ಹುಬ್ಬಳ್ಳಿ: ಇಂದು ಧರ್ಮ ಧರ್ಮಗಳ, ಜಾತಿ ಜಾತಿ ಗಳ ಹಾಗೂ ಮನಸ್ಸು ಮನಸ್ಸು ಗಳ ನಡುವೆ ಧ್ವೇಷ ವೈರುತ್ವ ಹೆಚ್ಚಾಗಿದ್ದು ಜನರು ನಲುಗಿ ಹೋಗಿದ್ದಾರೆ . ಅದರಲ್ಲೂ ಹಿಂದು ಮುಸ್ಲಿಮ್ ಗಳ ನಡುವೆ ಸಾಕಷ್ಟು ಅಸಮಾಧಾನ ವೈಮನಸ್ಯ ಬೆಳೆಯುವ ಘಟನೆಗಳು ನೋಡತಾ ಇದ್ದೇವೆ.
ಇಂತಹ ಸಂದರ್ಭದಲ್ಲಿ ಇಲ್ಲೊಂದು ಮುಸ್ಲಿಮ್ ಕುಟುಂಬ ತಮ್ಮ ಮನೆಯಲ್ಲಿ ಅಯ್ಯಾಪ್ಪ ಮಾಲಾಧಾರಿಗಳ ಪಾದಪೂಜೆ ಮಾಡಿ ಸತ್ಕರಿ ಕೋಮುಸೌಹಾರ್ಧತೆ ಮೆರೆದಿದ್ದಾರೆ.ಹೌದು.. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಮುಸ್ಲಿಂ ಕುಟುಂಬವೊಂದು ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ನೀಡುವ ಮೂಲಕ ಭಾವಕ್ಕತೆ ಮರೆದಿದ್ದು ನಾಡಿಗೆ ಮಾದರಿಯಾಗಿದೆ.
ವೃತ್ತಿಯಲ್ಲಿ ಗಾರೆ ಕೆಲಸ ನಿರ್ವಹಿಸುವ ಹಜೇರೇಸಾಬ ಬೆಳಗಲಿ ಪೂಜೆಗೆ ಮುಂದಾಗಿ ಈ ಕುರಿತು ಊರಿನ ಅಯ್ಯಪ್ಪ ಗುರುಸ್ವಾಮೀ ಹನಮಪ್ಪ ಮೇಟಿ ಅವರ ಮಾರ್ಗದರ್ಶನದಂತೆ ತಮ್ಮ ಮನೆಯನ್ನು ಶುಚಿಗೊಳಿಸಿ ಮಡಿ ಹುಡಿಯಿಂದ ಅಯ್ಯಪ್ಪಸ್ವಾಮಿಯ ಪೂಜೆ ಸಲ್ಲಿಸಿದರು.
18 ಅಯ್ಯಪ್ಪ ಮಾಲಾಧಾರಿಗಳನ್ನು ಮನೆಗೆ ಬರಮಾಡಿಕೊಂಡು ಅವರ ಪಾದಪೂಜೆ ನಂತರ ಮನೆಯಲ್ಲಿ ಅಯ್ಯಪ್ಪನ ಫೋಟೊ ಮಾಲಾಧಾರಿಗಳಿಂದ ಅಯ್ಯಪ್ಪ ಮೂರ್ತಿಗೆ ಪಂಚಾಮೃತ ಅಭಿಷೇಕ, ಪಂಚಾಮೃತಪೂಜೆ ನೆರವೇರಿಸಿ ಕು&ಬಂಬದವರು ಭಕ್ತಿಯಿಂದ ಸೇವೆ ಸಲ್ಲಿಸಿದರು. ಇವರ ಮನೆಯಲ್ಲಿ ಅಯ್ಯಪ್ಪ ಪೂಜೆಗೆ ಗ್ರಾಮದ ಹಿರಿಯರನ್ಮ ಸಹ ಆಹ್ವಾನ ಮಾಡಲಾಗಿತ್ತು. ನಂತರಪ್ರಸಾದ ವಿತರಿಸಿದರು.