ಧಾರವಾಡ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದಕರಂತಹ ಕೆಟ್ಟ ಹುಳುಗಳು ಹೊರಬರುತ್ತಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಂತಹ ಉಗ್ರರನ್ನೇ ಪೋಷಣೆ ಮಾಡುತ್ತ ಬಂದಿದ್ದಾರೆ. ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಅತ್ಯಂತ ಕೆಟ್ಟ ವಿಚಾರವಾಗಿದ್ದು, ಇವತ್ತು ಸಿಸಿಬಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ನಾನು ಈ ಬಗ್ಗೆ ಮಾಹಿತಿ ಪಡೆದುಕೊಂಡೆ. ಅವರ ಬಳಿ ಜೀವಂತ ಬಾಂಬ್ ಸೇರಿ ಅನೇಕ ವಸ್ತುಗಳು ಸಿಕ್ಕಿವೆ ಎಂದು ಹೇಳಿದರು.
ಸುಲ್ತಾನಪಾಳ್ಯದಲ್ಲಿ ಇವರು ವಾಸವಾಗಿದ್ದರು ಎನ್ನಲಾಗಿದೆ. ಇವರ ಜೊತೆಗೆ ಇಬ್ಬರು ಮಹಿಳೆಯರ ಉಲ್ಲೇಖವೂ ಆಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿ ಕೆಟ್ಟ ಹುಳು ಹೊರ ಬರುತ್ತಿವೆ. ಹಾವು, ಚೇಳುಗಳು ಇವೆಲ್ಲವೂ ಹೊರಗೆ ಬರುತ್ತವೆ. ಈಗ ಇವರಿಗೆಲ್ಲ ಪೋಷಣೆ ಕಾಂಗ್ರೆಸ್ ಸರ್ಕಾರ ಆಗಿದೆ ಎಂದು ಗಂಭೀರ ಸ್ವರೂಪದ ಅರೋಪ ಮಾಡಿದರು.
ಇಂತಹ ಉಗ್ರರನ್ನೇ ಪೋಷಣೆ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಲಕ್ಷಾಂತರ ಜನರನ್ನು ಕೊಂದು ಹಾಕಿದ್ದಾರೆ. ಈಗ ಕಾಂಗ್ರೆಸ್ ಬಂದಿದ್ದರಿಂದ ಇಂತಹವುಗಳು ಇನ್ನೂ ಆಗುತ್ತವೆ. ಭಾರತೀಯ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಹರ್ಷ ಕೊಲೆ ಆಯ್ತು. ಕೊಲೆ ಆರೋಪಿಗಳು ಜೈಲಿನಲ್ಲಿ ಫೋನ್ನಲ್ಲಿ ಮಾತನಾಡುತ್ತಾ ಆನಂದವಾಗಿದ್ದರು. ಇವತ್ತು ಸಿಕ್ಕ ಶಂಕಿತರು ಅವರೊಂದಿಗೆ ಸಂಪರ್ಕದಲ್ಲಿದ್ದರೆಂಬ ಮಾಹಿತಿ ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.