ಬೆಂಗಳೂರು: ಮಹಿಳಾ ದಿನಾಚರಣೆಯ ಕೊಡುಗೆಯಾಗಿ ಬಿಎಂಟಿಸಿ ಮಾರ್ಚ್ 8 ರಂದು ತನ್ನ ಬಸ್ ಗಳಲ್ಲಿ ಉಚಿತ ಪ್ರಯಾಣ ಘೋಷಿಸಿದೆ. ಮಾರ್ಚ್ 8 ರಂದು ನೀವು ನಗರದಾದ್ಯಂತ ಸಂಚರಿಸುವ ಬಿಎಂಟಿಸಿ ಬಸ್ ಗಳಲ್ಲಿ ನಿರ್ಭಯವಾಗಿ, ಸಂಪೂರ್ಣವಾಗಿ ಉಚಿತ ಸಂಚಾರ ನಡೆಸಬಹುದಾಗಿದೆ. ಎಷ್ಟು ಭಾರಿ ಯಾವ ಬಸ್ ನಲ್ಲಿ ಓಡಾಡಿದ್ರೂ ಹೆಣ್ಣು ಮಕ್ಕಳಿಂದ ಹಣ ಪಡೆಯದಿರಲು ಬಿಎಂಟಿಸಿ ನಿರ್ಧರಿಸಿದೆ. ಬಿಎಂಟಿಸಿ ಬಳಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಹಾಗೂ ಜನರನ್ನು ಬಿಎಂಟಿಸಿಯತ್ತ ಸೆಳೆಯಲು ಬಿಎಂಟಿಸಿ ಈ ಪ್ರಯತ್ನ ಮಾಡಿದೆ.
ಕೇವಲ ಮಹಿಳೆಯರಿಗೆ ಮಾತ್ರವಲ್ಲ ಈ ಹಿಂದೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ವೇಳೆಯೂ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಕೊರೋನಾ ಬಳಿಕ ಬಿಎಂಟಿಸಿ ಪ್ರಯಾಣಿಕರ ಕೊರತೆಯಿಂದಾಗಿ ನಷ್ಟ ಎದುರಿಸುತ್ತಿತ್ತು. ಆದರೆ ಈಗ ಜನಜೀವನ ಸಹಜಸ್ಥಿತಿಗೆ ಮರಳುತ್ತಿದ್ದಂತೆ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ನಿಧಾನಕ್ಕೆ ಏರಿಕೆಯಾಗ ತೊಡಗಿದೆ. ಆದರೆ ಮಾರ್ಚ್ 8 ರಂದು ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಘೋಷಿಸಿದೆ.