ಬೆಂಗಳೂರು:- ಗ್ರೀನ್ ಲೈನ್ನ ವಿಸ್ತರಿತ ಮಾರ್ಗದ ಟೆಸ್ಟಿಂಗ್ ಕಾರ್ಯಾದ ಹಿನ್ನೆಲೆಯಲ್ಲಿ ಇಡೀ ದಿನ ಮೆಟ್ರೋ ಸಂಚಾರವಿರಲಿಲ್ಲ. ಇದರಿಂದ ಜನರು ಪರದಾಡಿದ್ರೆ, ಇದನ್ನು ಬಂಡವಾಳ ಮಾಡಿಕೊಂಡ ಕೆಲ ಆಟೋ, ಕ್ಯಾಬ್ ಚಾಲಕರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ
ನಾಗಸಂದ್ರ ಟು ಮಾದಾವರ ವರೆಗೆ ಮೆಟ್ರೋ ಸಂಚಾರವನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಿಗ್ನಲ್ ಟೆಸ್ಟಿಂಗ್ ಮಾಡಲಾಗ್ತಿದೆ. ಆದ್ದರಿಂದ ನಾಗಸಂದ್ರ ಟು ಪೀಣ್ಯ ಇಂಡಸ್ಟ್ರಿ ಮೆಟ್ರೋ ಸ್ಟೇಷನ್ ವರೆಗೆ ದಿನಪೂರ್ತಿ ಮೆಟ್ರೋ ಸಂಚಾರವಿಲ್ಲ.
ಇದರಿಂದ ಬೆಳಗ್ಗೆ ಕೆಲಸಕ್ಕೆ ಹೋಗಬೇಕಾದ ಪ್ರಯಾಣಿಕರು ಪರದಾಡ್ರಿದ್ದಾರೆ. ಮೆಟ್ರೋ ಸ್ಟೇಷನ್ ಬಳಿ ನಿಂತು ಓಲಾ, ಉಬರ್ ಮೂಲಕ ಆಟೋ ಕ್ಯಾಬ್ ಬುಕ್ ಮಾಡಲು ಮುಂದಾಗಿದ್ದಾರೆ. ಆದರೆ ಇದನ್ನು ಬಂಡವಾಳ ಮಾಡಿಕೊಂಡ ಆಟೋ, ಕ್ಯಾಬ್ ಚಾಲಕರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ.
ನಾಗಸಂದ್ರ ದಿಂದ ಪೀಣ್ಯ ಇಂಡಸ್ಟ್ರಿಗೆ ನಾರ್ಮಲ್ ಆಗಿ ಆಟೋದಲ್ಲಿ 50 ರುಪಾಯಿ ಆಗುತ್ತೆ. ಆದರೆ ಚಾಲಕರು 150 ರಿಂದ 200 ರುಪಾಯಿ ವರೆಗೆ ವಸೂಲಿ ಮಾಡ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ನಿನ್ನೆ ನಾಗಸಂದ್ರ ಟು ಪೀಣ್ಯ ಮೆಟ್ರೋ ಸಂಚಾರವಿಲ್ಲದ ಕಾರಣ, ಆ ಭಾಗದ ಜನರೆಲ್ಲ ಏಕಾಏಕಿ ಪೀಣ್ಯ ಇಂಡಸ್ಟ್ರಿ ಮೆಟ್ರೋಗೆ ಆಗಮಿಸಿದ್ದರು. ಇದರಿಂದ ಮೆಟ್ರೋ ಸ್ಟೇಷನ್ ತುಂಬಾ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಸ್ಟೇಷನ್ ಹೊರಗಿನ ರೋಡ್ ವರೆಗೂ ಕ್ಯೂ ನಿಂತು ಟಿಕೆಟ್ ಪಡೆದು ಸಂಚಾರ ಮಾಡಿದ್ರು.
ನಾಗಸಂದ್ರ ಟು ಮಾದಾವರ ಮೆಟ್ರೋ ಸಿಗ್ನಲ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ, ಈ ತಿಂಗಳ 23 ಮತ್ತು 30 ಸೆಪ್ಟೆಂಬರ್ 6 ಮತ್ತು 11 ರಂದು ಪೂರ್ಣ ದಿನ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ನಡುವೆ ಸಂಚಾರವಿರುವುದಿಲ್ಲ.