ಬೇಸಿಗೆಗಾಲ ಬಂತೆಂದರೆ ಜನರಿಗೆ ಏನೋ ಸಂಕಸ ಹೆಚ್ಚಾಗಿ ಯಾರೂ ಇಷ್ಟ ಪಡದ ಕಾಳವೆಂದರೆ ಅದುವೇ ಬೇಸಿಗೆಗಾಲ ಯಾಕೆಂದರೆ ಸೆಕೆ ಮೈ ಉರಿ ಏನೇ ಕೆಲಸ ಮಾಡಲು ಹೋದ್ರೂ ಸೆಕೆ ಬಿಸಿಲಿನ ಝಳಕ್ಕೆ ಜನ ಸುಸ್ತೋ ಸುಸ್ತು.
ಅದಲ್ಲದೇ, ಕೆಲವು ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮುಖ್ಯ. ಆದರೆ ಅಪ್ಪಿತಪ್ಪಿಯು ಬೇಸಿಗೆಗಾಲದಲ್ಲಿ ಈ ಕೆಲವು ಆಹಾರಗಳತ್ತ ತಿರುಗಿಯು ನೋಡಬೇಡಿ, ಈ ಆಹಾರದಿಂದ ದೂರ ಇರೋದೆ ಉತ್ತಮ ಇಲ್ಲದಿದ್ರೆ ಜೀವಕ್ಕೆ ಕುತ್ತು.
ಕರಿದ ಆಹಾರಗಳು : ಕರಿದ ಆಹಾರವು ನಾಲಿಗೆಗೆ ರುಚಿ ನೀಡುತ್ತದೆ. ಆದರೆ ಬೇಸಿಗೆಗಾಲದಲ್ಲಿ ಈ ಆಹಾರವು ದೇಹಕ್ಕೆ ಒಳ್ಳೆದಲ್ಲ. ಈ ಸಮಯದಲ್ಲಿ ಸಮೋಸಾ, ಚಾಟ್ಸ್, ಸೇರಿದಂತೆ ಇನ್ನಿತರ ಕರಿದ ಆಹಾರಗಳಿಂದ ಸಾಧ್ಯವಾದಷ್ಟು ದೂರವಿದ್ದರೆ ಉತ್ತಮ.
ಉಪ್ಪು : ಕೆಲವರು ತಮ್ಮ ಆಹಾರ ಪದಾರ್ಥಗಳಲ್ಲಿ ಹೆಚ್ಚು ಉಪ್ಪನ್ನು ಬಳಸುತ್ತಾರೆ. ಉಪ್ಪು ನಿರ್ಜಲೀಕರಣಕ್ಕೆ ಕಾರಣವಾಗುವುದರಿಂದ ಜಾಸ್ತಿ ಉಪ್ಪಿನಾಂಶವಿರುವ ಆಹಾರಗಳನ್ನು ಬೇಸಿಗೆಯಲ್ಲಿ ಕಡಿಮೆಮಾಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆಲ್ಕೋಹಾಲ್ : ಬೇಸಿಗೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡಿದರೆ ದೇಹದಲ್ಲಿ ನಾನಾ ರೀತಿಯ ಆಹಾರ ಸಮಸ್ಯೆಗಳು ಕಾರಣವಾಗುತ್ತದೆ. ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸಿದರೆ ನಿರ್ಜಲೀಕರಣ, ತಲೆನೋವು, ಬಾಯಿಯ ಶುಷ್ಕತೆ ಹೀಗೆ ನಾನಾ ರೀತಿಯ ತೊಂದರೆಗಳಿಗೆ ಆಹ್ವಾನಕೊಟ್ಟಂತಾಗುತ್ತದೆ.
ಗ್ರಿಲ್ ಮಾಂಸಾಹಾರಗಳು : ವಾತಾವರಣವು ಬಿಸಿಯಾಗಿರುವುದರಿಂದ ಈ ಗ್ರಿಲ್ ಮಾಂಸಹಾರಗಳು ದೇಹವನ್ನು ಮತ್ತಷ್ಟು ಬಿಸಿಯಾಗಿಸುತ್ತದೆ. ದೇಹದ ಶಾಖವು ಹೆಚ್ಚಾದಂತೆ ಆರೋಗ್ಯ ಸಮಸ್ಯೆಯೂ ಕಾಡಬಹುದು. ಹೀಗಾಗಿ ಇಂತಹ ಆಹಾರಗಳಿಂದ ಹೆಚ್ಚು ದೂರವಿರಿ.
ಮಸಾಲೆಯುಕ್ತ ಆಹಾರಗಳು : ಮಸಾಲೆಯುಕ್ತ ಆಹಾರಗಳೂ ಎಲ್ಲರಿಗೂ ಇಷ್ಟನೇ. ಆದರೆ ಸುಡುವ ಬಿಸಿಯಲ್ಲಿ ಈ ಆಹಾರವನ್ನು ಸೇವಿಸಿದರೆ ಇದರಲ್ಲಿರುವ ಮಸಾಲಾ ಅಂಶವು ದೇಹದ ಶಾಖಾ ಹೆಚ್ಚಿಸಿ ದೇಹವನ್ನು ಬಿಸಿಯಾಗಿಸುತ್ತದೆ. ವಿಪರೀತ ಬೆವರುವುದು ಹಾಗೂ ದೇಹ ನಿರ್ಜಲೀಕರಣ ಪ್ರಕ್ರಿಯೆಗಳು ಆಗುತ್ತದೆ.
ಉಪ್ಪಿನಕಾಯಿ : ಕೆಲವರಿಗೆ ಮಧ್ಯಾಹ್ನದ ಊಟದ ವೇಳೆ ಉಪ್ಪಿನಕಾಯಿ ಇರಲೇಬೇಕು. ಆದರೆ ಬೇಸಿಗೆಗಾಲದಲ್ಲಿ ಈ ಉಪ್ಪಿನ ಕಾಯಿ ಸೇವನೆಯಿಂದ ದೂರವಿದ್ದರೆ ಒಳ್ಳೆಯದು. ಇದರಲ್ಲಿ ಸೋಡಿಯಂ ಅಂಶವು ಹೇರಳವಾಗಿದ್ದು, ನಿರ್ಜಲೀಕರಣವಾಗಿ ದೇಹದಲ್ಲಿನ ನೀರು ಕಡಿಮೆಯಾಗುತ್ತದೆ. ಹೀಗಾಗಿ ಉಪ್ಪಿನ ಕಾಯಿ ಸೇವನೆಯನ್ನು ಆದಷ್ಟು ದೂರ ಮಾಡಿ.
* ಕಾಫಿ : ಕೆಲವರಂತೂ ಕಾಫಿ ಪ್ರಿಯರಾಗಿರುತ್ತಾರೆ. ಹೀಗಾಗಿ ದಿನಕ್ಕೆ ಎರಡು ಮೂರು ಸಲವಾದರೂ ಕಾಫಿಯನ್ನು ಕುಡಿಯುತ್ತಾರೆ. ಬಿಸಿ ಕಾಫಿ ಸೇವನೆ ಮಾಡಿದರೆ ನೀರಿನಾಂಶವು ಕಡಿಮೆಯಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಾಫಿ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.