Author: Prajatv Kannada

ಬೆಂಗಳೂರು: ಇತ್ತೀಚಿಗೆ ಎನ್​ಐಎ ಅಧಿಕಾರಿಗಳು ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈ ಬೆನ್ನಲ್ಲೇ ಜಿಗಣಿ ಪೊಲೀಸರು ಜಿಗಣಿಯ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಓರ್ವ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳು ಅಕ್ರಮವಾಗಿ ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ರಾತ್ರಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು. https://youtu.be/NrqGRQw8CuU?si=6tApIfDWXtYl9k1g ಈ ವೇಳೆ ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳನ್ನ ಬಂಧಿಸಿದ ಪೊಲೀಸರು. ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ರಷೀದ್ ಸಿದ್ದಿಕಿ ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು. ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿದ್ದಾನೆ. ಬಳಿಕ, ರಷೀದ್ ಸಿದ್ದಿಕಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2014ರಲ್ಲಿ ಅಕ್ರಮವಾಗಿ ದೆಹಲಿಗೆ ಬಂದಿದ್ದಾನೆ. ಅಲ್ಲಿ, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾನೆ. ನಂತರ, 2018ರಲ್ಲಿ ಕುಟುಂಬ ಸಮೇತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದನು. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ…

Read More

ಬೆಂಗಳೂರು: ಮನೆಯಲ್ಲಿ ಮಹಾಲಯ ಅಮಾವಾಸ್ಯೆಯ ಹಬ್ಬ ಮಾಡಿ, ಪೂಜೆ ಮಾಡಿ ಬಳಿಕ ಮದ್ಯಸೇವನೆ ಮಾಡುವಾಗ ಸ್ನೇಹಿತರ ನಡುವೆ ಜಗಳವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಕೀರ್ತಿ (37) ಎಂಬಾತ ಮೂರ್ತಿ (52) ಎಂಬುವವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. https://youtu.be/wPOS3wchAd4?si=W1lDqVqXgYPggJyY ಬೆಂಗಳೂರಿನ ಸಣ್ಣೇನ ಹಳ್ಳಿಯಲ್ಲಿ ಘಟನೆ ನಡೆದಿದ್ದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೃತ ವ್ಯಕ್ತಿ ಮತ್ತು ಆರೋಪಿ ಇಬ್ಬರೂ ಒಂದೇ ಏರಿಯಾದವರು. ಹಬ್ಬ ಮುಗಿಸಿ ಮದ್ಯ ಸೇವನೆಗೆ ಜೊತೆಯಾಗಿ ಕೂತಿದ್ದಾಗ ಜಗಳವಾಗಿ ಕೊಲೆ ನಡೆದಿದೆ. ಘಟನೆ ಬಳಿಕ ಆರೋಪಿ ಕೀರ್ತಿ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಡುತ್ತಿದ್ದಾರೆ. ಮೃತ ಮೂರ್ತಿ ಹಸು ಸಾಕಾಣಿಕೆ ಮಾಡುತಿದ್ದ, ಇನ್ನು ಆರೋಪಿ ಕೀರ್ತಿ ಸಹ ಪರಿಚಿತ, ಸ್ನೇಹಿತ ಸಹ ಆಗಿದ್ದು ಫೈನಾನ್ಸ್ ವ್ಯವಹಾರ ನಡೆಸುತಿದ್ದ ಎಂದು ತಿಳಿದುಬಂದಿದೆ.

Read More

ಬೆಂಗಳೂರು: ಬಂಜೆತನ ಅಥವಾ ಸಂತಾನಹೀನತೆ ಇಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹಲವಾರು ದಂಪತಿ ಮಕ್ಕಳಿಲ್ಲದ ಕೊರಗನ್ನು ಅನುಭವಿಸುತ್ತಿದ್ದಾರೆ. https://youtu.be/ZrBRpSHcLt0?si=OgP1flgwaZo24DPi ಆದರೆ ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಹುಟ್ಟಿದ ಒಂದೇ ದಿನಕ್ಕೆ ಹೆತ್ತ ತಾಯಿಗೆ ಪುಟ್ಟ ಕಂದಮ್ಮ ಬೇಡವಾಯ್ತಾ..?ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು ಜೀವಂತವಾಗಿ ಹೂತು ಹಾಕಿದ ಘಟನೆ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ಬಹಿರ್ದೆಸೆಗೆ ಹೋದಾಗ ಮಗುವಿನ ಚೀರಾಟ ಕೇಳಿ, ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗುವನ್ನು ರಕ್ಷಿಸಿದ್ದಾರೆ. ನಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ ಹೆಚ್.ಕೆ.ಆಶಾ ತಂಡ ಮಗುವನ್ನು ಸಂರಕ್ಷಿಸಿದ್ದಾರೆ. ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಸಣ್ಣಪುಣ್ಣ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ನಡೆದಿದೆ.

Read More

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ತಾಲ್ಲೂಕಿನ, ದುದ್ದ ಹೋಬಳಿ, ಚೆನ್ನಮ್ಮನಹಳ್ಳಿ ಬಳಿ ನಡೆದಿದೆ. ಚೇತನ್ ಮತ್ತು ಸಂಗೀತಾ ಗಂಭೀರವಾಗಿ ಗಾಯಗೊಂಡ ದಂಪತಿ. ಗಾಯಾಳು ದಂಪತಿ ಮಂಡ್ಯ ಜಿಲ್ಲೆ https://youtu.be/4wk-vKeI0g4?si=s8TWPIUZI7fOIwG_ ಕಿಕ್ಕೇರಿ ಮೂಲದವರಾಗಿದ್ದು ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ದಂಪತಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ವಿಜಯಪುರ: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನೀವು ಸ್ವಚ್ಛವಾಗಿರಿ. https://youtu.be/4wk-vKeI0g4?si=t-4Rm_rgrsrvM4rU ಅವರು ಕಳ್ಳರಿದ್ದಾರೆ ಇವರು ಕಳ್ಳರಿದ್ದಾರೆ ಎಂದು ನೀವು ಹಾಗೇ ಮಾಡಬೇಡಿ. ನೀವು ಸ್ವಚ್ಛವಾಗಿರಿ. ಮುಡಾ ವಿಚಾರದಲ್ಲಿ ನೀವು ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಸಲಹೆ ನೀಡಿದರು. ಈ ಹಿಂದೆ ಬೊಫೋರ್ಸ್ ವಿಚಾರದಲ್ಲಿ ಎಲ್‌ಕೆ ಅಡ್ವಾನಿಯವರ ಹೆಸರು ಕೇಳಿ ಬಂದಿತ್ತು. ಕೇವಲ 50 ಲಕ್ಷ ರೂ. ಆರೋಪ ಬಂದಿತ್ತು. ಎಲ್‌ಕೆಎ ಎಂದು ಜೈನ್ ಡೈರಿಯಲ್ಲಿ ಬರೆಯಲಾಗಿತ್ತು. ಈ ಆರೋಪಕ್ಕೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಇದರಿಂದ ಮುಕ್ತವಾಗುವವರೆಗೆ ಸಂಸತ್ ಪ್ರವೇಶ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರು.ಅದು ಆದರ್ಶ. ರಾಜೀನಾಮೆ ನೀಡುವ ಮೂಲಕ ಸಿದ್ದರಾಮಯ್ಯ ರಾಜ್ಯಕ್ಕೆ ಹೊಸ ಆದರ್ಶವಾಗಬೇಕು. ಇಲ್ಲವಾದರೆ ಅವರು ಸಹ ಯಡಿಯೂರಪ್ಪ ಅವರ ಹಾಗೇ ಆಗುತ್ತಾರೆ ಎಂದರು. ಅವರು ಸಿಎಂ ಆಗಿರೋದು ತನಿಖೆ ಮೇಲೆ ಪರಿಣಾಮ…

Read More

ಬೆಂಗಳೂರು ಸೆಪ್ಟಂಬರ್ 29; ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವೋಲ್ಗ ನೆಟ್ ವರ್ಕ್ ಮತ್ತು ಡಾಟಾ ಸರ್ವಿಸ್ ಗೆ ಚಾಲನೆ ನೀಡಿದರು. https://youtu.be/a2rqbxujyIU?si=W7DauKObpMwsAdJh ವೋಲ್ಗಾ ಇನ್ ಪ್ರಾ ಕಂಪನಿ ಹೈದ್ರಾಬಾದ್ ಮೂಲದ ತಂತ್ರಜ್ಞಾನ ಕಂಪನಿಯಾಗಿದ್ದು, ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ವೈದ್ಯರು,ಸಿಬ್ಬಂದಿಗಳು ಸುಸೂತ್ರವಾಗಿ ಕೆಲಸ ನಿರ್ವಹಿಸಲು ನೆರವಾಗುವಂತೆ 5ಜಿ ಮತ್ತು ಡಾಟಾ ಸರ್ವಿಸ್ ನಿಂದ ಕಾಲೇಜಿನ ಡಿಜಿಟಲ್ ಮೂಲಭೂತ ಸೌಕರ್ಯ ಮತ್ತು ಶೈಕ್ಷಣಿಕ ಮತ್ತು ಆರೋಗ್ಯ ಸುರಕ್ಷತಾ ಕಾರ್ಯಗಳಿಗೆ ಕ್ರಾಂತಿಕಾರಕ ನಿರ್ಧಾರ ಕೈಗೊಂಡತಾಗಿದೆ. ಮೈಸೂರು ಮೆಡಿಕಲ್ ಕಾಲೇಜು ಅತ್ಯಂತ ಹಳೆಯ ಕಾಲೇಜಾಗಿದ್ದು,ಇಡೀ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ,ವೋಲ್ಗಾ ಇನ್ ಪ್ರಾ ಕಂಪನಿ ವೈದ್ಯಕೀಯ ವಿದ್ಯಾರ್ಥಿಗಳು ಇನ್ನಷ್ಟು ಸಮರ್ಥವಾಗಿ ಅಧ್ಯಯನ ನಡೆಸಲು,ಕಾರ್ಯನಿರ್ವಹಿಸಲು ವಿಶ್ವ ಮಟ್ಟದ ಡಿಜಿಟಲ್ ಮೂಲಸೌಕರ್ಯ ಕಲ್ಪಿಸಿಕೊಡುತ್ತಿದೆ. ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದ ವೊಲ್ಗಾ ಇನ್ ಪ್ರಾ ಕಂಪನಿಯ ಮುಖ್ಯಸ್ಥ ಶ್ರೀಧರ್ ರಾವ್ ಸಂತಸ ವ್ಯಕ್ತ ಪಡಿಸಿ, ನಮ್ಮ…

Read More

ದರ್ಶನ್ ಆದಷ್ಟು ಬೇಗ ಹೊರ ಬರಲಿ.ಮತ್ತೆ ಸಿನಿಮಾಗಳಲ್ಲಿ ತೊಡಗಿಕೊಳ್ಳಲಿ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ಹೇಗಾದರು ಮಾಡಿ ಗಂಡನನ್ನು ಹೊರ ತರಬೇಕು ಎಂದು ಪ್ರಯತ್ನಿಸ್ತಿದ್ದಾರೆ. ಆದರೆ ಅಭಿಮಾನಿಗಳ ಹರಕೆ, ವಿಜಯಲಕ್ಷ್ಮಿ ಪ್ರಯತ್ನ ಯಾವುದು ಕೈಗೂಡುತ್ತಿಲ್ಲ. ದರ್ಶನ್ ಗೆ ಮತ್ತೆ ನಿರಾಸೆಯಾಗಿದ್ದು ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್​ಗೆ ಇಂದು (ಸೆಪ್ಟೆಂಬರ್​ 30) ಬೇಲ್​ ಸಿಗಬಹುದು ಎಂದು ಆಪ್ತರು ನಿರೀಕ್ಷಿಸಿದ್ದರು. ಆದರೆ ಅವರ ಜಾಮೀನು ಅರ್ಜಿ ವಿಚಾರಣೆ ದಿನಾಂಕವನ್ನು ಮುಂದೂಡಲಾಗಿದೆ. ಅಕ್ಟೋಬರ್​ 4ರಂದು ಬೇಲ್​ ಅರ್ಜಿ ವಿಚಾರಣೆ ನಡೆಯಲಿದೆ. ವಾದ ಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್​ ಪರ ವಕೀಲರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತ್ಯವಾಗಿದೆ. ಚಾರ್ಜ್​ಶೀಟ್​ ಸಲ್ಲಿಕೆ ಆದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಯಿತು. ಕೇಸ್​ಗೆ ಸಂಬಂಧಿಸಿದಂತೆ ಕೆಲವು ಅನುಮಾನಗಳು ಇದ್ದಿದ್ದರಿಂದ ದರ್ಶನ್ ಪರ ವಕೀಲರು…

Read More

ನೇಪಾಳದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತ ವ್ಯಸ್ಥವಾಗಿದೆ. ಸದ್ಯ ಮಳೆ ಕೊಂಚ ಕಡಿಮೆಯಾಗಿದ್ದು ಅವಶೇಷಗಳಿಂದ 192 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪರಿಹಾರ ಕಾರ್ಯಾಚರಣೆ ತಂಡ ತಿಳಿಸಿದೆ.. ಪೂರ್ವ ಹಾಗೂ ಮಧ್ಯ ನೇಪಾಳದ ಹಲವು ಪ್ರದೇಶಗಳು ಶುಕ್ರವಾರ ದಿಂದಲೂ ಮುಳುಗಡೆಯಾಗಿವೆ. ಕಳೆದ ಎರಡು ದಶಕದಲ್ಲಿ ನೇಪಾಳ ಎದುರಿಸಿದ ಅತಿದೊಡ್ಡ ಪ್ರಾಕೃತಿಕ ವಿಕೋಪ ಇದಾಗಿದೆ. ನೇಪಾಳದ ಹಲವು ಭಾಗಗಳಲ್ಲಿ ಪ್ರವಾಹ ಉಲ್ಬಣಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಹಾನಿಗೀಡಾಗಿದ್ದು, ಸಂಪರ್ಕ ಕಡಿತದಿಂದಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಪ್ರವಾಹ, ಭೂಕುಸಿತ, ತಗ್ಗು ಪ್ರದೇಶಗಳ ಮುಳುಗಡೆಯಿಂದಾಗಿ 31 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. 200 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಹೇಳಿದೆ. ಕಠ್ಮಂಡು ಕಣಿವೆಯಲ್ಲಿ ಒಟ್ಟು 43 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 322 ಮನೆಗಳು ಹಾಗೂ 16 ಸೇತುವೆಗಳು ಹಾನಿಗೊಳಗಾಗಿವೆ. ಭದ್ರತಾ ಸಿಬ್ಬಂದಿಯು 4000 ಜನರನ್ನು ರಕ್ಷಿಸಿದ್ದಾರೆ. 20 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ನೇಪಾಳದಂತಹ ದಕ್ಷಿಣ…

Read More

ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 17 ಭಾರತೀಯ ಮೀನುಗಾರರನ್ನು ಅಲ್ಲಿನ ನೌಕಾಪಡೆ ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ‘ಮನ್ನಾರ್‌ ದ್ವೀಪದ ಉತ್ತರ ಭಾಗದಲ್ಲಿ ಮೀನುಗಾರನ್ನು ಬಂಧಿಸಲಾಗಿದ್ದು, ಎರಡು ಮೀನುಗಾರಿಕಾ ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು’ ಎಂದು ಶ್ರೀಲಂಕಾ ನೌಕಾಪಡೆ ಪ್ರಕಣೆಯಲ್ಲಿ ತಿಳಿಸಿದೆ. ಬಂಧಿತ 17 ಮೀನುಗಾರರನ್ನು ತಲೈಮನ್ನಾರ್‌ಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮನ್ನಾರ್ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 413 ಭಾರತೀಯ ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ನೌಕಾಪಡೆ, 55 ದೋಣಿಗಳನ್ನು ವಶಕ್ಕೆ ಪಡೆದಿದೆ.

Read More

ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಅಂತ್ಯ ಹಾಡಿರುವ ಬ್ರಿಟನ್‌, ಇಂಗ್ಲೆಂಡ್‌ನ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಕೊನೆಯ ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ಮುಚ್ಚಿದೆ. ಆ ಮೂಲಕ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಕೊನೆಗೊಳಿಸಿದ ಮೊದಲ ಜಿ7 ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ. 2015ರಲ್ಲಿ ಬ್ರಿಟನ್‌ ಹವಾಮಾನ ಬದಲಾವಣೆ ನಿಯಂತ್ರಿಸುವ ಗುರಿಯ ಮುಂದಿನ ಭಾಗವಾಗಿ ಕಲ್ಲಿದ್ದಲು ಸ್ಥಾವರಗಳನ್ನು ಮುಚ್ಚುವ ಯೋಜನೆಯನ್ನು ಘೋಷಿಸಿತ್ತು. ಆ ಸಮಯದಲ್ಲಿ ದೇಶದ ಸುಮಾರು ಶೇ 30ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲು ಸ್ಥಾವರಗಳಿಂದ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಕಲ್ಲಿದ್ದಲು ವಿದ್ಯುತ್ ಮೇಲಿನ ಅವಲಂಬನೆ ಶೇ1ಕ್ಕೆ ಕುಸಿದಿತ್ತು. 2035ರ ಒಳಗೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಬಗ್ಗೆ ಈ ವರ್ಷ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಇಂಧನ ಸಚಿವರು ಚರ್ಚಿಸಿದ್ದಾರೆ.

Read More