ಮೈಸೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (B L Santhosh) ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿ ವೈರಲ್ ಮಾಡಿದ ಯುಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಗೌಡ (Dilip Gowda) ಬಂಧಿತ ಮೈಸೂರಿನ ಯುವಕ.
ಈತ ಲಿಂಗಾಯತ ಸಮುದಾಯದ ವಿರುದ್ಧ ಸಂತೋಷ್ ಹೇಳಿಕೆ ನೀಡಿದ ರೀತಿ ಪತ್ರಿಕಾ ವರದಿ ಸೃಷ್ಟಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಬಿಜೆಪಿ ದೂರು ನೀಡಿತ್ತು.ಬಿಜೆಪಿ (BJP) ನೀಡಿದ ದೂರಿನ ಆಧರಿಸಿ ಮೈಸೂರು ನಗರ ಪೊಲೀಸರು ದಿಲೀಪ್ ಗೌಡನನ್ನು ಬಂಧಿಸಿದ್ದಾರೆ.