಲಿ ಇದುವರೆಗೂ 130 ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕೆರೊಲಿನಾ, ಜಾರ್ಜಿಯಾ, ಫ್ಲೋರಿಡಾ, ಉತ್ತರ ಕೆರೊಲಿನಾ, ವರ್ಜೀನಿಯಾ ಮತ್ತು ಟೆನ್ನೆಸ್ಸಿಯಲ್ಲಿ ಸಾವುಗಳು ಸಂಭವಿಸಿವೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಉತ್ತರ ಕೆರೊಲಿನಾದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ. ಸಲೂಡಾ ಕೌಂಟಿಯ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ದಕ್ಷಿಣ ಕೆರೊಲಿನಾದಲ್ಲಿ ಕನಿಷ್ಠ 25 ಮಂದಿ ಅಸುನೀಗಿದ್ದಾರೆ. ಜಾರ್ಜಿಯಾದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಅಲಾಮೊದಲ್ಲಿ ಸುಂಟರಗಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಬ್ರಿಯಾನ್ ಕೆಂಪ್ ಅವರ ವಕ್ತಾರರು ತಿಳಿಸಿದ್ದಾರೆ. ಉತ್ತರ ಕೆರೊಲಿನಾದ ಬಂಕೊಂಬ್ ಕೌಂಟಿಯು ಆನ್‌ಲೈನ್ ಫಾರ್ಮ್ ಮೂಲಕ ಸುಮಾರು 600 ಕಾಣೆಯಾದ ಜನರ ಮಾಹಿತಿ ಪಡೆದಿದೆ ಎಂದು ಕೌಂಟಿ ಮ್ಯಾನೇಜರ್ ಅವ್ರಿಲ್ ಪಿಂಡರ್ ಭಾನುವಾರ…
ಬೆಂಗಳೂರು:- ನಿತ್ಯ ಬಳಸುವ ತೆಂಗಿನಕಾಯಿ ಬೆಲೆ ಏರಿಕೆಯಾಗಿದ್ದು, ಹಬ್ಬದ ಸಮಯದಲ್ಲೇ ಈ ರೀತಿ ಬೆಲೆ ಏರಿಕೆ ಆದ್ರೆ ಹೇಗೆ ಅನ್ನೋ ಹೊಸ ತಲೆನೋವು ಶುರುವಾಗಿದೆ. https://youtu.be/PGMd3uKlIcc?si=N9sjJVQTVezoxJPX ಕಳೆದ ಹದಿನೈದು ದಿನಗಳ ಹಿಂದೆ ಒಂದು ಕೆ.ಜಿ ತೆಂಗಿನ ಕಾಯಿ 30ರಿಂದ 35ರೂಪಾಯಿಗೆ ಮಾರಾಟವಾಗುತ್ತಿತ್ತು. ಆದ್ರೆ ಇದೀಗಾ ಅದೇ ತೆಂಗಿನ ಕಾಯಿ 50-57 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನೂ,ಕಳೆದ 2010ರ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದು, ದಸರಾ, ದೀಪಾವಳಿ ಇರುವ ಕಾರಣ ಹಬ್ಬದ ಸಮಯದಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುತ್ತದೆ ಎನ್ನಲಾಗುತ್ತಿದೆ. ಜೊತೆಗೆ ಮುಂದಿನ ಆರು ತಿಂಗಳವರೆಗೆ ಈ ಬೆಲೆ ಏರಿಕೆ ಜನರನ್ನ ಕಾಡಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಬೆಂಗಳೂರಿಗೆ ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಭಾಗದಿಂದಲೂ ತೆಂಗಿನಕಾಯಿ ಆಮದಾಗುತ್ತದೆ. ಆದರೆ ಈ ಬಾರಿ ವಿಪರೀತ ಬಿಸಿಲಿದ್ದ ಕಾರಣ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತರ ಭಾರತಕ್ಕೆ ಸಾಕಷ್ಟು ಎಳನೀರು ರಫ್ತಾಗಿದೆ. ಇದೇ ಕಾರಣದಿಂದಾಗಿ ತೆಂಗಿನ ಕಾಯಿ ಬೆಳೆಯಲ್ಲಿ ಕುಸಿತವಾಗಿದ್ದು ಏಕಾಏಕಿ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.…
ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಸಾಕಷ್ಟು ಜನರ ಜೀವನ ಬದಲಾಗಿದೆ. ಹಲವರಿಗೆ ಖ್ಯಾತಿ ಹೆಚ್ಚಾಗಿದ್ರೆ ಮತ್ತೊಂದಷ್ಟು ಮಂದಿ ಹಾಗೆಯೇ ಉಳಿದುಬಿಟ್ಟಿದ್ದಾರೆ. ಸದ್ಯ ಬಿಗ್ ಬಾಸ್ ಗೆ ಹೋಗಿ ಬಂದಿರೋ ಡ್ಯಾನ್ಸರ್ ಕಿಶನ್ ಬಿಳಗಲಿ ಸ್ಮಾಲ್ ಸ್ಕ್ರೀನ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಡ್ಯಾನ್ಸರ್ ಕಿಶನ್ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಆಕ್ಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ’ನಿನಗಾಗಿ’ ಧಾರವಾಹಿಯಲ್ಲಿ ವಿಭಿನ್ನ ಕ್ಯಾರೆಕ್ಟರ್ ಮಾಡ್ತಿದ್ದಾರೆ. ತಮ್ಮ ಪಾತ್ರದ ಮೂಲಕ ಜನರಿಗೆ ಹತ್ತಿರವಾಗಿರೋ ಕಿಶನ್ ಇದೀಗ ಡಿಫರೆಂಟ್ ಲುಕ್ ನಲ್ಲಿ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ‘ನಿನಗಾಗಿ’ ಧಾರವಾಹಿಯಲ್ಲಿ ವಿಲನ್ ರೋಲ್ ಮಾಡ್ತಿರುವ ಕಿಶನ್ ಬಿಳಗಲಿ ಫೋಟೋ ಶೂಟ್ ನಲ್ಲಿ ಡಾನ್ ರೀತಿ ಫೋಸ್ ನೀಡಿದ್ದಾರೆ. ಈ ಲುಕ್ ಯಾವ ಸೀರಿಯಲ್‌ಗೆ ಅನ್ನೋದು ಗೊತ್ತಿಲ್ಲ. ಆದರೆ, ಇದು ಸೂಪರ್ ಆಗಿದ್ದು, ರೆಟ್ರೋ ಫೀಲ್ ನೀಡುತ್ತಿದೆ. ಹಾಗೆ ಈ ಲುಕ್ ನೋಡಿದವ್ರು ಇದು ನಿನಗಾಗಿ ಸೀರಿಯಲ್ ಲುಕ್ಕಾ ಅನ್ನೋ ಪ್ರಶ್ನೆ ಕೇಳಿದಂತೇನೂ…
ಇಂದು ಮುಂಜಾನೆ ನಟ ಗೋವಿಂದ್ ಅವರ ಕಾಲಿಗೆ ಅವರದ್ದೆ ಗನ್ ನಿಂದ ಫೈರ್ ಆಗಿದೆ. ಗೋವಿಂದ್ ಪರವಾನಿಗೆ ಹೊಂದಿರುವ ಗನ್ ನಿಂದ ಮಿಸ್ ಫೈಯರ್ ಆಗಿದೆ. ಅವರನ್ನು ಮುಂಬೈನ ಅಂಧೇರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಇದ್ದ ಆಂತಕ ದೂರ ಆಗಿದೆ. ‘ನಿಮ್ಮ ಆಶೀರ್ವಾದ, ತಂದೆ ತಾಯಿ ಆಶೀರ್ವಾದ, ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬೆಳಿಗ್ಗೆ ಗುಂಡು ಬಿದ್ದಿತ್ತು. ಅದನ್ನು ತೆಗೆಯಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆಗಾಗಿ ಧನ್ಯವಾದ’ ಎಂದಿದ್ದಾರೆ ನಟ ಗೋವಿಂದ. ಗೋವಿಂದ ಅವರು ಇಂದು ಕೋಲ್ಕತ್ತ ತೆರಳುವವರಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಅವರು ರೆಡಿ ಆಗುವಾಗ ಕೈಯಲ್ಲಿದ್ದ ಗನ್ ಕೈ ಜಾರಿದೆ. ಆಗ ಆಕಸ್ಮಿಕವಾಗಿ ಬುಲೆಟ್ ಫೈಯರ್ ಆಗಿದೆ. ಇದರಿಂದ ಅವರ ಕಾಲಿಗೆ ಬುಲೆಟ್ ತಾಗಿದೆ. ಬುಲೆಟ್ ಶಬ್ದ ವರದಿ ಆದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ…
ಬೆಂಗಳೂರು:- ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ಅಕ್ಟೋಬರ್ 2 ರಂದು ಬುಧವಾರ, ಮಾಂಸ ಮಾರಾಟ ನಿಷೇಧ ದಿನ ಎಂದು ಆದೇಶ ಹೊರಡಿಸಿವೆ. ಆದರೆ ಈ ಬಾರಿ ಆಕ್ಟೋಬರ್ 2 ರಂದೇ ಮಹಾಲಯ ಅಮಾವಾಸ್ಯೆ ಕೂಡ ಬಂದಿದ್ದು, ರಾಜ್ಯದ ಲಕ್ಷಾಂತರ ಜನರು ಧೈವಧೀನಾರಾಗಿರುವ ತಮ್ಮ ಹಿರಿಯರಿಗೆ ಎಡೆ ಇಟ್ಟು ಪೂಜೆ ಮಾಡುತ್ತಾರೆ. https://youtu.be/9PNY_RMeMsk?si=CJAheX0fZhSk6jTn ಆದರೆ, ಇದೀಗ ಗಾಂಧಿ ಜಯಂತಿ ದಿನವೇ ಮಹಾಲಯ ಕೂಡ ಬಂದಿರುವುದರಿಂದ ಆ ದಿನ ಮಾಂಸ ಮಾರಾಟ ಮಾಡದಂತಾಗಿದೆ. ಹೀಗಾಗಿ, ಗಾಂಧಿ ಜಯಂತಿ ದಿನ ಮಾಂಸ ಮಾರಾಟಕ್ಕೆ ಅವಕಾಶ ನೀಡುವಂತೆ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಸಿಎಂ ಕಚೇರಿಗೆ ಪತ್ರ ಬರೆದು ಮನವಿ ಮಾಡಿದೆ. ಮಹಾಲಯದಂದು ಹಿಂದೂಗಳು ತಮ್ಮ ಪಿತೃಗಳಿಗೆ ಮಾಂಸವನ್ನು ಎಡೆಯಿಟ್ಟು ಪೂಜೆ ಮಾಡುತ್ತಾರೆ. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಅಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಇದರಿಂದ, ವ್ಯಾಪಾರಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತದೆ. ಹಿರಿಯರಿಗೆ ಮಾಂಸದ ಅಡುಗೆ, ಪೂಜೆಗೆ ಎಡೆ ಇಡಲು ಆಗುವುದಿಲ್ಲ. ಈ ಒಂದು ದಿನವನ್ನು…