ಲಂಡನ್: ಭಯೋತ್ಪಾದನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿರುವ ಆರೋಪ ಮೇಲೆ ಭಾರತೀಯ ಪ್ರಜೆಯೊಬ್ಬನನ್ನು ಲಂಡನ್ ಪೊಲೀಸರು ವೆಸ್ಟ್ ಲಂಡನ್ನ ಹೇಯ್ಸ್ನಲ್ಲಿ ಬಂಧಿಸಿದ್ದಾರೆ.
ಮೂಲತಃ ತಮಿಳುನಾಡಿನ ಮದುರೈ ಸುಂದರ್ ರಾಜ್ (65) ಬಂಧಿತನಾಗಿದ್ದು ಈತ ಬ್ರಿಟನ್ ಮತ್ತು ಬೆಲ್ಜಿಯಂನ ವಿಳಾಸ ಹೊಂದಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿದೆ.
ಆರೋಪಿಯ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ ಬಂಧನ ವಾರಂಟ್ ಅನ್ನು ಹೊರಡಿಸಿದೆ.
ಬಂಧಿತ ಆರೋಪಿ ಸುಂದರ್ ನಾಗರಾಜನ್, ನಾಗರಾಜನ್ ಸುಂದರ್ ಪೂಂಗುಲಾಮ್ ಕಾಶಿವಿಶ್ವನಾಥನ್ ಮತ್ತು ನಾಗಸುಂದರ್ ಪೂಂಗುಲಾಮ್ ಕೆ.ನಾಗರಾಜನ್ ಹೆಸರಿನಿಂದಲೂ ಗುರುತಿಸಲಾಗುತ್ತಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈತನ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಲಂಡನ್ನ ವೆಸ್ಟ್ಮಿನಿಸ್ಟರ್ ಕೋರ್ಟ್ಗೆ ಮುಂದಿನ ವಾರ ಹಾಜರಾಗಬೇಕಿತ್ತು. ಈತನಿಗೆ ಭಯೋತ್ಪಾದಕರಿಗೆ ಹಣ ನೆರವು ಆರೋಪವುಳ್ಳ ವಜ್ರದ ವ್ಯಾಪಾರಿ, ನಜೀಮ್ ಅಹ್ಮದ್ ಜೊತೆಗೆ ಸಂಪರ್ಕವಿದೆ ಎಂದು ಶಂಕಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ.