ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಹೀಗಾಗಿ ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ, ಮದ್ಯ ಮಾರಾಟ ನಿಷೇಧಿಸುವಂತೆ ಶ್ರೀರಾಮ ಸೇನೆಯಿಂದ ಡಿಸಿಗೆ ಮನವಿ ಮಾಡಿಕೊಂಡಿದ್ದಾರೆ.
ಶ್ರೀರಾಮ ಸೇನೆಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು ಸನಾತನ ಹಿಂದೂ ಧರ್ಮಕ್ಕೆ ಅದೊಂದು ಪವಿತ್ರ ಹಾಗೂ ಅವಿಸ್ಮರಣೀಯ ಕ್ಷಣ ಅಂದು ಸಾತ್ವಿಕ ಆಹಾರ ಸೇವಿಸಿ ಪ್ರತಿಷ್ಟಾಪನೆ ಕಣ್ತುಂಬಿಕೊಳ್ಳಬೇಕು ,ಈ ಹಿನ್ನೆಲೆ ನಗರದಲ್ಲಿ ಮಾಂಸ ಮಾರಾಟ ಹಾಗೂ ಮದ್ಯ ನಿಷೇಧಿಸುವಂತೆ ಶ್ರೀರಾಮ ಸೇನೆ ಆಗ್ರಹ ಮಾಡಿದೆ.