ಬಾಗಲಕೋಟೆ: ಹಿಂದೆ ಕೆಲವರು ನನ್ನನ್ನು ಫುಟ್ಬಾಲ್ನಂತೆ ಬಳಸಿಕೊಂಡರು. ನನ್ನವರು ಅಂತ ನಂಬಿ ನೇರ ನಡೆನುಡಿ ರಾಜಕಾರಣ ಮಾಡಿದ್ದೇನೆ. ಅದನ್ನೇ ಕೆಲವರು ದುರುಪಯೋಗ ಮಾಡಿಕೊಂಡರು ಎಂದು ಕೆಆರ್ಪಿಪಿ ಪಕ್ಷದ ಸ್ಥಾಪಕ, ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ (Janardhan Reddy) ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನು ಸಮಸ್ಯೆಯಲ್ಲಿ ಸಿಲುಕಿಸಲು ಕೆಲ ನಾಯಕರು ಯತ್ನಿಸುತ್ತಿದ್ದಾರೆ. ನನ್ನನ್ನು ಸಮಸ್ಯೆಗೆ ಸಿಲುಕಿಸಲು ಬರುವವರಿಗೆ ಜನ ಪಾಠ ಕಲಿಸುತ್ತಾರೆ. ಫುಟ್ಬಾಲ್ ಮಾದರಿಯಲ್ಲಿ ಆಡಿ ಮತದಾರರು ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಹೆರಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ಹೇಮರೆಡ್ಡಿ ಮಲ್ಲಮ್ಮನ ದರ್ಶನ ಪಡೆದು ಬಳಿಕ ಮಾತನಾಡಿದ ಅವರು ರಾಜ್ಯದ ಜನರೇ ಅವರನ್ನು ಪುಟ್ ಬಾಲ್ ಆಡಿ. ನನ್ನ ಪುಟ್ ಬಾಲ್ ಚಿಹ್ನೆಗೆ ಮತ ಹಾಕಬೇಕು ಅಂತ ಕೇಳಿಕೊಳ್ಳುತ್ತೇನೆ. ನಮ್ಮವರೇ ಅಂತಲ್ಲ ಎಲ್ಲರೂ ಸೇರಿ ಇಡೀ ರಾಜ್ಯದಲ್ಲಿ, ನಾನು ಒಂದು ಕಡೆ ಆದರೆ, ಎಲ್ಲರೂ ಒಂದು ಕಡೆ ಆಗಿ ಪುಟ್ವಾಲ್ ತರಹ ಆಡಿದರು ಎಂದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನಮ್ಮ KRPP ಅನಿವಾರ್ಯ
ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಕೆಆರ್ಪಿಪಿ ಅನಿವಾರ್ಯ. ಈ ಮಾತನ್ನು ಬಹಿರಂಗವಾಗಿಯೇ ಹೇಳಿದ್ದೇನೆ. ನನ್ನ ಬಿಟ್ಟು ಸರ್ಕಾರ ಮಾಡುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಖಂಡಿತವಾಗಿಯೂ ನಾನು ಇತರೆ ಪಕ್ಷಗಳಿಗೆ ಅನಿವಾರ್ಯ ಆಗುತ್ತೇನೆ. ರಾಜ್ಯದಲ್ಲಿ 50 ಕ್ಷೇತ್ರದಲ್ಲಿ ಕೆಆರ್ಪಿಪಿ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ 30-35 ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುತ್ತೇನೆ. ಈಗಾಗಲೇ 20 ಕ್ಷೇತ್ರದಲ್ಲಿ ಓಡಾಡಿದ್ದೇನೆ. ಇನ್ನು 30 ಕ್ಷೇತ್ರದಲ್ಲಿ 10 ದಿನಗಳಲ್ಲಿ ಸಂಚರಿಸಿ ಪೂರ್ತಿ ಮಾಡುತ್ತೇನೆ. ಸರ್ವೆ ಕೂಡ ಒಂದು ಕಡೆ ನಡೆಯುತ್ತಿದೆ ಎಂದರು.
ಬಾಗಲಕೋಟೆ ಜಿಲ್ಲೆ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಸಭೆಗಳನ್ನು ಮಾಡಿದ ಮೇಲೆ ನಿರ್ಣಯ ಮಾಡುತ್ತೇನೆ. ಸಾರ್ವಜನಿಕ ಸಭೆ, ಅಲ್ಲಿ ಗೆಲ್ಲುವ ಗ್ಯಾರಂಟಿ ವಾತಾವರಣ ನೋಡಿ, ಅಭ್ಯರ್ಥಿ ಹಾಕುತ್ತೇನೆ. ಉಳಿದಂತೆ ರಾಜ್ಯಾದ್ಯಂತ 14 ಕ್ಷೇತ್ರದಲ್ಲಿ ಈಗ ಅಭ್ಯರ್ಥಿ ಘೋಷಣೆ ಆಗಿದೆ ಎಂದು ತಿಳಿಸಿದರು.
ಬಸವಣ್ಣನ ಐಕ್ಯಮಂಟಪ, ಸಂಗಮನಾಥನ ದರ್ಶನ ಪೂಜೆ ಪ್ರಾರ್ಥನೆ ವಿಚಾರವಾಗಿ ಮಾತನಾಡಿ ನಾವು ಕಾಶಿ ಜಗದ್ಗುರುಗಳಿಂದ ಲಿಂಗಧೀಕ್ಷೆ ತೆಗೆದುಕೊಂಡಿದ್ದೇವೆ. ನಿತ್ಯ ಬಸವಣ್ಣನವರ ವಚನಗಳಾಗಲಿ ಪೂಜೆ ಆಗಲಿ ಮಾಡುತ್ತಾ ಬಂದಿದ್ದೇನೆ. ಇಷ್ಟು ವರ್ಷಗಳ ಕಾಲ ನೆಮ್ಮದಿಯಿಂದ ಇರಬೇಕು ಅಂದರೆ ಅದೇ ಕಾರಣ. ಕೂಡಲಸಂಗಮಕ್ಕೆ ಚುನಾವಣೆ ಸಂದರ್ಭದಲ್ಲಿ ಬಂದಿದ್ದಕ್ಕೆ ತಮಗೆ ಗೊತ್ತಾಗಿರಬಹುದು. ಆದರೆ ಉಳಿದ ಸಮಯದಲ್ಲೂ 3-4 ತಿಂಗಳಿಗೊಮ್ಮೆ ಕೂಡಲಸಂಗಮಕ್ಕೆ ಬಂದು ಹೋಗುತ್ತೇನೆ ಎಂದು ತಿಳಿಸಿದ್ದಾರೆ.