ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಹಡಗು ಮುಳುಗಿದ್ದು 13 ಭಾರತೀಯರು ಸೇರಿ ಒಟ್ಟು 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ತೈಲ ಟ್ಯಾಂಕರ್ ಯೆಮೆನ್ನ ಏಡನ್ ಬಂದರ್ನಿಂದ ಹೊರಟಿತ್ತು.
ಸದ್ಯ ನೀರಿನಲ್ಲಿ ಮುಳಗಿದವರನ್ನು ರಕ್ಷಣೆ ಮಾಡಲು ಶೋಧಕಾರ್ಯ ನಡೆಯುತ್ತಿದೆ. ಟ್ಯಾಂಕರ್ ಹಡಗಿನಲ್ಲಿ 13 ಬಾರತೀಯ ಸಿಬ್ಬಂದಿ ಹಾಗೂ ಮೂವರು ಶ್ರೀಲಂಕಾದವರು ಇದ್ದರು. ಓಮನ್ ಬಂದರು ಡುಕ್ಮ್ ಬಳಿಯ ಆಗ್ನೇಯಕ್ಕೆ 25 ನಾಟಿಕಲ್ ಮೈಲು ದೂರ ಹೋಗುತ್ತಿದ್ದಂತೆಯೇ ಹಡಗು ಮುಳುಗಿದೆ ಎಂಬ ವರದಿ ಇದೆ. ಓಮನ್ ನೃಋತ್ಯದ ಕರಾವಳಿಯಲ್ಲಿರುವ ಡುಕ್ಮ್ ಬಂದರು ದೇಶದ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ.
ಎಲ್ಎಸ್ಇಜಿ ಶಿಪ್ಪಿಂಗ್ ಡೇಟಾ ಪ್ರಕಾರ.. ಟ್ಯಾಂಕರ್ ಯೆಮೆನ್ ಏಡನ್ ಬಂದರ್ನಿಂದ ಹೊರಟಿತ್ತು. ತೈಲ ಟ್ಯಾಂಕರ್ ತಲೆ ಕೆಳಗಾಗಿ ನೀರಿನಲ್ಲಿ ಮುಳಗಿದೆ. ಮುಳುಗಿರುವ ಹಡಗು ಹಾಗೆಯೇ ಇದೆಯೇ ಅಥವಾ ತೈಲ ಸೋರಿಕೆ ಆಗುತ್ತಿದೆಯೇ ಅನ್ನೋದು ಇನ್ನು ಖಚಿತವಾಗಿಲ್ಲ. 2007ರಲ್ಲಿ ನಿರ್ಮಿಸಲಾದ 117 ಮೀಟರ್ ಉದ್ದದ ತೈಲ ಉತ್ಪನ್ನ ಟ್ಯಾಂಕರ್ ಅದಾಗಿದೆ ಎಂದು ತಿಳಿಸಿದೆ.