ಇಂದಿನ ದಿನದಲ್ಲಿ ಸೋಶಿಯಲ್ ಮೀಡಿಯಾ ಪ್ರಯಜ್ಞತಿಯೊಬ್ಬರೂ ಬಳಸುತ್ತಾರೆ. ಅದರಲ್ಲೂ ಇನ್ಸ್ಟಾಗ್ರಾಮ್ ಎಲ್ಲರ ನೆಚ್ಚಿನ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಆಗಿದೆ. ಬಳಕೆದಾರರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಏನಾದರೊಂದು ವಿಡಿಯೋ ಮಾಡುವ ಮೂಲಕ ರೀಲ್ಸ್ ಪೋಸ್ಟ್ ಮಾಡುತ್ತಾರೆ. ಅದ್ರಲ್ಲೂ ಎಲ್ಲಿಗಾದ್ರೂ ಹೋದಾಗ ಸ್ಟೋರಿ ಹಾಕೋ ಅಭ್ಯಾಸ ಹೊಂದಿರ್ತಾರೆ. ಇನ್ನು ಇನ್ಸ್ಟಾಗ್ರಾಮ್ ನ ಮೂಲಕ ಸಾಕಷ್ಟು ವಿಷಯಗಳನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡುವ ಮೂಲಕ ಕೆಲವು ಜನರು ರಾತ್ರೋ ರಾತ್ರಿ ವೈರಲ್ ಆಗುತ್ತಾರೆ. ಇನ್ಸ್ಟಾಗ್ರಾಮ್ ಈಗಾಗಲೇ ಸಾಕಷ್ಟು ಸಾಮಾನ್ಯ ಜನರಿಗೆ ನೇಮ್, ಫೇಮ್ ತಂದುಕೊಟ್ಟಿದೆ. ಇದೀಗ ಸೋಶಿಯಲ್ ಮೆಡಿಯದಲ್ಲಿಯೇ ಇನ್ಸ್ಟಾಗ್ರಾಮ್ ನ ಬಗ್ಗೆ ಆಘಾತಕಾರಿ ವಿಷಯವೊಂದು ವೈರಲ್ ಆಗುತ್ತಿದೆ.
ಭಾರತದಲ್ಲಿ ಬ್ಯಾನ್ ಆಗುವ ಭೀತಿಯಲ್ಲಿ ಇನ್ಸ್ಟಾಗ್ರಾಮ್
ವಿಶ್ವದಾದ್ಯಂತ ಅದೆಷ್ಟೋ ಮಿಲಿಯನ್ ನಷ್ಟು ಜನರು ಇನ್ಸ್ಟಾಗ್ರಾಮ್ ಅನ್ನು ಬಳಸುತ್ತಾರೆ. ಇನ್ಸ್ಟಾಗ್ರಾಮ್ ಫೋಟೋ ಹಾಗೂ ವಿಡಿಯೋ ಹಂಚಿಕೆಗೆ ಉತ್ತಮ ಪ್ಲಾಟ್ ಫಾರ್ಮ್ ಆಗಿದೆ. ಇದೀಗ ಇನ್ಸ್ಟಾಗ್ರಾಮ್ ಭಾರತದಲ್ಲಿ ಬ್ಯಾನ್ (Instagram Ban) ಆಗುವ ಭೀತಿಯನ್ನು ಎದುರಿಸುತ್ತಿದೆ.
ಕಳೆದ ಎರಡು ತಿಂಗಳುಗಳಿಂದ ಕೇಂದ್ರದ ಸರ್ಕಾರ ಇನ್ಸ್ಟಾಗ್ರಾಮ್ ಅನ್ನು ಬ್ಯಾನ್ ಮಾಡಲಿದೆ ಎನ್ನುವ ಬಗ್ಗೆ ಸುದ್ದಿಯಾಗಿದೆ. ಇನ್ಸ್ಟಾಗ್ರಾಮ್ ನಿಷೇದವಾಗುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೇ ಸುದ್ದಿ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಮ್ ಬ್ಯಾನ್ ಗೆ ಕಾರಣವೇನು
ಸಾಮಾಜಿಕ ನೆಟ್ವರ್ಕಿಂಗ್ ಅಪ್ಲಿಕೇಶನ್ ನಲ್ಲಿ ಕೇಂದ್ರ ಸರ್ಕಾರ ಇನ್ಸ್ಟಾಗ್ರಾಮ್ ಬ್ಯಾನ್ ಮಾಡುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. ವೈರಲ್ ಪೋಸ್ಟ್ ನೀಡಿರುವ ಮಾಹಿತಿಯ ಪ್ರಕಾರ, ಇನ್ಸ್ಟಾಗ್ರಾಮ್ ವೆಬ್ ಸೈಟ್ ನಲ್ಲಿ ಹೆಚ್ಚುತ್ತಿರುವ ತಪ್ಪು ವಿಷಯಗಳ ಕಾರಣ ದೇಶದ ಯುವಕರು ಪ್ರಭಾವಿತರಾಗುತ್ತಿದ್ದಾರೆ. ಈ ಕಾರಣದಿಂದ ಕೇಂದ್ರದ ಮೋದಿ ಸರ್ಕಾರವು ದೇಶದಲ್ಲಿ ಇನ್ಸ್ಟಾಗ್ರಾಮ್ ಅನ್ನು ಬ್ಯಾನ್ ಮಾಡಲಿದೆ ಎನ್ನುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ನಲ್ಲಿ ವೈರಲ್ ಆಗಿತ್ತು.
ಇನ್ಸ್ಟಾಗ್ರಾಮ್ ನಿಷೇಧದ ಬಗ್ಗೆ ಸ್ಪಷ್ಟನೆ
ಇನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಲ್ಲಿ ಇನ್ಸ್ಟಾಗ್ರಾಮ್ ಲಭ್ಯವಾದ ಕಾರಣ ಇನ್ಸ್ಟಾಗ್ರಾಮ್ ಭಾರತದಲ್ಲಿ ಬ್ಯಾನ್ ಆಗಿಲ್ಲ ಎನ್ನುವುದು ದ್ರಢವಾಗಿದೆ. ಭಾರತದಲ್ಲಿ ಇನ್ಸ್ಟಾಗ್ರಾಮ್ ಇನ್ನೂ ಕಾರ್ಯನಿರ್ವಹಿಸುತ್ತಿದೆ.
ಭಾರತ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸುವಲ್ಲಿ ಇನ್ಸ್ಟಾಗ್ರಾಮ್ ಕಟ್ಟುನಿಟ್ಟಾಗಿದೆ ಮತ್ತು ಇಲ್ಲಿಯವರೆಗೆ ಇನ್ಸ್ಟಾಗ್ರಾಮ್ ಯಾವುದೇ ನಿಷೇಧ ಭೇದರಿಕೆಗೆ ಒಳಗಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಡಿರುವ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಭಾರತದಲ್ಲಿ ಇನ್ಸ್ಟಾಗ್ರಾಮ್ ಬ್ಯಾನ್ ಮಾಡಲಾಗುತ್ತದೆ ಅನ್ನುವುದು ಒಂದು ಸುಳ್ಳು ಸುದ್ದಿ. ಜನರು ಸುದ್ದಿಯಿಂನ ವೈರಲ್ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನ ಹರಿಬಿಟ್ಟಿದ್ದು ಯಾರು ಕೂಡ ಅದನ್ನ ನಂಬಬಾರದು ಎಂದು ಕೇಂದ್ರ ತಿಳಿಸಿದೆ.
ಇದನ್ನೂ ಓದಿ : ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ: ಯಾವ ರಾಶಿಗೆ ಏನು ಫಲ ಸಿಕ್ಕಿದೆ ನೋಡೋಣ!