ಬೆಂಗಳೂರು:-:ಸಿದ್ದರಾಮಯ್ಯಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಮುಡಾ ಪ್ರಕರಣ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಸೈಟ್ ವಾಪಸ್ಸು ಕೊಡುವುದಾಗಿ ತಿಳಿಸಿದ ಮೇಲೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಹಾಕಿಕೊಂಡಿದ್ದಾರೆ. https://youtu.be/8M-mVjspweo?si=qTMkmeln4w7vi4nX ಸಿಎಂ ಸಿದ್ದರಾಮಯ್ಯರಿಗೆ ರಾಜೀನಾಮೆಯೊಂದೇ ಉಳಿದಿರುವ ದಾರಿ. ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ. ಮುಖ್ಯಮಂತ್ರಿ ಮನೆಯವರು ಎಂದರೆ ಬಿಟ್ಟುಬಿಡಬೇಕಾ? 62 ಕೋಟಿ ಕೊಟ್ಟರೆ ನಿವೇಶನಗಳನ್ನು ಹಿಂದಿರುಗಿಸುತ್ತೇನೆ ಎಂದು ಅಂದು ಸಿಎಂ ಆರ್ಭಟಿಸಿದ್ದರು. ಮಾನ್ಯ ಸಿದ್ದರಾಮಯ್ಯನವರು ಇಂದು ಬೇಷರತ್ತಾಗಿ ಅವರ ಪತ್ನಿಯವರಿಂದ ನಿವೇಶನ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ ಎಂದರು. ಬಿಜೆಪಿ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು. ನಿಮಗೆ ದೊರೆತ 14 ಅಕ್ರಮ ನಿವೇಶನಗಳು 5000 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿಕೋರತನಕ್ಕೆ ರಕ್ಷಣೆಯಾಗಿ ನಿಂತಿದೆ ಎಂದು ಆರೋಪಿಸಿದ್ದೇವು. ಆರೋಪಿಸಿ ನಾವು ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯ ಸಮಾವೇಶ ಆಯೋಜಿಸಿ ಭಂಡತನದ ಸಮರ್ಥನೆಗಿಳಿದಿದ್ದರು. ಸಾಮಾಜಿಕ ಕಾರ್ಯಕರ್ತರ ನ್ಯಾಯಾಲಯದ ಹೋರಾಟಕ್ಕೆ ಅಸ್ತು ಎಂದ ಘನತೆವೆತ್ತ…
Author: Prajatv Kannada
ಗೋವಿಂದ ಕಥೆ ಇಂದು ಮಿಸ್ ಆಗಿಬಿಟ್ಟಿದ್ರೆ ಗೋವಿಂದ ಗೋವಿಂದ ಆಗಿಬಿಡ್ತಿತ್ತು..! ಆದರೆ ಬಾಲಿವುಡ್ ನಟ ಗೋವಿಂದ ಟೈಮ್ ಚೆನ್ನಾಗಿದೆ. ಪ್ರಾಣಕ್ಕೆ ಸಂಚಕಾರ ತಂದುಕೊಂಡ ಗೋವಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಬೆಟ್ಟದಲ್ಲಿ ಹೋಗಬೇಕಾಗಿದ್ದು ಉಗರಲ್ಲಿ ಹೋಗಿದೆ. ಗೋವಿಂದ ಫ್ಯಾನ್ಸ್ ದೇವರಿಗೆ ಪರಿಪರಿಯಾಗಿ ಥ್ಯಾಂಕ್ಸ್ ಹೇಳ್ತಿದಾರೆ. ಬೆಳಿಗ್ಗೆಬೆಳಿಗ್ಗೆ ಹಿಂದಿ ಚಿತ್ರರಂಗವೇ ಒಂದ್ ಕ್ಷಣ ಶೇಕ್ ಶೇಕ್ ಆಗಿದ್ದು ಸುಳ್ಳಲ್ಲ..! ಗೋವಿಂದ ಅಕಸ್ಮಾತ್ ಆಗಿ ತಮ್ಮ ಲೈಸೆನ್ಸ್ ಗನ್ ಚೆಕ್ ಮಾಡೋವಾಗ ಮಿಸ್ ಫೈರ್ ಮಾಡಿಕೊಂಡಿದ್ದಾರೆ. ಗೋವಿಂದ ಬಹಳ ವರ್ಷಗಳಿಂದ ಸುರಕ್ಷತೆಗೆ ಪರವಾನಗಿ ಪಡೆದ ರಿವಾಲ್ವರ್ ಇಟ್ಕೊಂಡಿದ್ರು. ಬೆಳಿಗ್ಗೆ ಚೆಕ್ ಮಾಡೋವಾಗ ಟ್ರಿಗರ್ ತಗುಲಿ ಕಾಲಿಗೆ ಗುಂಡೇಟು ಬಿದ್ದಿದೆ. ಗೋವಿಂದಗೆ ಗುಂಡೇಟು ಬಿದ್ದ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿಬಿಟ್ರು. ಸದ್ಯಕ್ಕೆ ಗೋವಿಂದ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡಿತಿರೋ ಗೋವಿಂದ ‘ಐ ಆಮ್ ಫೈನ್ ನೌ’ ಅಂತಿದಾರೆ. ಯಾಕೋ ಗೋವಿಂದಗೆ ಟೈಮ್ ಸರಿಯಿಲ್ಲ ಎಂಬುದೇ ಬಾಲಿವುಡ್ ನ ಸದ್ಯದ ಬಿಸಿಬಿಸಿ ಚರ್ಚೆ. ಅಂದು…
ಭಾರತ ದೇಶ ಕಂಡ ಬೆಸ್ಟ್ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಂದಿನ ಆಡಳಿತ ಮತ್ತು ಕಾರ್ಯವೈಖರಿ ಹೇಗಿತ್ತು..? ಉತ್ತಮವಾಗಿತ್ತು ಉತ್ತಮವಾಗಿರಲಿಲ್ಲ ಪರವಾಗಿಲ್ಲ
ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಬೇಗ ಎದ್ದೇಳುವುದರಿಂದ ಸುಸ್ತಾಗುತ್ತಾರೆ. ಮತ್ತೆ ಕೆಲವರು ಬೇಗ ಎದ್ದೇಳುವುದೇ ಇಲ್ಲ. ಮುಂಜಾನೆ ಬೇಗ ಏಳುವುದನ್ನು ಒಳ್ಳೆಯ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿದೆ. ಯಾರಾದರೂ ಕೇಳಬಹುದು ಅಯ್ಯೋ ಏಳೋದ್ರಿಂದನೇ ಎಲ್ಲ ಸರಿಯಾಗೋದಾಗಿದ್ರೆ ಹೀಗೆ ಇರ್ತಿತ್ತಾ ಜಗತ್ತು. ಎಲ್ಲ ಬೇಗ ಎದ್ದು ಎಲ್ಲವನ್ನೂ ಸರಿಮಾಡುತ್ತಿದ್ದರು ಅಂತ. ಆದರೆ ಏಳುವ ಸಮಯ, ಕ್ರಮದಲ್ಲಿ ಇದೆಲ್ಲವೂ ನಿರ್ಣಯವಾಗಿರುತ್ತದೆ ಎಂಬ ಸತ್ಯವು ಗೊತ್ತಿಲ್ಲ ಅರುಣೋಯದಲ್ಲಿ ಏಳಬೇಕು. ಅಂದರೆ ಸೂರ್ಯೋದಯಕ್ಕಿಂತ ಎರಡು ಮುಹೂರ್ತಗಳ ಮೊದಲು. ಒಂದು ಮುಹೂರ್ತ ಎಂದರೆ ಈಗಿನ ಗಂಟೆಯ ಪ್ರಕಾರ ನಲವತ್ತೆಂಟು ನಿಮಿಷಗಳ ಅವಧಿ. ಅಂದರೆ 96 ನಿಮಿಷಗಳು. ಸೂರ್ಯೋದಯಕ್ಕಿಂತ ಒಂದೂವರೆ ತಾಸು ಮೊದಲು ಏಳಬೇಕು. ಆರು ಗಂಟೆಗೆ ಸೂರ್ಯೋದಯವಾದರೆ ಅದಕ್ಕಿಂತ ಒಂದೂವರೆ ತಾಸು ಎಂದರೆ ನಾಲ್ಕೂವರೆಗೆ ಏಳಬೇಕು. ಇದನ್ನು ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಸಹಜವಾಗಿ ಎಚ್ಚರಗೊಂಡು ಎದ್ದರೆ ಉತ್ತಮ. ಅದಿಲ್ಲದೇ ಹೋದರೆ ಅಲರಾಮ್…
ಸೂರ್ಯೋದಯ: 06:10, ಸೂರ್ಯಾಸ್ತ : 06:01 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿನ್ ಅಯಣ ಶರದ ಋತು, ಭಾದ್ರಪದ ಮಾಸ, ತಿಥಿ: ಚತುರ್ದಶಿ ನಕ್ಷತ್ರ:ಹುಬ್ಬ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.4:14 ನಿಂದ ಬೆ.6:03 ತನಕ ಅಭಿಜಿತ್ ಮುಹುರ್ತ: ಬೆ.11:41 ನಿಂದ ಮ.12:29 ತನಕ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ ನಿಮ್ಮ ವ್ಯಾಪಾರ ಉತ್ತಮವಾಗಿರುವುದು, ಆರ್ಥಿಕ ಚೇತರಿಕೆ ಇಂದ ಉತ್ಸಾಹ ಮೂಡುವುದು, ಸಾಲದ ಋಣ ಬಾಧೆ ತೀರಿಸುವ ಹಂತದಲ್ಲಿ ಇದ್ದೀರಿ, ಹುಟ್ಟೂರಿನಲ್ಲಿ ಮನೆ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ ಗೃಹನಿರ್ಮಾಣ ಮಾಡುವಿರಿ ಅಥವಾ ನಿವೇಶನ ಖರೀದಿಸುವಿರಿ, ಅನಿರೀಕ್ಷಿತ…
ನಮಗೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದ್ರೆ ಕುಕ್ಕರ್‌ನಿಂದ ನೀರು ಲೀಕ್ ಆಗುವುದು. ಕುಕ್ಕರ್‌ನಲ್ಲಿ ಅನ್ನ ಮಾಡಲು ಇಟ್ಟಾಗ ಅಥವಾ ಬೇಳೆ ಇಟ್ಟಾಗ ಒಂದೆರಡು ಸೀಟಿ ಹೊಡೆದಾಗ ನೀರು ಲೀಕ್ ಆಗುತ್ತದೆ. ಹೀಗೆ ಲೀಕ್ ಆಗುವುದರಿಂದ ಒಲೆ ಮೇಲೆ ನೀರು ಬೀಳುವುದು, ಅಡುಗೆ ಮನೆಯೆಲ್ಲಾ ಮತ್ತೊಂದು ಗಂಟೆಯ ಕೆಲಸಕ್ಕೆ ದಾರಿಯಾಗುತ್ತದೆ. ಇದು ಎಲ್ಲಾ ಗೃಹಿಣಿಯರ ಸಮಸ್ಯೆಯಾಗಿರುತ್ತದೆ. ಹಾಗಾದ್ರೆ ಈ ಸಮಸ್ಯೆಗೆ ಮನೆಯಲ್ಲೇ ಹೇಗೆ ಪರಿಹಾರ ಮಾಡಿಕೊಳ್ಳುವುದು? ಇದಕ್ಕೇ ಏನು ಮಾಡಬೇಕು? ಕುಕ್ಕರ್‌ನಿಂದ ನೀರು ಬರದಂತೆ ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಕುಕ್ಕರ್‌ನಿಂದ ನೀರು ಹೊರಬರಲು ಪ್ರಮುಖ ಕಾರಣ ಅಂದರೆ ಕುಕ್ಕರ್ ಸವಿದಿದೆ ಎಂದರ್ಥ. ಇಲ್ಲವೆ ರಬ್ಬರ್ ಬದಲಾಯಿಸಬೇಕಾದ ಸಮಸ್ಯೆ ಎನ್ನಬಹುದು. ಆದ್ರೆ ಸಾಮಾನ್ಯವಾಗಿ ಕುಕ್ಕರ್‌ನ ಒಂದು ಭಾಗದಲ್ಲಿ ಸವಿದರೆ ರಬ್ಬರ್ ಸರಿಯಾಗಿ ಕೂರಿಸಲು ಆಗದೇ ಇದ್ದಾಗ ಲೀಕ್ ಆಗುತ್ತದೆ. ಹೀಗಾಗಿ ಮೊದಲು ಕುಕ್ಕರ್ ಸರಿಮಾಡಬೇಕು. ಕುಕ್ಕರ್‌ನ ಒಂದು ಬದಿಯಲ್ಲಿ ನೀರು ಹನಿಹಾಕುವುದು ಇಲ್ಲವೆ ಸುರಿಯುವುದು ಆಗುತ್ತಿದ್ದರೆ ಈ ಸ್ಯಾಂಡ್…
ಮಧ್ಯಪ್ರದೇಶ:-ಮಧ್ಯಪ್ರದೇಶದ ಗುನಾದಲ್ಲಿ ತನ್ನ ಮಗಳಿಗೆ ಕಚ್ಚಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜರುಗಿದೆ. https://youtu.be/Q2DXATH7QHs?si=7RTLR2fYCsw5O6XB ನಾಯಿ ಕುತ್ತಿಗೆಗೆ ಹಗ್ಗ ಕಟ್ಟಿ ರಸ್ತೆಯ ತುಂಬೆಲ್ಲಾ ಬೈಕ್ನಲ್ಲಿ ಹೋಗುತ್ತಾ ನಾಯಿಯನ್ನು ಧರ ಧರನೆ ಎಳೆದೊಯ್ದಿದ್ದಾರೆ. ಪಪ್ಪು ಮೊದಲು ನಾಯಿಗೆ ಕೋಲಿನಿಂದ ತಳಿಸಿದ್ದಾನೆ, ಬಳಿಕ ಬೆಂಕಿಗೆ ಹಾಕಿ ಸುಟ್ಟಿದ್ದಾನೆ, ಅಷ್ಟಾದರೂ ಅದು ಸಾಯದಿದ್ದಾಗ ನಾಯಿಯನ್ನು ಬೈಕ್ನ ಹಿಂಬದಿಗೆ ಕಟ್ಟಿ ಎಳೆದೊಯ್ದು ರಸ್ತೆಯಲ್ಲಿ ಎಸೆದಿದ್ದಾನೆ. ಕೊನೆಯದಾಗಿ ಪಪ್ಪು ನಾಯಿಯ ತಲೆಯನ್ನು ದೊಡ್ಡ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಗಾಂಧೀನಗರ: ನಕಲಿ ನೋಟುಗಳ ಪ್ರಕರಣ ಬೇಧಿಸಿದ ಗುಜರಾತ್ ಪೊಲೀಸರು ಶಾಕ್ ಆಗಿದ್ದಾರೆ. 500 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್ ನಟ ಅನುಪಮ್ ಖೇರ್ ಅವರ ಚಿತ್ರ ಬಳಸಿರುವುದು ಕಂಡುಬಂದಿದೆ. ಸುಮಾರು 1.6 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. https://youtu.be/oMwumFGSx_I?si=k6ZJw4aut7irgKXf ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ‘ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಪದ ಬಳಕೆ ಮಾಡಲಾಗಿದೆ. ಇದೀಗ ನೋಟಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಹಮದಾಬಾದ್‌ನ ವ್ಯಾಪಾರಿಯೊಬ್ಬರು ನಕಲಿ ನೋಟುಗನ್ನು ಬಳಸಿ ವಂಚಿಸಿರುವ ಸಂಬಂಧ ವೈರಲ್ ಆಗಿರುವ ವೀಡಿಯೋವನ್ನು ಟ್ಯಾಗ್ ಮಾಡಿ ಅನುಪಮ್ ಖೇರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 500 ರೂ. ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ ಎಂದು ನಟ ಶೀರ್ಷಿಕೆ ನೀಡಿದ್ದಾರೆ. ಸೆ.24 ರಂದು ನವರಂಗಪುರ ಪೊಲೀಸ್ ಠಾಣೆಯಲ್ಲಿ ಬುಲಿಯನ್ ವ್ಯಾಪಾರಿ ಮೆಹುಲ್ ಠಕ್ಕರ್ ದೂರು ದಾಖಲಿಸಿದ್ದರು. 1.6 ಕೋಟಿ ರೂ. ಮೌಲ್ಯದ 2,100 ಗ್ರಾಂ ಚಿನ್ನವನ್ನು…
ಕೃಷಿಹೊಂಡಕ್ಕೆ ಬಿದ್ದು ಅವಘಡ ಸಂಭವಿಸಿ ನೀರಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಗಳೂರಿನ ಅಸಗೋಡು ಗ್ರಾಮದಲ್ಲಿ ಜರುಗಿದೆ. ಗಂಗಮ್ಮ, ಕಾವ್ಯ ಮೃತ ದುರ್ದೈವಿಗಳು. https://youtu.be/oMwumFGSx_I?si=DwXHjaeNUtb5THUu ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ ಕಾಲು ಜಾರಿ ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಪೋಷಕರು ಮಕ್ಕಳ ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಬಾಲಕಿಯರು ಮೃತಪಟ್ಟಿದ್ದಾರೆ. ಮಕ್ಕಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.