ಮಂಡ್ಯ :- ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಉತ್ಸವಕ್ಕೆ ಚಾಲನೆ ನೀಡಲು ಆಗಮಿಸುವಂತೆ ಚಲನಚಿತ್ರ ನಟ ಡಾ. ಶಿವರಾಜ್ ಕುಮಾರ್ ಅವರಿಗೆ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಆಹ್ವಾನ ನೀಡಿತು. https://youtu.be/LoZGZQmCHck?si=Sr6d5qhGXaCzwtvS ಬೆಂಗಳೂರಿನಲ್ಲಿರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಸೋಮವಾರ ತೆರಳಿದ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ, ಸಿಇಓ ಶೇಖ್ ತನ್ವೀರ್ ಆಸೀಫ್ ಶಾಸಕರ ಜೊತೆಗೂಡಿ ಆಮಂತ್ರಣ ನೀಡಿ ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ಇದು ಅತ್ಯಂತ ಹರ್ಷದ ಸಂಗತಿಯಾಗಿದ್ದು, ಹೀಗಾಗಿ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
Author: Prajatv Kannada
ದಾವಣಗೆರೆ: ದಾವಣಗೆರೆಯಲ್ಲಿ ಭಗವಾಧ್ವಜ ತೆಗೆದು ಹಸಿರು ಧ್ವಜ ಹಾರಿಸಿದ್ದಾರೆ. ಸತೀಶ್ ಪೂಜಾರಿ ಬಂಧಿಸಿ ವಂಶವೃಕ್ಷ ಕೇಳ್ತಾರೆ. ಹಿಂದುಗಳ ಮೇಲೆ ಯಾವಾಗಲೂ ದೌರ್ಜನ್ಯ ಮಾಡ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಇತ್ತೀಚಿಗೆ ಗಲಾಟೆ ಹಿಂದಿಗಿಂತ ಹೆಚ್ಚಾಗಿ ನಡೆಯುತ್ತಿದೆ. https://youtu.be/Lruf1hYTcTc?si=hCAWW5Qi73ky9owa ಎಲ್ಲ ಭಾಗಗಳಲ್ಲಿ ಗಲಾಟೆ ಹೆಚ್ಚಾಗಿ ಆಗ್ತಾ ಇದೆ. ನಾಗಮಂಗಲದಲ್ಲಿ ಪ್ರಚೋದನೆ ಬಂದಿದ್ದು ಮುಸ್ಲಿಮರಿಂದ. ಕೇಸ್ A1 ರಿಂದ 32 ವರೆಗೂ ಹಿಂದೂಗಳ ಮೇಲೆ ಕೇಸ್ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕ ಸ್ಥೈರ್ಯ ಕೊಡಲು ಈ ರೀತಿ ಮಾಡಿದ್ದಾರೆ. ಸಿದ್ದರಾಮಯ್ಯ ನಿಷೇಧಿತ ಸಂಘಟನೆಯವರ ಮೇಲಿನ ಕೇಸ್ ವಾಪಸ್ ಪಡೆದ ನಂತರ ಹಿಂದೂಗಳ ಹತ್ಯೆ ನಡೆಯಿತು. ಈದ್ ಮೆರವಣಿಗೆ ಮಾಡಿದ್ರೆ, ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಮೈಕ್ ಹಚ್ಚಲು ಯಾವುದೇ ಅನುಮತಿ ಇಲ್ಲ. ಆದರೆ ಹಿಂದೂಗಳ ಹಬ್ಬ ಮಾಡೋದಕ್ಕೆ ಅನುಮತಿ ಬೇಕು ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಯಾದಗಿರಿಯ ಶಹಾಪುರಕ್ಕೆ ಗಣೇಶ ಮೆರವಣಿಗೆಗೆ ಹೋಗಿದ್ದೆ. ಅಣ್ವಸ್ತ್ರ ಮಾಡಿರೋ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡೋಕೆ…
ಬೆಂಗಳೂರು:- ಮುಡಾ ಸೈಟ್ ವಾಪಸ್ ಕೊಡುವುದಾಗಿ ಹೇಳಿರುವ ನನ್ನ ಪತ್ನಿ ನಿರ್ಧಾರ ಆಶ್ಚರ್ಯ ತಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. https://youtu.be/YkFQWWWSs2Y?si=oVp5HSgJCvooRhkl ಮಾಡಿರುವ ಸಿದ್ದರಾಮಯ್ಯ, ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ ಎಂದರು. ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ. ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ. ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ…
ಬೆಂಗಳೂರು:- ಡಿಸಿಎಂ ಡಿ.ಕೆ.ಶಿವಕುಮಾರ್‌ರವರು ಬೆಂಗಳೂರು ನಗರವನ್ನು ಬ್ರಾಂಡ್ ಬೆಂಗಳೂರು ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ನಡುವೆ ಬಿಬಿಎಂಪಿ ಅಧಿಕಾರಿಗಳಿಗೆ ನಗರದ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಈಗಾಗಲೇ ಗಡುವು ಮುಗಿದು ಹಲವು ದಿನಗಳು ಕಳೆದಿವೆ. https://youtu.be/TzeiMolRAMg?si=sZXH1vVa3tFoaM-L ಆದರೆ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ ಮುಖ್ಯ ರಸ್ತೆಯಿಂದ ಹೆಸರುಘಟ್ಟ ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳು ಗುಂಡಿ ಗಂಡಾಂತರಗಳಿಂದ ಕೂಡಿದ್ದು, ಅವ್ಯವಸ್ಥೆಯಾಗಿ ಉಳಿದಿದೆ. ಗಡುವು ನೀಡಿದ್ದರೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನರ ಪಾಡು ಕೇಳುವವರೇ ಇಲ್ಲದಂತಾಗಿದೆ. ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಈ ಸಮಸ್ಯೆ ಹಾಗೆಯೇ ಉಳಿದಿದೆ. ಹೀಗಾಗಿ ರಸ್ತೆ ದುರಸ್ತಿಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ. ಮಂಡಿಯುದ್ದದ ಗುಂಡಿಗಳು ವಾಹನ ಸವಾರರಲ್ಲಿ ಮೃತ್ಯು ಕೂಪವಾಗಿ ಪರಿಣಮಿಸಿವೆ. ಯಮಸ್ವರೂಪಿ ಗುಂಡಿ ಗಂಡಾಂತರದಿಂದ ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ, ಶಾಲೆಯಿಂದ ಮನೆಗೆ ಕರೆತರಬೇಕಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನೂ ಮಳೆಗಾಲದಲ್ಲಿ ಎಲ್ಲಿ ಗುಂಡಿ ಇದೆಯೋ, ಎಲ್ಲಿ ಮಳೆಯ…
ಬಾಲಿವುಡ್ ಖ್ಯಾತ ನಟ ಗೋವಿಂದ್ ತಮ್ಮದೇ ಗನ್ನಿಂದ ಕಾಲಿಗೆ ಶೂಟ್ ಮಾಡಿಕೊಂಡಿದ್ದು ಸದ್ಯ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದು ಆಕಸ್ಮಿಕವಾಗಿ ನಡೆದಿರೋ ಘಟನೆ. ಗನ್ನಿಂದ ಫೈಯರ್ ಆದ ಬುಲೆಟ್ , ಅವರ ಕಾಲಿಗೆ ತಾಗಿದೆ. ಮುಂಜನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅವರನ್ನು ಅಂಧೇರಿಯ ಕೃತಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗುಂಡಿನ ಶಬ್ದ ಕೇಳಿದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಗೋವಿಂದ ಅವರ ಗನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ‘ನಟ ಹಾಗೂ ಶಿವಸೇನಾ ಮುಖ್ಯಸ್ಥ ಗೋವಿಂದ ಕೋಲ್ಕತ್ತಾ ತೆರಳಲು ರೆಡಿ ಆಗುತ್ತಿದ್ದರು. ಅವರು ತಮ್ಮ ಪರವಾನಗಿ ಗನ್ನ ಇಟ್ಟುಕೊಳ್ಳುತ್ತಿದ್ದರು. ಅದು ಅವರ ಕೈ ತಪ್ಪಿದ್ದು, ಬುಲೆಟ್ ಸಿಡಿದಿದೆ. ಅವರ ಕಾಲಿಗೆ ಗುಂಡು ತಾಗಿದೆ. ವೈದ್ಯರು ಬುಲೆಟ್ನ ತೆಗೆದಿದ್ದಾರೆ.…
ಬೆಂಗಳೂರು:- ಬೆಂಗಳೂರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ಸಂಚಾರಿ ಪೊಲೀಸರು ಒಂದೇ ದಿನ ಸಾವಿರಕ್ಕೂ ಹೆಚ್ಚು ಕೇಸ್ ದಾಖಲು ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಟ್ರಾಫಿಕ್ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿದ್ದರು. ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ 1,055 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 812 ವಾಹನ ಚಾಲಕರ ವಿರುದ್ಧ ಏಕಮುಖ ಸಂಚಾರ ಇರುವಲ್ಲಿ ನಿಯಮ ಉಲ್ಲಂಘಿಸಿ ಎದುರಿನಿಂದ ಬಂದ ಮತ್ತು ನಿರ್ಬಂಧಿತ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. 127 ಚಾಲಕರಿಗೆ ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕಾಗಿ ಒಟ್ಟು 64,000 ರೂ. ದಂಡ ವಿಧಿಸಲಾಗಿದೆ.
ಬೆಂಗಳೂರು:- ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ಪರಿಶಿಷ್ಟ ಜಾತಿಗಳಲ್ಲಿ 101 ಒಳ ಪಂಗಡಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಮಿಷನ್ ಆಫ್ ಎನ್ಕ್ವೈರಿ ಆಯಕ್ಟ್ 1952 ಅನ್ವಯ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ. ಸದರಿ ಆಯೋಗವು ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸುವ ಷರತ್ತು ವಿಧಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಂದಿನ ತೀರ್ಮಾನದವರೆಗೆ ರಾಜ್ಯ ಸರ್ಕಾರದ ಅಧೀನದ ಸಿವಿಲ್ ಸೇವೆಗಳಲ್ಲಿನ ಹಾಗೂ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸದಿರುವ ನಿರ್ಧಾರವನ್ನು ಸಹ ಕೈಗೊಳ್ಳಲಾಗಿದೆ ಎಂದಿದ್ದಾರೆ. ತೆಲಂಗಾಣ ಸರ್ಕಾರ ಸಹ ಒಳಮೀಸಲಾತಿ ಜಾರಿ ಸಂಬಂಧ ಈಗಾಗಲೇ ಇದೇ ಮಾದರಿಯಲ್ಲಿ ಒಂದು ಆಯೋಗ ರಚನೆ ಮಾಡಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಒಳಮೀಸಲಾತಿಯನ್ನು ವೈಜ್ಞಾನಿಕವಾಗಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಕ್ತ…
ಬೆಂಗಳೂರು:- ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಗಳಲ್ಲಿ 2 ಠುಸ್ ಆಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ಸರ್ಕಾರ ತುಘಲಕ್ ಸರ್ಕಾರ. 5 ಗ್ಯಾರಂಟಿ ಅಂತ ಘೋಷಣೆ ಮಾಡಿದ್ರು. ಎರಡು ಗ್ಯಾರಂಟಿ ಠುಸ್ ಆಗಿದೆ. ಡಿಸಿಎಂಗೆ ಮಹಿಳೆಯರು ಮೇಲ್, ಮೆಸೇಜ್ ಮಾಡಿದ್ದಾರೆ. ಸಿಎಂ, ರಾಮಲಿಂಗಾರೆಡ್ಡಿಗೆ ಬಿಟ್ಟು ಡಿಸಿಎಂಗೆ ಮಾಡಿದ್ದಾರೆ ಅಂತಾ. ಯೋಜನೆ ರದ್ದು ಮಾಡೋಕೆ ಇದು. ಕಳ್ಳನಿಗೆ ಪಿಳ್ಳೆನೆವ ಎಂಬಂತೆ ಯೋಜನೆ ಕ್ಯಾನ್ಸಲ್ ಮಾಡೋಕೆ ಹೊರಟಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ ಅಂತಾ ಗೊತ್ತಾಗ್ತಿದೆ. ಹೀಗಾಗಿ ಡಿಸಿಎಂ ಹೀಗೆ ಹೇಳ್ತಿದ್ದಾರೆ. ರೇಷನ್ ಕಾರ್ಡ್ ಕೂಡಾ ರದ್ದು ಮಾಡಲು ಹೊರಟಿದ್ದಾರೆ. ಈ ಸರ್ಕಾರ ಬಡವರ ಶಾಪಕ್ಕೆ ಗುರಿ ಆಗಿದ್ದಾರೆ. ಲೋಕಸಭೆ ಚುನಾವಣೆ ಆದ ಮೇಲೆ ಗ್ಯಾರಂಟಿ ಯೋಜನೆ ಇರೊಲ್ಲ ಅಂತ ಹೇಳಿದ್ವಿ. ಅದರಂತೆ ಈಗ ಶಕ್ತಿ ಯೋಜನೆ ಪರಿಷ್ಕರಣೆ ಅಂತಿದ್ದಾರೆ. ಸಾರಿಗೆ ಇಲಾಖೆಗೆ ಸಂಬಳ ಕೊಡಲು ಹಣ ಇಲ್ಲದ ಸ್ಥಿತಿ ಬಂದಿದೆ ಎಂದು ಸರ್ಕಾರವನ್ನು ತರಾಟೆಗೆ…
ಬೆಂಗಳೂರು:- ಕರ್ನಾಟಕದಲ್ಲಿರೋದು ಯೂಟರ್ನ್ ಸರ್ಕಾರ ಎಂದು ಹೇಳುವ ಮೂಲಕ ಛಲವಾದಿ ನಾರಾಯಣಸ್ವಾಮಿ ಸಿಡಿಮಿಡಿಗೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಈ ಸರ್ಕಾರಕ್ಕೆ ಉಳಿಸಿಕೊಳ್ಳಲು ಆಗುತ್ತಿಲ್ಲ. ಈ ಸರ್ಕಾರ ಯೂಟರ್ನ್ ಸರ್ಕಾರ. ನಮ್ಮನ್ನು ಹಿಟ್ ಆಯಂಡ್ ರನ್ ಎನ್ನುತ್ತಾರೆ. ನೀವು ಯೂಟರ್ನ್ ಸರ್ಕಾರ. ಡಿಕೆಶಿ ಇದರ ಬಗ್ಗೆ ಶಕ್ತಿ ಯೋಜನೆ ಪರಿಷ್ಕರಣೆ ಮಾಡೋ ಬಗ್ಗೆ ಹೇಳುತ್ತಾರೆ. ರಾಮಲಿಂಗಾರೆಡ್ಡಿ ಇದರ ಬಗ್ಗೆ ಹೇಳಬೇಕು ಎಂದು ಆಗ್ರಹಿಸಿದರು ಜನ ಏನು ಹೇಳುತ್ತಾರೋ ನೋಡೋಣ ಎಂದು ಡಿಸಿಎಂ ಪರಿಷ್ಕರಣೆ ಬಗ್ಗೆ ಹೇಳಿದ್ದಾರೆ. ವಿರೋಧ ಬಂದ ಮೇಲೆ ಹಾಗೆಲ್ಲ ಇಲ್ಲ ಅಂತ ಸಿಎಂ ಹೇಳುತ್ತಾರೆ. ಸುಳ್ಳು, ವಂಚನೆ, ಲೂಟಿ ಮಾಡೋದು ಸರ್ಕಾರ ಎಂದು ಜನರಿಗೆ ಗೊತ್ತಿದೆ. ಹಾಗಾಗಿ ಈ ಸರ್ಕಾರ ಯೂಟರ್ನ್ ಸರ್ಕಾರ ಎಂದು ಹರಿಹಾಯ್ದರು
ಕರ್ನಾಟಕ ರಾಜ್ಯದ ಜನತೆ ಪ್ರತಿ ವರ್ಷವು ಸಹ ನವೆಂಬರ್ 1 ರಂದು ವಿಶೇಷವಾಗಿ ಕನ್ನಡ ರಾಜ್ಯೋತ್ಸವನ್ನು ರಾಜ್ಯದ ಪ್ರತಿ ಗ್ರಾಮದಲ್ಲೂ, ಪ್ರತಿ ಶಾಲೆ, ಕಾಲೇಜು, ಕಚೇರಿ, ಕಂಪನಿಗಳಲ್ಲಿ ಆಚರಣೆ ಮಾಡುತ್ತಾರೆ. ಈ ದಿನದ ಮಹತ್ವವನ್ನು ಸಹ ಅರಿಯುವ ಕಾರ್ಯಕ್ರಮಗಳು ಎಲ್ಲೆಲ್ಲೂ ನಡೆಯುತ್ತವೆ. ಸಮಸ್ತ ಕನ್ನಡಿಗರು ಕಾಯುತ್ತಿರುವ ಕನ್ನಡ ಹಬ್ಬ “ಕನ್ನಡ ರಾಜ್ಯೋತ್ಸವ”. ನಾಡಿನೆಲ್ಲೆಡೆ ಸಡಗರ, ಸಂಭ್ರಮ. ಎಲ್ಲೆಲ್ಲೂ ಕನ್ನಡದ ಬಾವುಟ, ತಾಯಿ ಭುವನೇಶ್ವರಿಗೆ ನಮನ. ನವೆಂಬರ್ 1ರಂದು ಕನ್ನಡಿಗರು ಈ ದಿನವನ್ನು ನಾಡಹಬ್ಬವಾಗಿ ಪ್ರತಿವರ್ಷ ಆಚರಿಸುತ್ತಾರೆ. ಕನ್ನಡ ರಾಜ್ಯೋತ್ಸವದ ಇತಿಹಾಸ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜರಾಗಿದ್ದ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವಿಲೀನ ಮಾಡಲು ಒಪ್ಪಿದರು. ಹೀಗಾಗಿ 1950ರಲ್ಲಿ ಮೈಸೂರು ಭಾರತದ ಒಂದು ರಾಜ್ಯವಾಯಿತು. ಭಾರತ ದೇಶದಲ್ಲಿ ರಾಜ್ಯಗಳ ವಿಲೀನಿಕರಣ ಪ್ರಕ್ರಿಯೆಯು 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತ್ತು. ನಂತರ 1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯ ಜಾರಿಯೊಂದಿಗೆ ಈ ಪ್ರಕ್ರಿಯೆ ಮುಕ್ತಾಯವಾಯಿತು. ಕೂರ್ಗ್, ಮದರಾಸು,…