ಪ್ರವಾಸಿಗರು, ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರಿಗೆ ಅಮೆರಿಕವು ಹೆಚ್ಚುವರಿಯಾಗಿ 2.5 ಲಕ್ಷ ಮಂದಿಗೆ ವೀಸಾ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ವೀಸಾ ವಿತರಣೆಯ ಹೊಸ ಸ್ಲಾಟ್‌ಗಳು ಭಾರತೀಯ ಅರ್ಜಿದಾರರಿಗೆ ಸಕಾಲಿಕವಾಗಿ ಸಂದರ್ಶನಕ್ಕೆ ಹಾಜರಾಗಲು ನೆರವಾಗಲಿವೆ. ಅಲ್ಲದೆ, ಉಭಯ ದೇಶಗಳ ಬಾಂಧವ್ಯ ವೃದ್ಧಿಯನ್ನು ಸುಗಮಗೊಳಿಸಲಿದೆ ಎಂದು ಅಮೆರಿಕದ ರಾಯಭಾರ ಕಚೇರಿ ತಿಳಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಅವರು ಉಭಯ ದೇಶಗಳ ನಡುವಿನ ವೀಸಾ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಚುರುಕುಗೊಳಿಸಲು ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದಾರೆ. ರಾಯಭಾರ ಕಚೇರಿಯಲ್ಲಿನ ನಮ್ಮ ಕಾನ್ಸುಲರ್ ತಂಡಗಳು ಮತ್ತು ನಾಲ್ಕು ದೂತಾವಾಸಗಳು, ಹೆಚ್ಚುತ್ತಿರುವ ವೀಸಾ ಬೇಡಿಕೆಯನ್ನು ಈಡೇರಿಸಲು ಅವಿರತವಾಗಿ ಕೆಲಸ ಮಾಡುತ್ತಿವೆ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
Author: Prajatv Kannada
ಬೈರುತ್ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾರನ್ನು ಹತ್ಯೆ ಮಾಡಲಾಗಿದೆ. ನಸ್ರುಲ್ಲಾ ಹತ್ಯೆಗೆ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿದೆ ಎಂದು ಅಮೆರಿಕದ ಸೆನೆಟರ್ ಮಾರ್ಕ್ ಕೆಲ್ಲಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಬಂಕರ್ ಬಸ್ಟರ್ಸ್(ಬಂಕರ್ ಸ್ಫೋಟಿಸುವ) ಮಾರ್ಕ್ 84 ಶ್ರೇಣಿಯ 900 ಕಿ.ಗ್ರಾಂ. ಬಾಂಬ್‍ಗಳನ್ನು ಕಳೆದ ವಾರ ಇಸ್ರೇಲ್ ವಾಯುಪಡೆ ಹಿಜ್ಬುಲ್ಲಾ ಪ್ರಧಾನ ಕಚೇರಿಯ ಮೇಲೆ ಹಾಕಿದೆ. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ನಿರ್ದೇಶಿತ ಶಸ್ತ್ರಾಸ್ತ್ರಗಳು, ಜೆಡಿಎಎಂಗಳನ್ನು ಹೆಚ್ಚು ಬಳಸಲಾಗುತ್ತಿರುವುದರಿಂದ ಈ ಶಸ್ತ್ರಾಸ್ತ್ರ ಪೂರೈಕೆಯನ್ನು ನಾವು ಮುಂದುವರಿಸುತ್ತೇವೆ ಎಂದು ಶಸ್ತ್ರಾಸ್ತ್ರ ಸೇವೆಗಳಿಗೆ ಸಂಬಂಧಿಸಿದ ಅಮೆರಿಕ ಸಂಸತ್‍ನ ಉಪಸಮಿತಿ ಅಧ್ಯಕ್ಷ ಮಾರ್ಕ್ ಕೆಲ್ಲಿ ಹೇಳಿದ್ದಾರೆ. ಜೆಡಿಎಎಂಗಳು ಅನಿರ್ದೇಶಿತ ಬಾಂಬ್‍ಗಳನ್ನು ನಿರ್ದೇಶಿತ ಬಾಂಬ್‍ಗಳಾಗಿ ಪರಿವರ್ತಿಸುತ್ತದೆ. ದೀರ್ಘಕಾಲದಿಂದಲೂ ಇಸ್ರೇಲ್‍ನ ಮಿತ್ರನಾಗಿರುವ ಅಮೆರಿಕ ಆ ದೇಶಕ್ಕೆ ಅತೀ ಹೆಚ್ಚು ಶಸ್ತ್ರಾಸ್ತ್ರ ಪೂರೈಸುತ್ತಿದೆ. ನಸ್ರುಲ್ಲಾ ಹತ್ಯೆಗೆ ದಾಳಿ ನಡೆಸುವುದಕ್ಕೂ ಮುನ್ನ ಇಸ್ರೇಲ್ ಮಾಹಿತಿ ನೀಡಿಲ್ಲ. ಬಾಂಬ್ ದಾಳಿಗೆ ಕೆಲ ಕ್ಷಣಗಳ ಮೊದಲು ಅಧ್ಯಕ್ಷ ಬೈಡನ್‍ಗೆ…
‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಗೊಂಡು ಒಂದು ದಿನವೂ ಕಳೆದಿಲ್ಲ. ಅಷ್ಟರಲ್ಲಿ ಮನೆ ಮಂದಿ ಕಿತ್ತಾಡಿಕೊಳ್ಳಲು ಶುರುಮಾಡಿದ್ದಾರೆ. ಬಿಸಿನೀರು ಹಾಗೂ ತಣ್ಣೀರಿನ ವಿಚಾರಕ್ಕೆ ಮನೆ ಮಂದಿ ಕಿತ್ತಾಡಿಕೊಂಡಿದ್ದು ಇದನ್ನ ನೋಡಿದರೆ ಕಳೆದ ಸೀಸನ್ ಮತ್ತೆ ರಿಪೀಟ್ ಆಗುತ್ತಾ ಎಂಬ ಅನುಮಾನ ಶುರುವಾಗಿದೆ. ‘ಬಿಗ್ ಬಾಸ್’ ಸೀಸನ್ 11ಗೆ 17 ಸ್ಪರ್ಧಿಗಳು ಎಂಟ್ರಿ ಪಡೆದಿದ್ದಾರೆ. ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ರಂಜಿತ್ ಕುಮಾರ್, ಮೋಕ್ಷಿತಾ ಪೈ, ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇದರಲ್ಲಿ ಒಂದಷ್ಟು ಮಂದಿ ಸ್ವರ್ಗದಲ್ಲಿದ್ದರೆ ಮತ್ತೊಂದಷ್ಟು ಮಂದಿ ನರಕದಲ್ಲಿ ಇದ್ದಾರೆ. ನರಕದಲ್ಲಿ ಇರೋರಿಗೆ ಬಿಸಿನೀರು ಬೇಕಾಗಿದೆ. ಇದನ್ನು ಸೌಕರ್ಯ ಎಂದು ಸ್ವರ್ಗ ನಿವಾಸಿಗಳು ಪರಿಗಣಿಸಿದ್ದಾರೆ. ಹೀಗಾಗಿ, ಬಿಸಿ ನೀರನ್ನು ಕೊಡೋಕೆ ಅವರು ಇಷ್ಟಪಡುತ್ತಿಲ್ಲ. ಇದರಿಂದ ಇಬ್ಬರ ಮಧ್ಯೆ ಕಿತ್ತಾಟ…
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಲೈವ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂಬ ಆಸ್ಪತ್ರೆ ಮೂಲಗಳು ತಿಳಿಸಿವೆ. ನೆಲ್ಸನ್ ದಿಲೀಪ್ಕುಮಾರ್ ಅವರ ‘ಜೈಲರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ವೆಟ್ಟೈಯನ್ ಸಿನಿಮಾದ ಬಿಡುಗಡೆಯ ಹಂತದಲ್ಲಿದ್ದಾರೆ. ಸದ್ಯ ರಜನಿಕಾಂತ್ಗೆ ಹೊಟ್ಟೆ ನೋವು ಕಾಡಿದೆ. ಅದರಿಂದ ಬಳಲುತ್ತಿದ್ದ ನಟ ಆಸ್ಪತ್ರೆ ಸೇರಿದ್ದಾರೆ. ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ ಸಾಯಿ ಸತೀಶ್ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಜನಿಕಾಂತ್ಗೆ ಕಾರ್ಡಿಯಾಕ್ ಕ್ಯಾಥ್ ಕ್ಯಾಬ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಸದ್ಯ ತಲೈವಾ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್ ಮುಂಬರುವ ವೆಟ್ಟೈಯನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆಯೇ ಇದು ಆ್ಯಕ್ಷನ್ ಪ್ಯಾಕ್ಡ್ ಮನರಂಜನೆಯ ಸಿನಿಮಾವಾಗಿದ್ದು, ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ.
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಸ್ ಸೀಸನ್ 11 ಆರಂಭವಾಗಿದೆ. ದೊಡ್ಮನೆ ಒಳಗೆ 17 ಮಂದಿ ಹೊಸ ಕಂಟೆಸ್ಟೆಂಟ್‌ಗಳು ಎಂಟ್ರಿ ಕೊಟ್ಟಿದ್ದಾರೆ. 17 ಸ್ಪರ್ಧಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಂಟ್ರೆಸ್ಟಿಂಗ್ ಕಥೆ ಇದೆ.ದೊಡ್ಮನೆ ಒಳಗೆ ಕಾಲಿಟ್ಟಿರೋ ಪ್ರತಿಯೊಬ್ಬರಿಗೂ ನಾನೇ ವಿನ್ನರ್ ಆಗ್ಬೇಕು ಅನ್ನೋ ಆಸೆ ಇದೆ. ಈ ಮಧ್ಯೆ ಈ ಬಾರಿ ಬಿಗ್ ಬಾಸ್ ಮನೆಗೆ ಮೈತುಂಬ ಚಿನ್ನ ಸುರಿದುಕೊಂಡು ಬಂದಿರೋ ಗೋಲ್ಡ್ ಸುರೇಶ್ ಕುತೂಹಲ ಮೂಡಿಸಿದ್ದಾರೆ ಬಿಗ್ ಬಾಸ್ ಸೀಸನ್ 11ಕ್ಕೆ ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟ ಮೇಲೆ ಸಖತ್ ಟ್ರೋಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಂಗಾರದ ಮನುಷ್ಯನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ತಮ್ಮ ಮೈ ಮೇಲಿನ ಬಂಗಾರದಿಂದಲೇ ಸುರೇಶ್ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದಾರೆ. ಮೈಮೇಲೆ ಕೋಟಿ ಕೋಟಿ ಚಿನ್ನದ ಒಡವೆಗಳನ್ನು ಹಾಕಿಕೊಂಡಿರೋ ಸುರೇಶ್ ಬಿಗ್ ಬಾಸ್ ಮನೆಯಲ್ಲಿ ಕೇವಲ 50 ಲಕ್ಷ ರೂಪಾಯಿ ಗೆಲ್ಲೋಕೆ ಬಂದಿದ್ದಾರೆ. ಉತ್ತರ ಕರ್ನಾಟಕ ಮೂಲದವರಾದ ಸುರೇಶ್…
ತಿರುಪತಿ ಲಡ್ಡುಗೆ ಬಳಸಲಾಗುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ವಿಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ. ತಿರುಮಲ ಲಡ್ಡು ವಿಚಾರದಲ್ಲಿ ಆಂಧ್ರ ಹಿಂದಿನ ಸರ್ಕಾರ ದೊಡ್ಡ ತಪ್ಪು ಮಾಡಿದೆ. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರೋದು ಸಾಭೀತಾಗಿದೆ. ಈ ಮಧ್ಯೆ ತಿರುಮಲ ಲಡ್ಡು ಬಗ್ಗೆ ಮಾತನಾಡಿದ ಪ್ರತಿಯೊಬ್ಬರ ಮೇಲೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಾಗ್ದಾಳಿ ನಡೆಸ್ತಿದ್ದಾರೆ. ಇದ್ರೊಂದಿಗೆ ಲಡ್ಡು ವಿವಾದ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಈ ವಿಚಾರವಾಗಿ ನಾಯ್ಡು ಸರ್ಕಾರದ ವಿರುದ್ಧ ಸುಪ್ರೀಂ ಚಾಟಿ ಬೀಸಿತ್ತು. ಇದೀಗ ನಟ ಪ್ರಕಾಶ್ ರಾಜ್ ಕೂಡ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಆಂದ್ರ ಪ್ರದೇಶದ ರಾಜ್ಯ ಸರ್ಕಾರದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತುಪ್ಪ ತಿರಸ್ಕೃತವಾಗಿದೆ ಎಂದು ಟಿಟಿಡಿ ಹೇಳಿಲ್ಲವೇ? ತಿರಸ್ಕರಿಸಿದ ನಂತರ ಅದನ್ನು ಬಳಸಲು ಸಾಧ್ಯವಿಲ್ಲವೇ ಎಂದು ಪೀಠವು ಸರ್ಕಾರದ ಪರವಾಗಿ ವಕೀಲರನ್ನು ಕೇಳಿತು. NDDB ಮಾತ್ರ ಏಕೆ?…
ಸ್ಯಾಂಡಲ್ ವುಡ್ ಸ್ಟಾರ್ ನಟ ಡಾಲಿ ಧನಂಜಯ ಸದ್ಯ ಮೈಸೂರಿನಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡ ನಟ ದಸರಾದಲ್ಲಿ ಭಾಗಿ ಆಗಿರುವ ಮಾವುತರಿಗೆ ಲಿಡ್ಕರ್ ಚಪ್ಪಲಿಗಳನ್ನ ನೀಡಿದ್ದಾರೆ. ಧನಂಜಯ ಲಿಡ್ಕರ್‌ನ ರಾಯಭಾರಿಯಾಗಿದ್ದು, ಅದೇ ಕಾರಣದಿಂದ ಈ ಬಾರಿ ಮಾವುತರಿಗೆ ಲಿಡ್ಕರ್ ಬ್ರ್ಯಾಂಡ್ ನ ಚಪ್ಪಲಿ ಉಡಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಡಾಲಿ ಆನೆಯ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೆಲ ಕಾಲ ಮಾವುತರು ಹಾಗೂ ಅರಣ್ಯ ಅಧಿಕಾರಿಗಳ ಬಳಿ ಆನೆಯ ಬಗ್ಗೆ ಕುತೂಹಲಕಾರಿ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ತನ್ನದೇ ಹೆಸರಿನ ಆನೆಯನ್ನ ಕಂಡು ಧನಂಜಯ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಡಾಲಿ ಅರಸಿಕೆರೆ ಮೂಲದವರಾಗಿದರು ಕೂಡ ಮೈಸೂರಿನ ನಂಟನ್ನು ಹೆಚ್ಚಾಗಿ ಬೆಳಸಿಕೊಂಡಿದ್ದಾರೆ. ಅಂದ ಹಾಗೆ ಡಾಲಿ ಧನಂಜಯ್ ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಸಾಥ್ ನೀಡ್ತಿದ್ದಾರೆ.
ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ನಿಮ್ಮ ಮೆಚ್ಚಿನ ಸಿನಿಮಾ ಯಾವುದು..? CBI ಶಂಕರ್ ಸಾಂಗ್ಲಿಯಾನ ಆಟೋರಾಜ ಗೀತಾ
ಬೆಂಗಳೂರು: ಬಿಎಂಟಿಸಿ ರಾಜ್ಯ ರಾಜಾಧಾನಿಯ ಸಂಪರ್ಕಕೊಂಡಿ ಆದ್ರೆ ಈ ಬಿಎಂಟಿಸಿ ಬಸ್ ಕಿಲ್ಲರ್ ಬಿಎಂಟಿಸಿಯಾಗಿ ಅಮಾಯ ಬೆಂಗಳೂರಿಗರ ಬಲಿ ಪಡೀತಿದೆ, ಒಂದಾದ ಮೇಲೆ ಒಂದು ಆಕ್ಸಿಡೆಂಟ್ಗಳು ಆಗ್ತಾನೆ ಇವೆ. ಅದ್ರಲ್ಲೂ ಆಕ್ಸಿಡೆಂಟ್ ಆದಾಗೆಲ್ಲ ಸಾವು ನೋವು ಕೂಡ ಆಗ್ತಿದೆ. https://youtu.be/QU1KjV2f4Vc?si=4IuMray8EpVRapP_ ಇದೀಗ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಟಾಟಾ ಇನ್ಸ್ಟಿಟ್ಯೂಟ್ ಮುಂಭಾಗದಲ್ಲಿ ನಡೆದಿದೆ. ಎಂಎಸ್ ಪಾಳ್ಯದಿಂದ ಯಶವಂತಪುರ ಕಡೆ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಕಾರು ಟಚ್ ಆಗಿ ಬೈಕ್ ಸವಾರ ರಸ್ತೆ ಮೇಲೆ ಬಿದ್ದಿದ್ದಾನೆ, ಈ ವೇಳೆ ಬರುತ್ತಿದ್ದ ಬಿಎಂಟಿಸಿ ಬಸ್ ಆತನ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.