ಬೆಂಗಳೂರು: ಗೌರ್ಮೆಂಟ್ ಬಸ್ನಲ್ಲಿ ಫ್ರೀ ಆಗಿ ಓಡಾಡೋ ಟೈಮ್ ಕೊನೆಗೂ ಬಂದೇ ಬಿಟ್ಟಿದೆ. ಹೌದು.. ಇಷ್ಟು ದಿನ 5 ಗ್ಯಾರಂಟಿ ಯೋಜನೆಗಳಲ್ಲಿ, ಒಂದಾದ್ರೂ ಜಾರಿ ಆದರೆ ಸಾಕು ಅಂತಿದ್ದವರಿಗೆ, ಈಗ ಉತ್ತರ ಸಿಕ್ಕಿದೆ. ನಿನ್ನೆ ಶಕ್ತಿ ಯೋಜನೆಗೆ ಚಾಲನೆ ಸಿಕ್ಕ ಬೆನ್ನಲ್ಲೇ ಇವತ್ತು ಉಚಿತ ಪ್ರಯಾಣ ಅನ್ನೊ ಜೋಷ್ನಲ್ಲಿ ಮಹಿಳಾಮಣಿಗಳು ಸರ್ಕಾರಿ ಬಸ್ಗಳತ್ತ ದೌಡಾಯಿಸಿಕೊಂಡು ಬಂದರು. ಮುಂಜಾನೆಯಿಂದ್ಲೇ ನಗರದ ಬಸ್ಗಳೆಲ್ಲವೂ ಫುಲ್ ರಶ್ ಆಗಿದ್ದು,ಶಕ್ತಿ ಯೋಜನೆಗೆ ರಾಜಧಾನಿಯಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಯ್ತು.ಹಾಗಾದ್ರೆ ಎರಡನೇಯ ದಿನದ ಶಕ್ತಿ ಯೋಜನೆಗೆ ಹೇಗಿತ್ತು ರೆಸ್ಪಾನ್ಸ್ ಬನ್ನಿ ನೋಡೋಣ..
ಚುನಾವಣೆಗೂ ಮುನ್ನ ಕಾಂಗ್ರೆಸ್ 5 ಗ್ಯಾರಂಟಿಯನ್ನ ಜನರ ಮುಂದೆ ಇಟ್ಟಿತ್ತು.ಆದ್ರೆ ಅಧಿಕಾರ ಹಿಡಿದ ಬೆನ್ನಲ್ಲೇ ಗ್ಯಾರಂಟಿಗಳಿಗೆ ಕ್ಯಾಬಿನೆಟ್ ನಲ್ಲಿ ತಾತ್ವಿಕ ಒಪ್ಪಿಗೆ ಪಡೆದು,ನಿನ್ನೆ ಮೊದಲ ಗ್ಯಾರಂಟಿಯಾದ ಶಕ್ತಿ ಯೋಜನೆಯನ್ನ ಜಾರಿ ಮಾಡಿದೆ.ನಿನ್ನೆ ಸಿಎಂ ಶಕ್ತಿ ಯೋಜನೆಗೆ ಚಾಲನೆ ಸಿಕ್ಕ ಬೆನ್ನಲ್ಲೇ ಇವತ್ತು ಬಸ್ ಗಳಲ್ಲಿ ಮಹಿಳೆಯರು ಫ್ರೀ ಸಂಚಾರಕ್ಕೆ ಮುಗಿಬಿದ್ದಿದ್ರು..ಆಟೋ, ಕಾರು,ಮೆಟ್ರೋ ಬಿಟ್ಟು ಸರ್ಕಾರಿ ಬಸ್ ಮೊರೆ ಹೋದರು..ಬಿಎಂಟಿಸಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಬೆಳಗ್ಗೆಯಿಂದ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು..ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆ ಗಳನ್ನ ಪರಿಶೀಲಿಸಿ,ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೆಟ್ ನೀಡಲಾಗುತ್ತಿದ್ದು,,ಗಾರ್ಮೆಂಟ್ಸ್,,ಐಟಿ,ಬಿಟಿ ಕಂಪನಿ ಉದ್ಯೋಗಿಗಳು ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ತೆರೆಳುವ ಮಹಿಳೆಯರು ಸರ್ಕಾರಿ ಬಸ್ ಗಳನ್ನ ಅವಲಂಬಿಸಿದರು..
ಹೌದು..ಶಕ್ತಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ನಾಡಿನ ಎಲ್ಲಾ ಮಹಿಳಾ ಮಣಿಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಉಚಿತ ಟಿಕೆಟ್ ಪಡೆದುಕೊಂಡು ಖುಷಿಯಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಶುರು ಮಾಡಿದ್ದಾರೆ.ಇಂದು ಯೋಜನೆಯ ಎರಡನೇ ದಿನವಾಗಿದ್ದು ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಸರ್ಕಾರಿ ಬಸ್ಗಳಿಗೆ ಮುಗಿಬಿದ್ದಿದ್ದಾರೆ. ಉಚಿತ ಪ್ರಯಾಣವೆಂದು ಕೆಂಪು ಬಸ್ಗಳನ್ನತ್ತುತ್ತಿದ್ದಾರೆ.ಕಾಂಗ್ರೆಸ್ನ ಗ್ಯಾರಂಟಿಗಳಲ್ಲಿ ಒಂದಾಗಿರೋ ಉಚಿತ ಬಸ್ ಪ್ರಯಾಣ ಯೋಜನೆಗೆ ಎರಡನೇ ದಿನ ಉತ್ತಮ ಸ್ಪಂದನ ವ್ಯಕ್ತವಾಯಿತು.
ನಿನ್ನೆ ರಜಾದಿನವಾಗಿದ್ದ ಕಾರಣ ಬಸ್ಸುಗಳಲ್ಲಿ ಹೆಚ್ಚಿನ ಜನರ ಓಡಾಟ ಕಂಡುಬಂದಿರಲಿಲ್ಲ. ಆದರೆ ಇಂದು ಮುಂಜಾನೆ ಕೆಲಸಕ್ಕೆ ತೆರಳುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸು ನಿಲ್ದಾಣಗಳತ್ತ ಆಗಮಿಸಿದರು. ಮೆಟ್ರೋ ಹಾಗೂ ಆಟೋ ಮೂಲಕ ಪ್ರಯಾಣಿಸುವ ಹಲವು ಮಹಿಳೆಯರೂ ಉಚಿತ ಬಸ್ ಪ್ರಯಾಣದ ಲಾಭ ಪಡೆಯಲು ಮುಂದಾದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ಇದಕ್ಕೆ ಉತ್ಸಾಹದ ಸ್ಪಂದನ ವ್ಯಕ್ತವಾಯಿತು..ನಾವು ದುಡಿಯುವ ಹಣದಲ್ಲಿ ಎರಡು ಸಾವಿರ ರೂಪಾಯಿ ಬಸ್ ಟಿಕೆಟ್ಗೇ ಹೋಗುತ್ತಿತ್ತು. ಈಗ ಅದನ್ನು ಇತರ ಖರ್ಚುಗಳಿಗೆ ಸರಿದೂಗಿಸಬಹುದು, ಖುಷಿಯಾಗ್ತಿದೆ ಎಂದು ಮಹಿಳೆಯರು ಸಂತಸಪಟ್ಟರು.
ಒಟ್ಟಿನಲ್ಲಿ ಫ್ರೀ ಬಸ್ ಜರ್ನಿಗೆ ಅತ್ಯದ್ಭುತ ರೆಸ್ಪಾನ್ಸ್ ಸಿಗುತ್ತಿದೆ.ರಾಜ್ಯದಲ್ಲಿ ನಿನ್ನೆ ಒಂದೇ ದಿನ 5 ಲಕ್ಷ 71 ಸಾವಿರ ಮಹಿಳೆಯರು ಫ್ರೀಯಾಗಿ ಓಡಾಟ ನಡೆಸಿದ್ದಾರೆ. ಬಿಎಂಟಿಯಲ್ಲಿ 2 ಲಕ್ಷ, ಕೆಎಸ್ಆರ್ಟಿಸಿಯಲ್ಲಿ 1,94 ಲಕ್ಷ ವಾಯುವ್ಯ ಸಾರಿಗೆಯಲ್ಲಿ 1.22 ಲಕ್ಷ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53 ಸಾವಿರ ಮಹಿಳೆಯರು ಓಡಾಟ ಮಾಡಿದ್ದಾರೆ. ಇಂದು ಕೂಡ ಯೋಜನೆ ಪ್ರಯೋಜನೆ ಪಡೆದುಕೊಳ್ಳಲು ಬಸ್ ಗಳತ್ತ ಮುಖ ಮಾಡಿದ್ರು. ಇದರಿಂದ ಬಸ್ಗಳಲ್ಲಿ ಪ್ರಯಾಣಿಕರ ದಟ್ಟನೆ ಹೆಚ್ಚಾಗಿ ಟಿಕೆಟ್ ಇಶ್ಯೂ ಮಾಡಲು ಕಂಡಕ್ಟರ್ ಹೆಣಗಾಡುತ್ತಿದ್ದು, ಆರಂಭದಲ್ಲಿ ಉಚಿತ ಪ್ರಯಾಣ ಅವ್ಯವಸ್ಥೆ ಎದುರಾಗ್ತಿದೆ. ಸದ್ಯ ಬಸ್ಗಳ ಕೊರತೆ ನಡುವೆ ಶಕ್ತಿ ಸ್ಕೀಂ ನಡೆಯುತ್ತಿದ್ದು,ಬಸ್ಗಳ ಬೇಡಿಕೆ ತಕ್ಕಂತೆ ಬಿಟ್ಟಿಲ್ಲ ಅಂದ್ರೆ ಶಕ್ತಿ ಯೋಜನೆ ಮತ್ತಷ್ಟು ಅವ್ಯವಸ್ಥೆ ಆಗೋದು ಅಂತೂ ಸದ್ಯ ..