ಬೆಂಗಳೂರು ಗ್ರಾಮಾಂತರ: ಇತ್ತೀಚಿಗೆ ಬೇರೆ ಮಕ್ಕಳನ್ನ ತಂದು ಭಿಕ್ಷಾಟನೆ ಮಾಡುವ ಬಗ್ಗೆ ಸಾಕಷ್ಟು ದೂರ ಕೇಳಿ ಬಂದಿತ್ತು ಅದಲ್ಲದೆ ತಮ್ಮದಲ್ಲದ ಮಕ್ಕಳನ್ನು ಕರೆತಂದು ಭಿಕ್ಷಾಟನೆ ಮಾಡುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಪೊಲೀಸರಾಗಲಿ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ದೂರು ನೀಡುವಂತೆ ಇನ್ಸ್ ಪೆಕ್ಟರ್ ಚಂದ್ರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು..
ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೀದಿಬದಿ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಣ ಕಾರ್ಯಾಚರಣೆ ವಿಚಾರವಾಗಿ ಆನೇಕಲ್ ತಾಲೂಕಿನ ಸಂತೆ ಬೀದಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಇನ್ನು ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಪೊಲೀಸ್ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇನ್ಸ್ ಪೆಕ್ಟರ್ ಚಂದ್ರಪ್ಪ ರಸ್ತೆಯಲ್ಲಿ ಭಿಕ್ಷೆಯನ್ನು ಬೇಡುವ ಮಕ್ಕಳು ಸಾಮಾನ್ಯವಾಗಿ ಅವರದ್ದಲ್ಲ ಯಾರದೋ ಮಕ್ಕಳನ್ನು ತಂದು ಸಂತೆಗಳಲ್ಲಿ ಬೀದಿಗಳಲ್ಲಿ ಭಿಕ್ಷಾಟನೆಯನ್ನು ಮಾಡುತ್ತಿದ್ದಾರೆ ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಗ್ಲಿ ಮಾಹಿತಿಯನ್ನು ನೀಡುವಂತೆ ಜಾಗೃತಿಯನ್ನು ಮೂಡಿಸಿದ್ದರು ಅಲ್ಲದೆ ತಮ್ಮದಲ್ಲದ ಮಕ್ಕಳನ್ನು ಭಿಕ್ಷಾಟನೆಗೆ ಕರೆತಂದು ಭಿಕ್ಷೆ ಬೇಡುವಂತೆ ಮಾಡುತ್ತಿದ್ದಾರೆ ಹೀಗಾಗಿ ಸಾಕಷ್ಟು ಆರೋಗ್ಯ ಕೇಳಿ ಬಂದಿದೆ ಹೀಗಾಗಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದೇವೆ ಎಂದು ಚಂದ್ರಪ್ಪ ತಿಳಿಸಿದರು
ಇನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಆಶಾ ಮಾತನಾಡಿ ಆನೇಕಲ್ ನಲ್ಲಿ ಮಾಂಸದಂದೆ ಹೆಚ್ಚಾಗಿ ನಡೆದಿದೆ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡು ಅವರು ಕೈ ಲಿ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ ಬಿಕ್ಷಾಟನೆ ಮಾಡುತ್ತಿರುವುದಾಗಿ ಗಮನ ಸಹ ಬಂದಿದೆ ಈ ಬಗ್ಗೆ ಜಾಗೃತಿಯನ್ನು ಸಾರ್ವಜನಿಕರಿಗೆ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು… ಇನ್ನು ಕಾರ್ಯಕ್ರಮದಲ್ಲಿ ಗಮನ ಸಂಸ್ಥೆಯ ಮಮತಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಯ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇನ್ಸ್ಪೆಕ್ಟರ್ ಚಂದ್ರಪ್ಪ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..